ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ವೈಯಕ್ತಿಕ ಖಾತೆಯಿಂದ ಬ್ಲ್ಯೂ ಟಿಕ್ ಮಾರ್ಕ್ ತೆಗೆದ ಟ್ವಿಟ್ಟರ್
ನವದೆಹಲಿ, ಜೂನ್ 05: ಉಪ ರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅವರ ಟ್ವಿಟ್ಟರ್ ಖಾತೆಯಲ್ಲಿರುವ ಬ್ಲ್ಯೂ ಟಿಕ್ ಮಾರ್ಕ್ ಮಾಯವಾಗಿದೆ.
ಗಣ್ಯ ವ್ಯಕ್ತಿಗಳು, ರಾಜಕಾರಣಿಗಳು, ಸೆಲೆಬ್ರಿಟಿಗಳ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹೆಸರಿನ ಎದುರಿಗೆ ಬ್ಲ್ಯೂ ಬ್ಯಾಡ್ಜ್ ಅಥವಾ ಟಿಕ್ ಮಾರ್ಕ್ ಬರುತ್ತದೆ. ನೀಲಿ ಬಣ್ಣದ ಟಿಕ್ ಮಾರ್ಕ್ ಇದ್ದರೆ ಸಂಬಂಧಪಟ್ಟವರ ಅಧಿಕೃತ ಟ್ವಿಟ್ಟರ್ ಖಾತೆ ಎಂದರ್ಥ.
ಟ್ವಿಟ್ಟರ್ ಸಂಸ್ಥೆ ಇಂದು ದೇಶದ ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರ ವೈಯಕ್ತಿಕ ಟ್ವಿಟ್ಟರ್ ಖಾತೆಯಿಂದ ಹೆಸರಿನ ಎದುರಿಗಿದ್ದ ಬ್ಲೂ ಟಿಕ್ ಮಾರ್ಕ್ ತೆಗೆದುಹಾಕಿದೆ.
Twitter removes blue badge from Vice President Venkaiah Naidu's personal verified account
— ANI Digital (@ani_digital) June 5, 2021
Read @ANI Story | https://t.co/weTg7rN2T7 pic.twitter.com/QLW6XoPHi5
ಇನ್ನು ಬ್ಲೂ ಟಿಕ್ ಟಿಕ್ ಹೊಂದಿದ ಖಾತೆಯು ಸಕ್ರಿಯವಾಗಿರಬೇಕು. ಸರ್ಕಾರದಿಂದ ಗುರುತಿಸಿಕೊಂಡಿರುವ, ಬ್ರಾಂಡ್ಗಳು, ಲಾಭ ರಹಿತ ಸಂಸ್ಥೆ, ಸುದ್ದಿ ಸಂಸ್ಥೆಗಳಿಗೆ ಟ್ವಿಟ್ಟರ್ ಬ್ಲೂ ಟಿಕ್ ನೀಡುತ್ತದೆ.

ಕಳೆದ ಕೆಲ ತಿಂಗಳ ಹಿಂದೆ ಟ್ವಿಟ್ಟರ್ ಬ್ಲೂ ಟಿಕ್ ವೇರಿಫಿಕೇಶನ್ ಬ್ಯಾಡ್ಜ್ ಆಯ್ಕೆಯನ್ನು ಮತ್ತೆ ಪ್ರಾರಂಭಿಸಿದೆ. 2017ರ ನಂತರ ಸ್ಥಗಿತಗೊಳಿಸಿದ ಈ ಪ್ರಕ್ರಿಯೆಯನ್ನು ಇದೀಗ ಪ್ರಾರಂಭಸಿದೆ. ಮುಂದಿನ ಕೆಲವು ವಾರಗಳಲ್ಲಿ ಹೊಸ ಧೃಢೀಕರಣ ಆಯ್ಕೆಯನ್ನು ಕಲ್ಪಿಸುತ್ತಿದ್ದೇವೆ ಎಂದು ತಿಳಿಸಿತ್ತು.
ಟ್ವಿಟ್ಟರ್ ಅರ್ಹತೆ ಇರುವವರಿಗಾಗಿ ಮಾತ್ರ ಬ್ಯೂ ಬ್ಯಾಡ್ಜ್ ನೀಡುತ್ತಿದೆ. ಇನ್ನು ಖಾತೆ ವೈರಿಫೈಡ್ ಆದರೆ ಮಾತ್ರ ಅವರ ಹೆಸರಿನ ಮುಂದೆ ನೀಲಿ ಬಣ್ಣದ ಬ್ಲೂ ಟಿಕ್ ಕಾಣಿಸುತ್ತದೆ. ಟ್ವಿಟ್ಟರ್ ಕೆಲವು ಮಾರ್ಗಸೂಚಿಯನ್ನು ಹೊರಡಿಸಿದ್ದು, ಅದನ್ನು ಪಾಲಿಸಬೇಕು ಎಂದು ಸಂಸ್ಥೆ ತಿಳಿಸಿತ್ತು.
ವೈಸ್ ಪ್ರೆಸಿಡೆಂಟ್ ಆಫ್ ಇಂಡಿಯಾ ಎಂಬ ಕಚೇರಿ ಅಧಿಕೃತ ಖಾತೆಯ ಬ್ಲೂ ಟಿಕ್ ಮಾರ್ಕ್ ಹಾಗೆಯೇ ಉಳಿಸಿಕೊಂಡಿದೆ.
-
ಟೀಂ ಇಂಡಿಯಾಗೆ ನನ್ನದೊಂದು ಸಲಾಂ, ಐಪಿಎಲ್ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಪಂಜಾಬ್ ಕಿಂಗ್ಸ್ ಕೋಚ್ ರಿಕಿ ಪಾಂಟಿಂಗ್ -
Horoscope March 17; ಈ ರಾಶಿಯವರ ಅದೃಷ್ಟ ಇಂದು ಬದಲಾಗಬಹುದು -
Byadagi Chilli: ಕರ್ನಾಟಕದ ಕೆಂಪು ಚಿನ್ನ ಬ್ಯಾಡಗಿ ಮೆಣಸಿನಕಾಯಿಗೆ ಹೊಸ ಸಂಕಷ್ಟ, ರೈತರು ಕಂಗಾಲು -
Prem: ಅಂದು ಮೇಲುಕೋಟೆ ಹುಡುಗಿ, ಇಂದು ಸೆರಗ ಸರ್ಸೆ: ವಿವಾದಕ್ಕೆ ಕಾರಣವಾದ ಪ್ರೇಮ್ ಸಿನಿಮಾ ಹಾಡುಗಳು -
ಶಿಕ್ಷಕಿಯರು ಹೆರಿಗೆ ರಜೆಗಾಗಿ ಅರ್ಜಿ ಸಲ್ಲಿಸಿದ 15 ದಿನಗಳ ಒಳಗೆ ಮಂಜೂರು; 5 ವರ್ಷ ಇಚ್ಛಿಸಿದ ಶಾಲೆಯಲ್ಲೇ ಕೆಲಸಕ್ಕೆ ಅವಕಾಶ -
SSLC Exam 2026 : ಮಾರ್ಚ್ 18ರಿಂದ ಪರೀಕ್ಷೆ; ವಿದ್ಯಾರ್ಥಿಗಳೇ, ನಿಮ್ಮ ಕೊನೆ ಕ್ಷಣದ ಸಿದ್ಧತೆಗೆ ಹೀಗಿರಲಿ -
Puneeth Rajkumar Birthday: ಇಂದು ನಟ ಪುನೀತ್ ರಾಜ್ಕುಮಾರ್ ಹುಟ್ಟುಹಬ್ಬ; ಅಭಿಮಾನಿಗಳಿಂದ ವಿಶೇಷ ನಮನ, ಶುಭಾಶಯಗಳ ಮಹಾಪೂರ -
SSLC ವಿದ್ಯಾರ್ಥಿಗಳ ಗಮನಕ್ಕೆ: ಮಾರ್ಚ್ 18ಕ್ಕೆ ಪ್ರಥಮ ಭಾಷೆ ಕನ್ನಡ ಪರೀಕ್ಷೆ; ಪಾಸಾಗಲು ಈ ಪ್ರಮುಖ ಅಂಶಗಳನ್ನು ಗಮನಿಸಿ -
ಸಿನಿಮಾ ಕಥೆಗೆ ವಿರುದ್ಧವಾಗಿ ಕುಂಭಮೇಳ ಮೊನಾಲಿಸಾ ಮದುವೆ, 10 ಕೋಟಿ ರೂ. ಸಾಲ ಮಾಡಿದ್ದೇನೆ: ನಿರ್ದೇಶಕ ಸನೋಜ್ ಮಿಶ್ರಾ ಆತಂಕ -
Shame on You: ಸೆರಗ ಸರ್ಸೆ ಡಬಲ್ ಮೀನಿಂಗ್ ಹಾಡಿಗೆ ಕನ್ನಡಿಗರ ಆಕ್ರೋಶ-ಶೋಭಾ ಮಳವಳ್ಳಿ ಬರಹ -
ನಾಳೆಯಿಂದ ರಾಜ್ಯಾದ್ಯಂತ SSLC ಪರೀಕ್ಷೆ: ಟೆನ್ಷನ್ ಬಿಡಿ, ರಿಲಾಕ್ಸ್ ಆಗಿರಿ; ಕೊನೆಯ ಕ್ಷಣದ ಸಿದ್ಧತೆಗೆ ಇಲ್ಲಿವೆ ಟಿಪ್ಸ್ -
Bengaluru Rain: ಬೆಂಗಳೂರಿನ ವಿವಿಧ ಭಾಗಗಳಲ್ಲಿ ಧಾರಾಕಾರ ಮಳೆ: ಯುಗಾದಿಗೆ ಮೊದಲ ಮಳೆ; ರಾಜ್ಯಕ್ಕೆ ಶುಭಸೂಚಕ












Click it and Unblock the Notifications