ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರತಿ 10 ವರ್ಷಗಳಿಗೊಮ್ಮೆ ಆಧಾರ್ ನವೀಕರಣ ಕಡ್ಡಾಯ

|
Google Oneindia Kannada News

ನವದೆಹಲಿ, ನವೆಂಬರ್‌ 10: ಕೇಂದ್ರ ಸರ್ಕಾರವು ಹೊರಡಿಸಿದ ಹೊಸ ಮಾರ್ಗಸೂಚಿಯಂತೆ ಇನ್ನೂ ಮೇಲೆ ದೇಶದಲ್ಲಿ ಆಧಾರ್ ಕಾರ್ಡ್‌ನ್ನು ಪ್ರತಿ 10 ವರ್ಷಗಳಿಗೊಮ್ಮೆ ನವೀಕರಣ ಮಾಡುವುದು ಕಡ್ಡಾಯವಾಗಿರುತ್ತದೆ.

ಆಧಾರ್‌ನಲ್ಲಿ ವಂಚನೆಯನ್ನು ತಡೆಯುವ ಪ್ರಯತ್ನದ ಭಾಗವಾಗಿ ಅಧಿಕಾರಿಗಳು ತಮ್ಮ ಪೂರಕ ದಾಖಲೆಗಳನ್ನು ಬಳಸಿಕೊಂಡು ಪ್ರತಿ 10 ವರ್ಷಗಳಿಗೊಮ್ಮೆ ಆಧಾರ್ ಕಾರ್ಡ್‌ನಲ್ಲಿರುವ ಮಾಹಿತಿಯನ್ನು ನವೀಕರಿಸುವುದನ್ನು ಕಡ್ಡಾಯಗೊಳಿಸಿಸಲಾಗಿದೆ. ಈ ನೀತಿಯನ್ನು ತಕ್ಷಣವೇ ಜಾರಿಗೆ ಬರುವಂತೆ ಭಾರತದಲ್ಲಿನ ಎಲ್ಲಾ ಆಧಾರ್ ಕಾರ್ಡ್ ಹೊಂದಿರುವ ಜನರಿಗೆ ಕಡ್ಡಾಯಗೊಳಿಸಲಾಗಿದೆ. ಈ ಮೂಲಕ ಆಧಾರ್ ಕಾರ್ಡ್ ಅನ್ನು ಆರಂಭಿಕ ದಾಖಲಾತಿ ದಿನಾಂಕದಿಂದ 10 ವರ್ಷಗಳ ನಂತರ ನವೀಕರಿಸಬೇಕಾಗುತ್ತದೆ.

ಆಧಾರ್ ಮಾಹಿತಿ ಸೋರಿಕೆ ಆರೋಪದ ಅರ್ಜಿ: ಸುಪ್ರೀಂನಲ್ಲಿ ಪರಿಹರಿಸಿಕೊಳ್ಳಲು ಹೈಕೋರ್ಟ್ ಸೂಚನೆಆಧಾರ್ ಮಾಹಿತಿ ಸೋರಿಕೆ ಆರೋಪದ ಅರ್ಜಿ: ಸುಪ್ರೀಂನಲ್ಲಿ ಪರಿಹರಿಸಿಕೊಳ್ಳಲು ಹೈಕೋರ್ಟ್ ಸೂಚನೆ

ಕೇಂದ್ರದ ಅಧಿಕೃತ ದಾಖಲೆ ಪ್ರಕಾರ, ಆಧಾರ್ ಸಂಖ್ಯೆ ಹೊಂದಿರುವವರು, ಆಧಾರ್‌ಗಾಗಿ ದಾಖಲಾತಿ ದಿನಾಂಕದಿಂದ ಪ್ರತಿ 10 ವರ್ಷಗಳು ಪೂರ್ಣಗೊಂಡ ನಂತರ, ಗುರುತಿನ ಪುರಾವೆ (ಪಿಒಐ) ಮತ್ತು ವಿಳಾಸದ ಪುರಾವೆಯನ್ನು ಸಲ್ಲಿಸುವ ಮೂಲಕ ಆಧಾರ್‌ನಲ್ಲಿ ತಮ್ಮ ಪೂರಕ ದಾಖಲೆಗಳನ್ನು ಒಮ್ಮೆಯಾದರೂ ನವೀಕರಿಸಬೇಕು ಎಂದು ತಿಳಿಸಿದೆ.

UIDAI has mandated renewal of Aadhaar every 10 years

ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಇದೇ ರೀತಿಯ ನಿಯಮವನ್ನು ಈ ಹಿಂದೆ ಹೇಳಿತ್ತು. ನಾಗರಿಕರು ತಮ್ಮ ಆಧಾರ್ ಮಾಹಿತಿಯನ್ನು ನಿಯಮಿತವಾಗಿ ನವೀಕರಿಸಲು ಮುಂದಾಗುತ್ತಿದ್ದರು. ಇದೀಗ ಆಧಾರ್ ವಂಚನೆಯನ್ನು ತಡೆಯುವ ಭಾಗವಾಗಿ ಕೇಂದ್ರವು ಈ ನಿಯಮವನ್ನು ಕಡ್ಡಾಯಗೊಳಿಸಿದೆ. ಯುಐಡಿಎಐ ತನ್ನ ಸಲಹೆಯಲ್ಲಿ 10 ವರ್ಷಗಳ ಹಿಂದೆ ತಮ್ಮ ಆಧಾರ್ ಅನ್ನು ಪಡೆದಿರುವ ವ್ಯಕ್ತಿಯನ್ನು ದಾಖಲೆಗಳನ್ನು ಅಪ್‌ಡೇಟ್ ಮಾಡುವಂತೆ ಸೂಚಿಸಲಾಗುತ್ತದೆ ಎಂದು ತಿಳಿಸಿದೆ.

ಆಧಾರ್ ಮಾಹಿತಿ ಸೋರಿಕೆ ಆರೋಪದ ಪಿಐಎಲ್ ಪುರಸ್ಕಾರಕ್ಕೆ ಹೈಕೋರ್ಟ್ ನಕಾರಆಧಾರ್ ಮಾಹಿತಿ ಸೋರಿಕೆ ಆರೋಪದ ಪಿಐಎಲ್ ಪುರಸ್ಕಾರಕ್ಕೆ ಹೈಕೋರ್ಟ್ ನಕಾರ

ತಮ್ಮ ಆಧಾರ್ ಕಾರ್ಡ್‌ಗಳನ್ನು ನವೀಕರಿಸಲು ಬಯಸುವವರು ಪರಿಶೀಲನೆಗಾಗಿ ತಮ್ಮ ಹತ್ತಿರದ ಯುಐಡಿಎಐ ಕೇಂದ್ರಕ್ಕೆ ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಕೊಂಡೊಯ್ಯಬೇಕು. ಅಲ್ಲಿ ಯಾವುದೇ ವ್ಯತ್ಯಾಸಗಳಿಲ್ಲ ಎಂದು ಖಚಿತಪಡಿಸಿಕೊಳ್ಳಲು ನೀಡಲಾಗಿರುವ ಮಾಹಿತಿಯನ್ನು ಹಿಂದಿನ ದಾಖಲೆಗಳೊಂದಿಗೆ ಪರಿಶೀಲಿಸಲಾಗುತ್ತದೆ. ಜನರು ಎಂದು ಗಮನಿಸಿ ಬದಲಾವಣೆಗಳಿದ್ದಲ್ಲಿ ತಿಳಿಸಬೇಕು.

UIDAI has mandated renewal of Aadhaar every 10 years

ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಮಾಹಿತಿ ನವೀಕರಣಕ್ಕೆ ಮುಂದುವರೆಯಿರಿ ಆಯ್ಕೆಯನ್ನು ಕ್ಲಿಕ್ ಮಾಡುವ ಮೂಲಕ ಆನ್‌ಲೈನ್‌ನಲ್ಲಿ ಆಧಾರ್ ಕಾರ್ಡ್‌ನಲ್ಲಿ ನವೀಕರಣಗಳನ್ನು ಮಾಡುವ ಆಯ್ಕೆಯೂ ಇದೆ. ಒಬ್ಬರು ತಮ್ಮ ವೈಯಕ್ತಿಕ ಮಾಹಿತಿಯನ್ನು ನವೀಕರಿಸಲು ತಮ್ಮ ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆ ಮತ್ತು ಒಟಿಪಿಯನ್ನು ಬಳಸಿ ಲಾಗ್ ಇನ್ ಮಾಡಬಹುದು.

English summary
As per the new guidelines issued by the central government, renewal of Aadhaar card is mandatory every 10 years in the country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X