ಅಯ್ಯರ್ 'ನೀಚ' ಹೇಳಿಕೆ: ಕೆರಳಿದ ಜನರಿಂದ ಛೀಮಾರಿಯ ಸುರಿಮಳೆ!
ಆಡಿದ ಮಾತು, ಬಿಟ್ಟ ಬಾಣ ಹಿಂತೆಗೆದುಕೊಳ್ಳೋಕೆ ಸಾಧ್ಯವೇ ಇಲ್ಲ! ಎಷ್ಟೇ ತೇಪೆ ಕೆಲಸಗಳನ್ನೂ ಮಾಡಿದರೂ ಅಷ್ಟೆ!
ದೇಶದ ಅತ್ಯುನ್ನತ ಸ್ಥಾನದಲ್ಲಿರುವ ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ಕಾಂಗ್ರೆಸ್ ಮುಖಂಡ ಮಣಿಶಂಕರ್ ಅಯ್ಯರ್, 'ನೀಚ' ಎಂಬ ಪದಪ್ರಯೋಗ ಮಾಡಿದ್ದು ಯಾವ ಲೆಕ್ಕದಲ್ಲಿ ಸಮರ್ಥಿಸಿಕೊಳ್ಳುವ ವಿಷಯ? ರಾಜಕೀಯ ದ್ವೇಷವೇನೇ ಇದ್ದರೂ ಸಭ್ಯತೆಯ ಗೆರೆಯನ್ನು ದಾಟದೆ ಪ್ರಬುದ್ಧತೆ ಮೆರೆಯುವ ಉದಾರತೆಯನ್ನು ರಾಜಕಾರಣಿಗಳಿಂದ ನಿರೀಕ್ಷಿಸುವುದೇ ತಪ್ಪು ಎಂಬ ಭಾವನೆ ಜನರಲ್ಲಿ ಹುಟ್ಟಿದ್ದರೆ ತಪ್ಪೇನಿಲ್ಲ.
ಪಕ್ಷ ಬೇರೆ ಇದ್ದೀತು, ನಂಬಿದ್ದ ಸಿದ್ಧಾಂತ ಬೇರೆ ಇದ್ದೀತು, ಕಾರ್ಯ ವೈಖರಿಯಲ್ಲಿ ಭಿನ್ನತೆ ಇದ್ದೀತು. ಆದರೆ ದೇಶದ ನೂರಾಮೂವತ್ತು ಕೋಟಿ ಜನರ ಪ್ರತಿನಿಧಿಯನ್ನು 'ನೀಚ' ಎಂಬ ನೀಚ ಪದದಿಂದ ಕರೆಯುವ ಅಸಭ್ಯ ವರ್ತನೆ ಯಾವತ್ತಿದ್ದರೂ ಅಪರಾಧವೇ. ಅದು ನರೇಂದ್ರ ಮೋದಿಗೇ ಇದ್ದಿರಲಿ, ಮನಮೋಹನ್ ಸಿಂಗ್ ಗೇ ಇದ್ದಿರಲಿ, ಯಾವ ಪಕ್ಷದ ನಾಯಕರೇ ಆಗಿದ್ದಿರಲಿ. ಜವಾಬ್ದಾರಿಯುತ ಹುದ್ದೆಯಲ್ಲಿರುವ ವ್ಯಕ್ತಿಯೊಬ್ಬರು ಸಭ್ಯತೆ ಮೀರಿ ಆಡುವ ಇಂಥ ಮಾತುಗಳು, ಜನರಲ್ಲಿ ರಾಜಕೀಯ ಮತ್ತು ರಾಜಕಾರಣದ ಬಗ್ಗೆ ರೇಜಿಗೆ ಹುಟ್ಟಿಸಿದ್ದರೆ ಅಚ್ಚರಿಯೇನಿಲ್ಲ!
ಮಣಿಶಂಕರ್ ಅಯ್ಯರ್ ಅವರ 'ನೀಚ' ಹೇಳಿಕೆ, ಆ ನಂತರದ ಕ್ಷಮಾಪಣೆ, ಪಕ್ಷದಿಂದ ಅಮಾನತು, ರಾಹುಲ್ ಗಾಂಧಿಯವರಿಂದಲೂ ಅಯ್ಯರ್ ನಡೆಗೆ ವಿರೋಧ, ಮೋದಿಯವರ ಶಾಂತ ಪ್ರತಿಕ್ರಿಯೆ, ದೇಶದ ಜನರಿಂದ ಛೀಮಾರಿ... ಒಂದು ಕ್ಷಣದಲ್ಲಿ ಅವರಾಡಿದ, ಎರಡೇ ಅಕ್ಷರದ ಆ ಪದ ಏನೆಲ್ಲ ಮಾಡಿಬಿಟ್ಟಿದೆ! ಟ್ವಿಟ್ಟರ್ ನಲ್ಲೂ ಅಯ್ಯರ್ ವಿರುದ್ಧ #ManiShankarAiyer #NeechAadmi #NeechCongress #CongNeechPolitics ಸೇರಿದಂತೆ ತರಹೇವಾರಿ ಹ್ಯಾಶ್ ಟ್ಯಾಗ್ ಗಳು ಸೃಷ್ಟಿಯಾಗಿವೆ. ಒಟ್ಟಿನಲ್ಲಿ ಕೆರಳಿದ ಜನರಿಂದ ಛೀಮಾರಿಯ ಸುರಿಮಳೆ ಅಯ್ಯರ್ ಮೇಲೆ ದೊಪ್ಪೆಂದು ಬೀಳುತ್ತಲೇ ಇವೆ!
| Array |
ರಾಹುಲ್ ಗಾಂಧಿ ಮೇಲೆ ಹೊಟ್ಟೆಕಿಚ್ಚು!
ಮಣಿಶಂಕರ್ ಅಯ್ಯರ್ ಮತ್ತು ಕಪಿಲ್ ಸಿಬಲ್ ಅವರಿಗೆ ರಾಹುಲ್ ಗಾಂಧಿ ಅವರು ಪಕ್ಷದ ಅಧ್ಯಕ್ಷರಾಗುತ್ತಿದ್ದಾರೆಂದು ಅವರ ಮೇಲೆ ಹೊಟ್ಟೆಕಿಚ್ಚು! ಅದಕ್ಕೆಂದೇ ಗುಜರಾತ್ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸುವುದಕ್ಕೆ ಇಂಥ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದಾರೆ ಅಭಿಷೇಕ್ ಸಿಂಗ್.
|
ಇದ್ಯಾವ ನ್ಯಾಯ?!
ಪ್ರಧಾನಿ ನರೇಂದ್ರ ಮೋದಿಯವರ ಸಾಮಾಜಿಕ ಮಾಧ್ಯಮದ ಅಪರಿಚಿತ ಫಾಲೋವರ್ ಗಳು ಕಾಂಗ್ರೆಸ್ ವಿರುದ್ಧ ಏನನ್ನಾದರೂ ಬರೆದರೆ ಅದಕ್ಕೆ ಮೋದಿಯೇ ಕ್ಷಮಾಪಣೆ ಕೇಳಬೇಕು. ಆದರೆ ಕಾಂಗ್ರೆಸ್ ಅನ್ನು ಪ್ರತಿನಿಧಿಸುವ ಕಾಂಗ್ರೆಸ್ ಮುಖಂಡ ಮಣಿಶಂಕರ್ ಅಯ್ಯರ್, ಮೋದಿಯವರನ್ನು ನೀಚ ಎಂದರೆ ಕಾಂಗ್ರೆಸ್ ಕ್ಷಮೆ ಕೇಳುವುದಿಲ್ಲ! ಇದ್ಯಾವ ನ್ಯಾಯ?! ಎಂದು ರಂಜಿತ್ ಎಂಬುವವರು ಟ್ವೀಟ್ ಮಾಡಿದ್ದಾರೆ.
|
ನನಗನ್ನಿಸುತ್ತೆ, ಅಯ್ಯರ್ ಬಿಜೆಪಿ ಪರವಾಗಿದ್ದಾರೆ!
ನನಗೆ ಒಮ್ಮೊಮ್ಮೆ ಅನ್ನಿಸುತ್ತೆ, ಮಣಿಶಂಕರ್ ಅಯ್ಯರ್ ಬಿಜೆಪಿ ಪರವಾಗಿದ್ದಾರೆ ಅಂತ. 2014 ರಲ್ಲಿ ಮೋದಿಯವರನ್ನು ಚಾಯ್ ವಾಲಾ ಎಂದು ಕರೆದರು. ನಂತರ ಮೋದೀಜಿ ಪ್ರಧಾನಿಯಾದರು. ಇದೀಗ 2017 ರಲ್ಲಿ ಮೋದಿಯವರನ್ನು 'ನೀಚ' ಎಂದಿದ್ದಾರೆ. ಅದರರ್ಥ, ಗುಜರಾತಿನಲ್ಲಿ ಬಿಜೆಪಿ ಅಭ್ಯರ್ಥಿಯೇ ಮುಖ್ಯಮಂತ್ರಿಯಾಗುತ್ತಾರೆ! ಎಂದು ಸೀಮಾ ಹವಾರೆ ಎಂಬುವವರು ಟ್ವೀಟ್ ಮಾಡಿದ್ದಾರೆ.
|
ಕೇವಲ ಅಮಾನತು ಶಿಕ್ಷೆಯಲ್ಲ!
ಚಾಯ್ ವಾಲ್ ಆಯ್ತು, ಈಗ ನೀಚ ಮನುಷ್ಯ ಎಂದಿದ್ದಾರೆ. ಇದು ನೈತಿಕತೆಯ ಕೊಲೆ. ಇದು ಕಾಂಗ್ರೆಸ್ ನ ಕೊಳಕು, ನೀಚ ರಾಜಕೀಯವಷ್ಟೆ. ದೇಶದ ಪ್ರತಿಷ್ಠಿತ ಹುದ್ದೆಯಲ್ಲಿರುವ ಪ್ರಧಾನಿಯನ್ನು ಇಂಥ ಪದಗಳಿಂದ ನಿಂದಿಸಿರುವ ಅವರಿಗೆ ಕಾನೂನಾತ್ಮಕ ಶಿಕ್ಷೆ ನೀಡಬೇಕು. ಕೇವಲ ಪಕ್ಷದಿಂದ ಅಮಾನತು ಮಾಡುವುದು ಶಿಕ್ಷೆಯಲ್ಲ ಎಂದು ಎಸ್ ಡಿ ವೈದ್ಯ ಎಂಬುವವರು ಟ್ವೀಟ್ ಮಾಡಿದ್ದಾರೆ.
|
ಇಡೀ ದೇಶಕ್ಕೂ ಅವಮಾನ!
ಭಾರತದ ಪ್ರಧಾನಿಯನ್ನು 'ನೀಚ' ಎಂದು ಕರೆಯುವ ಮೂಲಕ ಮಣಿಶಂಕರ್ ಅಯ್ಯರ್ ಕೇವಲ ಪ್ರಧಾನಿ ಮೋದಿ ಮತ್ತು ಗುಜರಾತಿನ ಜನರಿಗೆ ಅವಮಾನ ಮಾಡಿಲ್ಲ. ಬದಲಾಗಿ ಇಡೀ ದೇಶದ ಜನರಿಗೂ ಅವಮಾನ ಮಾಡಿದ್ದಾರೆ ಎಂದು ಪ್ರಕಾಶ್ ಪೂಜಾರಿ ಎಂಬುವವರು ಟ್ವೀಟ್ ಮಾಡಿದ್ದಾರೆ.
|
ಮಾರ್ಗದರ್ಶಿಗಳಾಗಬೇಕಾದವರು ಕೀಳುಹಾದಿಗಿಳಿದಿದ್ದಾರೆ!
ಯುವಕರಿಗೆ ಮಾರ್ಗದರ್ಶಿಗಳಾಗಬೇಕಾದ ಕಾಂಗ್ರೆಸ್ ನ ಕೆಲವು ಹಿರಿಯ ನಾಯಕರು ಯಾಕಿಂಥ ಕೀಳುಮಟ್ಟಕ್ಕಿಳಿಯುತ್ತಿದ್ದಾರೆ ಎಂದು ಯೋಚಿಸಿದರೆ ನಿಜಕ್ಕೂ ಬೇಸರವಾಗುತ್ತದೆ ಎಂದು ಅಕ್ಷಯ್ ಎಂಬುವವರು ಟ್ವೀಟ್ ಮಾಡಿದ್ದಾರೆ.
|
ಕಸ ಸಂಗ್ರಹಿಸುವವರೂ ನಾಗರಿಕರಾಗಿರುತ್ತಾರೆ!
'ನೀಚ' ಎಂಬುದು ನೀಚರು ಹೇಳುವ ಪದ. ನಮ್ಮ ಬಳಿ ಕಸ ಸಂಗ್ರಹಿಸುವ ಮನುಷ್ಯನೂ ನಾಗರಿಕನಾಗಿರುತ್ತಾನೆ. ಆದರೆ ಮಣಿ ಶಂಕರ್ ಅಯ್ಯರ್ ಅದಕ್ಕಿಂತ ಕೀಳಾದರು ಎಂದು ಅಕ್ಷಯ್ ಟೀಟ್ ಮಾಡಿದ್ದಾರೆ.
|
ಅಸಹನೆಯ ಪರಾಕಾಷ್ಠೆ!
'ನೀಚ' ಎಂಬ ತಮ್ಮ ಹೇಳಿಕೆಯನ್ನು ಮಣಿಶಂಕರ್ ಅಯ್ಯರ್ ಸಮರ್ಥಿಸಿಕೊಂಡಿದ್ದಾರೆ. ಅವರು ಯಾರನ್ನು ಮೂರ್ಖರನ್ನಾಗಿ ಮಾಡುತ್ತಿದ್ದಾರೆ? ಇವೆಲ್ಲ ಅಸಹನೆಯ ಪರಾಕಾಷ್ಠೆ ಅಷ್ಟೆ ಎಂದು ರಾಜೀವ್ ಒಖಂಡಿಯರ್ ಟ್ವೀಟ್ ಮಾಡಿದ್ದಾರೆ.
|
ಪಾಕ್ ಸಹಾಯ ಕೇಳಿದವರಿಂದ ಇನ್ನೇನು ನಿರೀಕ್ಷಿಸೋಕೆ ಸಾಧ್ಯ?
ಮೋದಿ ಸರ್ಕಾರವನ್ನು ಕೆಳಗಿಳಿಸುವುದಕ್ಕೆ ಪಾಕಿಸ್ಥಾನದ ನೆರವು ಬೇಡಿದ ಮಂತ್ರಿ ಇವರು. ಇಂಥವರಿಂದ ನಾವು ಇನ್ನೇನನ್ನು ನಿರೀಕ್ಷಿಸುವುದಕ್ಕೆ ಸಾಧ್ಯ ಹೇಳಿ? ಕಾಂಗ್ರೆಸ್ ನಾಯಕನಿಂದ ಎಂಥ ಅನಾರೋಗ್ಯಕರ ರಾಜಕೀಯ! ಎಂದು ಆಸ್ಥಾ ಮಿಶ್ರಾ ಎಂಬುವವರು ಟ್ವೀಟ್ ಮಾಡಿದ್ದಾರೆ.
-
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
IPL 2026 Ticket: ಐಪಿಎಲ್ ಟಿಕೆಟ್ ಖರೀದಿ ಕುರಿತು ಬೆಂಗಳೂರು ಪೊಲೀಸರಿಂದ ಕ್ರಿಕೆಟ್ ಪ್ರೇಮಿಗಳಿಗೆ ಮಹತ್ವದ ಸಲಹೆ -
By-Election: ದಾವಣಗೆರೆ ದಕ್ಷಿಣದಲ್ಲಿ ಮೊದಲ ಬಾರಿ ಬಿಜೆಪಿ ಗೆಲುವು ನಿಶ್ಚಿತ; ಬಸವರಾಜ ಬೊಮ್ಮಾಯಿ ವಿಶ್ವಾಸ












Click it and Unblock the Notifications