ಸುಪ್ರೀಂಕೋರ್ಟ್ ನೋಟಿಸ್: ಟ್ವಿಟ್ಟಿಗರ ಬಾಯಿಗೆ ಆಹಾರವಾದ ರಾಹುಲ್ ಗಾಂಧಿ

ನವದೆಹಲಿ, ಏಪ್ರಿಲ್ 15: ರಫೇಲ್ ಒಪ್ಪಂದ ಪ್ರಕರಣದಲ್ಲಿ ನರೇಂದ್ರ ಮೋದಿ ಭ್ರಷ್ಟಾಚಾರ ಎಸಗಿದ್ದಾರೆಂದು ಸುಪ್ರೀಂಕೋರ್ಟ್ ಹೇಳಿದೆ. ಈ ಮೂಲಕ 'ಚೌಕಿದಾರ್ ಚೋರ್ ಹೇ' ಎಂದು ಕೋರ್ಟ್ ತೀರ್ಪು ನೀಡಿದೆ ಎಂಬುದಾಗಿ ಹೇಳಿಕೆ ನೀಡಿ ಸುಪ್ರೀಂಕೋರ್ಟ್ ಕೆಂಗಣ್ಣಿಗೆ ಗುರಿಯಾಗಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಟ್ವಿಟ್ಟರ್‌ನಲ್ಲಿ ಟೀಕಾಪ್ರಹಾರ ನಡೆಸಲಾಗಿದೆ.

ನರೇಂದ್ರ ಮೋದಿ ಭ್ರಷ್ಟಾಚಾರ ಮಾಡಿದ್ದಾರೆ ಎಂದು ಸುಪ್ರೀಂಕೋರ್ಟ್ ಹೇಳಿದೆ ಎಂಬುದಾಗಿ ರಾಹುಲ್ ಗಾಂಧಿ ಹೇಳಿಕೆ ನೀಡಿದ್ದರು. ಬಿಜೆಪಿ ರಾಹುಲ್ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿತ್ತು. ಅದನ್ನು ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್ ಸೋಮವಾರ ರಾಹುಲ್ ಗಾಂಧಿಗೆ ನೋಟಿಸ್ ನೀಡಿದೆ.

ತೀರ್ಪಿನಲ್ಲಿ ಮೋದಿ ಅವರ ಹೆಸರನ್ನು ಉಲ್ಲೇಖಿಸಿಲ್ಲ. ಆದರೆ ರಾಹುಲ್ ಗಾಂಧಿ ಹೇಳಿಕೆ ನೀಡುವ ಸಂದರ್ಭದಲ್ಲಿ ಸುಪ್ರೀಂಕೋರ್ಟ್ ಈ ರೀತಿ ಹೇಳಿದೆ ಎಂಬುದಾಗಿ ತಪ್ಪಾಗಿ ಉಲ್ಲೇಖಿಸಿರುವುದು ಸರಿಯಲ್ಲ ಎಂದು ಹೇಳಿರುವ ನ್ಯಾಯಾಲಯ, ಅದಕ್ಕೆ ಮುಂದಿನ ಸೋಮವಾರದ ಒಳಗೆ ವಿವರಣೆ ನೀಡುವಂತೆ ಸೂಚಿಸಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಸುಪ್ರೀಂಕೋರ್ಟ್ ಸೋಮವಾರ ಈ ನೋಟಿಸ್ ನೀಡಿದ ಬೆನ್ನಲ್ಲೇ ರಾಹುಲ್ ಗಾಂಧಿ, ಬಿಜೆಪಿ ಬೆಂಬಲಿಗರ ಟ್ರಾಲ್‌ಗಳಿಗೆ ಒಳಗಾಗಿದ್ದಾರೆ. ವಿನಾಕಾರಣ ಮೋದಿ ಮತ್ತು ಸುಪ್ರೀಂಕೋರ್ಟ್ ಅನ್ನು ಎಳೆದುತಂದು ಆರೋಪ ಮಾಡಿರುವುದಕ್ಕೆ ರಾಹುಲ್ ಅವರ ವಿರುದ್ಧ ಕಟುವಾದ ಟೀಕೆಗಳು ವ್ಯಕ್ತವಾಗಿದೆ.

ಪ್ರಧಾನಿ ಮೋದಿ ಬಗ್ಗೆ ಒಂದೂ ಮಾತು ಆಡಿಲ್ಲ. ರಫೇಲ್ ಕುರಿತಾದ ತನ್ನ ತೀರ್ಪನ್ನು ಮರುಪರಿಶೀಲಿಸಲು ಈ ದಾಖಲೆಗಳನ್ನು ಒಪ್ಪಿಕೊಳ್ಳಬಹುದು ಎಂದಷ್ಟೇ ಸುಪ್ರೀಂಕೋರ್ಟ್ ಹೇಳಿತ್ತು. ರಾಹುಲ್ ಗಾಂಧಿಗೆ ಇದನ್ನು ಅರ್ಥಮಾಡಿಕೊಳ್ಳುವ ಸಾಮಾನ್ಯ ಜ್ಞಾನವೂ ಇಲ್ಲ. ಪ್ರಧಾನಿ ಮತ್ತು ಬಿಜೆಪಿ ವಿರುದ್ಧ ಆರೋಪ ಮಾಡುವುದಕ್ಕಾಗಿ ಮನಬಂದಂತೆ ಹೇಳಿಕೆ ನೀಡುತ್ತಿದ್ದಾರೆ ಎಂದು ಟ್ವಿಟ್ಟಿಗರು ಝಾಡಿಸಿದ್ದಾರೆ.

ಇನ್ನಾದರೂ ಕಲಿಯಿರಿ

ಸುಪ್ರೀಂಕೋರ್ಟ್‌ ಹೆಸರನ್ನು ತಪ್ಪಾಗಿ ಬಳಸಿಕೊಡು ಚೋರ್ ಕಾಮೆಂಟ್ ನೀಡಿದ್ದಕ್ಕೆ ಕೋರ್ಟ್ ಸ್ಪಷ್ಟೀಕರಣ ಕೇಳಿರುವುದು ರಾಹುಲ್ ಗಾಂಧಿ ಅವರಿಗೆ ಎಚ್ಚರಿಕೆಯ ದಿನವಾಗಿದೆ. ಕಾಂಗ್ರೆಸ್ ಪಕ್ಷಕ್ಕೆ ನಾಚಿಕೆಯಾಗಬೇಕು. ಪದೇ ಪದೇ ಸುಳ್ಳುಗಳನ್ನು ಬಿತ್ತುವುದರ ಪರಿಣಾಮ ಏನಾಗುತ್ತದೆ ಎಂಬುದು ತಿಳಿದಿದೆಯೇ? ನಿಮಗೀಗ 50 ವರ್ಷ. ಕಡೇಪಕ್ಷ ಈಗಲಾದರೂ ಕಲಿಯುತ್ತೀರಾ? ಎಂದು ಆರ್. ರಾಜಗೋಪಾಲನ್ ಎಂಬುವವರು ತರಾಟೆಗೆ ತೆಗೆದುಕೊಂಡಿದ್ದಾರೆ.

Array

ಕಪಾಳಮೋಕ್ಷ

ರಾಹುಲ್ ಗಾಂಧಿ ಅವರೇ ಚೌಕಿದಾರ್ ಚೋರ್ ಹೈ ಎಂದಿದ್ದಕ್ಕೆ ಇಂದು ಸುಪ್ರೀಂಕೋರ್ಟ್ ಸರಿಯಾದ ಕಪಾಳಮೋಕ್ಷ ಮಾಡಿದೆ. ನಿಮ್ಮ ಅಸಮಂಜಸ ಹೇಳಿಕೆಗಳಿಗೆ ಭವಿಷ್ಯದಲ್ಲಿ ಮತದಾರರು ಮತ್ತು ಸುಪ್ರೀಂಕೋರ್ಟ್‌ನಿಂದ ಸೂಕ್ತ ಶಿಕ್ಷೆ ಸಿಗಲಿದೆ ಎಂದು ಭರವಸೆ ವ್ಯಕ್ತಪಡಿಸುತ್ತೇನೆ ಎಂದು ಸಚೀಂದ್ರ ಪಾಂಡೆ ಎಂಬುವವರು ಟ್ವೀಟ್ ಮಾಡಿದ್ದಾರೆ.

ಹೊಸದೇನಲ್ಲ

ಬಹುತೇಕ ರಾಜಕಾರಣಿಗಳು ಸುಳ್ಳು ಸುದ್ದಿಗಳನ್ನು ಸೃಷ್ಟಿಸುವುದನ್ನು ಖುಷಿಪಡುತ್ತಿದ್ದಾರೆ. ಇತ್ತೀಚೆಗೆ ರಾಹುಲ್ ಗಾಂಧಿ ಸುಪ್ರೀಂಕೋರ್ಟ್‌ನ ತೀರ್ಪನ್ನು ಚೌಕಿದಾರ್ ಚೋರ್ ಹೈ ಎಂದು ವರ್ಣಿಸಿದ್ದರು. ಇದು ಹೊಸದೇನಲ್ಲ. ತಂತ್ರಜ್ಞಾನ ಬದಲಾಗಿದೆಯಷ್ಟೇ ಎಂದು ಎಸ್‌ಬಿ ಸಿಂಗ್ ಎಂಬುವವರು ಹೇಳಿದ್ದಾರೆ.

ಸುರ್ಜೇವಾಲ ಸುದ್ದಿಗೋಷ್ಠಿ ಮಾಡಬೇಕಲ್ಲ

ಸುಪ್ರೀಂಕೋರ್ಟ್ ಈಗ ಮೋದಿ ನಿಯಂತ್ರಣದಲ್ಲಿದೆ. ಈ ರೀತಿ ಸುರ್ಜೇವಾಲ ಶೀಘ್ರದಲ್ಲಿಯೇ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡುವುದನ್ನು ನಿರೀಕ್ಷಿಸುತ್ತಿದ್ದೇನೆ ಎಂದು ಚೌಕಿದಾರ್ ಮಾಧವ ಅಯ್ಯಂಗಾರ್ ಲೇವಡಿ ಮಾಡಿದ್ದಾರೆ.

ಈಗ ಯಾರು ಕಳ್ಳ?

ರಾಹುಲ್ ಗಾಂಧಿ ಅವರೇ ಈಗ ಹೇಳಿ ಸುಪ್ರೀಂಕೋರ್ಟ್ ಯಾರನ್ನು ಕಳ್ಳ ಅಂದಿದ್ದು ಎಂದು ಅಮಿತ್ ಕಪೂರ್ ಎಂಬುವವರು ವ್ಯಂಗ್ಯವಾಡಿದ್ದಾರೆ.

ಈಗೇನು ಹೇಳುತ್ತೀರಿ?

ದೇಶದ ಜನರಿಗೆ ಮತ್ತು ಸುಪ್ರೀಂಕೋರ್ಟ್‌ಗೆ ಸುಳ್ಳು ಹೇಳಿದ್ದಕ್ಕಾಗಿ ರಾಹುಲ್ ಗಾಂಧಿ ಈಗೇನು ಹೇಳಬೇಕು? ಚುನಾವಣೆಯನ್ನು ಗೆಲ್ಲಲು ಭಯಾನಕ ನಡವಳಿಕೆ ಇದು ಎಂದು ಕಾರ್ಮಿಕ್ ಇಂಡಿಯನ್ ಎಂಬ ಖಾತೆ ಕಿಡಿಕಾರಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+