Tripura Election Results 2023 : ತ್ರಿಪುರಾ ಸಿಎಂ ಮಾಣಿಕ್ ಸಹಾಗೆ ಆರಂಭಿಕ ಮುನ್ನಡೆ
ಅಗರ್ತಲ, ಮಾರ್ಚ್ 02: ತಮ್ಮ ರಾಜಕೀಯ ಜೀವನದ ಎರಡನೇ ಚುನಾವಣೆ ಮತ್ತು ಮೊದಲ ವಿಧಾನಸಭಾ ಚುನಾವಣೆಯಲ್ಲಿ ಟೌನ್ ಬೋರ್ಡೋವಾಲಿಯಿಂದ ಸ್ಪರ್ಧಿಸಿದ್ದ ತ್ರಿಪುರಾ ಮುಖ್ಯಮಂತ್ರಿ ಡಾ. ಮಾಣಿಕ್ ಸಹಾ ಈಗ ಆರಂಭಿಕ ಮುಂಚೂಣಿಯಲ್ಲಿದ್ದಾರೆ. ಮತ ಏಣಿಕೆ ಆರಂಭದಲ್ಲೇ ತ್ರಿಪುರಾದಲ್ಲಿ 60 ಸ್ಥಾನಗಳ ಪೈಕಿ ಬಿಜೆಪಿ 39 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.
ರಾಜ್ಯದಲ್ಲಿ ಬಿಜೆಪಿ - ಐಪಿಎಫ್‌ಟಿ ಮೈತ್ರಿಗೆ ಎಡ ಪಕ್ಷಗಳು - ಕಾಂಗ್ರೆಸ್ ಮೈತ್ರಿ ಮತ್ತು ಪ್ರದ್ಯೋತ್ ಕಿಶೋರ್ ದೆಬ್ಬರ್ಮಾ ನೇತೃತ್ವದ ಪ್ರಾದೇಶಿಕ ಪಕ್ಷವಾದ ತಿಪ್ರಾ ಮೋಥಾ ಸವಾಲಾಗಿದೆ. ಎಕ್ಸಿಟ್ ಪೋಲ್‌ಗಳು ಸಿಪಿಎಂ ಎರಡಂಕಿಯ ಸ್ಥಾನಗಳನ್ನು ಪಡೆಯಬಹುದು ಎಂದಿದ್ದು, ಕಾಂಗ್ರೆಸ್ ಒಂದು ಸ್ಥಾನವನ್ನು ಗೆಲ್ಲುವುದಿಲ್ಲ ಎಂದು ಭವಿಷ್ಯ ನುಡಿದಿವೆ.

ಅಂಚೆ ಮತಗಳ ಎಣಿಕೆ ನಡೆಯುತ್ತಿರುವ ಆರಂಭಿಕ ಪ್ರಕ್ರಿಯೆಯಲ್ಲಿ ಕಾಂಗ್ರೆಸ್‌ನ ಆಶಿಶ್ ಕುಮಾರ್ ಸಹಾ ಅವರು ಆರಂಭದಲ್ಲಿ ಟೌನ್ ಬೋರ್ಡೋವಾಲಿ ಕ್ಷೇತ್ರದಿಂದ ಮುನ್ನಡೆ ಸಾಧಿಸಿದ್ದರು. ಮಾಣಿಕ್ ಸಹಾ ಮತ್ತು ಕಾಂಗ್ರೆಸ್‌ನ ಆಶಿಶ್ ಕುಮಾರ್ ಸಹಾ ಹೊರತುಪಡಿಸಿ ತೃಣಮೂಲದ ಅನಂತ ಬ್ಯಾನರ್ಜಿ ಕೂಡ ಟೌನ್ ಬೋರ್ಡೋವಾಲಿಯಿಂದ ಕಣದಲ್ಲಿದ್ದಾರೆ.
ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಸಿಎಂ ಸ್ಥಾನದಲ್ಲಿದ್ದ ಬಿಪ್ಲಬ್ ದೇಬ್ ಅವರನ್ನು ಬದಲಾಯಿಸಿ ಕಳೆದ ವರ್ಷ ಮಾಣಿಕ್ ಸಹಾ ಅವರನ್ನು ಮುಖ್ಯಮಂತ್ರಿ ಮಾಡಲಾಗಿತ್ತು. ರಾಜಕೀಯದಲ್ಲಿ ಅನುಭವಿಯಾಗಿದ್ದರೂ, 70 ವರ್ಷ ವಯಸ್ಸಿನ ಶಸ್ತ್ರಚಿಕಿತ್ಸಕ ಮಾಣಿಕ್ ಸಹಾ 2022 ರ ಮೊದಲು ಚುನಾವಣೆಗೆ ಸ್ಪರ್ಧಿಸಿರಲಿಲ್ಲ. ಉಪಚುನಾವಣೆಯಲ್ಲಿ ಟೌನ್ ಬೋರ್ಡೋವಾಲಿಯನ್ನು ಗೆದ್ದ ನಂತರ, ಮಾಣಿಕ್ ಸಹಾ ಈ ಬಾರಿ ಆ ಸ್ಥಾನದಿಂದ ಮತ್ತೆ ಸ್ಪರ್ಧಿಸಿದ್ದಾರೆ.
ತ್ರಿಪುರಾದಲ್ಲಿ ಬಿಜೆಪಿಗೆ ಭಾರಿ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತದೆ ಎಂದು ಭವಿಷ್ಯ ನುಡಿದಿರುವ ಡಾ.ಮಾಣಿಕ್ ಸಹಾ, "ಬಿಜೆಪಿ ಉತ್ತಮ ವಿದ್ಯಾರ್ಥಿ. ಅಂಕಗಳು ಕೂಡ ಉತ್ತಮವಾಗಿರುತ್ತವೆ" ಎಂದಿದ್ದರು. ತ್ರಿಪುರಾ ವಿಧಾನಸಭೆಯ ಮತ ಎಣಿಕೆಯ ಮಧ್ಯೆ ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರ ಜೊತೆಗೆ ಮಾಣಿಕ್ ಸಹಾ ತ್ರಿಪುರಾ ಸುಂದರಿ ಮಾ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ಆಶೀರ್ವಾದ ಪಡೆದರು.
Took blessings of Mata Tripura Sundari before the announcement of assembly poll results. pic.twitter.com/9qKwtpn5UP
— Prof.(Dr.) Manik Saha (@DrManikSaha2) March 2, 2023
*ಡಾ ಮಾಣಿಕ್ ಸಹಾ ಬಗ್ಗೆ ತಿಳಿದುಕೊಳ್ಳಬೇಕಾದ 5 ವಿಷಯಗಳು*
1. ಡಾ. ಮಾಣಿಕ್ ಸಹಾ ಅವರು 70 ವರ್ಷ ವಯಸ್ಸಿನ ವೈದ್ಯರು.
2. 2022 ರಲ್ಲಿ, ಅವರು ಉಪಚುನಾವಣೆಯಲ್ಲಿ ಟೌನ್ ಬರ್ಡೋವಾಲಿ ಅಸೆಂಬ್ಲಿ ಕ್ಷೇತ್ರದಿಂದ ತಮ್ಮ ಮೊದಲ ಚುನಾವಣೆಯಲ್ಲಿ ಸ್ಪರ್ಧಿಸಿದರು. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಅವರು ಈ ಕ್ಷೇತ್ರದಿಂದಲೇ ಸ್ಪರ್ಧಿಸಿದ್ದಾರೆ.

3. ಮಾಣಿಕ್ ಸಹಾ ಕಳೆದ ವರ್ಷ ತ್ರಿಪುರಾದಲ್ಲಿ ಏಕೈಕ ರಾಜ್ಯಸಭಾ ಸ್ಥಾನವನ್ನು ಗೆದ್ದಿದ್ದಾರೆ
4. ಹೆಸರಾಂತ ವೈದ್ಯರಲ್ಲದೆ, ಮಾಣಿಕ್ ಸಹಾ ಅವರು ಮಾಜಿ ಬ್ಯಾಡ್ಮಿಂಟನ್ ಆಟಗಾರರಾಗಿಯೂ ಪ್ರಸಿದ್ಧರಾಗಿದ್ದಾರೆ.
5. ಮಾಣಿಕ್ ಸಹಾ 2016 ರಲ್ಲಿ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ್ದಾರೆ.












Click it and Unblock the Notifications