ಗೋವು ಕಳ್ಳಸಾಗಣೆ ಆರೋಪ: ರಾಜಸ್ಥಾನದಿಂದ ಇಬ್ಬರನ್ನು ಅಪಹರಿಸಿ, ಹರಿಯಾಣದಲ್ಲಿ ಸಜೀವ ದಹನ
ಮೃತರ ಸಂಬಂಧಿಕರು ಬಜರಂಗದಳದ ಕಾರ್ಯಕರ್ತರು ಮತ್ತು ಗೋ ರಕ್ಷಕರನ್ನು ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ
ಜೈಪುರ, ಫೆಬ್ರವರಿ. 17: ಹರಿಯಾಣದಲ್ಲಿ ಆಘಾತಕಾರಿ ಘಟನೆಯೊಂದು ವರದಿಯಾಗಿದ್ದು, ರಾಜಸ್ಥಾನದ ಭರತ್‌ಪುರ ಜಿಲ್ಲೆಯಿಂದ ಇಬ್ಬರು ವ್ಯಕ್ತಿಗಳನ್ನು ಅಪಹರಿಸಿ ಹರಿಯಾಣದಲ್ಲಿ ಸಜೀವ ದಹನ ಮಾಡಲಾಗಿದೆ.
ಗೋವು ಕಳ್ಳಸಾಗಣೆ ಮಾಡುತ್ತಿದ್ದರು ಎಂದು ಶಂಕಿಸಿ, ಇಬ್ಬರು ಮುಸ್ಲಿಮರನ್ನು ರಾಜಸ್ಥಾನದಿಂದ ಅಪಹರಿಸಲಾಗಿದೆ, ಬಳಿಕ ಅವರನ್ನು ಹರಿಯಾಣದ ಭಿವಾನಿಯ ಲೋಹರು ಎಂಬಲ್ಲಿ ಸಜೀವ ದಹನ ಮಾಡಿದ್ದಾರೆ.
ಮೃತರನ್ನು ನಾಸಿರ್ (27) ಮತ್ತು ಜುನೈದ್ (35) ಎಂದು ಗುರುತಿಸಲಾಗಿದ್ದು, ಇಬ್ಬರು ರಾಜಸ್ಥಾನದ ಗೋಪಾಲ್ ಗಡ್ ಗ್ರಾಮದ ನಿವಾಸಿಗಳು. ಬುಧವಾರ ತಡರಾತ್ರಿ ಗೋ ರಕ್ಷಕರ ಗುಂಪೊಂದು ಅವರನ್ನು ಅಪಹರಿಸಿದೆ ಎನ್ನಲಾಗಿದೆ. ನಂತರ ಹರಿಯಾಣದ ಭಿವಾನಿಯ ಲೋಹರು ಎಂಬಲ್ಲಿ ಸುಟ್ಟ ವಾಹನದಲ್ಲಿ ಇಬ್ಬರು ಶವವಾಗಿ ಪತ್ತೆಯಾಗಿದ್ದಾರೆ.

ರಾಜಸ್ಥಾನ ಪೊಲೀಸರು ಇಲ್ಲಿಯವರೆಗೆ ಅಪಹರಣ ಪ್ರಕರಣವನ್ನು ಮಾತ್ರ ದಾಖಲಿಸಿಕೊಂಡಿದ್ದಾರೆ. ಮೃತರ ಸಂಬಂಧಿಕರು ಬಜರಂಗದಳದ ಕಾರ್ಯಕರ್ತರು ಮತ್ತು ಗೋ ರಕ್ಷಕರನ್ನು ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಗುರುಗ್ರಾಮ್‌ನ ಬಜರಂಗದಳ ಸದಸ್ಯ ಮೋನು ಮನೇಸರ್ ಮತ್ತು ನುಹ್‌ನ ಶ್ರೀಕಾಂತ್ ಮರೋರಾ ಎಂಬ ಇಬ್ಬರು ಗೋ ರಕ್ಷಕರು ಕೊಲೆ ಮಾಡಿದ್ದಾರೆ ಎಂದು ಮೃತರ ಸಂಬಂಧಿಕರು ಆರೋಪಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಲೋಹರು ಡಿಎಸ್‌ಪಿ ಜಗತ್ ಸಿಂಗ್, "ನಮಗೆ ಎರಡು ಸುಟ್ಟ ಮೃತ ದೇಹಗಳೊಂದಿಗೆ ಸುಟ್ಟ ಬೊಲೆರೊ ಕಾಣಿಸಿಕೊಂಡಿರುವ ಬಗ್ಗೆ ಮಾಹಿತಿ ನೀಡಲಾಯಿತು. ಅಲ್ಲಿಗೆ ಭೇಟಿ ನೀಡಿ, ಸ್ಥಳದಲ್ಲೇ ಸಿಎಫ್‌ಎಸ್‌ಎಲ್ ತಂಡವನ್ನು ಕರೆಸಿ, ವಾಹನವನ್ನು ಗುರುತಿಸಿದ್ದೇವೆ. ಮೃತರು ಅಪಘಾತದಿಂದ ಕಾರಿನಲ್ಲಿ ಸುಟ್ಟು ಹೋಗಿದ್ದಾರೆಯೇ ಅಥವಾ ಕೊಲೆ ಮಾಡಲಾಗಿದೆಯೇ ಎಂಬುದು ನಮಗೆ ಇನ್ನೂ ಖಚಿತವಾಗಿಲ್ಲ. ಪ್ರಕರಣದ ತನಿಖೆಗೆ ಹಲವು ತಂಡಗಳನ್ನು ರಚಿಸಲಾಗಿದೆ" ಎಂದಿದ್ದಾರೆ.
ರಾಜಸ್ಥಾನದ ಭರತ್‌ಪುರದಲ್ಲಿ ಐಪಿಸಿ ಸೆಕ್ಷನ್ 143, 365, 367 ಮತ್ತು 368 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇನ್ನು, ಸಂತ್ರಸ್ತರ ವಿರುದ್ಧ ಯಾವುದೇ ಜಾನುವಾರು ಕಳ್ಳತನ ಅಥವಾ ಅಪರಾಧ ಇತಿಹಾಸದ ಬಗ್ಗೆ ಪೊಲೀಸರು ಇದುವರೆಗೆ ಸ್ಪಷ್ಟಪಡಿಸಿಲ್ಲ.
ಮೃತರ ಕುಟುಂಬಗಳ ಪ್ರಕಾರ, ನಾಸಿರ್ ಮತ್ತು ಜುನೈದ್ ತಮ್ಮ ಬೊಲೆರೋ ಜೀಪ್‌ನಲ್ಲಿ ಕೆಲವು ಗೃಹೋಪಯೋಗಿ ವಸ್ತುಗಳನ್ನು ತರಲು ಹತ್ತಿರದ ಗ್ರಾಮಕ್ಕೆ ಭೇಟಿ ಹೋಗಿದ್ದರು. ಆದರೆ, ವಾಪಸ್ ಬಂದಿರಲಿಲ್ಲ. ನಂತರ ಅವರ ಸಂಬಂಧಿಗೆ 8 ರಿಂದ 10 ಮಂದಿ ಇಬ್ಬರನ್ನು ಅಪಹರಣ ಮಾಡಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಆದಾದ ನಂತರ ಇಬ್ಬರ ಮೃತದೇಹಗಳು ಲೋಹರುದಲ್ಲಿ ಅವರ ಸುಟ್ಟ ವಾಹನ ಪತ್ತೆಯಾಗಿರುವ ಬಗ್ಗೆ ಕುಟುಂಬಕ್ಕೆ ಕರೆ ಬಂದಿದೆ.
ನಾಸಿರ್ ಅವರ ಸಹೋದರ ಹಮೀದ್ ಹೇಳುವಂತೆ, "ಅವರು ಬಡವರು, ಕಷ್ಟಪಟ್ಟು ತಮ್ಮ ಜೀವನವನ್ನು ನಡೆಸುತ್ತಿದ್ದರು. ಈ ಘಟನೆಯಿಂದ ಅವರ ಕುಟುಂಬ ಆಘಾತಕ್ಕೆ ಒಳಗಾಗಿದೆ. ನಾಸಿರ್ ಇತ್ತೀಚೆಗೆ ಮದುವೆಯಾಗಿದ್ದರು, ಅವರ ಪತ್ನಿ ಇನ್ನೂ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆ. ಜಾನುವಾರು ಕಳ್ಳಸಾಗಣೆಗೂ ನನ್ನ ಸಹೋದರನಿಗೂ ಯಾವುದೇ ಸಂಬಂಧವಿಲ್ಲ" ಎಂದಿದ್ದಾರೆ.
ಜುನೈದ್ ಪತ್ನಿ ಸಾಜಿದಾ ಕೂಡ "ಅವರು ಜುನೈದ್‌ನನ್ನು ಕೊಂದಿಲ್ಲ, ನನ್ನನ್ನು ಮತ್ತು ನನ್ನ ಮೂವರು ಮಕ್ಕಳನ್ನು ಸಹ ಕೊಂದಿದ್ದಾರೆ. ಜುನೈದ್ ದೇವರಿಗೆ ಭಯಪಡುವ, ಪ್ರಾಮಾಣಿಕ ವ್ಯಕ್ತಿ. ಕೆಲವರು ಅವರನ್ನು ಕರೆದುಕೊಂಡು ಹೋಗಿದ್ದಾರೆ ಎಂದು ನನಗೆ ಹೇಳಿದ್ದರು. ಅವರನ್ನು ಘನತೆಯಿಂದ ಸಮಾಧಿ ಮಾಡುವ ಅವಕಾಶವನ್ನೂ ಅವರು ನನಗೆ ಬಿಟ್ಟುಕೊಟ್ಟಿಲ್ಲ" ಎಂದು ಸಂಕಟ ವ್ಯಕ್ತಪಡಿಸಿದ್ದಾರೆ.j
-
Hotel Gas Bill: ಊಟದ ನಂತರ ಹೋಟೆಲ್ ಬಿಲ್ ನೋಡಿ ದಂಗಾದ ಗ್ರಾಹಕ: ₹1,110 ಬಿಲ್ ಜೊತೆ ₹100 'ಗ್ಯಾಸ್ ಚಾರ್ಜ್'!: ಭಾರೀ ವೈರಲ್ -
Ugadi Wishes 2026: ಯುಗಾದಿ ಹಬ್ಬದ ಶುಭಾಶಯಗಳು, 35+ ಮೆಸೇಜ್, ಶುಭಾಶಯ ಮತ್ತು ಸ್ಟೇಟಸ್ ಸಾಲುಗಳು ಇಲ್ಲಿವೆ -
Teachers Recruiment: ಪ್ರಾಥಮಿಕ, ಪ್ರೌಢ ಶಾಲೆಗಳ ದೈಹಿಕ ಶಿಕ್ಷಕರ ನೇರ ನೇಮಕಾತಿ: ಮಧು ಬಂಗಾರಪ್ಪ -
Byadgi Red Chilli: ಬ್ಯಾಡಗಿ ಮಾರುಕಟ್ಟೆಗೆ 2.43 ಲಕ್ಷ ಮೆಣಸಿನಕಾಯಿ ಚೀಲ ಆವಕ, ಕ್ವಿಂಟಾಲ್ ದರವೆಷ್ಟಿದೆ? -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
"ನಾನು ಭಾರತವನ್ನು ಪ್ರೀತಿಸುತ್ತೇನೆ... ಆದರೆ ನನ್ನನ್ನು ಬೆಳೆಸಿದ್ದು UAE": ಭಾರತ ಮೂಲದ ಮಹಿಳಾ ಉದ್ಯಮಿ ರೂಪಾ ಝಾ ಪೋಸ್ಟ್ Viral -
CBSE 10ನೇ ತರಗತಿ ಬೋರ್ಡ್ ಪರೀಕ್ಷೆ 2026: ಫಲಿತಾಂಶ ಯಾವಾಗ ಪ್ರಕಟ?, ಕಳೆದ ವರ್ಷಗಳ ಟ್ರೆಂಡ್ ಹೀಗಿದೆ -
ದೆಹಲಿ ಮೆಟ್ರೋ ಸಂಸ್ಕೃತಿ ಬೆಂಗಳೂರಿಗೂ ಬಂತಾ? ಮೆಟ್ರೋದಲ್ಲಿ ಯುವತಿಯರಿಂದ ನಿಯಮ ಉಲ್ಲಂಘನೆ Video Viral -
Rain Alert: ಕರ್ನಾಟಕದ ಈ 9 ಜಿಲ್ಲೆಗಳಿಗೆ ಮುಂದಿನ 2 ದಿನ ವ್ಯಾಪಕ ಆಲಿಕಲ್ಲು ಮಳೆ ಎಚ್ಚರಿಕೆ -
ಬೆಂಗಳೂರು 2ನೇ ವಿಮಾನ ನಿಲ್ದಾಣಕ್ಕೆ 3 ಜಾಗ ನಿಗದಿ: ಡಿಸಿಎಂ ಡಿ.ಕೆ ಶಿವಕುಮಾರ್ ಅಪ್ಡೇಟ್ಸ್ -
ಚಿನ್ನದ ಬೆಲೆ 55,000 ರೂಪಾಯಿ ದಿಢೀರ್ ಒಂದೇ ದಿನ ಭರ್ಜರಿ ಕುಸಿತ, ಇಂದಿನ ಬೆಲೆ ತಿಳಿಯಿರಿ... Gold Price -
Anganwadi Workers: ಅಂಗನವಾಡಿ ಕಾರ್ಯಕರ್ತೆಯರ ವೇತನ ಪರಿಷ್ಕರಣೆ: ಲಕ್ಷ್ಮಿ ಹೆಬ್ಬಾಳ್ಕರ್ ಅಪ್ಡೇಟ್ಸ್












Click it and Unblock the Notifications