• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪ್ರಧಾನಿಯನ್ನು ಭೇಟಿಯಾದ ಟ್ವಿಟ್ಟರ್ ಸಿಇಓ, ಮೋದಿ ಕೊಟ್ರು ಐಡಿಯಾ

|
   ಟ್ವಿಟ್ಟರ್ ಸಿಇಓ ಜಾಕ್ ಡೋರ್ಸೆ ಅವರನ್ನ ಭೇಟಿ ಮಾಡಿದ ಪ್ರಧಾನಿ ಮೋದಿ | Oneindia Kannada

   ನವದೆಹಲಿ, ನವೆಂಬರ್ 14: ವಿಶ್ವ ವಿಖ್ಯಾತ ಸಾಮಾಜಿಕ ಜಾಲತಾಣ ಟ್ವಿಟ್ಟರ್‌ನ ಸಿಇಓ ಜಾಕ್ ಡೋರ್ಸೆ ಅವರು ನಿನ್ನೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದಾರೆ.

   ಕೆಲವು ದಿನಗಳಿಗಾಗಿ ಭಾರತಕ್ಕೆ ಭೇಟಿ ನೀಡಿರುವ ಜಾಕ್ ಅವರು ಮೋದಿ ಅವರನ್ನು ಭೇಟಿಯಾಗಿ ಹಲವು ವಿಷಯಗಳನ್ನು ಚರ್ಚಿಸಿದ್ದಾರೆ. ಈ ಸಮಯದಲ್ಲಿ ಮೋದಿ ಅವರು ಜಾಕ್‌ಗೆ ಟ್ವಿಟ್ಟರ್‌ ಕುರಿತು ಕೆಲವು ಸಲಹೆಗಳನ್ನೂ ನೀಡಿದ್ದಾರಂತೆ.

   ಸುಂದರ ನಗರ ಸಿಂಗಪುರದಲ್ಲಿ ನೋಡಿ, ಮೋದಿ ಮಾತಿನ ಮೋಡಿ

   ಈ ಬಗ್ಗೆ ಟ್ವೀಟ್ ಮಾಡಿರುವ ಜಾಕ್ 'ಜಾಗತಿಕ ಮಟ್ಟದಲ್ಲಿ ಸಂವಾದದ ಮಹತ್ವದ ಬಗ್ಗೆ ನಿಮ್ಮೊಂದಿಗೆ ಮಾತನಾಡಿದ್ದಕ್ಕೆ ಸಂತೋಷವಾಗಿದೆ, ಜೊತೆಗೆ, ಟ್ವಿಟ್ಟರ್‌ಗೆ ಐಡಿಯಾ ಕೊಟ್ಟಿದ್ದಕ್ಕೆ ಧನ್ಯವಾದಗಳು' ಎಂದು ಬರೆದುಕೊಂಡಿದ್ದಾರೆ.

   ಮೋದಿ ಅವರು ಸಹ ಭೇಟಿಯ ಟ್ವೀಟ್ ಮಾಡಿದ್ದು, 'ನಿಮ್ಮ ಭೇಟಿ ಸಂತೋಶ ತಂದಿದೆ, ಟ್ವಿಟ್ಟರ್‌ ಬಳಕೆದಾರನಾಗಿರುವುದಕ್ಕೆ ನನಗೆ ಸಂತೋಶವಿದೆ. ಇಲ್ಲಿ ಹೊಸ ಗೆಳೆಯರನ್ನು ಮಾಡಿಕೊಂಡಿದ್ದೇನೆ, ಪ್ರತಿದಿನ ಇಲ್ಲಿ ಹೊಸ ಪ್ರತಿಭೆಗಳನ್ನು ನಾನು ನೋಡುತ್ತಿರುತ್ತೇನೆ' ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

   'ಮೋದಿ ಎಂಬ ಚಾಯ್ ವಾಲಾನನ್ನೂ ಪ್ರಧಾನಿ ಮಾಡಿದ್ದು ನೆಹರು!'

   ನವೆಂಬರ್ 9 ರಂದು ಭಾರತಕ್ಕೆ ಬಂದ ಟ್ವಿಟ್ಟರ್ ಸಿಇಒ ಜಾಕ್ ಅವರು ಇಲ್ಲಿನ ಹಲವು ಸ್ಥಳಗಳಿಗೆ ಭೇಟಿ ನೀಡಿದ್ದಾರೆ. ಮೋದಿ ಅವರನ್ನು ಮಾತ್ರವಲ್ಲದೆ ಅವರು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನೂ ಭೇಟಿ ಮಾಡಿದ್ದಾರೆ. ಐಐಟಿ ವಿದ್ಯಾರ್ಥಿಗಳೊಂದಿಗೆ ಸಂವಾದ ಮಾಡಿದ್ದಾರೆ. ದಲೈಲಾಮಾ ಅವರನ್ನೂ ಭೇಟಿ ಮಾಡಿದ್ದಾರೆ.

   English summary
   Twitter CEO Jack Dorsey is on Indian tour he met Narendra Modi yesterday talked about twitter and global conservation. He also met Rahul Gandhi, Dalai Lama.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X