• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪ್ರಧಾನಿ ನರೇಂದ್ರ ಮೋದಿಯವರ ವೆಬ್‌ಸೈಟ್ ಹಾಗೂ ಟ್ವಿಟ್ಟರ್ ಖಾತೆ ಹ್ಯಾಕ್

|

ನವದೆಹಲಿ, ಸೆಪ್ಟೆಂಬರ್ 03: ಪ್ರಧಾನಿ ನರೇಂದ್ರ ಮೋದಿಯವರ ವೆಬ್‌ಸೈಟ್ ಹಾಗೂ ಟ್ವಿಟ್ಟರ್ ಖಾತೆ ಹ್ಯಾಕ್ ಆಗಿದ್ದು, ತನಿಖೆ ಆರಂಭವಾಗಿದೆ.

ಚೀನಾ ಗಡಿಯಲ್ಲಿರುವ ಭಾರತದ 'ಟಿಬೆಟ್' ಸೇನೆ ಬಗ್ಗೆ ನಿಮಗೆಷ್ಟು ಗೊತ್ತು?

ಟ್ವಿಟ್ಟರ್ ಖಾತೆಯಿಂದ ಕೆಲವು ಟ್ವೀಟ್‌ಗಳನ್ನು ಗುರುವಾರ ಮುಂಜಾನೆ ಮಾಡಲಾಗಿತ್ತು. ಖಾತೆಯನ್ನು ಸುರಕ್ಷಿತಗೊಳಿಸುವ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ಟ್ವಿಟ್ಟರ್ ವಕ್ತಾರರು ತಿಳಿಸಿದ್ದಾರೆ.

ಅವರ ಟ್ವಿಟ್ಟರ್ ಖಾತೆಯಲ್ಲಿ' ಕೊವಿಡ್ 19ಗಾಗಿ ಪಿಎಂ ನ್ಯಾಷನಲ್ ರಿಲೀಫ್ ಫಂಡ್‌ಗೆ ಉದಾರವಾಗಿ ದೇಣಿಗೆ ನೀಡುವಂತೆ ನಾನು ನಿಮ್ಮೆಲ್ಲರಲ್ಲಿ ಮನವಿ ಮಾಡುತ್ತೇನೆ. ದಯವಿಟ್ಟು ದಾನ ಮಾಡಿ' ಎಂದು ಪೋಸ್ಟ್ ಮಾಡಲಾಗಿತ್ತು.

ನರೇಂದ್ರ ಮೋದಿ ಅವರ ಟ್ವಿಟ್ಟರ್ ಅಕೌಂಟ್‌ಗೆ 2.5 ಮಿಲಿಯನ್ ಫಾಲೋವರ್ಸ್ ಇದ್ದರು.

ಅಕೌಂಟ್‌ನಲ್ಲಿ ಈ ಅಕೌಂಟ್‌ನ್ನು ಜಾನ್ ವಿಕ್ ಎಂಬುವವರು ಹ್ಯಾಕ್ ಮಾಡಿದ್ದಾರೆ, ಆದರೆ ನಾವು ಪೇಟಿಎಂ ಮಾಲ್ ಹ್ಯಾಕ್ ಮಾಡಿಲ್ಲ ಎಂದು ಬರೆದಿತ್ತು.

ಪಿಎಂ ನ್ಯಾಷನಲ್ ರಿಲೀಫ್ ಫಂಡ್‌ಗೆ ದೇಣಿಗೆ ನೀಡುವಂತೆ ಸರಣಿ ಟ್ವೀಟ್ ಮಾಡಲಾಗಿತ್ತು. ಅವರ ವೆಬ್‌ಸೈಟ್ ಹಾಗೂ ಟ್ವಿಟ್ಟರ್ ಖಾತೆಯನ್ನು ಹ್ಯಾಕ್ ಮಾಡಲಾಗಿದೆ.

ಜುಲೈನಲ್ಲಿ ಸಾಕಷ್ಟು ಮಂದಿ ಪ್ರಮುಖ ವ್ಯಕ್ತಿಗಳ ಟ್ವಿಟ್ಟರ್ ಖಾತೆ ಹ್ಯಾಕ್ ಆಗಿತ್ತು. ಜೋಬಿಡನ್, ಮಾಜಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ, ಎಲಾನ್ ಮಸ್ಕ್ ಹೀಗೆ ಸಾಕಷ್ಟು ಮಂದಿಯ ಟ್ವಿಟ್ಟರ್ ಖಾತೆ ಹ್ಯಾಕ್ ಆಗಿತ್ತು.

English summary
The Twitter account of Prime Minister Narendra Modi’s personal website was hacked as cryptic tweets were posted early on Thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X