ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಧಾರ್ ಬಗ್ಗೆ ಬೆಚ್ಚಿಬೀಳುವಂಥದ್ದೇನೂ ಇಲ್ಲ, ಧೈರ್ಯವಾಗಿರಿ!

|
Google Oneindia Kannada News

ವ್ಯಕ್ತಿಯ ಖಾಸಗಿ ಮಾಹಿತಿಗಳನ್ನು ಆಧಾರ್ ಮೂಲಕ ಕದಿಯಲಾಗುತ್ತಿದೆಯಾ? ಇಂಥದೊಂದು ಅನುಮಾನ ಎದ್ದು, ಆಧಾರ್ ಮಾನ್ಯತೆಯನ್ನೇ ಪ್ರಶ್ನಿಸುವಂತಾಗಿದ್ದು ಹಳೇ ವಿಷಯ. ಸರ್ಕಾರದ ಪ್ರತಿಯೊಂದು ಯೋಜನೆಗಳೊಂದಿಗೆ, ವ್ಯಕ್ತಿಯ ಪ್ರತಿಯೊಂದು ಮಹತ್ವದ ದಾಖಲೆಗಳೊಂದಿಗೆ ಆಧಾರ್ ಜೋಡಿಸುವ ಸರ್ಕಾರದ ಕ್ರಮ ಕಿರಿಕಿರಿಯಷ್ಟೇ ಅಲ್ಲದೆ, ಆತಂಕವನ್ನೂ ಸೃಷ್ಟಿಸಿದ್ದು ಸತ್ಯ.

ಆಧಾರ್ ಅವಾಂತರವೇ ಕೊನೆಗೆ 'ಖಾಸಗೀತನ ಮೂಲಭೂತ ಹಕ್ಕು' ಎಂಬ ಮಹತ್ವದ ತೀರ್ಪನ್ನು ಸುಪ್ರೀಂ ಕೋರ್ಟ್ ನೀಡುವಂತೆ ಮಾಡಿತು. ಅವೆಲ್ಲ ಸರಿ, ನಿಜಕ್ಕೂ ಈ ಆಧಾರ್ ಕಡ್ಡಾಯ ನೀತಿಯಿಂದ ಖಾಸಗಿತನಕ್ಕೆ ಧಕ್ಕೆಯಾಗುತ್ತಿದೆಯಾ? ಆಧಾರ್ ಮೂಲಕ ಖಾಸಗಿ ಮಾಹಿತಿಗಳನ್ನು ಕದಿಯುವುದಕ್ಕೆ ಸಾಧ್ಯವಾ? ಆಧಾರ್ ಸೋರಿಕೆಯ ಸುದ್ದಿ ಸತ್ಯವಾ? ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರಿಸಿರುವ ಯುನಿಕ್ ಐಡೆಂಟಿಫಿಕೇಶನ್ ಅಥಾರಿಟಿ ಆಫ್ ಇಂಡಿಯಾ (UIDIA) ಈ ಎಲ್ಲ ವದಂತಿಗಳೂ ಸುಳ್ಳು ಎಂದಿದೆ.

ಏನಿದು ವರ್ಚ್ಯುವಲ್ ಆಧಾರ್ ನಂಬರ್? ಪಡೆಯುವುದು ಹೇಗೆ?ಏನಿದು ವರ್ಚ್ಯುವಲ್ ಆಧಾರ್ ನಂಬರ್? ಪಡೆಯುವುದು ಹೇಗೆ?

ಈ ಮೂಲಕ ಆಧಾರ್ ಕುರಿತು ಎದ್ದಿದ್ದ ಆತಂಕಗಳಿಗೆ, UIDIA ತೆರೆ ಏಳೆದಿದೆ. ಆಧಾರ್ ವದಂತಿಗಳಿಗೆ UIDIA ನೀಡಿದ ಸಮರ್ಥನೆ ಹೀಗಿದೆ.

ಆಧಾರ್ ಡೇಟಾ ಸುರಕ್ಷಿತ

ಆಧಾರ್ ಡೇಟಾ ಸುರಕ್ಷಿತ

ಒಂದು ಶತಕೋಟಿ ಆಧಾರ್ ಡೆಟಾಗಳನ್ನು ಕೇವಲ 500 ರೂ.ಗಳಿಗೆ ಸುಲಭವಾಗಿ ಪಡೆಯಬಹುದು ಎಂದು ಇತ್ತೀಚೆಗೆ ಪತ್ರಿಕೆಯೊಂದು ವರದಿಮಾಡಿತ್ತು. ಆದರೆ ಈ ಕುರಿತು ಸ್ವತಃ UIDIA ಪ್ರತಿಕ್ರಿಯೆ ನೀಡಿದ್ದು, ಆಧಾರ್ ಡೇಟಾ, ಜೊತೆಗೆ ಭಯೋಮೆಟ್ರಿಕ್ ಮಾಹಿತಿಗಳನ್ನು ಯಾವುದೇ ರೀತಿಯಲ್ಲಿಯೂ ಕದಿಯವುದಕ್ಕೆ ಸಾಧ್ಯವಿಲ್ಲ. ಇವು ಸುರಕ್ಷಿತವಾಗಿವೆ ಎಂದಿದೆ.

ಆಧಾರ್ ಸಿಂಧುತ್ವ ಕುರಿತಂತೆ ಸುಪ್ರೀಂ ನಲ್ಲಿ ಇಂದಿನಿಂದ ವಿಚಾರಣೆಆಧಾರ್ ಸಿಂಧುತ್ವ ಕುರಿತಂತೆ ಸುಪ್ರೀಂ ನಲ್ಲಿ ಇಂದಿನಿಂದ ವಿಚಾರಣೆ

ಅತ್ಯಂತ ವಿಶ್ವಾಸಾರ್ಹ ಗುರುತಿನ ಚೀಟಿ

ಅತ್ಯಂತ ವಿಶ್ವಾಸಾರ್ಹ ಗುರುತಿನ ಚೀಟಿ

ಆಧಾರ್ ಕಾರ್ಡ್ ಅತ್ಯಂತ ವಿಶ್ವಾಸಾರ್ಹ ಗುರುತಿನಚೀಟಿ ಎನ್ನಿಸಿದೆ. ಭಾರತದಲ್ಲಿ ಎಲ್ಲ ಗುರುತಿನ ಚೀಟಿಗಿಂತ ಹೆಚ್ಚು ನಂಬಿಕೆಯಿಂದ ಆಧಾರ್ ಕಾರ್ಡ್ ಅನ್ನು ಸ್ವೀಕರಿಸಲಾಗುತ್ತದೆ. ಇದಕ್ಕೆ ಕಾರಣ ಆಧಾರ್ ಕಾರ್ಡ್ ಪಡೆಯಲು ವ್ಯಕ್ತಿ ತನ್ನ ಬೆರಳಚ್ಚು ನೀಡಬೇಕಾಗಿರುವುದರಿಂದ ಈ ಕಾರ್ಡ್ ಮೂಲಕ ಮೋಸಗೊಳಿಸುವುದು ಸಾಧ್ಯವಿಲ್ಲ.

ಆಧಾರ್ ಸುರಕ್ಷತೆಗೆ ಎರಡು ಕ್ರಮ ಘೋಷಿಸಿದ ಯುಐಎಡಿಐ ಆಧಾರ್ ಸುರಕ್ಷತೆಗೆ ಎರಡು ಕ್ರಮ ಘೋಷಿಸಿದ ಯುಐಎಡಿಐ

ಬ್ಯಾಂಕ್ ಖಾತೆಯ ವಿವರ ಕದಿಯಬಹುದೇ?

ಬ್ಯಾಂಕ್ ಖಾತೆಯ ವಿವರ ಕದಿಯಬಹುದೇ?

ಆಧಾರ್ ನಂಬರ್ ಅನ್ನು ಬ್ಯಾಂಕ್ ಖಾತೆಯೊಂದಿಗೆ ಜೋಡಿಸುವುದರಿಂದ ಬ್ಯಾಂಕ್ ಖಾತೆಯ ವಿವರಗಳನ್ನು ಕದಿಯುವುದಕ್ಕೆ ಸಾಧ್ಯವೇ? ಖಂಡಿತ ಇಲ್ಲ ಎನ್ನುತ್ತದೆ UIDIA. ನೀವು ಬ್ಯಾಂಕಿಗೆ, ಫೋನ್ ನಂಬರ್ ಗೆ ಆಧಾರ್ ವಿವರ ನೀಡಿದರೆ ನಿಮ್ಮ ಆಧಾರ್ ಸಂಖ್ಯೆಯನ್ನು ವೆರಿಫಿಕೇಶನ್ ಗಾಗಿ UIDIA ಗೆ ಆಯಾ ಬ್ಯಾಂಕ್ ಅಥವಾ ಟೆಲಿಕಾಂ ಕಂಪೆನಿಗಳು ಕಳಿಸುತ್ತವೆ. ಈ ಸಂದರ್ಭದಲ್ಲಿ ಕೇವಲ ಆಧಾರ್ ಸಂಖ್ಯೆಯನ್ನು ಮಾತ್ರವೇ ಕಳಿಸಲಾಗುತ್ತದೆಯೇ ಹೊರತು, ನಿಮ್ಮ ಬ್ಯಾಂಕ್ ಸಂಖ್ಯೆಯನ್ನಾಗಲಿ, ಟೆಲಿಫೋನ್ ಸಂಖ್ಯೆಯನ್ನಾಗಲಿ ನೀಡಲಾಗುವುದಿಲ್ಲ. ಮ್ಯೂಚುವಲ್ ಫಂಡ್ ಅತವಾ ಇನ್ಯಾವುದೇ ಸೌಲಭ್ಯದ ಉಪಯೋಗ ಪಡೆಯುವುದಕ್ಕೂ ಇದು ಅನ್ವಯ.

ಯಾವ ಪ್ರಕರಣವೂ ದಾಖಲಾಗಿಲ್ಲ!

ಯಾವ ಪ್ರಕರಣವೂ ದಾಖಲಾಗಿಲ್ಲ!

ಆಧಾರ್ ಸಂಖ್ಯೆಯ ಮೂಲಕ ಅಕೌಂಟ್ ಹ್ಯಾಕ್ ಮಾಡಿದ ಯಾವ ಪ್ರಕರಣವೂ ಇದುವರೆಗೂ ದಾಖಲಾಗಿಲ್ಲ. ಹಾಗೆ ಮಾಡುವುದಕ್ಕೆ ಸಾಧ್ಯವೂ ಇಲ್ಲ. ಆಧಾರ್ ನಲ್ಲಿ ನಿಮ್ಮ ಬ್ಯಾಂಕ್ ಖಾತೆಯ ಪಾಸ್ ವರ್ಡ್ ಗಳ ವಿವರಗಳೆಲ್ಲ ಇರುವುದಕ್ಕೆ ಸಾಧ್ಯವೇ ಇಲ್ಲ.

ಉಪಯೋಗವೇ ಹೆಚ್ಚು

ಉಪಯೋಗವೇ ಹೆಚ್ಚು

ಪ್ರತಿಯೊಬ್ಬ ಖಾತೆದಾರನ ಆಧಾರ್ ನಂಬರ್ ಅನ್ನೂ, ಆತನ ಬ್ಯಾಂಕ್ ಖಾತೆಗೆ ಕಡ್ಡಾಯ ಜೋಡಿಸುವುದರಿಂದ ಆಗುವ ಅನುಕೂಲವೇ ಹೆಚ್ಚು. ಯಾವುದಾದರೂ ಸೈಬರ್ ಕಳ್ಳರು, ನಿಮ್ಮ್ ಖಾತೆಯಿಂದ ಉಪಾಯವಾಗಿ ಹಣ ದೋಚಿ, ಬೇರೆ ಖಾತೆಗೆ ಹಾಕಿಕೊಂಡರೂ, ಅವರು ನೀಡಿದ ಆಧಾರ್ ಸಂಖ್ಯೆಯೂ ಬ್ಯಾಂಕಿನಲ್ಲಿ ದಾಖಲಾಗಿರುವುದರಿಂದ ಅವರನ್ನು ಪತ್ತೆ ಮಾಡುವುದು ಸುಲಭ ಎನ್ನುತ್ತದೆ UIDIA.

ದುರ್ಬಳಕೆ ತಡೆಗೆ ವರ್ಚ್ಯುವಲ್ ಐಡಿ

ದುರ್ಬಳಕೆ ತಡೆಗೆ ವರ್ಚ್ಯುವಲ್ ಐಡಿ

ಅಕಸ್ಮಾತ್ ಇ ಆಧಾರ್ ಅನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತದೆ ಎಂಬ ಅನುಮಾನ ಇದ್ದರೆ, ಅಂಥವರಿಗಾಗಿಯೇ ವರ್ಚ್ಯುವಲ್ ಐಡಿಯನ್ನೂ UIDIA ನೀಡಿದೆ. 12 ಅಂಕಿಯ ಈ ಇದನ್ನು ಬಳಸಿ ವರ್ಚ್ಯುವಲ್ ಅನ್ನು ಆಧಾರ್ ಸಂಖ್ಯೆಯ ಬದಲಿಗೆ, ಯಾವುದೇ ವ್ಯವಹಾರಗಳಲ್ಲಿ ಬಳಸಬಹುದು. ವರ್ಚ್ಯುವಲ್ ಐಡಿಯನ್ನು UIDIA ವೆಬ್ ಸೈಟ್ ನಿಂದ ಯಾವುದೇ ವ್ಯಕ್ತಿ ಪಡೆಯಬಹುದು. ಆದರೆ ವರ್ಚ್ಯುವಲ್ ಐಡಿ ಪಡೆಯುವ ವ್ಯಕ್ತಿ ಕಡ್ಡಾಯವಾಗಿ ಆಧಾರ್ ಸಂಖ್ಯೆ ಹೊಂದಿರಬೇಕು.

English summary
Unique Identification Authority of India speaks about validity of aadhaar and it quoted, aadhaar is most trusted identity proof in India.It assures that there has not been any Aadhaar data breach, the Aadhaar data, including biometric information, is fully safe and secure.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X