ನಮ್‌ ಶಾಲೇಲಿ ವಡಾಪಾವ್‌ ಕೊಡ್ಸಿ ಪ್ಲೀಸ್ ಎಂದ ಬಾಲಕ: IAS ಅಧಿಕಾರಿ ತುಕಾರಾಮ್ ಮುಂಡೆ ಕೊಟ್ಟ ಉತ್ತರ Viral

ಮಕ್ಕಳಿಗೆ ಶಾಲೆಯ ದಿನಗಳಲ್ಲಿ ಗೆಳೆಯರ ಜೊತೆಗೂಡಿ ಗರಿಗರಿಯಾದ ಸಮೋಸಾ, ಬಿಸಿಬಿಸಿ ವಡಾಪಾವ್ ಹಾಗೂ ಚಾಕೊಲೇಟ್‌ಗಳನ್ನ ತಿನ್ನುವುದೆಂದರೆ ಎಲ್ಲಿಲ್ಲದ ಪ್ರೀತಿ. ಆದರೆ ಈ ಜಂಕ್ ಫುಡ್‌ಗಳು ಮಕ್ಕಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿವೆ ಎಂಬ ಕಾರಣಕ್ಕೆ ಮಹಾರಾಷ್ಟ್ರ ಆಹಾರ ಮತ್ತು ಔಷಧ ಆಡಳಿತ (ಎಫ್‌ಡಿಎ) ಶಾಲೆಗಳಲ್ಲಿ ಇವುಗಳ ಮಾರಾಟಕ್ಕೆ ಬ್ರೇಕ್ ಹಾಕಿತ್ತು.

ಈ ನಡುವೆ ಶಾಲಾ ಬಾಲಕನೊಬ್ಬ ನೇರವಾಗಿ ಮಹಾರಾಷ್ಟ್ರ ಎಫ್‌ಡಿಎ ಕಮಿಷನರ್ ತುಕಾರಾಂ ಮುಂಡೆ ಅವರ ಬಳಿಯೇ ತೆರಳಿ, ಶಾಲೆಯಲ್ಲಿ ಮತ್ತೆ ವಡಾಪಾವ್ ಸ್ಟಾಲ್‌ಗಳನ್ನ ತೆರೆಯುವಂತೆ ಮನವಿ ಮಾಡಿರುವ ಪ್ರಸಂಗವೊಂದು ಸೋಶಿಯಲ್‌ ಮಿಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ.

Tukaram Mundhe Health Advice to Boy Maharashtra FDA Bans Vada Pav Junk Food in Schools

ಶಾಲೆಯಲ್ಲಿ ವಡಾಪಾವ್ ಬೇಕೆಂದ ಬಾಲಕ: ವೈರಲ್ ಆದ ವಿಡಿಯೋ

ಇನ್‌ಸ್ಟಾಗ್ರಾಮ್‌ನ ಇಂದ್ರನೀಲ್ ಅನಾಸ್ಪುರೆ ಎಂಬ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಈ ದೃಶ್ಯ ಸೆರೆಯಾಗಿದೆ. ಶಾಲಾ ಸಮವಸ್ತ್ರದಲ್ಲಿದ್ದ ಬಾಲಕ ಐಎಎಸ್ ಅಧಿಕಾರಿ ತುಕಾರಾಂ ಮುಂಡೆ ಅವರ ಮುಂದೆ ನಿಂತು, "ಸರ್, ನಮ್ಮ ಶಾಲೆಯಲ್ಲಿ ವಡಾಪಾವ್ ಸ್ಟಾಲ್‌ಗಳನ್ನು ಮತ್ತೆ ಆರಂಭಿಸುವಂತೆ ಕೇಳಲು ನನ್ನ ಶಾಲಾ ಗೆಳೆಯರು ನನಗೆ ಹೇಳಿದ್ದಾರೆ. ಅವರು ನಿಮ್ಮ ಬಳಿ ಹೀಗೆ ಕೇಳಿದರೆ ನೀವು ಅವರಿಗೆ ಏನು ಹೇಳುತ್ತೀರಿ?" ಎಂದು ಪ್ರಶ್ನಿಸಿದ್ದಾನೆ. ಬಾಲಕನ ಈ ಪ್ರಶ್ನೆಯನ್ನ ತುಕಾರಾಂ ಮುಂಡೆ ಅವರು ಅತ್ಯಂತ ಪ್ರೀತಿಯಿಂದ ಆಲಿಸಿದರು.

ಮಕ್ಕಳ ಆರೋಗ್ಯಕರ ಆಹಾರ ಕುರಿತು ಮುಂಡೆ ಕಿವಿಮಾತು

ಬಾಲಕನ ಪ್ರಶ್ನೆಗೆ ಮುಗುಳುನಗೆಯೊಂದಿಗೆ ಉತ್ತರಿಸಿದ ತುಕಾರಾಂ ಮುಂಧೆ, ಗದರಿಸದೆ ಪೌಷ್ಟಿಕ ಆಹಾರದ ಮಹತ್ವವನ್ನ ವಿವರಿಸಿದರು. "ನೀವು ಪ್ರತಿದಿನ ಒಳ್ಳೆಯ ಮತ್ತು ಪೌಷ್ಟಿಕಾಂಶಯುಕ್ತ ಆಹಾರವನ್ನ ಸೇವಿಸಬೇಕು. ಆಗ ಮಾತ್ರ ನಿಮ್ಮ ದೇಹ ಸದೃಢವಾಗುತ್ತದೆ ಹಾಗೂ ಮನಸ್ಸು ಚುರುಕಾಗಿ, ಆರೋಗ್ಯಕರವಾಗಿರುತ್ತದೆ. ಎಣ್ಣೆಯಲ್ಲಿ ಕರಿದ ಹಾಗೂ ಅತಿಯಾದ ಕೊಬ್ಬಿನಂಶವಿರುವ ಆಹಾರಗಳು ನಾಲಿಗೆಗೆ ರುಚಿ ಅನಿಸಬಹುದು. ಆದರೆ ಅವು ನಮ್ಮ ದೇಹದ ಆರೋಗ್ಯವನ್ನ ಹಾಳುಮಾಡುತ್ತವೆ" ಎಂದು ಬಾಲಕನಿಗೆ ಮೃದು ಧ್ವನಿಯಲ್ಲಿ ಕಿವಿಮಾತು ಹೇಳಿದರು.

ಅಧಿಕಾರಿಯ ಈ ಜವಾಬ್ದಾರಿಯುತ ಹಾಗೂ ಪ್ರೀತಿಯ ಮಾರ್ಗದರ್ಶನಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಶಾಲೆಗಳಲ್ಲಿ ಜಂಕ್ ಫುಡ್ ಮಾರಾಟಕ್ಕೆ ಕಟ್ಟುನಿಟ್ಟಿನ ನಿಯಮ

ಮಹಾರಾಷ್ಟ್ರದಾದ್ಯಂತ ವಿದ್ಯಾರ್ಥಿಗಳಲ್ಲಿ ಆರೋಗ್ಯಕರ ಆಹಾರ ಪದ್ಧತಿಯನ್ನ ಬೆಳೆಸುವ ಉದ್ದೇಶದಿಂದ ಎಫ್‌ಡಿಎ ಮಹತ್ವದ ಹೆಜ್ಜೆಯನ್ನಿಟ್ಟಿದೆ. ಶಾಲಾ ಆವರಣದಲ್ಲಿ ಹಾಗೂ ಶಾಲೆಗಳ ಸುತ್ತಮುತ್ತಲಿನ 50 ಮೀಟರ್ ವ್ಯಾಪ್ತಿಯೊಳಗೆ ಯಾವುದೇ ರೀತಿಯ ಜಂಕ್ ಫುಡ್ ಮಾರಾಟ ಮತ್ತು ಜಾಹೀರಾತುಗಳನ್ನ ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಈ ನಿಯಮದ ಅಡಿಯಲ್ಲಿ ವಡಾಪಾವ್, ಸಮೋಸಾ, ಎಣ್ಣೆಯಲ್ಲಿ ಕರಿದ ತಿಂಡಿಗಳು, ಚಿಪ್ಸ್, ತಂಪು ಪಾನೀಯಗಳು, ಸಕ್ಕರೆ ಅಂಶ ಹೆಚ್ಚಿರುವ ಪಾನೀಯಗಳು, ಚಾಕೊಲೇಟ್ ಹಾಗೂ ಐಸ್‌ಕ್ರೀಮ್‌ಗಳ ಮಾರಾಟಕ್ಕೆ ಕಡಿವಾಣ ಬಿದ್ದಿದೆ.

ಈ ನಿರ್ಧಾರದಿಂದ ರಾಜ್ಯದ ಸುಮಾರು ಎರಡು ಕೋಟಿಗೂ ಅಧಿಕ ವಿದ್ಯಾರ್ಥಿಗಳ ಆರೋಗ್ಯ ಸುಧಾರಣೆಗೆ ನೆರವಾಗಲಿದೆ ಎಂದು ಅಂದಾಜಿಸಲಾಗಿದೆ.

ಶಾಲಾ ಕ್ಯಾಂಟೀನ್‌ಗಳಿಗೆ ಎಫ್‌ಡಿಎ ಲೈಸೆನ್ಸ್ ಕಡ್ಡಾಯ

ಈ ನಿಯಮವನ್ನ ಕಟ್ಟುನಿಟ್ಟಾಗಿ ಜಾರಿಗೊಳಿಸುವ ಹೊಣೆಯನ್ನು ಶಾಲಾ ಮುಖ್ಯಸ್ಥರು ಹಾಗೂ ಆಡಳಿತ ಮಂಡಳಿಗೆ ವಹಿಸಲಾಗಿದೆ. ನಿಯಮ ಉಲ್ಲಂಘಿಸುವ ಶಿಕ್ಷಣ ಸಂಸ್ಥೆಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿದೆ. ಇದರ ಪರಿಶೀಲನೆಗಾಗಿ ಎಫ್‌ಡಿಎ ಇನ್ಸ್‌ಪೆಕ್ಟರ್‌ಗಳು ವರ್ಷಕ್ಕೆ ಕನಿಷ್ಠ ಎರಡು ಬಾರಿ ಶಾಲೆಗಳಿಗೆ ಭೇಟಿ ನೀಡಿ ತಪಾಸಣೆ ನಡೆಸಲಿದ್ದಾರೆ. ಇದರೊಂದಿಗೆ ರಾಜ್ಯದ ಎಲ್ಲಾ ಶಾಲೆಗಳ ಕ್ಯಾಂಟೀನ್‌ಗಳು ಕಡ್ಡಾಯವಾಗಿ ಆಹಾರ ಸುರಕ್ಷತಾ ಪರವಾನಗಿ (ಫುಡ್ ಸೇಫ್ಟಿ ಲೈಸೆನ್ಸ್) ಪಡೆಯುವುದನ್ನ ಸರ್ಕಾರ ಕಡ್ಡಾಯಗೊಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+