Tirumala: ನೊಂದ ಮೊಗದಲ್ಲಿ ಮಂದಹಾಸ- ಅಂಗವಿಕಲರಿಗೆ ನೆರವಾದ ತಿರುಪತಿ ತಿಮ್ಮಪ್ಪ
ಟಿಟಿಡಿ ಆಶ್ರಯದಲ್ಲಿ ನಡೆಯುತ್ತಿರುವ ಬಿರ್ಡ್ ಆಸ್ಪತ್ರೆ (BIRRD Hospital) ಶುಭ ಸುದ್ದಿಯೊಂದನ್ನು ನೀಡಿದೆ. ದಾನಿಗಳ ಸಹಾಯದಿಂದ ಅಂಗವಿಕಲರಿಗೆ ಬಿರ್ಡ್ ಆಸ್ಪತ್ರೆ ನೆರವಾಗಿದೆ. ಅಂಗವಿಕರಿಗೆ ಉನ್ನತ-ಮಟ್ಟದ ಕೃತಕ ಅಂಗಗಳನ್ನು ಉಚಿತವಾಗಿ ಒದಗಿಸಿದೆ.
ಹೌದು... ಬಿರ್ಡ್ ಆಸ್ಪತ್ರೆಯಲ್ಲಿ 110 ಅಂಗವಿಕಲರಿಗೆ ಕೃತಕ ಕಾಲುಗಳನ್ನು ವಿತರಿಸಲಾಗಿದೆ. ಇತ್ತೀಚೆಗೆ ತಮಿಳುನಾಡಿನ ಧರ್ಮಪುರಿಯ ದಾನಿಗಳಾದ ಶ್ರೀ ಸುಬ್ರಮಣಿಯನ್ ಹಾಗೂ ಎಂಡೋಲೈಟ್ ಕಂಪನಿ ಸಹಯೋಗದೊಂದಿಗೆ ಅತ್ಯಾಧುನಿಕ ತಂತ್ರಜ್ಞಾನದ ಸಹಾಯದಿಂದ ತಯಾರಿಸಿದ ಉನ್ನತ-ಮಟ್ಟದ ಕೃತಕ ಅಂಗಗಳನ್ನು ಉಚಿತವಾಗಿ ಒದಗಿಸಲಾಗಿದೆ.

ಮೂಲ ಬೆಲೆಯ 50 ಪ್ರತಿಶತದಷ್ಟು ರಿಯಾಯಿತಿಯಲ್ಲಿ ಅಲ್ಯೂಮಿನಿಯಂನಿಂದ ಮಾಡಿದ ಈ ಕೃತಕ ಅಂಗಗಳನ್ನು ಟಿಟಿಡಿ ಪಡೆದು ನೀಡಿದೆ. ಈ ಕೃತಕ ಅಂಗಗಳನ್ನು ಧರಿಸಿದ ರೋಗಿಗಳು ಯಾವುದೇ ಸಮಸ್ಯೆಯಿಲ್ಲದೆ ಸಾಮಾನ್ಯ ಜನರಂತೆ ಬಹಳ ಸುಲಭವಾಗಿ ನಡೆಯಲು ಸಾಧ್ಯವಾಗುತ್ತದೆ. ಇದರಿಂದ ಅಂಗವಿಕಲರು ಸಂತಸ ವ್ಯಕ್ತಪಡಿಸಿದ್ದಾರೆ.
ಇಲ್ಲಿಯವರೆಗೂ ಜೈಪುರ ಮತ್ತಿತರ ಕಡೆಗಳಲ್ಲಿ ತಯಾರಾದ ಕೃತಕ ಕೈಕಾಲುಗಳನ್ನು ಬಳಸುತ್ತಿದ್ದ ಅಂಗವಿಕಲರು ಟಿಟಿಡಿ ಆಶ್ರಯದಲ್ಲಿ ನಡೆಯುತ್ತಿರುವ ಬಿರ್ಡ್ ಆಸ್ಪತ್ರೆ ಸಹಾಯಕ್ಕೆ ಸಂತಸ ವ್ಯಕ್ತಪಡಿಸಿದರು. ಈ ಕಾರ್ಯಕ್ರಮದಲ್ಲಿ ಬಿರ್ಡ್ ಆಸ್ಪತ್ರೆ ವೈದ್ಯರು, ಇತರೆ ವೈದ್ಯಕೀಯ ಸಿಬ್ಬಂದಿ ಹಾಗೂ ರೋಗಿಗಳ ಸಂಬಂಧಿಕರು ಭಾಗವಹಿಸಿದ್ದರು.
ತಿರುಪತಿ ದೇವಸ್ಥಾನ
ತಿರುಪತಿಯು ಭಾರತದ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಒಂದು ಪಟ್ಟಣವಾಗಿದೆ. ತಿರುಮಲ ತಿರುಪತಿ ಶ್ರೀ ವೆಂಟಕೇಶ್ವರ ಸ್ವಾಮಿ ಕಲಿಯುಗದ ಪ್ರತ್ಯಕ್ಷ ದೈವ ಎಂದೇ ಭಕ್ತರು ನಂಬಿದ್ದಾರೆ. ತಿಮ್ಮಪ್ಪನ ನಗು ಮುಖವನ್ನು ನೋಡಲು ಭಕ್ತರು ನಿತ್ಯ ಬಯಸುತ್ತಾರೆ. ಶ್ರೀ ಬಾಲಾಜಿಯ ದರ್ಶನಕ್ಕಾಗಿ ನಿತ್ಯ ಲಕ್ಷಾಂತರ ಮಂದಿ ಭಕ್ತರು ದೇಶದ ಮೂಲೆ ಮೂಲೆಯಿಂದಲೂ ತಿರುಮಲಕ್ಕೆ ಆಗಮಿಸುತ್ತಾರೆ.

ದೇಶ ವಿದೇಶದಿಂದಲೂ ಆಗಮಿಸುವ ಭಕ್ತರು ಶ್ರೀ ವೆಂಟಕೇಶ್ವರ ಸ್ವಾಮಿಯ ದರ್ಶನ ಪಡೆದುಕೊಳ್ಳಲು ಆಗಮಿಸಿ ಆನಂದ ನಿಲಯದಲ್ಲಿ ದೇವರ ದರ್ಶನ ಪಡೆದುಕೊಂಡು ತಮ್ಮ ಜೀವನ ಸಾರ್ಥಕವಾಯ್ತು ಎಂದು ಭಕ್ತರು ಭಾವಿಸುತ್ತಾರೆ.
ತಿರುಮಲ ದೇವಸ್ಥಾನವು ತಿರುಪತಿಯಲ್ಲಿ ಮಾತ್ರವಲ್ಲದೆ ಇಡೀ ದೇಶದ ಅತಿದೊಡ್ಡ ಯಾತ್ರಾಸ್ಥಳವಾಗಿದೆ. ಲಕ್ಷಾಂತರ ಭಕ್ತರು ವೆಂಕಟೇಶ್ವರನ ನೆಲೆಯಾದ ತಿರುಮಲ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ.
ಅಸಾಧಾರಣವಾದ ದೇವಾಲಯವು ತಿರುಮಲ ಬೆಟ್ಟಗಳ ತುದಿಯಲ್ಲಿದೆ. ಈ ಬೆಟ್ಟಗಳು ಸಪ್ತಗಿರಿ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಏಳು ಶಿಖರಗಳನ್ನು ಒಳಗೊಂಡಿವೆ ಮತ್ತು ಭಾರತದಲ್ಲಿ ಹೆಚ್ಚು ಭೇಟಿ ನೀಡುವ ತೀರ್ಥಯಾತ್ರೆಗಳಲ್ಲಿ ಒಂದಾಗಿದೆ. ಈ ದೇವಾಲಯವು ಶ್ರೇಷ್ಠ ಇತಿಹಾಸ ಮತ್ತು ಶ್ರೀಮಂತ ಪರಂಪರೆಯನ್ನು ಹೊಂದಿದೆ. ಶ್ರೀ ವೆಂಕಟೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸದಿದ್ದರೆ ತಿರುಪತಿಗೆ ಹೋಗುವುದು ಪೂರ್ಣವಾಗುವುದಿಲ್ಲ.












Click it and Unblock the Notifications