Get Updates
Get notified of breaking news, exclusive insights, and must-see stories!

Tripura Assembly Elections 2023: ತ್ರಿಪುರಾದಲ್ಲಿ ಮತದಾನ ಆರಂಭ, ಅಧಿಕಾರ ಉಳಿಸಿಕೊಳ್ಳಲು ಬಿಜೆಪಿ ಕಸರತ್ತು!

35 ವರ್ಷಗಳ ಕಾಲ ತ್ರಿಪುರಾವನ್ನು ಆಳಿದ ಸಿಪಿಎಂ, 2018 ರಲ್ಲಿ ರಾಜ್ಯದಲ್ಲಿ ಯಾವುದೇ ಅಸ್ತಿತ್ವವನ್ನು ಹೊಂದಿರದ ಬಿಜೆಪಿ 60 ಸ್ಥಾನಗಳಲ್ಲಿ 36 ಸ್ಥಾನಗಳನ್ನು ಗೆದ್ದು ಇತಿಹಾಸವನ್ನು ಬರೆದಿತು.

ನವದೆಹಲಿ, ಫೆಬ್ರವರಿ. 16: ತ್ರಿಪುರಾದಲ್ಲಿ ಮತದಾನ ಆರಂಭವಾಗಿದ್ದು, ತ್ರಿಕೋನ ಸ್ಪರ್ಧೆಗೆ ಈ ವಿಧಾನಸಭಾ ಚುನಾವಣೆ ಸಾಕ್ಷಿಯಾಗಿದೆ. ಆಡಳಿತಾರೂಢ ಬಿಜೆಪಿ ಭರ್ಜರಿ ಗೆಲುವು ಸಾಧಿಸುವ ನಿರೀಕ್ಷೆಯಲ್ಲಿದೆ. ಮತ್ತೊಂದೆಡೆ, ಸಿಪಿಎಂ ಅನಿರೀಕ್ಷಿತವಾಗಿ ಕಾಂಗ್ರೆಸ್‌ನೊಂದಿಗೆ ಕೈಜೋಡಿಸಿದೆ. ಎಲ್ಲಕ್ಕಿಂತ ಹೆಚ್ಚಾಗಿ ಹೊಸ ಪಕ್ಷ ತಿಪ್ರಾ ಮೋಥಾ ರಾಷ್ಟ್ರೀಯ ಪಕ್ಷಗಳಿಗೆ ಸವಾಲು ಹಾಕಿದೆ.

30 ವರ್ಷಗಳಿಗೂ ಹೆಚ್ಚು ಕಾಲ, ತ್ರಿಪುರಾದಲ್ಲಿ ಸಿಪಿಎಂ ಆಡಳಿತವಿತ್ತು. 2018 ರಲ್ಲಿ ರಾಜ್ಯದಲ್ಲಿ ಯಾವುದೇ ಅಸ್ತಿತ್ವವನ್ನು ಹೊಂದಿರದ ಬಿಜೆಪಿ 60 ಸ್ಥಾನಗಳಲ್ಲಿ 36 ಸ್ಥಾನಗಳನ್ನು ಗೆದ್ದು ಇತಿಹಾಸವನ್ನು ಬರೆದಿತು.

ಬಹುಮತದ 31 ಕ್ಕಿಂತ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ ಜಯ ಸಾಧಿಸಿದ್ದರೂ ಕೂಡ, ಎಂಟು ಸ್ಥಾನಗಳನ್ನು ಪಡೆದುಕೊಂಡಿದ್ದ ಪ್ರಾದೇಶಿಕ ಐಪಿಎಫ್‌ಟಿ (ಇಂಡಿಜಿನಸ್ ಪ್ರೋಗ್ರೆಸಿವ್ ಫ್ರಂಟ್ ಆಫ್ ತ್ರಿಪುರ) ಜೊತೆಗೆ ಮೈತ್ರಿ ಮಾಡಿಕೊಂಡಿತ್ತು. ಶಾಸಕರು ಪಕ್ಷಾಂತರ ಮಾಡುವ ಭಯಕ್ಕೆ ಈ ಕ್ರಮ ತೆಗೆದುಕೊಳ್ಳಲಾಗಿತ್ತು.

35 ವರ್ಷಗಳ ಕಾಲ ತ್ರಿಪುರಾವನ್ನು ಆಳಿದ ಸಿಪಿಎಂ

35 ವರ್ಷಗಳ ಕಾಲ ತ್ರಿಪುರಾವನ್ನು ಆಳಿದ ಸಿಪಿಎಂ

35 ವರ್ಷಗಳ ಕಾಲ ತ್ರಿಪುರಾವನ್ನು ಆಳಿದ ಸಿಪಿಎಂ, ಈ ಬಾರಿ ಕಾಂಗ್ರೆಸ್‌ನೊಂದಿಗೆ ಸೇರಿಕೊಂಡಿದೆ. ಈ ಮೈತ್ರಿಯ ಪ್ರಚಾರದ ಉಸ್ತುವಾರಿಯನ್ನು ನಾಲ್ಕು ಬಾರಿ ಮುಖ್ಯಮಂತ್ರಿಯಾಗಿದ್ದ ಮಾಣಿಕ್ ಸರ್ಕಾರ್ ಮುನ್ನಡೆಸುತ್ತಿದ್ದಾರೆ. ರಾಜ್ಯದ 60 ಸ್ಥಾನಗಳ ಪೈಕಿ 47ರಲ್ಲಿ ಎಡರಂಗ ಸ್ಪರ್ಧಿಸಲಿದ್ದು, ಕಾಂಗ್ರೆಸ್‌ಗೆ ಕೇವಲ 13 ಸ್ಥಾನಗಳನ್ನು ಬಿಟ್ಟುಕೊಟ್ಟಿದೆ.

2018 ರಲ್ಲಿ ಸಿಪಿಎಂ 16 ಸ್ಥಾನಗಳನ್ನು ಗೆದ್ದರೆ, ಅದರ ಪ್ರತಿಪಕ್ಷವಾಗಿದ್ದ ಕಾಂಗ್ರೆಸ್ ಸಂಪೂರ್ಣ ಖಾಲಿಯಾಗಿತ್ತು. ಈಗೀನ ತಮ್ಮ ಮೈತ್ರಿಯು ಸುಮಾರು 13 ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲ್ಲಲಿ ಸಹಾಯ ಮಾಡುತ್ತದೆ ಎಂದು ಸಿಪಿಎಂ ಆಶಿಸುತ್ತಿದೆ. ಆದರೆ ದಶಕಗಳಿಂದ ಬದ್ಧ ವೈರಿಗಳಾಗಿದ್ದ ಎರಡೂ ಪಕ್ಷಗಳ ಮೈತ್ರಿಯೂ ಕೇರಳದ ಘಟಕಗಳಲ್ಲಿ ಚರ್ಚೆಗೆ ಕಾರಣವಾಗಿದೆ.

ಬಿಜೆಪಿ ಕ್ಷೇತ್ರಗಳಿಗೆ ಕನ್ನ ಹಾಕಲಿದೆ ತಿಪ್ರಾ ಮೋಥಾ!

ಬಿಜೆಪಿ ಕ್ಷೇತ್ರಗಳಿಗೆ ಕನ್ನ ಹಾಕಲಿದೆ ತಿಪ್ರಾ ಮೋಥಾ!

ಗ್ರೇಟರ್ ಟಿಪ್ರಾಲ್ಯಾಂಡ್‌ನ ಪ್ರಮುಖ ಬೇಡಿಕೆ ಹೊಂದಿರುವ ಮಾಜಿ ರಾಜಮನೆತನದ ಪ್ರದ್ಯೋತ್ ಕಿಶೋರ್ ದೆಬ್ಬರ್ಮಾ ಅವರು ರಚಿಸಿರುವ ಹೊಸ ಪಕ್ಷವಾದ ತಿಪ್ರಾ ಮೋಥಾ ಮೇಲೆ ಎಲ್ಲರ ದೃಷ್ಟಿ ನೆಟ್ಟಿದೆ. ಈ ಪಕ್ಷವೂ ಬಿಜೆಪಿಯ ಕ್ಷೇತ್ರಗಳಿಗೆ ಸವಾಲಾಗಲಿವೆ ಎಂಬ ಮಾತುಗಳು ಕೇಳಿಬಂದಿವೆ.

ಬಿಜೆಪಿಯು ತನ್ನ ಮೈತ್ರಿಯಲ್ಲಿ ಸ್ಥಳೀಯ ಪಕ್ಷವಾದ ಐಪಿಎಫ್‌ಟಿಯನ್ನು ಹೊಂದಿದ್ದರೂ, ಕಳೆದ ಐದು ವರ್ಷಗಳಲ್ಲಿ ಕೆಲವು ಸ್ಥಾನಗಳಲ್ಲಿ ಅದರ ಹಿಡಿತವು ಸಡಿಲಗೊಂಡಿದೆ. 2021 ರಲ್ಲಿ, ಬುಡಕಟ್ಟು ಪ್ರದೇಶಗಳ ಸ್ವಾಯತ್ತ ಜಿಲ್ಲಾ ಕೌನ್ಸಿಲ್ ಚುನಾವಣೆಯಲ್ಲಿ ಐಪಿಎಫ್‌ಟಿ ಸಂಪೂರ್ಣ ಸೋಲು ಅನುಭವಿಸಿದೆ. ಹೀಗಾಗಿ ಈ ಚುನಾವಣೆಯಲ್ಲಿ ಕೇವಲ ಐದು ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ.

 ತ್ರಿಪುರಾ ವಿಭಜನೆಗೆ ಅವಕಾಶ ನೀಡುವುದಿಲ್ಲ: ಬಿಜೆಪಿ

ತ್ರಿಪುರಾ ವಿಭಜನೆಗೆ ಅವಕಾಶ ನೀಡುವುದಿಲ್ಲ: ಬಿಜೆಪಿ

ಬಿಜೆಪಿಯು ಆರಂಭದಲ್ಲಿ ತಿಪ್ರಾ ಮೋಥಾದೊಂದಿಗೆ ಬಾಂಧವ್ಯವನ್ನು ಬೆಳೆಸಲು ಪ್ರಯತ್ನಿಸಿತ್ತು, ಆದರೆ ಅದರ ಪ್ರಸ್ತಾಪಗಳನ್ನು ತಿರಸ್ಕರಿಸಿತ್ತು. ತ್ರಿಪುರಾದ ಯಾವುದೇ ವಿಭಜನೆಗೆ ಅವಕಾಶ ನೀಡುವುದಿಲ್ಲ ಎಂದು ಬಿಜೆಪಿ ಘೋಷಿಸಿದ ನಂತರ, ತಿಪ್ರಾ ಮೋಥಾ ಕೂಡ ತನ್ನ ನಿಲುವನ್ನು ಗಟ್ಟಿಗೊಳಿಸಿತು. 42 ಸ್ಥಾನಗಳಲ್ಲಿ ತಿಪ್ರಾ ಮೋಥಾ ಸ್ಪರ್ಧಿಸುತ್ತಿದೆ.

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ಈಶಾನ್ಯ ಬಿಜೆಪಿಯ ಪ್ರಮುಖರು, ಚುನಾವಣೆ ನಡೆಯಲಿರುವ ಎಲ್ಲಾ ಮೂರು ಈಶಾನ್ಯ ರಾಜ್ಯಗಳಲ್ಲಿ ಪಕ್ಷವು ಭಾರಿ ಸಾಧನೆ ಮಾಡಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

"ಮೇಘಾಲಯದಲ್ಲಿ ಬಿಜೆಪಿ ಪ್ರಮುಖ ರಾಜಕೀಯ ಶಕ್ತಿಯಾಗಿ ಹೊರಹೊಮ್ಮಲಿದೆ. ತ್ರಿಪುರಾದಲ್ಲಿ ನಾವು ಬಹುಮತದಿಂದ ಅಧಿಕಾರವನ್ನು ಉಳಿಸಿಕೊಳ್ಳುತ್ತೇವೆ ಮತ್ತು ನಾಗಾಲ್ಯಾಂಡ್‌ನಲ್ಲಿ ನಾವು ಮತ್ತೆ ಎನ್‌ಡಿಪಿಪಿಯೊಂದಿಗೆ ಸರ್ಕಾರ ರಚಿಸುತ್ತೇವೆ" ಎಂದು ಹಿಮಂತ ಬಿಸ್ವಾ ಶರ್ಮಾ ತಿಳಿಸಿದ್ದಾರೆ.

47 ಸ್ಥಾನಗಳಲ್ಲಿ ಎಡಪಕ್ಷಗಳು ಕಣಕ್ಕೆ

47 ಸ್ಥಾನಗಳಲ್ಲಿ ಎಡಪಕ್ಷಗಳು ಕಣಕ್ಕೆ

ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 55 ಸ್ಥಾನಗಳಲ್ಲಿ ಮತ್ತು ಅದರ ಮಿತ್ರಪಕ್ಷ ಆರು ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ. ಸಿಪಿಎಂ, ಫಾರ್ವರ್ಡ್ ಬ್ಲಾಕ್, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ) ಮತ್ತು ಕ್ರಾಂತಿಕಾರಿ ಸಮಾಜವಾದಿ ಪಕ್ಷ (ಆರ್‌ಎಸ್‌ಪಿ) ಒಳಗೊಂಡಿರುವ ಎಡಪಕ್ಷಗಳು 47 ಸ್ಥಾನಗಳಲ್ಲಿ ಮತ್ತು ಕಾಂಗ್ರೆಸ್ 13 ಸ್ಥಾನಗಳಲ್ಲಿ ಸ್ಪರ್ಧಿಸಲಿವೆ. ರಾಜವಂಶಸ್ಥ ಪ್ರದ್ಯೋತ್ ಕಿಶೋರ್ ದೆಬ್ಬರ್ಮಾ ನೇತೃತ್ವದ ತಿಪ್ರಾ ಮೋಥಾ 42 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ.

ಮೇಘಾಲಯ ಮತ್ತು ನಾಗಾಲ್ಯಾಂಡ್‌ನಲ್ಲಿ ಫೆಬ್ರವರಿ 27 ರಂದು ಚುನಾವಣೆ ನಡೆಯಲಿದ್ದು, ಮಾರ್ಚ್ 2 ರಂದು ಮತ ಎಣಿಕೆ ನಡೆಯಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+