TVK Vijay Video: ಕರೂರು ಸಾವಿನ ದುರಂತ ಬಗ್ಗೆ ನಟ ವಿಜಯ್ ಮೊದಲ ಪ್ರತಿಕ್ರಿಯೆ, ವಿಡಿಯೋ
ತಮಿಳಗ ವೆಟ್ರಿ ಕಳಗಂ (TVK) ಪಕ್ಷದ ಮುಖ್ಯಸ್ಥ ಮತ್ತು ನಟ ವಿಜಯ್ ತಳಪತಿ (Vijay Thalapathy) ಅವರ ಕರೂರು ರ್ಯಾಲಿ ವೇಳೆ ಕಾಲ್ತುಳಿತ ಪ್ರಕರಣ ನಡೆದು ಮಕ್ಕಳು, ಮಹಿಳೆಯರು ಸೇರಿ 41ಜನ ಮೃತಪಟ್ಟಿದ್ದಾರೆ. 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಮೊದಲ ಬಾರಿಗೆ ಪ್ರತಿಕ್ರಿಯಿಸಿದ ವಿಜಯ್ ಅವರು ವಿಡಿಯೋ ಬಿಡುಗಡೆ ಮಾಡಿದ್ದಾರೆ. ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.
ವಿಡಿಯೋ ಹೇಳಿಕೆಯಲ್ಲಿ ಅವರು, "ನನ್ನ ಜೀವನದಲ್ಲಿ ಇಂಥಹ ನೋವಿನ ಸ್ಥಿತಿ ನೋಡಿರಲಿಲ್ಲ. ಕಾಲ್ತುಳಿತ ಪ್ರಕಣದದಲ್ಲಿ ಸಾವು, ನೋವುಗಳಾಗಿದ್ದು, ಇದರಿಂದ ನನಗೆ ತುಂಬ ನೋವಾಗಿದೆ. ಶೀಘ್ರವೇ ಗಾಯಾಳು ಮನೆಗೆ ಭೇಟಿ ನೀಡಿ ಸಾಂತ್ವನ ಹೇಳುತ್ತೇನೆ.. ನಾನು ಮನುಷ್ಯತಾನೆ. ಈ ಕಾಳ್ತುಳಿದ ಪ್ರಕರಣದಲ್ಲಿ ಅಭಿಮಾನಿಗಳು ಮೃತಪಟ್ಟಿದ್ದು, ಇದರಿಂದ ಮನಸ್ಸಿಗೆ ತುಂಬ ನೋವುಂಟಾಗಿದೆ ಎಂದು ದುಃಖ ವ್ಯಕ್ತಪಡಿಸಿದ್ದಾರೆ.

ಜನರ ಟಾರ್ಗೆಟ್ ಬೇಡ: ನಾನು ಕ್ರಮಕ್ಕೆ ಸಿದ್ಧ
ಈ ಪ್ರಕರಣ ಕುರಿತು ಶೀಘ್ರವೇ ಎಲ್ಲ ಸತ್ಯ ಹೊರ ಬರಲಿದೆ. ಇದರ ಹಿಂದಿನ ಕಾರಣ ತಿಳಿದು ಬರಲಿದೆ. ಪ್ರಕರಣ ಬೆನ್ನಲ್ಲೆ ಟಿವಿಕೆ ಪಕ್ಷದ ಕಾರ್ಯಕರ್ತರನ್ನು ಬಂಧಿಸಿದ್ದನ್ನು ವಿಡಿಯೋದಲ್ಲಿ ವಿಜಯ್ ಉಲ್ಲೇಖಿಸಿದ್ದಾರೆ. ಟಿವಿಕೆ ಪಕ್ಷದ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ಮುಖ್ಯಮಂತ್ರಿಗಳೇ ನಾನು ನಿಮ್ಮಲ್ಲಿ ವಿನಂತಿಸುತ್ತೇ. ಟಿವಿಕೆ ಕಚೇರಿಗೆ ಬಂದು ನನ್ನ ಮೇಲೆ ಕ್ರಮ ಕೈಗೊಳ್ಳಬಹುದು. ಕಾರ್ಯಕರ್ತರ ಮೇಲೆ ಕ್ರಮ ಬೇಡ ಎಂದು ಹೇಳಿದ್ದಾರೆ. ನನ್ನನ್ನು ಟಾರ್ಗೆಟ್ ಮಾಡಿ, ಜನರನ್ನು ಟಾರ್ಗೆಟ್ ಮಾಡಬೇಡಿ. ನನ್ನ ಕಾರ್ಯಕರ್ತರಿಗೆ ತೊಂದರೆ ಕೊಡಬೇಡಿ. ನೀವು ನನ್ನ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಬಹುದೆಂದು ವಿಜಯ್ ಹೇಳಿದ್ದಾರೆ.
ಇಂತಹ ಘಟನೆ ನಡೆಯಬಾರದಿತ್ತು. ಆದರೆ ನಡೆದು ಹೋಗಿದೆ. ತನಿಖೆಯಿಂದ ಸತ್ಯ ಹೊರಬರಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಜೊತೆಗೆ ರಾಜಕೀಯವಾಗಿ ನನ್ನ ಟಾರ್ಗೆಟ್ ಮಾಡಿ, ಜನರನ್ನು, ಪಕ್ಷ ಕಾರ್ಯರ್ತರನ್ನಲ್ಲ ಎಂದು ಡಿಎಂಕೆ ಪಕ್ಷಕ್ಕೆ ಅವರು ತಿರುಗೇಟು ನೀಡಿದ್ದಾರೆ.
— TVK Vijay (@TVKVijayHQ) September 30, 2025
ರ್ಯಾಲಿಯಲ್ಲಿ ಆಗಿದ್ದೇನು?
ನಡೆಯಲಿರುವ 2026ರ ವಿಧಾನಸಭೆ ಚುನಾವಣೆ ಅಂಗವಾಗಿ ಈ ಕರೂರಿನಲ್ಲಿ ರ್ಯಾಲಿ ಹಮ್ಮಿಕೊಂಡಿದ್ದ ವೇಳೆ ಅತ್ಯಧಿಕ ಪ್ರಮಾಣದಲ್ಲಿ ಜನರು ಸೇರಿದ್ದರು. ವಿಜಯ್ ಫ್ಯಾನ್ಸ್ ಅವರನ್ನು ನೋಡಲು ಮುಗಿಬಿದ್ದಿದ್ದರು. ಈ ವೇಳೆ ವಿಜಯ್ ಸ್ಥಳಕ್ಕೆ ಬರುವುದು ತಡವಾಯಿತು. ನಂತರ ಭಾಷಣ ಅವರು ಆರಂಭಿಸುವ ಹೊತ್ತಿಗೆ ನೂಕು ನುಗ್ಗಲು ಉಂಟಾಯಿತು. ಕೆಲವರು ಉಸಿರಾಟ ತೊಂದರೆಯಿಂದ ಕುಸಿದರು. ನಂತರ ಕಾಲ್ತುಳಿತ ಸಂಭವಿಸಿತು. ವಿಜಯ್ ಭಾಷಣವನ್ನು ಅರ್ಧಕ್ಕೆ ನಿಲ್ಲಿಸಿ, ಪೊಲೀಸರಿಗೆ ಪರಿಸ್ಥಿತಿ ತಿಳಿಗೊಳಿಸುವಂತೆ ಕೋರಿದರು.
ನೂಕಾಟದಲ್ಲಿದ್ದವರಿಗೆ ನೀರಿನ ಬಾಟಲಿ ನೀಡುವ ಮೂಲಕ ವಿಜಯ್ ಸಹಾಯಕ್ಕೆ ಮುಂದಾದರು. ನೋಡ ನೋಡುತ್ತಿದ್ದಂತೆ 41 ಮಂದಿ ಸಾವಿಗೀಡಾದರೂ. ಅನೇಕರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ಘಟನೆ ಕುರಿತು ಟಿವಿಕೆ ಮುಖ್ಯಸ್ಥ ವಿಜಯ್ ಮೊದಲ ಬಾರಿಗೆ ವಿಡಿಯೋ ಮೂಲಕ ಪ್ರತಿಕ್ರಿಯಿಸಿದ್ದಾರೆ.












Click it and Unblock the Notifications