ಅಭಿನಂದನೆಯ ಮಹಾಮಳೆಯಲ್ಲಿ ಮಿಂದೆದ್ದ ಪೈಲೆಟ್ ಅವನಿ

ಜಾಮ್ನಗರ್, ಫೆಬ್ರವರಿ 22: ಗುಜರಾತಿನ ಜಾಮ್ನಗರದಲ್ಲಿ ಮಿಗ್ 21 ಬಿಸಾನ್ ಯುದ್ಧ ವಿಮಾನ ಚಲಾಯಿಸುವ ಮೂಲಕ ಯುದ್ಧವಿಮಾನದ ಮೊಟ್ಟ ಮೊದಲ ಮಹಿಳಾ ಪೈಲೆಟ್ ಎಂಬ ಕೀರ್ತಿಗೆ ಪಾತ್ರರಾದರು ಅವನಿ ಚತುರ್ವೇದಿ.

2016 ರ ಜೂನ್ ನಲ್ಲಿ ಭಾರತೀಯ ವಾಯುಸೇನೆ ಗೆ ಆಯ್ಕೆಯಾದ ಭಾವನಾ ಕಾಂತ್, ಮೋಹನಾ ಸಿಂಗ್ ಸೇರಿದಂತೆ ಮೂವರು ಮಹಿಳಾ ಯುದ್ಧ ವಿಮಾನ ಪೈಲೆಟ್ ಗಳಲ್ಲಿ ಮೊದಲ ಬಾರಿಗೆ ಯುದ್ಧ ವಿಮಾನ ನಡೆಸಿದ ಕೀರ್ತಿ ಅವನಿ ಅವರದು.

ಮಧ್ಯಪ್ರದೇಶದ ರೇವಾ ಜಿಲ್ಲೆಯವರಾದ ಅವನಿ ಹೈದರಾಬಾದ್ ಏರ್ ಫೋರ್ಸ್ ಅಕಾಡೆಮಿಯಲ್ಲಿ ತರಬೇತಿ ಪೂರ್ಣಗೊಳಿಸಿದ್ದಾರೆ.

ಇತಿಹಾಸ ಸೃಷ್ಟಿಸಿದ ಅವರ ಈ ಸಾಧನೆಗೆ ದೇಶದ ನಾನಾ ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ, ಮತ್ತು ಅವರ ಉಜ್ವಲ ಭವಿಷ್ಯಕ್ಕೆ ಶುಭ ಹಾರೈಸಿದ್ದಾರೆ.

ಅಭಿನಂದನೆಗಳು

ಮಹಿಳೆಯರಿಗೆ ರೆಕ್ಕೆ ನೀಡುವುದರಿಂದ ಅವರು ತಮ್ಮ ದಾರಿಯನ್ನು ತಾವೇ ನಿರ್ಮಿಸಿಕೊಳ್ಳುತ್ತಾರೆ! ಯುದ್ಧ ವಿಮಾನವನ್ನು ಚಲಾಯಿಸಿದ ಮೊಟ್ಟ ಮೊದಲ ಭಾರತೀಯ ಮಹಿಳೆ ಎಂಬ ಕೀರ್ತಿಗೆ ಪಾತ್ರರಾದ ಅವನಿ ಚತುರ್ವೇದಿ ಅವರಿಗೆ ಅಭಿನಂದನೆಗಳು ಎಂದು ಟ್ವೀಟ್ ಮಾಡಿದ್ದಾರೆ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ.

ದೇಶಕ್ಕೇ ಹೆಮ್ಮೆ!

ಭಾರತದ ಮೊದಲ ಮಹಿಳಾ ಫೈಟರ್ ಪೈಲೆಟ್ ಆಗಿದ್ದಕ್ಕೆ ಅವನಿ ಅವರಿಗೆ ಅಭಿನಂದನೆಗಳು. ಇದೀ ದೇಶವೂ ಅವರ ಕುರಿತು ಹೆಮ್ಮೆ ಪಡಬೇಕಿದೆ ಎಂದು ಕೇಂದ್ರ ರೈಲ್ವೇ ಸಚಿವ ಪಿಯೂಶ್ ಗೋಯಲ್ ಟ್ವೀಟ್ ಮಾಡಿದ್ದಾರೆ.

ನೀವು ಯುವಕರಿಗೆ ಸ್ಫೂರ್ತಿ

ಅವನಿ ಚತುರ್ವೇದಿ ಅವಅರಿಗೆ ಅಭಿನಂದನೆಗಳು. ನೀವು ಭಾರತದ ಯುವತಿಯರಿಗೆ ನಿಜವಾದ ಸ್ಫೂರ್ತಿ. ನೀವು ಯಶಸ್ಸಿನ ಶಿಖರದಲ್ಲಿ ಮತ್ತಷ್ಟು ಉನ್ನತ ಸ್ಥಾನಕ್ಕೆ ಏರಲಿ ಎಂದು ಹಾರೈಸಿದ್ದಾರೆ ಕಾಂಗ್ರೆಸ್ ಮುಖಂಡ ಅಶೋಕ್ ಗೆಹ್ಲೋಟ್.

ಯಶಸ್ಸಿನ ಆಕಾಶ ಮುಟ್ಟಿ...

ಅವನಿ ಚತುರ್ವೇದಿ ಅವರಿಗೆ ಅಭಿನಂದನೆ ಮತ್ತು ಶಸುಭಹಾರೈಕೆಗಳು. ನಿಮ್ಮ ಸಾಧನೆಯ ಮೂಲಕ ನೀವು ಆಕಾಶವನ್ನು ಮುಟ್ಟಿ ಎಂದು ಹಾರೈಸಿದ್ದಾರೆ ಸಂಸದ ರಾಜೀವ್ ಚಂದ್ರಶೇಖರ್.

ಇತಿಹಾಸ ನಿರ್ಮಿಸಿದ್ದಾರೆ!

ಅವನಿ ಎಂದರೆ ಭೂಮಿ. ಚಿಕ್ಕ ವಯಸ್ಸಿನಲ್ಲೇ ಇತಿಹಾಸ ನಿರ್ಮಿಸಿ ಇಡೀ ಭಾರತದ ಯುವತಿಯರೂ ಹೆಮ್ಮೆ ಪಡುವಂತೆ ಮಾಡಿದ್ದಾರೆ. ಅವರಿಗೆ ನನ್ನ ಹೃದಯ ಪೂರ್ವಕ ಅಭಿನಂದನೆಗಳು ಎಂದಿದ್ದಾರೆ ಬಿಜೆಪಿ ಮುಖಂಡ ಸುನಿಲ್ ದಿಯೋಧರ್.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+