ಬುಡಕಟ್ಟು ಹಕ್ಕುಗಳಿಗಾಗಿ ಬಿಜೆಪಿ ವಿರುದ್ಧ ಪ್ರತಿಭಟನೆ ಬೆದರಿಕೆ ಹಾಕಿದ ತಿಪ್ರಾ ಮೋಥಾ ಮುಖ್ಯಸ್ಥ!
ಗುವಾಹಟಿ, ಜುಲೈ. 17: ತ್ರಿಪುರಾದ ಪ್ರಮುಖ ವಿರೋಧ ಪಕ್ಷವಾದ ತಿಪ್ರಾ ಮೋಥಾ ಪಾರ್ಟಿ (ಟಿಎಂಪಿ) ರಾಜ್ಯದಲ್ಲಿ ಆಡಳಿತಾರೂಢ ಬಿಜೆಪಿಯ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದೆ. ತ್ರಿಪುರಾದ ತ್ರಿಪುರಾ ಬುಡಕಟ್ಟು ಪ್ರದೇಶಗಳ ಸ್ವಾಯತ್ತ ಜಿಲ್ಲಾ ಕೌನ್ಸಿಲ್ (ಟಿಟಿಎಎಡಿಸಿ) ಆಡಳಿತ ನಡೆಸುತ್ತಿರುವ ಪಕ್ಷ ಟಿಎಂಪಿ ರಾಜ್ಯದಲ್ಲಿ ಬಿಜೆಪಿಯು ಸ್ವಾಯತ್ತ ಸಂಸ್ಥೆಯನ್ನು ಕಸಿದುಕೊಳ್ಳುವುದನ್ನು ಮುಂದುವರೆಸಿದರೆ ಚಳವಳಿ ನಡೆಸುವುದಾಗಿ ಬೆದರಿಕೆ ಹಾಕಿದೆ.
ಶಿಕ್ಷಣ ಮತ್ತು ಆರೋಗ್ಯದಂತಹ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿರುವ ಬುಡಕಟ್ಟು ಜನಾಂಗದವರಿಗೆ "ಗ್ರೇಟ್ ಟಿಪ್ರಾ ಲ್ಯಾಂಡ್" ಎಂಬ ತನ್ನ ಪ್ರಮುಖ ಬೇಡಿಕೆಗಾಗಿ ಪಕ್ಷವು ತನ್ನ ಹೋರಾಟವನ್ನು ಮುಂದುವರೆಸುತ್ತದೆ ಎಂದು ಟಿಎಂಪಿ ಮುಖ್ಯಸ್ಥ ಪ್ರದ್ಯೋತ್ ಬಿಕ್ರಮ್ ಮಾಣಿಕ್ಯ ದೇಬ್ ಬರ್ಮಾ ಮತ್ತೆ ಹೇಳಿದ್ದಾರೆ.

"ತ್ರಿಪುರಾದಲ್ಲಿ ವಿಧಾನಸಭೆ ಚುನಾವಣೆ ಸೇರಿದಂತೆ ಹಲವಾರು ಚುನಾವಣೆಗಳು ನಡೆಯುತ್ತಿವೆ. ಆದರೆ ತ್ರಿಪುರಾ ಬುಡಕಟ್ಟು ಪ್ರದೇಶಗಳ ಸ್ವಾಯತ್ತ ಜಿಲ್ಲಾ ಕೌನ್ಸಿಲ್ (ಟಿಟಿಎಎಡಿಸಿ) ಪ್ರದೇಶಗಳಲ್ಲಿ ಗ್ರಾಮ ಸಭೆ ಚುನಾವಣೆ ನಡೆಸಲು ಬಿಜೆಪಿ ಬಯಸುವುದಿಲ್ಲ. ಈ ಚುನಾವಣೆಗಳನ್ನು ನಡೆಸದಿರುದರಿಂದ ಈ ಪ್ರದೇಶಗಳಲ್ಲಿನ ಅಭಿವೃದ್ಧಿ ಮತ್ತು ಕಲ್ಯಾಣ ಕಾರ್ಯಗಳ ಮೇಲೆ ತೀವ್ರ ಪರಿಣಾಮ ಬೀರಿದೆ" ಎಂದು ಪ್ರದ್ಯೋತ್ ದೇಬ್ ಬರ್ಮಾ ಹೇಳಿದ್ದಾರೆ.
ಗ್ರಾಮ ಪಂಚಾಯತಿ ಚುನಾವಣೆಗಳಿಗೆ ಸಮಾನವಾದ ಗ್ರಾಮ ಸಭೆಗಳ ಚುನಾವಣೆಗಳನ್ನು ಈ ಹಿಂದೆ ಮಾರ್ಚ್ 2021 ಕ್ಕೆ ನಿಗದಿಪಡಿಸಲಾಗಿತ್ತು. ಆದಾರೆ, ತ್ರಿಪುರಾ ಹೈಕೋರ್ಟ್‌ನಿಂದ ಸ್ಪಷ್ಟ ನಿರ್ದೇಶನಗಳ ಹೊರತಾಗಿಯೂ ಅವು ವಿಳಂಬಗೊಂಡಿವೆ. ಹೀಗಾಗಿ ಆಡಳಿತೆಊಡ ಬಿಜೆಪಿ ವಿರುದ್ಧ ಪ್ರದ್ಯೋತ್ ಬಿಕ್ರಮ್ ಮಾಣಿಕ್ಯ ದೇಬ್ ಬರ್ಮಾ ವಾಗ್ದಾಳಿ ನಡೆಸಿದ್ದಾರೆ. ಇದರ ಜೊತೆಗೆ ಟಿಎಂಪಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಲು ನಿರ್ಧರಿಸಿದ್ದಾರೆ. ಬದಲಿಗೆ ಪಕ್ಷಕ್ಕಾಗಿ 'ಯೋಧ'ನಾಗಿ ಕೆಲಸ ಮಾಡುವುದಾಗಿ ಘೋಷಿಸಿದ್ದಾರೆ.
"ಬಿಜೆಪಿ ತ್ರಿಪುರಾದಲ್ಲಿ ಒಡೆದು ಆಳುವ ನೀತಿಯನ್ನು ಅನುಸರಿಸಲು ಪ್ರಯತ್ನಿಸುತ್ತಿದೆ, ಆದರೆ ಬಂಗಾಳದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲು ಒತ್ತಾಯಿಸುತ್ತಿದೆ. 140 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಏಕೆ ಹೇರಿಲ್ಲ..? ಜನಾಂಗೀಯ ಘರ್ಷಣೆಗಳಲ್ಲಿ ಇನ್ನೂ ಹಲವರು ಗಾಯಗೊಂಡಿದ್ದಾರಲ್ಲವೇ?" ಎಂದು ಟಿಎಂಪಿ ನಾಯಕ ಪ್ರಶ್ನಿಸಿದ್ದಾರೆ.

ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ತ್ರಿಪುರಾದಲ್ಲಿ ನಡೆಯಲು ಎಂದಿಗೂ ಬಿಡುವುದಿಲ್ಲ ಎಂದು ಪ್ರದ್ಯೋತ್ ದೇಬ್ ಬರ್ಮಾ ಎಚ್ಚರಿಸಿದ್ದಾರೆ. ಭಾಷೆ, ಉಪಭಾಷೆ ಅಥವಾ ಧರ್ಮದ ಮೇಲೆ ರಾಜ್ಯದ ಏಕತೆಯನ್ನು ಹಾಳುಮಾಡಲು ತಮ್ಮ ಪಕ್ಷವು ಬಿಡುವುದಿಲ್ಲ ಎಂದು ಒತ್ತಿ ಹೇಳಿದ್ದಾರೆ.
ತ್ರಿಪುರಾದ ಪ್ರಮುಖ ವಿರೋಧ ಪಕ್ಷವಾದ ತಿಪ್ರಾ ಮೋಥಾ ಫೆಬ್ರವರಿಯ ವಿಧಾನಸಭಾ ಚುನಾವಣೆಯ ನಂತರ ತನ್ನ ಮೊದಲ ಸಮಗ್ರ ಸಭೆಯನ್ನು ಮುಕ್ತಾಯಗೊಳಿಸಿದೆ. ಅದರ ಸಂಸ್ಥಾಪಕ ಪ್ರದ್ಯೋತ್ ದೆಬ್ಬರ್ಮಾ ಅವರು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುವುದಾಗಿ ಘೋಷಿಸಿ, "ಸಾಮಾನ್ಯ ಸದಸ್ಯ"ನಾಗಿ ಪಕ್ಷಕ್ಕೆ ಸೇವೆ ಸಲ್ಲಿಸುವುದನ್ನು ಮುಂದುವರಿಸುವುದಾಗಿ ಹೇಳಿದ್ದಾರೆ.
ಪಕ್ಷದ ಮೊದಲ ಸಂವಿಧಾನವನ್ನು ಅಂಗೀಕರಿಸುವ ನಿರ್ಧಾರ ಮತ್ತು ಬುಡಕಟ್ಟು ಪರಿಷತ್ತಿನ ಎಲ್ಲಾ ಐದು ವಲಯ ಪ್ರದೇಶಗಳಲ್ಲಿ ಪಕ್ಷದ ಕಾರ್ಯಕರ್ತರಿಗೆ ಇದೇ ರೀತಿಯ ಪೂರ್ಣ ಸಭೆಗಳನ್ನು ನಡೆಸಲು ಮತ್ತು ತಳಮಟ್ಟದ ಕಾರ್ಯಕರ್ತರೊಂದಿಗೆ ಪಕ್ಷದ ರಚನೆಯನ್ನು ಚರ್ಚಿಸುವ ಪ್ರತಿಜ್ಞೆಯನ್ನು ಮಾಡಲಾಗಿದೆ. ಇವುಗಳ ನಡುವೆ ಈ ಘೋಷಣೆ ಮಾಡಿದ್ದಾರೆ.












Click it and Unblock the Notifications