
ತಿರುಪತಿಯಲ್ಲಿ ದರ್ಶನ, ನವೆಂಬರ್‌ನಿಂದ ಬದಲಾವಣೆ ತಿಳಿಯಿರಿ
ಅಮರಾವತಿ, ಅಕ್ಟೋಬರ್ 30; ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ನವೆಂಬರ್ ತಿಂಗಳಿನಿಂದ ದರ್ಶನದ ನಿಯಮಗಳಲ್ಲಿ ಬದಲಾವಣೆ ತರಲಿದೆ. ಪ್ರಾಯೋಗಿಕವಾಗಿ ಈ ಬದಲಾವಣೆ ತರಲಾಗುತ್ತಿದೆ. ದೇವರ ದರ್ಶನಕ್ಕೆ ಆಗಮಿಸುವವರು ಈ ಕುರಿತು ತಿಳಿದುಕೊಳ್ಳಬೇಕು.
ತಿರುಪತಿ ವೆಂಕಟೇಶ್ವರನ ವಿಐಪಿ ದರ್ಶನದ ನಿಯಮದಲ್ಲಿ ಟಿಟಿಡಿ ಬದಲಾವಣೆ ತರುತ್ತಿದೆ. ವಿಐಪಿ ದರ್ಶನ ಮತ್ತು ಸಾಮಾನ್ಯ ದರ್ಶನದ ಸಮಯ ಒಂದೇ ಆಗಿದ್ದರಿಂದ ಭಕ್ತರಿಗೆ ತೊಂದರೆ ಆಗುತ್ತಿತ್ತು. ಉಚಿತ ದರ್ಶನಕ್ಕೆ ಆಗಮಿಸುವ ಭಕ್ತರಿಗೆ ಅನುಕೂಲ ಮಾಡಿಕೊಡಲು ಈ ಬದಲಾವಣೆ ಮಾಡಲಾಗುತ್ತಿದೆ.
Breaking; ಹುಬ್ಬಳ್ಳಿ-ತಿರುಪತಿ ರೈಲು ಪುನರಾರಂಭ, ವೇಳಾಪಟ್ಟಿ
ನವೆಂಬರ್ 1ರಿಂದ ಬೆಳಗ್ಗೆ 10 ರಿಂದ ಮಧ್ಯಾಹ್ನ 12 ಗಂಟೆಯ ತನಕ ವಿಐಪಿ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ. ಪ್ರಸ್ತುತ ಮುಂಜಾನೆ 2.30ರಿಂದ ಬೆಳಗ್ಗೆ 8ರ ತನಕ ವಿಐಪಿ ದರ್ಶನವಿದೆ. ಆದರೆ ಕೆಲವು ದಿನ ವಿಐಪಿ ದರ್ಶನ 10 ಗಂಟೆಯ ತನಕವೂ ಸಾಗುತ್ತಿತ್ತು, ಉಚಿತ ದರ್ಶನಕ್ಕೆ ಬರುವ ಭಕ್ತರು ಕಾಯಬೇಕಿತ್ತು.
ಬೀದರ್-ತಿರುಪತಿ ನಡುವೆ ಹೊಸ ರೈಲು; ವೇಳಾಪಟ್ಟಿ
ಟಿಟಿಡಿ ಈ ಕುರಿತು ಪ್ರತಿಕಾ ಪ್ರಕಟಣೆ ಮೂಲಕ ಮಾಹಿತಿ ನೀಡಿದೆ. ವಿಐಪಿ ದರ್ಶನಕ್ಕೆ ಮುಂಜಾನೆ ಅವಕಾಶ ನೀಡಲಾಗಿತ್ತು. ಆದರೆ ಅದೇ ವೇಳೆ ಉಚಿತ ದರ್ಶನ ಪಡೆಯುವ ಹೆಚ್ಚಿನ ಭಕ್ತರು ಆಗಮಿಸುತ್ತಿದ್ದರು, ಅವರು ತಾಸುಗಟ್ಟಲೇ ಕಾಯಬೇಕಾಗುತ್ತಿತ್ತು ಎಂದು ಹೇಳಿದೆ.
Breaking: ತಿರುಪತಿ ವೆಂಕಟೇಶ್ವರ ಸ್ವಾಮಿ ಭಕ್ತರಿಗೆ ಸಿಹಿ ಸುದ್ದಿ; 300 ರೂ.ಗೆ ವಿಶೇಷ ದರ್ಶನ ಟಿಕೆಟ್
ಉಚಿತ ದರ್ಶನಕ್ಕೆ ಬರುವ ಭಕ್ತರಿಗೆ ತೊಂದರೆ ಆಗಬಾರದು ಎಂಬ ಕಾರಣಕ್ಕೆ ವಿಐಪಿ ದರ್ಶನದ ಸಮಯದಲ್ಲಿ ಬದಲಾವಣೆ ಮಾಡಲಾಗುತ್ತಿದೆ. ಪ್ರಾಯೋಗಿಕವಾಗಿ ಈ ಬದಲಾವಣೆ ಮಾಡಿ, ಬಳಿಕ ಮುಂದುವರೆಸುವ ಕುರಿತು ತೀರ್ಮಾನ ಮಾಡಲಾಗುತ್ತದೆ ಎಂದು ಟಿಟಿಡಿ ಸ್ಪಷ್ಟಪಡಿಸಿದೆ.
ಸರಣಿ ಸಭೆಗಳು; ಟಿಟಿಡಿ ಅಧ್ಯಕ್ಷ ವೈ. ವಿ. ಸುಬ್ಬಾರೆಡ್ಡಿ ಅಕ್ಟೋಬರ್‌ನಲ್ಲಿ ಸರಣಿ ಸಭೆಗಳನ್ನು ನಡೆಸಿದ್ದರು. ಉಚಿತ ದರ್ಶನಕ್ಕೆ ಬರುವ ಭಕ್ತಾದಿಗಳಿಗೆ ಆಗುವ ತೊಂದರೆ ನಿವಾರಿಸಲು ನವೆಂಬರ್‌ನಿಂದ ವಿಐಪಿ ದರ್ಶನದ ಸಮಯ ಬದಲಾವಣೆ ಮಾಡಲು ಸೂಚನೆ ನೀಡಿದ್ದರು.
ಮುಂಜಾನೆ 8 ಗಂಟೆಗೆ ಮುಗಿಯಬೇಕಿದ್ದ ವಿಐಪಿ ದರ್ಶನ ಕೆಲವು ದಿನ 10 ಗಂಟೆಯ ತನಕ ಸಾಗುತ್ತಿತ್ತು. ಇದರಿಂದಾಗಿ ಉಚಿತ ದರ್ಶನಕ್ಕೆ ಬರುವ ಭಕ್ತರಿಗೆ ತೊಂದರೆ ಆಗುತ್ತಿತ್ತು. ಅಲ್ಲದೇ ಅರ್ಜಿತ ಸೇವೆ ವೀಕ್ಷಿಸಲು ಸಹ ಸಾಧ್ಯವಾಗುತ್ತಿರಲಿಲ್ಲ.
ವಿಐಪಿ ದರ್ಶನ ಮುಗಿಯುವ ತನಕ ವೈಕುಂಠಂ ಕ್ಯೂ ಕಾಂಪ್ಲೆಕ್ಸ್‌ನಲ್ಲಿರುವ ಉಚಿತ ದರ್ಶನದ ಭಕ್ತರು ತಾಸುಗಟ್ಟಲೇ ಕಾಯಬೇಕಿತ್ತು. ಇಂತಹ ಸಮಸ್ಯೆಗಳನ್ನು ಬಗೆಹರಿಸಲು ಟಿಟಿಡಿ ಪ್ರಾಯೋಗಿಕ ಬದಲಾವಣೆ ಮಾಡುತ್ತಿದೆ.
ಎ. ವಿ. ಧರ್ಮರೆಡ್ಡಿ ವಿಐಪಿ ದರ್ಶನದ ಸಮಯ ಬದಲಾವಣೆ ಮಾಡಿ, ಉಚಿತ ದರ್ಶನದ ಭಕ್ತರಿಗೆ ಅನುಕೂಲ ಮಾಡಿಕೊಡುವ ಪ್ರಸ್ತಾವನೆ ಮುಂದಿಟ್ಟಿದ್ದರು. ಟಿಟಿಡಿ ಸಭೆಯಲ್ಲಿ ಇದನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಲು ಒಪ್ಪಿಗೆ ನೀಡಲಾಗಿದ್ದು, ನವೆಂಬರ್‌ನಿಂದಲೇ ಜಾರಿಗೆ ಬರಲಿದೆ.
ಪ್ರತಿದಿನ ಮಧ್ಯಾಹ್ನದ ಒಳಗೆ ವಿಐಪಿ ದರ್ಶನ ಪೂರ್ಣಗೊಳಿಸಲು ಟಿಟಿಡಿ ಯೋಜನೆ ರೂಪಿಸಿದೆ. ಸಾಮಾನ್ಯ ದರ್ಶನಕ್ಕೆ ಬರುವ ಭಕ್ತರಿಗೆ ಹೆಚ್ಚಿನ ಸಮಯವನ್ನು ನೀಡಲಿದೆ. ಟಿಟಿಡಿ ಸರ್ವದರ್ಶನದಲ್ಲಿಯೂ ಕೆಲವು ಬದಲಾವಣೆ ಮಾಡಲು ಯೋಜಿಸುತ್ತಿದೆ.
ಕಳೆದ ಕೆಲವು ತಿಂಗಳುಗಳಿಂದ ತಿರುಪತಿ ತಿರುಮಲಕ್ಕೆ ಆಗಮಿಸುವ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ವಾರಾಂತ್ಯ, ಸರ್ಕಾರಿ ರಜೆ ದಿನಗಳಲ್ಲಿ ಅತ್ಯಧಿಕ ಭಕ್ತರು ಆಗಮಿಸುತ್ತಿದ್ದಾರೆ. ಸಾಮಾನ್ಯ ದರ್ಶನಕ್ಕೆ ಬಂದವರು ಒಂದು ದಿನಕ್ಕೂ ಹೆಚ್ಚು ಕಾಲ ಕಾಯುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.
ಭಕ್ತರಿಗೆ ಹೊಸ ಪ್ರಸಾದ; ಕಳೆದ ವಾರ ತಿರುಪತಿ ದೇವಾಲಯ ಭಕ್ತರಿಗಾಗಿ ಹೊಸ ಪ್ರಸಾದ ಬಿಡುಗಡೆ ಮಾಡಿತ್ತು. ಆದರೆ ಇದು ಲಾಡು ಮಾದರಿಯಲ್ಲಿ ತಿನ್ನುವ ಪ್ರಸಾದವಲ್ಲ.
ಹೊಸ ಪ್ರಸಾದಕ್ಕೆ ಶ್ರೀವಾರಿ ಧನ ಪ್ರಸಾದ ಎಂದು ಹೆಸರಿಡಲಾಗಿದೆ. ಚಿಲ್ಲರೆ ನಾಣ್ಯಗಳ ಪ್ಯಾಕೆಟ್ ಇದಾಗಿದ್ದು, ಅರಿಶಿಣ ಮತ್ತು ಕುಂಕುಮದ ಜೊತೆ ಪ್ರಸಾದ ಸಿಗಲಿದೆ. ಭಕ್ತರು ಹುಂಡಿಗೆ ಹಾಕುವ ನಾಣ್ಯಗಳನ್ನು ಮತ್ತೆ ಭಕ್ತರಿಗೆ ಶ್ರೀವಾರಿ ಧನ ಪ್ರಸಾದ ರೂಪದಲ್ಲಿ ನೀಡಲಾಗುತ್ತಿದೆ.