UDISE ಪೋರ್ಟಲ್: ಶಾಲೆಗಳಿಗೆ ಯೋಗಿ ಆದಿತ್ಯನಾಥ್ ಸರ್ಕಾರ ಎಚ್ಚರಿಕೆ, ಗಡುವು
UDISE ಪೋರ್ಟಲ್‌ನಲ್ಲಿ ವಿದ್ಯಾರ್ಥಿಗಳ ಡೇಟಾವನ್ನು ಅಪ್‌ಲೋಡ್ ಮಾಡದಿದ್ದಕ್ಕಾಗಿ ಉತ್ತರ ಪ್ರದೇಶ ಸರ್ಕಾರ ಶಾಲೆಗಳಿಗೆ ಛೀಮಾರಿ ಹಾಕಿದೆ. ಅಂತಹ ಶಾಲೆಗಳಿಗೆ ಸರ್ಕಾರ ಏಪ್ರಿಲ್ 30ರವರೆಗೆ ಕಾಲಾವಕಾಶ ನೀಡಿದೆ. ಈ ಪೋರ್ಟಲ್‌ನಲ್ಲಿ ಏಪ್ರಿಲ್ 30ರವರೆಗೆ ಡೇಟಾವನ್ನು ಅಪ್‌ಲೋಡ್ ಮಾಡದಿದ್ದರೆ ಸಂಬಂಧಿಸಿದ ಶಾಲೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರ ಎಚ್ಚರಿಕೆ ನೀಡಿದೆ.
ಶಾಲಾ ಶಿಕ್ಷಣದ ಮಹಾನಿರ್ದೇಶಕ (DGSE) ವಿಜಯ್ ಕಿರಣ್ ಆನಂದ್ ಅವರು UDISE (ಯುನಿಫೈಡ್ ಡಿಸ್ಟ್ರಿಕ್ಟ್ ಇನ್ಫರ್ಮೇಷನ್ ಸಿಸ್ಟಮ್ ಫಾರ್ ಎಜುಕೇಶನ್) ಪೋರ್ಟಲ್‌ನಲ್ಲಿ ವಿದ್ಯಾರ್ಥಿಗಳ ಡೇಟಾವನ್ನು ಭರ್ತಿ ಮಾಡುವಲ್ಲಿ ನಿರ್ಲಕ್ಷ್ಯ ತೋರಿದ್ದಾರೆ ಎಂದು ಜಿಲ್ಲಾ ಮೂಲ ಮತ್ತು ಮಾಧ್ಯಮಿಕ ಶಿಕ್ಷಣ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

UDISE ಎಂಬುದು ಶಾಲಾ ಶಿಕ್ಷಣದ ದತ್ತಾಂಶದ ರಾಷ್ಟ್ರೀಯ ಭಂಡಾರವಾಗಿದ್ದು, ಸಂಪನ್ಮೂಲ ಹಂಚಿಕೆಯನ್ನು ಉತ್ತಮಗೊಳಿಸಲು ಮತ್ತು ವಿವಿಧ ಶಿಕ್ಷಣ-ಸಂಬಂಧಿತ ಕಾರ್ಯಕ್ರಮಗಳನ್ನು ಕಾರ್ಯಗತಗೊಳಿಸಲು ಮತ್ತು ಪ್ರಗತಿಯನ್ನು ಅಳೆಯಲು ಬಳಸಲಾಗುತ್ತದೆ.
ಇಲ್ಲಿಯವರೆಗೆ ಕೇವಲ ಶೇಕಡ 20ರಷ್ಟು ಸರ್ಕಾರಿ ಮಾಧ್ಯಮಿಕ ಶಾಲೆಗಳು UDISE ನಲ್ಲಿ ವಿದ್ಯಾರ್ಥಿ ಪ್ರೊಫೈಲ್ ಅನ್ನು ಭರ್ತಿ ಮಾಡಿವೆ. ಇದು ಮಗುವಿನ ಹೆಸರು, ತರಗತಿ ಮತ್ತು ಮಾತೃಭಾಷೆಯಂತಹ ಮೂಲಭೂತ ಮಾಹಿತಿಯನ್ನು ಒಳಗೊಂಡಿದೆ. ವಿಶೇಷ ಅಗತ್ಯವುಳ್ಳ ಮಕ್ಕಳು, ಶಾಲೆಯಿಂದ ಹೊರಗುಳಿದ ಮಕ್ಕಳ ಮಾಹಿತಿಯೂ ಇದರ ಭಾಗವಾಗಿದೆ.
ದತ್ತಾಂಶದ ಪ್ರತಿಕ್ರಿಯೆ ಇಲ್ಲದ ಕಾರಣ ಪ್ರತಿ ವರ್ಷ ಪ್ರಕಟವಾಗುವ UDISE ವರದಿಯಲ್ಲಿ ರಾಜ್ಯವು ಕಳಪೆ ಪ್ರದರ್ಶನ ನೀಡಲಿದೆ ಎಂದು ವಿಜಯ್ ಕಿರಣ್ ಆನಂದ್ ಕಿಡಿ ಕಾರಿದ್ದಾರೆ. ಇದೀಗ ಏಪ್ರಿಲ್ 30ರೊಳಗೆ ಪೋರ್ಟಲ್ ಪೂರ್ಣಗೊಳಿಸಲು ಶಾಲೆಗಳಿಗೆ ಗಡುವು ನೀಡಲಾಗಿದೆ. ಇದನ್ನು ಪಾಲಿಸದ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದರು.
UDISE ಪೋರ್ಟಲ್‌ನಲ್ಲಿನ ಡೇಟಾ ಫೀಡಿಂಗ್‌ನ ಶೇಕಡಾವಾರು ಪ್ರಮಾಣ ಬಲ್ಲಿಯಾ (5.2%), ಅಜಂಗಢ (5.6%) ಮತ್ತು ಮಥುರಾ (5.9%) ಜಿಲ್ಲೆಗಳಲ್ಲಿ ಕಡಿಮೆಯಾಗಿದೆ. 50ಕ್ಕಿಂತ ಹೆಚ್ಚು ಪೂರ್ಣಗೊಳಿಸಿದ ಏಕೈಕ ಜಿಲ್ಲೆ ಮಿರ್ಜಾಪುರ. ಒಟ್ಟಾರೆ ಶಾಲೆಗಳ 1.04 ಕೋಟಿ ವಿದ್ಯಾರ್ಥಿಗಳಲ್ಲಿ 83.2 ಲಕ್ಷ ವಿದ್ಯಾರ್ಥಿಗಳ ಡೇಟಾ ಫೀಡಿಂಗ್ ಪ್ರಾರಂಭವಾಗಿಲ್ಲ.
ಮಾಧ್ಯಮಿಕ ಶಾಲೆಗಳು UDISE ಗೆ ವಿದ್ಯಾರ್ಥಿ ಡೇಟಾವನ್ನು ಅಪ್‌ಲೋಡ್ ಮಾಡುವ ವಿಷಯದಲ್ಲಿ ಬಲ್ಲಿಯಾ (2.1%), ಅಜಮ್‌ಗಢ್ (4.1%) ಮತ್ತು ಇಟಾವಾ (5.1%) ಕಳಪೆ ಪ್ರದರ್ಶನ ನೀಡಿವೆ.
ಯುಪಿ ನಾಗರಪಾಲಿಕಾ ಚುನಾವಣೆ: ಬಲರಾಂಪುರದಲ್ಲಿ ಮತ್ತೆ ಘರ್ಜಿಸಿದ ಸಿಎಂ ಯೋಗಿ
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪ್ರಸ್ತುತ ರಾಜ್ಯಾದ್ಯಂತ ಪುರಸಭೆ ಚುನಾವಣಾ ಪ್ರವಾಸದಲ್ಲಿದ್ದಾರೆ. ಡಬಲ್ ಇಂಜಿನ್ ಸರ್ಕಾರವನ್ನು ರಚಿಸಲು ಅವರು ತಮ್ಮ ಎಲ್ಲಾ ಶಕ್ತಿಯನ್ನು ಪ್ರಯೋಗಿಸಿದ್ದಾರೆ.
ಈ ಕ್ರಮದಲ್ಲಿ ಶುಕ್ರವಾರ ಬಲರಾಂಪುರದಲ್ಲಿ ಸಿಎಂ ಯೋಗಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದರು. ಇದೇ ವೇಳೆ ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸುವಂತೆ ಮನವಿ ಮಾಡಿ, ವಿರೋಧ ಪಕ್ಷಗಳು, ದರೋಡೆಕೋರರು, ಮಾಫಿಯಾಗಳ ವಿರುದ್ಧ ವಾಗ್ದಾಳಿ ಮಾಡಿದರು.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು 2017 ರ ಮೊದಲು ಗೊಂಡಾದಿಂದ ದೇವಿಪಟನ್ ದೇವಸ್ಥಾನಕ್ಕೆ ತಲುಪಲು 4 ಗಂಟೆಗಳ ಕಾಲ ತೆಗೆದುಕೊಳ್ಳುತ್ತಿತ್ತು. ಆದರೀಗ ಗೊಂಡದಿಂದ ದೇವಾಲಯವನ್ನು ಕೇವಲ 45 ನಿಮಿಷಗಳಲ್ಲಿ ತಲುಪಬಹುದು. ಹೀಗಾಗಿ ರಸ್ತೆ, ವಿದ್ಯುತ್, ಬಡ ಮನೆ, ಚರಂಡಿ, ಬೀದಿ ಎಲ್ಲ ಹಣ ದೋಚುತ್ತಿದ್ದವರು ಯಾರು ಎಂದು ಯೋಚಿಸಬೇಕು ಎಂದು ಯೋಗಿ ಹೇಳಿದರು.
ಇಂದು ನಾವು ಅಂತಹ ಮಾಫಿಯಾಗಳನ್ನು ಜೈಲಿಗೆ ಹಾಕಿದ್ದೇವೆ. ಅದೇ ಮಾಫಿಯಾಗಳು ಮೊದಲು ಲೂಟಿ ಮಾಡಿ ನಂತರ ಎದೆ ಉಬ್ಬಿಸಿಕೊಮಡು ನಡೆಯುತ್ತಿದ್ದವು. ಆದರೆ ಇಂದು ಕೊರಳಿಗೆ ಹಲಗೆ ನೇತು ಜೀವ ಭಿಕ್ಷೆ ಬೇಡುತ್ತಿವೆ. ಹೊಸ ಉತ್ತರ ಪ್ರದೇಶದಲ್ಲಿ ಉಜ್ವಲ ಯೋಜನೆಯಡಿ ಯಾವುದೇ ತಾರತಮ್ಯವಿಲ್ಲದೆ ಪ್ರತಿಯೊಬ್ಬ ಬಡವರಿಗೆ ಮನೆ, ವಿದ್ಯುತ್ ಸಂಪರ್ಕ, ಅಡುಗೆ ಅನಿಲ ಸಂಪರ್ಕವನ್ನು ನೀಡಲಾಗುತ್ತಿದೆ ಎಂದು ಸಿಎಂ ಯೋಗಿ ಹೇಳಿದರು.












Click it and Unblock the Notifications