ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತ್ತೆ ಚರ್ಚೆಗೆ ಬಂತು ಲಡಾಖ್ ಚೀನಾದ ಭಾಗವೆಂದು ತೋರಿಸಿದ್ದ ಟ್ವಿಟ್ಟರ್ ವಿವಾದಿತ ವಿಡಿಯೋ

|
Google Oneindia Kannada News

ನವದೆಹಲಿ, ಮೇ 31: ಲಡಾಖ್ ಚೀನಾದ ಒಂದು ಭಾಗ ಎಂದು ತೋರಿಸಿದ್ದ ಟ್ವಿಟ್ಟರ್‌ನ ವಿವಾದಿತ ವಿಡಿಯೋ ಮತ್ತೆ ಮುನ್ನಲೆಗೆ ಬಂದಿದೆ. ಐಟಿ ನಿಯಮಗಳ ಬಗ್ಗೆ ಚರ್ಚೆಯಾಗುತ್ತಿರುವ ಬೆನ್ನಲ್ಲೇ ಈ ವಿಡಿಯೋ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಆಗುತ್ತಿದೆ.

ಟ್ವಿಟ್ಟರ್ 2020ರಲ್ಲಿ ಲಡಾಖ್‌ನ್ನು ಚೀನಾ ಭೂಭಾಗವೆಂದು ಹೇಳಿರುವ ವಿಡಿಯೋವನ್ನು ಹರಿಬಿಟ್ಟಿತ್ತು. ಸಾಕಷ್ಟು ವಿರೋಧಗಳು ವ್ಯಕ್ತವಾದ ಬೆನ್ನಲ್ಲೇ ಕ್ಷಮೆ ಕೇಳಿ ವಿಡಿಯೋವನ್ನು ಡಿಲೀಟ್ ಮಾಡಿತ್ತು. ಆದರೆ ಇದೀಗ ಮತ್ತೊಮ್ಮೆ ಅದೇ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಲಡಾಖ್ ಚೀನಾಗೆ ಸೇರಿದೆ ಎಂದು ತೋರಿದ ಟ್ವಿಟರ್ ನಿಂದ ಕ್ಷಮೆಲಡಾಖ್ ಚೀನಾಗೆ ಸೇರಿದೆ ಎಂದು ತೋರಿದ ಟ್ವಿಟರ್ ನಿಂದ ಕ್ಷಮೆ

ಈಗಾಗಲೇ ನೂತನ ಐಟಿ ನಿಯಮದ ಪ್ರಕಾರ ಫೇಸ್‌ಬುಕ್ ಹಾಗೂ ವಾಟ್ಸಾಪ್ ತನ್ನಲ್ಲಾ ಮಾಹಿತಿಯನ್ನು ಕೇಂದ್ರ ಸರ್ಕಾರಕ್ಕೆ ಒದಗಿಸಿದೆ ಆದರೆ ಟ್ವಿಟ್ಟರೂ ಇನ್ನೂ ಯಾವುದೇ ದಾಖಲೆಗಳನ್ನು ನೀಡಿಲ್ಲ.

 Twitter Geo-tagging Ladakh As Part Of The Peoples Republic Of China Has Gone Viral Again

ಕಳೆದ ವರ್ಷ ಟ್ವಿಟ್ಟರ್ ಜಮ್ಮು ಕಾಶ್ಮೀರವನ್ನು ಚೀನಾದ ಭಾಗವೆಂದು ಹೇಳಿದ್ದಷ್ಟೇ ಅಲ್ಲದೆ, ಲೇಹ್‌ನಲ್ಲಿರುವ ನಿತಿನ್ ಗೋಖಲೆ ವಾರ್ ಮೆಮೋರಿಯಲ್ ಕೂಡ ಚೀನಾದ ಭಾಗ ಎಂದು ಹೇಳಿಕೆ ನಿಡಿತ್ತು.

ಇದೇ ವೇಳೆ, ಸೋಷಿಯಲ್ ಮೀಡಿಯಾದಲ್ಲಿ ಟ್ವಿಟ್ಟರ್ ಸಂಸ್ಥೆಯ ವಿರುದ್ಧ ಟೀಕಾ ಪ್ರಹಾರ ನಡೆದಿತ್ತು. ಟ್ವಿಟ್ಟರ್ ಸಂಸ್ಥೆ ಭೂಭಾಗವನ್ನೇ ಮಾರ್ಪಡಿಸಿ ಜಮ್ಮು ಕಾಶ್ಮೀರವನ್ನು ಚೀನಾದ ಭಾಗವಾಗಿ ಘೋಷಿಸುತ್ತದೆ. ಇದು ಭಾರತದ ಕಾನೂನುಗಳ ಉಲ್ಲಂಘನೆ ಅಲ್ಲದೇ ಹೋದರೆ ಮತ್ತಿನ್ನೇನು? ಇದಕ್ಕಿಂತ ತೀರಾ ಕಡಿಮೆ ಮಟ್ಟದ ಅಪರಾಧಗಳಿಗೆ ಭಾರತೀಯ ಪ್ರಜೆಗಳು ಶಿಕ್ಷೆಗೊಳಪಡುಸತ್ತಾರೆ.

ಆದರೆ, ಅಮೆರಿಕದ ಈ ಸಂಸ್ಥೆ ಕಾನೂನಿಗಿಂತ ದೊಡ್ಡದೇ ಎಂದು ಕಾಂಚನ್ ಗುಪ್ತಾ ಅವರು ಟ್ವೀಟ್ ಮಾಡಿದ್ದಾರೆ. ಹಾಗೆಯೇ, ಇದು ಟ್ವಿಟ್ಟರ್​ನಿಂದ ಆದ ಆಕಸ್ಮಿಕ ತಪ್ಪಲ್ಲ ಎಂದು ಹೇಳುವ ಮೂಲಕ ಟ್ವಿಟ್ಟರ್ ಉದ್ದೇಶಪೂರ್ವಕವಾಗಿ ಈ ಕೆಲಸ ಮಾಡಿದೆ ಎಂದು ಹಲವರು ಆರೋಪಿಸಿದ್ದರು.

ಚೀನಾದಲ್ಲಿ ಲಡಾಖ್ ಭಾಗವಿದೆ ಎಂದು ತಪ್ಪಾಗಿ ತೋರಿಸಿದ್ದಕ್ಕೆ ಸಾಮಾಜಿಕ ಮಾಧ್ಯಮ ದೈತ್ಯ ಟ್ವಿಟರ್ ಪ್ರಮುಖ ಸಂಸದೀಯ ಸಮಿತಿಗೆ ಲಿಖಿತವಾಗಿ ಕ್ಷಮೆಯಾಚಿಸಿತ್ತು.

ಸಮಿತಿಯ ಮುಂದೆ ಹಾಜರಾದ ಟ್ವಿಟರ್ ಇಂಡಿಯಾದ ಪ್ರತಿನಿಧಿಗಳು ಕ್ಷಮೆಯಾಚಿಸಿದರು. ಆದರೆ, ಇದು ದೇಶದ ಸಾರ್ವಭೌಮತ್ವ ಪ್ರಶ್ನಿಸುವ ಕ್ರಿಮಿನಲ್ ಅಪರಾಧ. ಅಫಿಡವಿಟ್ ಅನ್ನು ಟ್ವಿಟರ್ ಇಂಕ್ ಸಲ್ಲಿಸಬೇಕು ಎಂದು ಸೂಚಿಸಲಾಗಿತ್ತು.

English summary
A clip that was recorded in October 2020 which spoke about Twitter geo-tagging Ladakh as part of the People's Republic of China has gone viral.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X