Tirupati: ತಿಮ್ಮಪ್ಪನ ಭಕ್ತರಿಗೆ ಗುಡ್ ನ್ಯೂಸ್: ವಾಟ್ಸಾಪ್ ಅಲ್ಲೂ ಬರುತ್ತೆ ತಿರುಪತಿ ಲಡ್ಡು- ಬುಕ್ ಮಾಡುವುದು ಹೇಗೆ?
ತಿರುಪತಿ ತಿರುಮಲ ಭಕ್ತರಿಗೆ ಟಿಟಿಡಿ ಸಿಹಿ ಸುದ್ದಿಯೊಂದನ್ನು ನೀಡಿದೆ. ಲಡ್ಡು ಪ್ರಸಾದವನ್ನು ಆನ್‌ಲೈನ್ ಮೂಲಕ ಹಾಗೂ ದೇವಸ್ಥಾನದ ಪ್ರಸಾದ ಕೌಂಟರ್‌ಗಳಲ್ಲಿ ನೀಡಲಾಗುತ್ತಿತ್ತು. ಇದೀಗ ವಾಟ್ಸಾಪ್ ಮೂಲಕವೂ ತಿರುಪತಿ ಲಡ್ಡುವನ್ನು ಬುಕ್ ಮಾಡಿ ನೀವಿರುವ ಸ್ಥಳಕ್ಕೆ ತರಿಸಿಕೊಳ್ಳಬಹುದು.
ಹೌದು ಭಕ್ತರು ದೇವಾಲಯ ಸಂಬಂಧಿತ ಸೇವೆಗಳ ಪ್ರಯೋಜನ ಪಡೆಯಲು ಸಹಾಯವಾಗಲೆಂದು ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಹೊಸ ವಾಟ್ಸಾಪ್ ಸೇವೆಯನ್ನು ಪರಿಚಯಿಸಿದೆ. ಅಲ್ಲದೆ ಟಿಟಿಡಿ ಈಗ ಅಂತಹ 15 ಅಗತ್ಯ ಸೇವೆಗಳನ್ನು ವಾಟ್ಸಾಪ್‌ಗೆ ಸಂಯೋಜಿಸಿದೆ. ಈ ಮೂಲಕ ಭಕ್ತರು ದೇವಾಲಯ ಭೇಟಿಗಳನ್ನು ಸುಲಭಗೊಳಿಸಲಾಗಿದೆ.

ಈ ಸೇವೆಗಳು ಟಿಕೆಟ್ ಬುಕಿಂಗ್, ವಸತಿ ಲಭ್ಯತೆ ಮತ್ತು ದೇವಾಲಯದ ಸಮಯದ ನವೀಕರಣಗಳಂತಹ ಪ್ರಮುಖ ಅಂಶಗಳನ್ನು ಒಳಗೊಂಡಿವೆ. ಒಟ್ಟಾರೆ ಭಕ್ತರ ಅನುಕೂಲತೆಯನ್ನು ಹೆಚ್ಚಿಸಲು ಮತ್ತು ಕಾಯುವ ಸಮಯವನ್ನು ಕಡಿಮೆ ಮಾಡುವ ಸದುದ್ದೇಶದಿಂದ ಟಿಟಿಡಿ ವಾಟ್ಸಾಪ್ ಸೇವೆಯನ್ನು ಜಾರಿಗೆ ತಂದಿದೆ. ವಾಟ್ಸಾಪ್‌ನಲ್ಲಿ ಟಿಟಿಡಿ ಸೇವೆಗಳನ್ನು ಹೇಗೆ ಪ್ರವೇಶಿಸುವುದು? ಲಡ್ಡು ಪ್ರಸಾದವನ್ನು ಬುಕ್ ಮಾಡುವುದು ಹೇಗೆ? ಎಂದು ಈಗ ತಿಳಿಯೋಣ.
ವಾಟ್ಸಾಪ್‌ನಲ್ಲಿ ಲಡ್ಡು ಪ್ರಸಾದವನ್ನು ಬುಕ್ ಮಾಡುವ ವಿಧಾನ:-
1. ನಿಮ್ಮ ಮೊಬೈಲ್ ಫೋನ್ನಲ್ಲಿ 9552300009 ಸಂಖ್ಯೆಯನ್ನು ಸೇವ್ ಮಾಡಿಕೊಳ್ಳಿ. ಇದು ಆಂಧ್ರ ಸರ್ಕಾರಿ ನಾಗರಿಕರ ಸಹಾಯವಾಣಿ ಸೇವೆಯಾಗಿದೆ.
2. ಈ ನಂಬರ್‌ನ ವಾಟ್ಸಾಪ್‌ಗೆ ಹೋಗಿ ಸಂಖ್ಯೆಯನ್ನು ಮತ್ತೊಮ್ಮೆ ಪರಿಶೀಲನೆ ಮಾಡಿ ಮತ್ತು "ಹಾಯ್" ಎಂದು ಸಂದೇಶ ಕಳುಹಿಸುವ ಮೂಲಕ ಚಾಟ್ ಅನ್ನು ಪ್ರಾರಂಭಿಸಿ.

3. ಮೊದಲಿಗೆ ನೀವು ಈ ಸಂದೇಶವನ್ನು ಪಡೆಯುತ್ತೀರಿ: "ಆಂಧ್ರಪ್ರದೇಶ ಸರ್ಕಾರಿ ನಾಗರಿಕ ಸಹಾಯಕ ಸೇವೆಗೆ ಸುಸ್ವಾಗತ. ನಿಮ್ಮ ಅನುಕೂಲತೆ ನಮ್ಮ ಆದ್ಯತೆ. ದಯವಿಟ್ಟು ನಿಮಗೆ ಅಗತ್ಯವಿರುವ ನಾಗರಿಕ ಸೇವೆಯನ್ನು ಆಯ್ಕೆಮಾಡಿ."
4. ನಂತರ ನೀವು 'ಸೇವೆಗಳನ್ನು ಆಯ್ಕೆ ಮಾಡಿ' ಮುಂದುವರಿಯಬಹುದು. ಇದರಲ್ಲಿ ಲಡ್ಡು ಸೇವೆಯನ್ನು ಆಯ್ಕೆ ಮಾಡಿ. ಕೇಳುವ ಎಲ್ಲಾ ವಿವರವನ್ನು ನೀಡಿ ಹಣ ವಾಪತಿಸಿದರೆ ಲಡ್ಡು ನೀವಿರುವ ಸ್ಥಳಕ್ಕೆ ಬಂದು ತಲುಪುತ್ತದೆ.
ವಾಟ್ಸಾಪ್‌ನಲ್ಲಿ ಲಭ್ಯವಿರುವ ಸೇವೆಗಳಲ್ಲಿ ಇವು ಸೇರಿವೆ:
*ಸ್ಲಾಟ್ ಮಾಡಲಾದ ಸರ್ವದರ್ಶನ ಲೈವ್ - ತಿರುಪತಿಗೆ ಸರ್ವದರ್ಶನ ಟೋಕನ್‌ಗಳ ನೈಜ ಸ್ಥಿತಿ
*ಸರ್ವದರ್ಶನ ಲೈವ್- ವೈಕುಂಠಂ ಕ್ಯೂ ಕಾಂಪ್ಲೆಕ್ಸ್ -2 ರಲ್ಲಿ ಕ್ಯೂ ಸ್ಥಿತಿಯ ನವೀಕರಣಗಳು.
*ಶ್ರೀ ವಾಣಿ ಟ್ರಸ್ಟ್ ಲೈವ್- ಶ್ರೀ ವಾಣಿ ಟ್ರಸ್ಟ್ ಟಿಕೆಟ್‌ಗಳ ಪ್ರಸ್ತುತ ಲಭ್ಯತೆ.
*ಮುಂಗಡ ಠೇವಣಿ ಮರುಪಾವತಿ ಲೈವ್- ಕೊಠಡಿ ಬುಕಿಂಗ್‌ಗಾಗಿ ಎಚ್ಚರಿಕೆ ಠೇವಣಿ, ಮರುಪಾವತಿಯ ನವೀಕರಣಗಳು.
ಭಕ್ತರ ಒಟ್ಟಾರೆ ಅನುಭವವನ್ನು ಮತ್ತಷ್ಟು ಸುಧಾರಿಸಲು ದೇಣಿಗೆ ಮತ್ತು ಇತರ ದೇವಾಲಯ ಸಂಬಂಧಿತ ಸೇವೆಗಳ ಮಾಹಿತಿಯನ್ನು ಒಳಗೊಂಡಂತೆ ಹೆಚ್ಚುವರಿ ವೈಶಿಷ್ಟ್ಯಗಳೊಂದಿಗೆ ಈ ವಾಟ್ಸಾಪ್ ಸೇವೆಯನ್ನು ವಿಸ್ತರಿಸಲು ಟಿಟಿಡಿ ಯೋಜಿಸಿದೆ.
ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರೊಂದಿಗಿನ ಪರಿಶೀಲನಾ ಸಭೆಯ ನಂತರ ಘೋಷಿಸಲಾದ ಈ ಉಪಕ್ರಮವು ಸೌಲಭ್ಯಗಳನ್ನು ಸುಧಾರಿಸಲು ಮತ್ತು ದೇವಾಲಯ ಭೇಟಿ ಅನುಭವದಲ್ಲಿನ ವಿಳಂಬವನ್ನು ಕಡಿಮೆ ಮಾಡುವ ಪ್ರಯತ್ನದ ಭಾಗವಾಗಿದೆ.
ಟಿಟಿಡಿಯಿಂದ ವಾಟ್ಸಾಪ್ ಆಧಾರಿತ ಸೇವೆಗಳ ಪರಿಚಯ ಆಂಧ್ರಪ್ರದೇಶ ಸರ್ಕಾರದ ಇ-ಆಡಳಿತ ತಂತ್ರಕ್ಕೆ ಅನುಗುಣವಾಗಿದೆ. ಇದನ್ನು ಈಗಾಗಲೇ ವಿವಿಧ ಸಾರ್ವಜನಿಕ ಸೇವೆಗಳಿಗೆ ಬಳಸಲಾಗಿದೆ.












Click it and Unblock the Notifications