'ಅಖಂಡ ಭಾರತ' ನಂತರ ರಾಮ್ ಮಾಧವ್ ಹೊಸ ಕನಸೇನು?

Posted By:
Subscribe to Oneindia Kannada

ನವದೆಹಲಿ, ಡಿ.27: ಮುಂದೊಂದು ದಿನ ಭಾರತ, ಪಾಕಿಸ್ತಾನ ಹಾಗೂ ಬಾಂಗ್ಲಾ ದೇಶಗಳು ಮತ್ತೆ ಒಂದಾಗಿ ಅಖಂಡ ಭಾರತ ನಿರ್ಮಾಣವಾಗಲಿದೆ ಎಂದು ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿ, ಆರೆಸ್ಸೆಸ್ ಮುಖಂಡ ರಾಮ್‌ಮಾಧವ್ ಭವಿಷ್ಯ ನುಡಿದಿದ್ದಾರೆ. ಅಂತಾರಾಷ್ಟ್ರೀಯ ಸುದ್ದಿಜಾಲ ಅಲ್ ಜಝೀರಾಕ್ಕೆ ನೀಡಿದ ಸಂದರ್ಶನವೊಂದರಲ್ಲಿ ರಾಮ್ ಮಾಧವ್ ಈ ರೀತಿ ಹೇಳಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ.

ಆರೆಸ್ಸೆಸ್‌ನ ಮಾಜಿ ವಕ್ತಾರ ಹಾಗೂ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ರಾಮ್ ಮಾಧವ್ ಅವರು ಈ ಸಂದರ್ಶನಕ್ಕೂ ಮೋದಿ ಅವರ ಲಾಹೋರ್ ಭೇಟಿಗೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಸಂದರ್ಶನ ಡಿಸೆಂಬರ್ ಮೊದಲ ವಾರದಲ್ಲೇ ಚಿತ್ರೀಕರಣವಾಗಿದೆ ಎಂದಿದ್ದಾರೆ.

ಅಖಂಡ ಭಾರತ ಯುದ್ಧ ರಹಿತವಾಗಿ ಜನತೆಯ ಸಮ್ಮತಿಯ ಮೇಲೆಯೇ ನಡೆಯಲಿದೆ.ಕೇವಲ 60 ವರ್ಷಗಳ ಹಿಂದೆ ಚಾರಿತ್ರಿಕ ಕಾರಣಗಳಿಗಾಗಿ ಬೇರೆಯಾಗಿರುವ ಈ ಭಾಗಗಳು ಒಂದು ದಿನ ಜನತೆಯ ಸೌಹಾರ್ದದ ಮೂಲಕ ಮತ್ತೆ ಒಂದಾಗಲಿವೆ. ಇದು ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರೆಸ್ಸೆಸ್) ನಂಬಿಕೆಯೂ ಆಗಿದೆ ಎಂದರು.

ನಾವು ಯಾವುದೇ ದೇಶದ ವಿರುದ್ಧ ಯುದ್ಧ ಮಾಡಬೇಕು ಹಾಗೂ ಯಾವುದೇ ದೇಶವನ್ನು ನಾಮಾವಶೇಷಗೊಳಿಸಬೇಕೆಂದು ಇದರ ಅರ್ಥವಲ್ಲ. ಯುದ್ಧದ ಹೊರತಾಗಿಯೇ ಜನಾಭಿಪ್ರಾಯದ ಮೂಲಕ ಇದು ಸಾಧ್ಯವಾಗಲಿದೆ ಎಂದು ರಾಮ್‌ಮಾಧವ್ ಸ್ಪಷ್ಟಪಡಿಸಿದರು.

ಭಾರತವು ಹಿಂದೂ ದೇಶ ಎಂದು ಹೇಳಿದ್ದ ರಾಮ್

ಭಾರತವು ಹಿಂದೂ ದೇಶ ಎಂದು ಹೇಳಿದ್ದ ರಾಮ್

ಈ ವರ್ಷಾರಂಭದಲ್ಲಿ ‘ಭಾರತವು ಹಿಂದೂ ದೇಶವಾಗಿತ್ತು' ಎಂಬುದಾಗಿ ನೀಡಿದ್ದ ತನ್ನ ಹೇಳಿಕೆಯ ಕುರಿತು ಪ್ರತಿಕ್ರಿಯಿಸಿದ ಅವರು, ಇದು ನಿರ್ದಿಷ್ಟ ಜೀವನ ವಿಧಾನ, ನಿರ್ದಿಷ್ಟ ಸಂಸ್ಕೃತಿ ಅಥವಾ ನಾಗರಿಕತೆಯನ್ನು ಆಚರಿಸುತ್ತಿರುವ ನೆಲವಾಗಿದೆ. ಅದನ್ನು ನಾವು ಹಿಂದೂ ಎಂದು ಕರೆಯುತ್ತೇವೆ. ಭಾರತವು ಏಕ ಸಂಸ್ಕೃತಿಯನ್ನು ಹೊಂದಿದೆ. ನಾವು ಒಂದು ಸಂಸ್ಕೃತಿ, ಒಂದು ಜನತೆ ಹಾಗೂ ಒಂದು ದೇಶ ಎಂದು ಹೇಳಿದ್ದಾರೆ

ಕೇವಲ ಪ್ರಚಾರ ತಂತ್ರ ಎಂದು ಟೀಕಿಸಿದ ಕಾಂಗ್ರೆಸ್

ಕೇವಲ ಪ್ರಚಾರ ತಂತ್ರ ಎಂದು ಟೀಕಿಸಿದ ಕಾಂಗ್ರೆಸ್

ಆರೆಸ್ಸೆಸ್ ಹಾಗೂ ಬಿಜೆಪಿ ತಮ್ಮ ವೈಫಲ್ಯದಿಂದ ಗಮನವನ್ನು ಬೇರೆಡೆಗೆ ಸೆಳೆಯುವುದಕ್ಕಾಗಿ ದೇಶದ ಜನರನ್ನು ದಾರಿ ತಪ್ಪಿಸುತ್ತ ಬಂದಿವೆ. ಕಾರ್ಯಕ್ರಮ ನಿರ್ವಹಣಾ ಕಂಪೆನಿಯಂತೆ ಪ್ರಚಾರದಲ್ಲಿ ತೊಡಗಿವೆ. ಇದೆಲ್ಲವೂ ಕೇವಲ ಪ್ರಚಾರ ತಂತ್ರ ಎಂದು ಕಾಂಗ್ರೆಸ್ ವಕ್ತಾರ ಅಜಯ್ ಕುಮಾರ್ ಆರೋಪಿಸಿದ್ದಾರೆ.

ರಾಮ್ ಮಾಧವ್ ಹೊಸ ಕನಸು ಬಹಿರಂಗ

'ಅಖಂಡ ಭಾರತ' ನಂತರ ರಾಮ್ ಮಾಧವ್ ಹೊಸ ಕನಸು ಬಹಿರಂಗವಾಗಿದ್ದು, ಅಖಂಡ ಬ್ರಹ್ಮಾಂಡ ಸೃಷ್ಟಿಸುತ್ತಾರೆ. ಸೂರ್ಯ, ಭೂಮಿ, ಮಂಗಳ, ಚಂದ್ರ ಎಲ್ಲವನ್ನು ಒಟ್ಟುಗೂಡಿಸುತ್ತಾರೆ ನೋಡುತ್ತಿರಿ!

ಮೋದಿ ಅವರು ರಾಮ್ ಮಾಧವ್ ಗೆ ನೀಡಿದ ಗುಟ್ಟು

ಮೋದಿ ಅವರು ರಾಮ್ ಮಾಧವ್ ಗೆ ನೀಡಿದ ಗುಟ್ಟು ಈಗ ಬಹಿರಂಗ

'ಅಖಂಡ ಭಾರತ' ಎಂದರೇನು ಎಂಬುದರ ಬಗ್ಗೆ ಸ್ಪಷ್ಟನೆ

'ಅಖಂಡ ಭಾರತ' ಎಂದರೇನು ಎಂಬುದರ ಬಗ್ಗೆ ಸ್ಪಷ್ಟನೆ ಇಲ್ಲಿದೆ. ಇದು ಭೌಗೋಳಿಕ ಸಾಧ್ಯತೆ ಅಲ್ಲ, ಭಾವಾನಾತ್ಮಕ ಬೆಸುಗೆ.

ನಿರೂಪಕನಿಗೆ ನಿಮ್ಮ ಇಸೀಸ್ ಎಂದ ರಾಮ್ ಮಾಧವ್

ನಿರೂಪಕನಿಗೆ ನಿಮ್ಮ ಇಸೀಸ್(Your ISIS) ಎಂದ ರಾಮ್ ಮಾಧವ್

ಭಾರತದಲ್ಲೇ ಐಕ್ಯತೆ ಇಲ್ಲ ಇನ್ನು ಅಖಂಡ ಭಾರತ?

ಭಾರತದಲ್ಲೇ ಐಕ್ಯತೆ ಇಲ್ಲ ಇನ್ನು ಅಖಂಡ ಭಾರತ ಸಾಧ್ಯತೆ ಕನಸು ಏಕೆ?

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
BJP general secretary Ram Madhav has, in an interview to Al Jazeera TV said One day, India, Pak and Bangladesh could reunite as Akhand Bharat. Akhand Bharat' remark not linked to Modi's Lahore visit he clarified. Here are the Twitter reactions.
Please Wait while comments are loading...