ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋಲ್ಕತ್ತಾದ ಸಂತ್ರಗಚಿ ರೈಲು ನಿಲ್ದಾಣದಲ್ಲಿ ಕಾಲ್ತುಳಿತಕ್ಕೆ ಇಬ್ಬರು ಸಾವು

|
Google Oneindia Kannada News

ಕೋಲ್ಕತ್ತಾ (ಪಶ್ಚಿಮ ಬಂಗಾಲ), ಅಕ್ಟೋಬರ್ 23: ಪಶ್ಚಿಮ ಬಂಗಾಲದ ಹೌರಾದಲ್ಲಿನ ಸಂತ್ರಗಚಿ ರೈಲು ನಿಲ್ದಾಣದಲ್ಲಿ ಮಂಗಳವಾರ ಸಂಜೆ ಕಾಲ್ತುಳಿತಕ್ಕೆ ಇಬ್ಬರು ಮೃತಪಟ್ಟು, ಹನ್ನೆರಡಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

"ಇಬ್ಬರು ಮೃತಪಟ್ಟು, ಹಲವರು ಗಾಯಗೊಂಡಿದ್ದಾರೆ. ಮೃತರ ಕುಟುಂಬಕ್ಕೆ ರಾಜ್ಯ ಸರಕಾರದಿಂದ ಐದು ಲಕ್ಷ ರುಪಾಯಿ ನೀಡಲಾಗುವುದು. ಈ ಘಟನೆ ಬಗ್ಗೆ ತನಿಖೆ ನಡೆಸಲಾಗುವುದು" ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಬಿಹಾರ: ಕಾರ್ತಿಕ ಪೂರ್ಣಿಮೆ ಕಾರ್ಯಕ್ರಮದಲ್ಲಿ ಕಾಲ್ತುಳಿತಕ್ಕೆ ಮೂವರು ಬಲಿಬಿಹಾರ: ಕಾರ್ತಿಕ ಪೂರ್ಣಿಮೆ ಕಾರ್ಯಕ್ರಮದಲ್ಲಿ ಕಾಲ್ತುಳಿತಕ್ಕೆ ಮೂವರು ಬಲಿ

ಸ್ಥಳೀಯ ತೃಣಮೂಲ ಕಾಂಗ್ರೆಸ್ ಶಾಸಕ ಜತು ಲಹಿರಿ ಮಾತನಾಡಿ, ಗಾಯಗೊಂಡವರಲ್ಲಿ ಇಬ್ಬರು ಮಕ್ಕಳು ಸಹ ಇದ್ದಾರೆ ಎಂದು ತಿಳಿಸಿದ್ದಾರೆ.

Stampede

ಈ ಘಟನೆಯು ರಾತ್ರಿ 8 ಗಂಟೆ ಹೊತ್ತಿಗೆ ಸಂತ್ರಗಚಿ ರೈಲು ನಿಲ್ದಾಣದಲ್ಲಿ ಸಂಭವಿಸಿದೆ. ಈ ಸ್ಥಳವು ಹೌರಾದಿಂದ ನಾಲ್ಕು ಕಿಲೋಮೀಟರ್ ದೂರವಿದೆ.

ಎರಡು ರೈಲುಗಳು ಏಕಕಾಲದಲ್ಲಿ ನಿಲ್ದಾಣಕ್ಕೆ ಬರುತ್ತಿರುವುದಾಗಿ ಘೋಷಣೆ ಮಾಡಿದ್ದರಿಂದ ನೂಕಾಟವಾಗಿ, ಕಾಲ್ತುಳಿತ ಆಗಿದೆ.

ಮಕರ ಸಂಕ್ರಾಂತಿ ಪವಿತ್ರ ಸ್ನಾನ: ಕಾಲ್ತುಳಿತದಲ್ಲಿ ಭಾರೀ ಸಾವು ನೋವುಮಕರ ಸಂಕ್ರಾಂತಿ ಪವಿತ್ರ ಸ್ನಾನ: ಕಾಲ್ತುಳಿತದಲ್ಲಿ ಭಾರೀ ಸಾವು ನೋವು

ಪ್ರಯಾಣಿಕರ ಒತ್ತಡವನ್ನು ತಡೆದುಕೊಳ್ಳುವಷ್ಟು ರೈಲು ನಿಲ್ದಾಣದ ಸೇತುವೆಯು ದೊಡ್ಡದಾಗಿಲ್ಲ ಎಂದು ಮಮತಾ ಹೇಳಿದ್ದಾರೆ.

 Two dead, many injured in stampede at Howrah’s Santragachhi station

ಗಾಯಾಳುಗಳನ್ನು ತಕ್ಷಣವೇ ಹೌರಾ ಜನರಲ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ರೈಲು ನಿಲ್ದಾಣದಲ್ಲಿನ ಮೂಲ ಸೌಕರ್ಯ ವ್ಯವಸ್ಥೆ ಹಳೆಯದಾಗಿದ್ದು, ಅದನ್ನು ಮೇಲ್ದರ್ಜೆಗೆ ಏರಿಸುವ ಅಗತ್ಯವಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

English summary
Two persons died and more than a dozen injured in a stampede at Santragachi rail station in West Bengal’s Howrah on Tuesday evening.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X