ಚುನಾವಣಾ ಸಮೀಕ್ಷೆ: ತ್ರಿಪುರಾದಲ್ಲಿ ಸಿಪಿಐ (ಎಂ) ಪತನ

Posted By:
Subscribe to Oneindia Kannada

ಅಗರ್ತಲಾ, ಫೆಬ್ರವರಿ 06: ತ್ರಿಪುರಾದಲ್ಲಿ ಚುನಾವಣೆಗೆ ಸಜ್ಜಾಗಿದ್ದು, ಚುನಾವಣಾ ಪೂರ್ವ ಸಮೀಕ್ಷೆಗಳು ಹೊರ ಬರುತ್ತಿವೆ. ಫೆಬ್ರವರಿ 18ರಂದು ಚುನಾವಣೆ ನಡೆಯಲಿದೆ.

ನ್ಯೂಸ್ ಎಕ್ಸ್ -ಜನ್ ಕಿ ಬಾತ್ ಚುನಾವಣಾ ಪೂರ್ವ ಸಮೀಕ್ಷೆಯಂತೆ ಎರಡು ದಶಕಗಳ ಸಿಪಿಐ (ಎಂ) ಅಧಿಪತ್ಯ ಅಂತ್ಯ ಕಾಣಲಿದೆ.ಈ ಬಾರಿ ಬಿಜೆಪಿ-ಐಪಿಎಫ್ ಟಿ ಮೈತ್ರಿಕೂಟಕ್ಕೆ ಭರ್ಜರಿ ಜಯ ಸಿಗಲಿದೆ.

Tripura elections 2018: Opinion poll predicts end of CPI(M) rule

60 ವಿಧಾನಸಭಾ ಸ್ಥಾನಗಳ ಪೈಕಿ ಬಿಜೆಪಿ- ಇಂಡಿಜೀನಿಯಸ್ ಪೀಪಲ್ಸ್ ಫ್ರಂಟ್ ಆಫ್ ತ್ರಿಪುರ ಮೈತ್ರಿಕೂಟವು 31-37 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ. ಸಿಪಿಐ (ಎಂ) 23-29 ಸ್ಥಾನಗಳನ್ನು ಗೆಲ್ಲಲಿದೆ ಎಂದು ಸಮೀಕ್ಷೆ ಹೇಳಿದೆ. ಕಾಂಗ್ರೆಸ್ ಹಾಗೂ ಇತರೆ ಪಕ್ಷಗಳು ಯಾವುದೇ ಸ್ಥಾನಗಳು ಗೆಲ್ಲುವ ಲಕ್ಷಣಗಳಿಲ್ಲ ಎಂದು ಹೇಳಿದೆ.

ದೇಶದ ಅತ್ಯಂತ ಬಡ ಮುಖ್ಯಮಂತ್ರಿ ಎನಿಸಿಕೊಂಡಿರುವ ಮಾಣಿಕ್ ಸರ್ಕಾರ್ ಅವರು 20 ವರ್ಷಗಳ ಅಧಿಕಾರದ ಬಲದಿಂದ ಧನ್ ಪುರ್ ವಿಧಾನಸಭಾ ಕ್ಷೇತ್ರದಲ್ಲಿ ಜಯ ಗಳಿಸಲಿದ್ದಾರೆ. 1998ರ ಮಾರ್ಚ್ 11ರಿಂದ ಮಾಣಿಕ್ ಸರ್ಕಾರ್ ಅವರು ಅಧಿಕಾರದಲ್ಲಿದ್ದಾರೆ.

ಸರ್ಕಾರ್ ಅವರು ಸಿಪಿಐ ಎ ಪಾಲಿಟ್ ಬ್ಯೂರೋ ಸದಸ್ಯರಾಗಿದ್ದು, ಎಂಟನೇ ಬಾರಿಗೆ ಎಡಪಕ್ಷಗಳ ಸರ್ಕಾರ ಸ್ಥಾಪನೆ ಮಾಡುವ ಉತ್ಸಾಹದಲ್ಲಿದ್ದಾರೆ. ಫೆಬ್ರವರಿ 18ರಂದು ಮತದಾನ ನಡೆಯಲಿದ್ದು, 20 ಮಂದಿ ಮಹಿಳೆಯರು ಸೇರಿದಂತೆ 297 ಅಭ್ಯರ್ಥಿಗಳ ಭವಿಷ್ಯ ಮಾರ್ಚ್ 03ರಂದು ನಿರ್ಧಾರವಾಗಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
An opinion poll by News X- Jan Ki Baat has predicted the end of over two decades of CPI(M) rule in Tripura which is going to polls on February 18th. The opinion poll predicted victory for BJP- IPFT coalition.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

X