ವಾಜಪೇಯಿ ನಿಧನ ಎಂದು ಟ್ವೀಟಿಸಿ ಪ್ರಮಾದ ಎಸಗಿದ ತ್ರಿಪುರ ರಾಜ್ಯಪಾಲ

ಅಗರ್ತಲ, ಆಗಸ್ಟ್ 16: ಅನಾರೋಗ್ಯದಿಂದ ಬಳಲುತ್ತಿರುವ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ನಿಧನರಾಗಿದ್ದಾರೆ ಎಂದು ಟ್ವೀಟ್ ಮಾಡಿ ಬಹುದೊಡ್ಡ ಪ್ರಮಾದ ಎಸಗಿದ್ದಾರೆ ತ್ರಿಪುರ ರಾಜ್ಯಪಾಲ ತಥಾಗತ ರಾಯ್!

ನಂತರ ಆ ಟ್ವೀಟ್ ಅನ್ನು ಅವರು ಡಿಲೀಟ್ ಮಾಡಿದ್ದಾರಾದರೂ, ಅವರು ಮಾಡಿದ್ದ ಟ್ವೀಟ್ ಅನ್ನು ಹಲವರು ಸ್ಕ್ರೀನ್ ಶಾಟ್ ತೆಗೆದುಕೊಂಡು, 'ಜವಾಬ್ದಾರಿಯುತ ಸ್ಥಾನದಲ್ಲಿರುವ ವ್ಯಕ್ತಿ ಯಾಕೆ ಇಂಥ ಬೇಜವಾಬ್ದಾರಿ ವರ್ತನೆ ತೋರುತ್ತಾರೆ' ಎಂದು ಪ್ರಶ್ನಿಸಿದ್ದಾರೆ.

ಗಂಭೀರ ಸ್ಥಿತಿಯಲ್ಲಿರುವ 'ಭಾರತ ರತ್ನ' ವಾಜಪೇಯಿ ಅವರನ್ನು ಜೂನ್ 11 ರಂದು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕಳೆದ 24 ಗಂಟೆಗಳಿಂದ ಅವರು ಯಾವುದೇ ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ. ಅವರಿಗೆ ಜೀವ ರಕ್ಷಕಗಳ ನೆರವು ಒದಗಿಸಲಾಗಿದೆ ಎಂದು ಆಸ್ಪತ್ರೆಯ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಆದರೂ ತಥಾಗತ ರಾಯ್ ಅವರು ಈ ರೀತಿ ಟ್ವೀಟ್ ಮಾಡಿರುವುದರ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ.

"ಭಾರತದ ಮಾಜಿ ಪ್ರಧಾನಿ, ಅತ್ಯುತ್ತಮ ವಾಗ್ಮಿ, ಭಾರತದ ರಾಜಕೀಯದ ಧ್ರುವತಾರೆ... ಅಟಲ್ ಬಿಹಾರಿ ವಾಜಪೇಯಿ ಇಲ್ಲಿಲ್ಲ. ಓಂ ಶಾಂತಿ" ಎಂದು ತಥಾಗತ ರಾಯ್ ಟ್ವೀಟ್ ಮಾಡಿದ್ದರು.

Tripura governor tweeted Vajpayee passes away, later deleted and apologizes

ನಂತರ ಈ ಟ್ವೀಟ್ ಅನ್ನು ಡಿಲೀಟ್ ಮಾಡಿರುವ ಅವರು, "ಭಾರತದ ಟಿವಿ ಚಾನೆಲ್ ವೊಂದು ಹೇಳಿದ್ದನ್ನೇ ನಾನು ಟ್ವೀಟ್ ಮಾಡಿದೆ. ಅದು ನಿಖರ ಮಾಹಿತಿ ಎಂದು ನಾನು ಭಾವಿಸಿದೆ. ಇದುವರೆಗೂ ಯಾವುದೇ ಅಧಿಕೃತ ಘೋಷಣೆ ಬಂದಿಲ್ಲ. ನಾನು ನನ್ನ ಟ್ವೀಟ್ ಅನ್ನು ಡಿಲೀಟ್ ಮಾಡಿದ್ದೇನೆ. ಮತ್ತೊಮ್ಮೆ ಕ್ಷಮೆ ಇರಲಿ" ಎಂದು ನಂತರ ಅವರು ಕ್ಷಮೆ ಯಾಚಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+