ಮುಖವಾಡ ಧರಿಸಿ, ಮೋಂಬತ್ತಿ ಹಿಡಿದು ತಿರುವನಂತಪುರದಲ್ಲೂ ಗೌರಿಗೆ ಗೌರವ

Posted By:
Subscribe to Oneindia Kannada

ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ- ಸದ್ದು ಮಾಡಿದೆ. ಈಚೆಗೆ ಕೇರಳದ ತಿರುವನಂತಪುರದಲ್ಲಿ ವಿಶಿಷ್ಟವಾಗಿ ಗೌರವ ಸಲ್ಲಿಸಿದ್ದಾರೆ. ಗೌರಿ ಲಂಕೇಶ್ ಅವರಂತೆಯೇ ಮುಖವಾಡ ಧರಿಸಿ, ಮೋಂಬತ್ತಿ ಹಿಡಿದು ಪತ್ರಕರ್ತೆಗೆ ತಮ್ಮ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.

ಕೋಲ್ಕತ್ತಾದಲ್ಲಿ ನಡೆದ ಸಿನರ್ಜಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಹಿರಿಯ ನಟಿ- ಬಿಜೆಪಿ ಸಂಸದೆ ಹೇಮಾ ಮಾಲಿನಿ ಪ್ರದರ್ಶನ ನೀಡಿದ್ದಾರೆ. ಪೆಟ್ರೋಲ್ ದರ ಏರಿಕೆಯನ್ನು ಖಂಡಿಸಿ ಯುವ ಕಾಂಗ್ರೆಸ್ ಕಾರ್ಯಕರ್ತರು ಕೇಂದ್ರ ಪೆಟ್ರೋಲಿಯಂ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್ ಅವರ ದೆಹಲಿ ನಿವಾಸದ ಎದುರು ಪ್ರತಿಭಟನೆ ನಡೆಸಿದ್ದಾರೆ.

ಗೌರಿ ಲಂಕೇಶ್ ಹತ್ಯೆ ತನಿಖೆಗೆ ಸ್ಕಾಟ್ಲೆಂಡ್ ಪೊಲೀಸರ ನೆರವು

ಆಸ್ಟ್ರೇಲಿಯಾ ವಿರುದ್ಧ ಮೊದಲ ಏಕದಿನ ಕ್ರಿಕೆಟ್ ಪಂದ್ಯಾವಳಿಗೆ ಚೆನ್ನೈನ ಚಿದಂಬರಂ ಕ್ರೀಡಾಂಗಣದಲ್ಲಿ ಅಭ್ಯಾಸನಿರತ ವಿರಾಟ್ ಕೊಹ್ಲಿ ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದ್ದಾರೆ. ಇನ್ನೊಂದಿಷ್ಟು ಸುದ್ದಿ-ಚಿತ್ರ ಇಲ್ಲಿವೆ. ಇವು ಪಿಟಿಐ ಸುದ್ದಿ ಸಂಸ್ಥೆಯ ಫೋಟೋಗಳು. ಕೆಲವು ಮಾನವೀಯ ಅಂತಃಕರಣ ಕಲುಕುವ ಚಿತ್ರಗಳು ಸಹ ಇವೆ.

ಅವುಗಳ ಪೈಕಿ ರೋಹಿಂಗ್ಯಾ ಮುಸ್ಲಿಮರ ವಲಸೆ, ಗುರುಗ್ರಾಮದ ರಯಾನ್ ಶಾಲೆಯಲ್ಲಿ ಸಾವಿಗೀಡಾದ ವಿದ್ಯಾರ್ಥಿಯ ತಾಯಿಗೆ ಹರಿಯಾಣದ ಮುಖ್ಯಮಂತ್ರಿ ಸಾಂತ್ವನ ಹೇಳುತ್ತಿರುವುದೂ ಇದೆ.

ಕೇರಳದಲ್ಲೂ ನಾನೂ ಗೌರಿ

ಕೇರಳದಲ್ಲೂ ನಾನೂ ಗೌರಿ

ಕೇರಳದ ತಿರುವನಂತಪುರಂನಲ್ಲಿ ಈಚೆಗೆ ಹತ್ಯೆಗೀಡಾದ ಪತ್ರಕರ್ತೆ ಗೌರಿ ಲಂಕೇಶ್ ಅವರ ಮುಖವಾಡ ಧರಿಸಿ, ಮೋಂಬತ್ತಿ ಹಿಡಿದು ಈಚೆಗೆ ಗೌರವ ಸಲ್ಲಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಹಿರಿಯ ನಟಿ

ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಹಿರಿಯ ನಟಿ

ಕೋಲ್ಕತ್ತಾದಲ್ಲಿ ನಡೆದ ಸಿನರ್ಜಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಹಿರಿಯ ನಟಿ ಹಾಗೂ ಬಿಜೆಪಿ ಸಂಸದೆ ಹೇಮಾ ಮಾಲಿನಿ ಪ್ರದರ್ಶನ ನೀಡಿದರು.

ಮದಗಜಗಳ ಕಾದಾಟ

ಮದಗಜಗಳ ಕಾದಾಟ

ನವದೆಹಲಿಯಲ್ಲಿ ನಡೆದ ಕೆ.ಡಿ.ಜಾಧವ್ ಸ್ಮರಣಾರ್ಥ ಕುಸ್ತಿ ಪಂದ್ಯಾವಳಿಯಲ್ಲಿ ಭಾರತೀಯ ಕುಸ್ತಿಪಟು ಸಂಗ್ರಾಮ್ ಸಿಂಗ್ ಹಾಗೂ ಅಮೆರಿಕದ ಕುಸ್ತಿಪಟು ಕೆವಿನ್ ರಾಡ್ ಫೋರ್ಡ್ ಕಾದಾಡಿದರು.

ಪೆಟ್ರೋಲ್ ದರ ಏರಿಕೆಗೆ ಆಕ್ರೋಶ

ಪೆಟ್ರೋಲ್ ದರ ಏರಿಕೆಗೆ ಆಕ್ರೋಶ

ನಿರಂತರವಾಗಿ ಪೆಟ್ರೋಲ್ ದರ ಏರಿಕೆ ಆಗುತ್ತಿರುವುದನ್ನು ವಿರೋಧಿಸಿ ಯುವ ಕಾಂಗ್ರೆಸ್ ನ ಪ್ರತಿಭಟನಾ ನಿರತರು ಕೇಂದ್ರ ಪೆಟ್ರೋಲಿಯಂ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್ ದೆಹಲಿ ನಿವಾಸದ ಎದುರು ಪ್ರತಿಭಟನೆ ನಡೆಸಿದರು.

ವಿರಾಟ್ ಅಭ್ಯಾಸ

ವಿರಾಟ್ ಅಭ್ಯಾಸ

ಆಸ್ಟ್ರೇಲಿಯಾ ಎದುರಿನ ಮೊದಲ ಏಕದಿನ ಪಂದ್ಯಾವಳಿಗಾಗಿ ಚೆನ್ನೈನ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸುತ್ತಿರುವ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಕ್ಯಾಮೆರಾ ಕಣ್ಣಿಗೆ ಕಂಡಿದ್ದು ಹೀಗೆ.

ಮುಖ್ಯಮಂತ್ರಿಯಿಂದ ಸಾಂತ್ವನ

ಮುಖ್ಯಮಂತ್ರಿಯಿಂದ ಸಾಂತ್ವನ

ಗುರುಗ್ರಾಮದ ರಯಾನ್ ಶಾಲೆಯಲ್ಲಿ ಮೃತಪಟ್ಟ ವಿದ್ಯಾರ್ಥಿ ಪ್ರದ್ಯುಮ್ನನ ತಾಯಿಗೆ ಹರಿಯಾಣದ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಸಾಂತ್ವನ ಹೇಳಿದರು.

ಅಪಹರಣದ ಗುಮಾನಿ ಮೇಲೆ ಥಳಿತ

ಅಪಹರಣದ ಗುಮಾನಿ ಮೇಲೆ ಥಳಿತ

ರೋಹಿಂಗ್ಯಾ ಮುಸ್ಲಿಮರು ಈಚೆಗೆ ಮ್ಯಾನ್ಮಾರ್ ನಿಂದ ಬಾಂಗ್ಲಾದೇಶ್ ಗೆ ವಲಸೆ ತೆರಳುವ ವೇಳೆ ವ್ಯಕ್ತಿಯೊಬ್ಬನು ಮಕ್ಕಳನ್ನು ಅಪಹರಿಸುತ್ತಿದ್ದಾನೆ ಎಂಬ ಗುಮಾನಿ ಮೇಲೆ ಸಿಕ್ಕಾಪಟ್ಟೆ ಥಳಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Tribute to Gauri Lankesh in Thiruvananthapuram, Virat Kohli practice in Chennai and other national, inter national events represent through PTI photos.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ