Tripura Election Results 2023: ಇಂದು ತ್ರಿಪುರಾ ವಿಧಾನಸಭಾ ಚುನಾವಣೆ ಫಲಿತಾಂಶ ಪ್ರಕಟ
ಅಗರ್ತಲ, ಮಾರ್ಚ್ 02: ಬಿಗಿ ಭದ್ರತೆಯ ನಡುವೆ 60 ಸದಸ್ಯ ಬಲದ ತ್ರಿಪುರಾ ವಿಧಾನಸಭೆಯ ಮತ ಎಣಿಕೆ ಕೆಲವೇ ಕ್ಷಣಗಳಲ್ಲಿ ಆರಂಭವಾಗಲಿದೆ. ರಾಜ್ಯದಲ್ಲಿ ಫೆಬ್ರವರಿ 16 ರಂದು ಮತದಾನ ನಡೆದಿತ್ತು. ಅಧಿಕಾರಿಯ ಪ್ರಕಾರ ಮತಗಳ ಎಣಿಕೆಯು ರಾಜ್ಯದಾದ್ಯಂತ 21 ಸ್ಥಳಗಳಲ್ಲಿ ನಡೆಯಲಿದ್ದು, ಸಂಜೆಯ ವೇಳೆಗೆ ಫಲಿತಾಂಶ ಹೊರ ಬೀಳಲಿದೆ.
ಬಿಜೆಪಿ ಆಡಳಿತವಿರುವ ತ್ರಿಪುರ ರಾಜ್ಯದಲ್ಲಿ ಭದ್ರತಾ ವ್ಯವಸ್ಥೆಗಳನ್ನು ಕೇಂದ್ರ ಮೀಸಲು ಪೊಲೀಸ್ ಪಡೆ ಮತ್ತು ರಾಜ್ಯ ಪೊಲೀಸರು ನೋಡಿಕೊಳ್ಳುತ್ತಿದ್ದು, ಮತ ಎಣಿಕೆ ದಿನದ ಮೊದಲು ರಾಜ್ಯದ ಕಾನೂನು ಸುವ್ಯವಸ್ಥೆ ಕಾಪಾಡಲು ಪರಿಶೀಲಿಸುತ್ತಿದ್ದಾರೆ. ತ್ರಿಪುರಾ ಜೊತೆಗೆ ಗುರುವಾರ (ಮಾರ್ಚ್ 02) ಮೇಘಾಲಯ ಮತ್ತು ನಾಗಾಲ್ಯಾಂಡ್ ವಿಧಾನಸಭಾ ಚುನಾವಣೆಗಳ ಫಲಿತಾಂಶ ಕೂಡ ಪ್ರಕಟವಾಗಲಿದೆ.

*ತ್ರಿಪುರಾ ಚುನಾವಣೆ 2023: ಫಲಿತಾಂಶಗಳನ್ನು ಪರಿಶೀಲಿಸುವುದು ಹೇಗೆ?*
* ತ್ರಿಪುರಾ ಚುನಾವಣಾ ಫಲಿತಾಂಶವನ್ನು https://kannada.oneindia.com/ ವೆಬ್‌ಸೈಟ್ ಮತ್ತು ಮೊಬೈಲ್ ಫೋನ್ ಅಪ್ಲಿಕೇಶನ್ ನಲ್ಲಿ ಪಡೆಯಬಹದು.
* ಭಾರತೀಯ ಚುನಾವಣಾ ಆಯೋಗವು (ಇಸಿಐ) ತನ್ನ ವೆಬ್‌ಸೈಟ್‌ನಲ್ಲಿ ಬೆಳಗ್ಗೆ 8 ರಿಂದ ಅಪ್‌ಡೇಟ್‌ಗಳನ್ನು ನೀಡುತ್ತದೆ. https://results.eci.gov.in/ ಮತ್ತು ಮೊಬೈಲ್ ಫೋನ್ ಅಪ್ಲಿಕೇಶನ್‌ಗಳಲ್ಲಿ ಎಇಸಲ್ಟ್ ನೋಡಬಹುದು.
* ಗೂಗಲ್ ಪ್ಲೇ ಸ್ಟೋರ್ ಮತ್ತು ಆಪಲ್ ಆಪ್ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಬಹುದಾದ ಮತದಾರರ ಸಹಾಯವಾಣಿ ಅಪ್ಲಿಕೇಶನ್‌ನಲ್ಲಿ ಫಲಿತಾಂಶಗಳನ್ನು ಟ್ರ್ಯಾಕ್ ಮಾಡಬಹುದು

*ಎಕ್ಸಿಟ್ ಪೋಲ್‌ಗಳು ಏನು ಹೇಳಿವೆ..?*
ಮೂರು ಚುನಾವಣಾ ಸಮೀಕ್ಷೆಗಳ ಪ್ರಕಾರ, ಬಿಜೆಪಿ ಮತ್ತು ಅದರ ಮಿತ್ರ ಪಕ್ಷವಾದ ಇಂಡಿಜಿನಸ್ ಪೀಪಲ್ಸ್ ಫ್ರಂಟ್ ಆಫ್ ತ್ರಿಪುರಾ (ಐಪಿಎಫ್‌ಟಿ)ಬಹುಮತದ ಸಂಖೆಗೆ ಬಹಳ ಹತ್ತಿರದಲ್ಲಿದೆ ಅಥವಾ ಬಹುಮತಕ್ಕಿಂತಲೂ ಹೆಚ್ಚು ಸ್ಥಾನಗಳನ್ನು ತನ್ನದಾಗಿಸಿಕೊಳ್ಳುತ್ತದೆ ಎಂದಿದೆ. ಟೈಮ್ಸ್‌ನೌ - ಇಟಿಜಿ ಸರವೆ ಬಿಜೆಪಿಯು ಏಕೈಕ ದೊಡ್ಡ ಪಕ್ಷವಾಗಿ ಹೊರ ಹೊಮ್ಮುವ ಸಾಧ್ಯತೆಯಿದೆ ಎಂದು ಹೇಳಿದೆ.
ಎಲ್ಲಾ ಎಕ್ಸಿಟ್ ಪೋಲ್‌ಗಳ ಪ್ರಕಾರ ಟ್ರಿಪಾ ಮೋಥಾ ಬುಡಕಟ್ಟು ಪ್ರಾಬಲ್ಯವಿರುವ ಜಿಲ್ಲೆಗಳಲ್ಲಿ ಪ್ರಭಾವಶಾಲಿ ಮತ್ತು ದೊಡ್ಡ ಪ್ರಮಾಣದ ಸ್ಥಾನಗಳನ್ನು ಕಸಿದುಕೊಳ್ಳುವ ಸಾಧ್ಯತೆಯಿದೆ. ಈ ಸಮೀಕ್ಷೆಗಳನ್ನು ನೋಡಿದರೆ, 2018 ರಲ್ಲಿ 25 ವರ್ಷಗಳ ಎಡಪಂಥೀಯ ಆಡಳಿತವನ್ನು ಬೇರು ಸಮೇತ ಕಿತ್ತು ಹಾಕಿದ್ದ ಬಿಜೆಪಿಗೆ ಇದು ಸತತ ಎರಡನೇ ವಿಜಯವಾಗಲಿದೆ.












Click it and Unblock the Notifications