ಸೀಟ್ ಬೆಲ್ಟ್ ಅಲಾರಂ ಬ್ಲಾಕರ್‌ಗಳ ಆನ್‌ಲೈನ್ ಮಾರಾಟ ನಿಲ್ಲಿಸುವಂತೆ ಸಾರಿಗೆ ಸಚಿವಾಲಯ ಪತ್ರ
ಕಾರ್ ಸೀಟ್ ಬೆಲ್ಟ್ ಅಲಾರಂಗಳನ್ನು ನಿಷ್ಕ್ರಿಯಗೊಳಿಸಲು ವಿನ್ಯಾಸಗೊಳಿಸಲಾದ ಸಾಧನಗಳನ್ನು ಮಾರಾಟ ಮಾಡುವುದನ್ನು ನಿಲ್ಲಿಸುವಂತೆ ಇ-ಕಾಮರ್ಸ್ ಕಂಪನಿಗಳನ್ನು ಕೇಳುವಂತೆ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು ಗ್ರಾಹಕ ವ್ಯವಹಾರಗಳ ಸಚಿವಾಲಯಕ್ಕೆ ಪತ್ರ ಬರೆದಿದೆ.
ಈ ವರ್ಷದ ಮೇ ತಿಂಗಳಲ್ಲಿ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ (MoRTH) ದೂರಿನ ಆಧಾರದ ಮೇಲೆ ಕಾರ್ ಸೀಟ್ ಬೆಲ್ಟ್ ಅಲಾರಂಗಳನ್ನು ನಿಷ್ಕ್ರಿಯಗೊಳಿಸಲು ವಿನ್ಯಾಸಗೊಳಿಸಲಾದ ಸಾಧನಗಳನ್ನು ಮಾರಾಟ ಮಾಡುವ ಇ-ಕಾಮರ್ಸ್ ಕಂಪನಿಗಳಿಗೆ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರವು ನೋಟಿಸ್ ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ.
ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ಟಾಟಾ ಸಂಸ್ಥೆಯ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ಅವರ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದು ಭಾನುವಾರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದರು. ಬಳಿಕ ಕಾರು ಹಿಂಬದಿ ಸೀಟ್ ಬೆಲ್ಟ್‌ನ ಮಹತ್ವದ ಬಗ್ಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಪ್ರಸ್ತಾಪಿಸಿದ್ದಾರೆ. ವಾಹನ ತಯಾರಕರು ಹಿಂಬದಿಯ ಸೀಟುಗಳಿಗೂ ಸೀಟ್ ಬೆಲ್ಟ್ ಅಲಾರಾಂ ವ್ಯವಸ್ಥೆಯನ್ನು ಅಳವಡಿಸುವುದನ್ನು ಕಡ್ಡಾಯಗೊಳಿಸಲು ಸರ್ಕಾರ ಯೋಜಿಸುತ್ತಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

ಮಿಸ್ತ್ರಿ ಅವರು ತಮ್ಮ ಸ್ನೇಹಿತ ಜಹಾಂಗೀರ್ ಪಾಂಡೋಲೆ ಅವರೊಂದಿಗೆ ಹಿಂಬದಿಯಲ್ಲಿ ಕುಳಿತಿದ್ದರು, ಅವರು ಸೀಟ್ ಬೆಲ್ಟ್ ಧರಿಸಿರಲಿಲ್ಲ ಮತ್ತು ವೇಗವಾಗಿ ಬಂದ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದಿದ್ದರಿಂದ ಹೆಚ್ಚಿನ ವೇಗದ ಒತ್ತಡ ಹಿಂಬದಿ ಸೀಟ್‌ನಲ್ಲಿ ಕುಳಿತವರಿಗೆ ಆಗಿದೆ. ಇದರಿಂದ ತಲೆಗೆ ಬಲವಾದ ಪೆಟ್ಟು ಬಿದ್ದು ಮಿಸ್ತ್ರಿಯೊಂದಿಗೆ ಅಪಘಾತದಲ್ಲಿ ಪಾಂಡೋಲೆ ಕೂಡ ಸಾವನ್ನಪ್ಪಿದ್ದಾರೆ.
ಪ್ರಸ್ತುತ, ಎಲ್ಲಾ ವಾಹನ ತಯಾರಕರು ಮುಂಭಾಗದ ಆಸನದ ಪ್ರಯಾಣಿಕರಿಗೆ ಸೀಟ್ ಬೆಲ್ಟ್ ಒದಗಿಸುವುದು ಕಡ್ಡಾಯವಾಗಿದೆ. ಕೇಂದ್ರ ಮೋಟಾರು ವಾಹನ ನಿಯಮಗಳ (CMVR) ನಿಯಮ 138 (3) ಅಡಿಯಲ್ಲಿ ಸೀಟ್ ಬೆಲ್ಟ್ ಧರಿಸದ ಹಿಂಬದಿಯ ಪ್ರಯಾಣಿಕರು ರೂ 1,000 ದಂಡವನ್ನು ನೀಡಬೇಕಾಗುತ್ತದೆ.
ಹೆಚ್ಚಿನ ಜನರು ಅದರ ಬಗ್ಗೆ ತಿಳಿದಿರುವುದಿಲ್ಲ ಅಥವಾ ಅದನ್ನು ನಿರ್ಲಕ್ಷಿಸುತ್ತಾರೆ. ಟ್ರಾಫಿಕ್ ಪೊಲೀಸರು ಸಹ ಸೀಟ್ ಬೆಲ್ಟ್ ಧರಿಸದಿದ್ದಕ್ಕಾಗಿ ಹಿಂಭಾಗದ ಸೀಟಿನ ಪ್ರಯಾಣಿಕರಿಗೆ ವಿರಳವಾಗಿ ದಂಡ ವಿಧಿಸುತ್ತಾರೆ.

ಈ ವಾರದ ಆರಂಭದಲ್ಲಿ, ಗಡ್ಕರಿ "ಕಳೆದ ಒಂದು ವರ್ಷದಲ್ಲಿ ನಾನು ನಾಲ್ಕು ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಪ್ರಯಾಣಿಸಿದ್ದೇನೆ. ಅವರ ಎಲ್ಲಾ ಚಾಲಕರು ತಮ್ಮ ಕಾರುಗಳಲ್ಲಿ ಸೀಟ್ ಬೆಲ್ಟ್ ಅಲಾರ್ಮ್‌ಗಳನ್ನು ನಾಶಪಡಿಸುವ ಕ್ಲಿಪ್‌ಗಳನ್ನು ಕಾರುಗಳಲ್ಲಿ ಅಳವಡಿಸಿದ್ದರು" ಎಂದಿದ್ದಾರೆ. ಇತ್ತೀಚಿನ ರಸ್ತೆ ಸಚಿವಾಲಯದ ವರದಿಯ ಪ್ರಕಾರ, 2020 ರಲ್ಲಿ ಸೀಟ್ ಬೆಲ್ಟ್ ಧರಿಸದ ಕಾರಣ ಸಾವನ್ನಪ್ಪಿದ ಮತ್ತು ಗಾಯಗೊಂಡವರ ಸಂಖ್ಯೆ ಕ್ರಮವಾಗಿ 15,146 ಮತ್ತು 39,102 ರಷ್ಟಿದೆ.












Click it and Unblock the Notifications