ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಬರಿಮಲೆ ಯಾತ್ರೆ ಆರಂಭ, ಕರ್ನಾಟಕದ ಭಕ್ತರಿಗೆ ನೆರವು

By Mahesh
|
Google Oneindia Kannada News

ಬೆಂಗಳೂರು, ನ.16: ತೀರ್ಥಕ್ಷೇತ್ರ ಶಬರಿಮಲೆ ಯಾತ್ರೆ ನ.16ರಿಂದ ಆರಂಭಗೊಂಡಿದೆ. ಇದಕ್ಕಾಗಿ ಕರ್ನಾಟಕ ಹಾಗೂ ಕೇರಳ ಮುಜರಾಯಿ ಇಲಾಖೆ ಸಕಲ ಸಿದ್ಧತೆ ಮಾಡಿವೆ. ಕರ್ನಾಟಕದಿಂದ ತೆರಳುವ ಯಾತ್ರಿಗಳ ಅನುಕೂಲಕ್ಕಾಗಿ ವೈದ್ಯರು ಹಾಗೂ ಪೊಲೀಸರ ತಂಡ ಕಳಿಸಲಾಗುತ್ತಿದೆ.

ಕೇರಳ ಸರ್ಕಾರ ಸುಮಾರು 62 ಕೋಟಿ ರು ಖರ್ಚು ಮಾಡಿ ಕೊನೆ ಕ್ಷಣದಲ್ಲಿ ತಾತ್ಕಾಲಿಕ ವ್ಯವಸ್ಥೆಗಳನ್ನು ಮಾಡಿದೆ. ವಾಹನಗಳ ನಿಲುಗಡೆಗಾಗಿ ಜಾಗವನ್ನು ಕಾಯ್ದಿರಿಸಲಾಗಿದ್ದು, ಸುಮಾರು 4,000 ವಾಹನಗಳ ನಿಲುಗಡೆ ಸಾಧ್ಯವಿದೆ. ಹೊಸ ತ್ಯಾಜ್ಯ ನಿರ್ವಹಣಾ ಘಟಕವನ್ನು ಸ್ಥಾಪಿಸಲಾಗಿದೆ.

ಸಮುದ್ರಮಟ್ಟದಿಂದ ಸುಮಾರು 914 ಮೀಟರ್ ಎತ್ತರವಿರುವ ಪ್ರದೇಶವಾಗಿದ್ದು, ಪಂಬಾ ಕ್ಷೇತ್ರದಲ್ಲಿ ಸಂಪೂರ್ಣವಾಗಿ ಪ್ಲಾಸ್ಟಿಕ್ ನಿಷೇಧಿಸಲಾಗಿದೆ. ಯಾತ್ರಾರ್ಥಿಗಳು ಈ ಕುರಿತು ಮಾಡಬೇಕಾದ, ಮಾಡಬಾರದ ವಿವರಣೆಗಳುಳ್ಳ ವಿಡಿಯೋ ತುಣುಕನ್ನು ಕೇರಳ ಸರ್ಕಾರ ಸಿದ್ಧಪಡಿಸಿದೆ.

Two-month Sabarimala pilgrimage season

ಕರ್ನಾಟಕದಿಂದ ನೆರವು: ಕರ್ನಾಟಕದಿಂದ 25 ವೈದ್ಯರ ತಂಡ, 20 ಪೊಲೀಸರ ತಂಡವನ್ನು ಕಳುಹಿಸಲು ನಿರ್ಧರಿಸಲಾಗಿದೆ.ಭಾಷೆಯ ತೊಡಕಿನಿಂದಾಗಿ ಹಲವರು ಸೂಕ್ತ ಚಿಕಿತ್ಸೆ ಪಡೆಯಲು ವಿಫಲರಾಗುತ್ತಾರೆ. ಹೀಗಾಗಿ ಸೂಕ್ತ ವಸತಿ ಹಾಗೂ ವೈದ್ಯಕೀಯ ನೆರವು ನೀಡಲು ಇಲಾಖೆ ಮುಂದಾಗಿದೆ. ಜನವರಿಯಲ್ಲಿ ಯಾತ್ರೆ ಮುಕ್ತಾಯಗೊಳ್ಳುವವರೆಗೂ ವ್ಯವಸ್ಥೆಯಿರಲಿದೆ ಎಂದು ಮುಜರಾಯಿ ಇಲಾಖೆ ಆಯುಕ್ತ ಆರ್.ಆರ್. ಜನ್ನು ಹೇಳಿದ್ದಾರೆ.

ನಿಲಕ್ಕಲ್​ನಲ್ಲಿ ಸುಮಾರು 4.5 ಎಕರೆ ಪ್ರದೇಶದಲ್ಲಿ ಕರ್ನಾಟಕ ಭವನ ನಿರ್ವಣಕ್ಕೆ ಅನುಮತಿ ಸಿಕ್ಕಿದೆ. ಈ ವರ್ಷದ ಯಾತ್ರೆಯ ವೇಳೆಗೆ ಭವನ ನಿರ್ಮಾಣ ಸಾಧ್ಯವಿಲ್ಲದ್ದರಿಂದ ಅಲ್ಲಿ ಶೌಚಗೃಹ ಸೇರಿ ಇನ್ನಿತರ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಒಟ್ಟು 20 ಕೋಟಿ ರೂ. ವೆಚ್ಚದ ಯೋಜನೆಗೆ ಸದ್ಯ ಕರ್ನಾಟಕ ಸರ್ಕಾರದಿಂದ 5 ಕೋಟಿ ರೂ. ಬಿಡುಗಡೆಯಾಗಿದೆ ಎಂದು ಮುಜರಾಯಿ ಆಯುಕ್ತ ಆರ್.ಆರ್. ಜನ್ನು ಹೇಳಿದ್ದಾರೆ.

3 ಅಂತಸ್ತಿನ ಕಟ್ಟಡ ನೆಲ ಮಹಡಿಯಲ್ಲಿ ಪೊಲೀಸ್ ಕೇಂದ್ರ, ವೈದ್ಯಕೀಯ ಕೇಂದ್ರ, ಕ್ಯಾಂಟೀನ್, ಶೌಚಗೃಹಗಳನ್ನು ಒಳಗೊಳ್ಳಲಿದೆ. 2ನೇ ಮಹಡಿಯಲ್ಲಿ ಮಹಿಳೆಯರು, ಪುರುಷರಿಗೆ ಪ್ರತ್ಯೇಕ ಡಾರ್ವಿುಟರಿಗಳು, ಶೌಚಗೃಹಗಳಿರಲಿವೆ. 2ನೇ ಮಹಡಿಯಲ್ಲಿ 22 ಸಾಮಾನ್ಯ ಕೊಠಡಿಗಳು, 3ನೇ ಮಹಡಿಯಲ್ಲಿ 6 ವಿಐಪಿ ಕೊಠಡಿಗಳನ್ನು ನಿರ್ವಿುಸಲಾಗುವುದು.(ಐಎಎನ್ ಎಸ್)

English summary
Two-month Sabarimala pilgrimage season said Kerala Chief Minister Oommen Chandy. Chandy told IANS that he was at the pilgrim centre a few days ago to review the arrangements and felt happy with what was being organised for this season.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X