ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಪರಿವರ್ತನೆಗಳು
ಜಮ್ಮು ಮತ್ತು ಕಾಶ್ಮೀರವನ್ನು 'ಭೂಮಿಯ ಮೇಲಿನ ಸ್ವರ್ಗ' ಎಂದು ಬಣ್ಣಿಸಲಾಗುತ್ತದೆ. ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಕಣಿವೆ ರಾಜ್ಯದಲ್ಲಿ ಗುರುತಿಸಬಹುದಾದ ಪರಿವರ್ತನೆಗಳು ನಡೆದಿವೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ನಾಯಕತ್ವದಲ್ಲಿ ಈ ಪ್ರದೇಶ ಸಾಲು ಸಾಲು ಪರಿವರ್ತನೆಗಳನ್ನು ಕಂಡಿತು, ಇವು ಶಾಂತಿಯನ್ನು ಪುನರ್ ಸ್ಥಾಪನೆ ಮಾಡುವತ್ತ ಸಾಗಲು ಸಹಾಯಕವಾಯಿತು, ಅಭಿವೃದ್ಧಿಯನ್ನು ಪರವಾದ ಕೆಲಸಗಳು ಆದವು, ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯಲಾಯಿತು. ಈ ಬದಲಾವಣೆಗಳು ಜಮ್ಮು ಮತ್ತು ಕಾಶ್ಮೀರದ ಜನರ ದೈನಂದಿನ ಜೀವನದ ಮೇಲೆ ಉತ್ತಮ ಪರಿಣಾಮವನ್ನು ಬೀರಿದವು.

ಜಮ್ಮು & ಕಾಶ್ಮೀರ: ಭೂ ಲೋಕದ ಸ್ವರ್ಗ
ದಶಕಗಳ ಕಾಲ ಜಮ್ಮು ಮತ್ತು ಕಾಶ್ಮೀರದ ನೆಲ ಸಾಂಸ್ಕೃತಿಕ ಶ್ರೀಮಂತಿಕೆ, ಐತಿಹಾಸಿಕ ಮಹತ್ವತಗಳನ್ನು ಸಾರುತ್ತಿತ್ತು. ಆದರೆ ಮತ್ತೆ ದಶಕಗಳ ಕಾಲ ಘರ್ಷಣೆ, ಪ್ರತ್ಯೇಕತಾವಾದ, ಅಸ್ಥಿರತೆಗಳಿಗೆ ಸಾಕ್ಷಿಯಾಯಿತು.
ಪ್ರಧಾನಿ ಮೋದಿ ನಾಯಕತ್ವದಲ್ಲಿ ಬಿಜೆಪಿ ಸರ್ಕಾರ ಜಮ್ಮು ಮತ್ತು ಕಾಶ್ಮೀರವನ್ನು ಮತ್ತೆ ಭೂ ಲೋಕದ ಸ್ವರ್ಗವನ್ನಾಗಿ ಮಾಡುವುದಕ್ಕೆ ಹಲವಾರು ಗಮನಾರ್ಹವಾದ ಬದಲಾವಣೆಗಳನ್ನು ತಂದಿತು.
ಸರ್ಕಾರದ ಮೂಲ ಗುರಿ ಮೂಲ ಸೌಕರ್ಯ ಅಭಿವೃದ್ಧಿ, ಸಂಪರ್ಕ ಉತ್ತಮ ಪಡಿಸುವುದು, ಪ್ರವಾಸೋದ್ಯಮವನ್ನು ಪ್ರಚಾರ ಮಾಡುವುದು ಆಗಿತ್ತು, ಈ ಮೂಲಕ ದೇಶಿಯ ಮತ್ತು ವಿದೇಶಿ ಪ್ರವಾಸಿಗರನ್ನು ಆಕರ್ಷಿಸಿ ಪ್ರವಾಸೋದ್ಯಮ ಪುನಶ್ಚೇತನಗೊಳಿಸಲಾಗಿದೆ.
ಹೊಸ ಹೆದ್ದಾರಿಗಳು, ವಿಮಾನ ನಿಲ್ದಾಣಗಳ ಅಭಿವೃದ್ಧಿ ಮತ್ತು ರೈಲು ಸಂಪರ್ಕ ಪ್ರವಾಸಿಗರು ಕಣಿವೆ ಪ್ರದೇಶಕ್ಕೆ ಪ್ರಯಾಣ ಮಾಡುವುದು ಸುಲಭವಾಗಿಸಿತು. ಈ ಎಲ್ಲಾ ಕ್ರಮಗಳ ಪರಿಣಾಮ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಇದು ಸ್ಥಳೀಯ ಆರ್ಥಿಕತೆಗೆ ಸಹಾಯಕವಾಗಿದೆ ಮತ್ತು ಸಾವಿರಾರು ಜನರ ಜೀವನೋಪಾಯಕ್ಕೆ ಕೊಡುಗೆ ನೀಡಿದೆ.

ಪ್ರಧಾನಿ ಮೋದಿ ಅಭಿವೃದ್ಧಿ ಮತ್ತು ಶಾಂತಿ ಮಂತ್ರ
ಜಮ್ಮು ಮತ್ತು ಕಾಶ್ಮೀರದ ಪರಿವರ್ತನೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮೂಲಮಂತ್ರ ಅಭಿವೃದ್ಧಿ ಮತ್ತು ಶಾಂತಿಯಾಗಿತ್ತು. ಆಗಸ್ಟ್ 2019ರಲ್ಲಿ ಸಂವಿಧಾನದ 370ನೇ ವಿಧಿ ರದ್ದು ಈ ಪ್ರದೇಶದ ಐತಿಹಾಸಿಕ ದಿನವಾಯಿತು. ಈ ನಡೆ ಜಮ್ಮು ಮತ್ತು ಕಾಶ್ಮೀರದಲ್ಲಿ ಹೂಡಿಕೆ, ಆರ್ಥಿಕ ಬೆಳವಣಿಗೆ ಅಭಿವೃದ್ಧಿಗೆ ಬಾಗಿಲುಗಳನ್ನು ತೆರೆಯಿತು. ಜಮ್ಮು ಮತ್ತು ಕಾಶ್ಮೀರದ ಮೂಲೆ ಮೂಲೆಯಲ್ಲಿ ತ್ರಿವರ್ಣಧ್ವಜ ಹಾರಿಸಿದ್ದು ಭಾರತದ ಐಕ್ಯತೆ ಮತ್ತು ಸಮಗ್ರತೆಯ ಸಂಕೇತವಾಯಿತು. ಈ ನಡೆ ಜನರಲ್ಲಿ ಆತ್ಮಗೌರವನ್ನು ಮಾತ್ರ ಹೆಚ್ಚಿಸಲಿಲ್ಲ ವಿಶ್ವಕ್ಕೆ ಗಡಿ ಮತ್ತು ರಾಷ್ಟ್ರೀಯ ಒಗ್ಗಟ್ಟಿನ ವಿಚಾರದಲ್ಲಿ ಭಾರತದ ಬದ್ಧತೆಯ ಕುರಿತು ಸಂದೇಶವನ್ನು ಸಾರಿತು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸರ್ಕಾರ ಜಮ್ಮು ಮತ್ತು ಕಾಶ್ಮೀರದಲ್ಲಿ ಹಲವಾರು ಯೋಜನೆಗಳಿಗೆ ಚಾಲನೆ ನೀಡಿತು. ಇವುಗಳು ಅಲ್ಲಿನ ಜನರ ಜೀವನ ಮಟ್ಟ ಸುಧಾರಿಸುವ ಗುರಿಗಳನ್ನು ಹೊಂದಿದ್ದವು. ಇವುಗಳಲ್ಲಿ ಶಿಕ್ಷಣ ಸಂಸ್ಥೆಗಳ ಸ್ಥಾಪನೆ, ಕೈಗಾರಿಕೆಗಳ ಅಭಿವೃದ್ಧಿ ಮತ್ತು ಆರೋಗ್ಯ ಸೇವೆಗಳನ್ನು ಒದಗಿಸುವುದು ಸೇರಿತ್ತು. ಉದ್ಯೋಗ ಸೃಷ್ಟಿ ಮತ್ತು ಕೌಶಲ್ಯ ತರಬೇತಿ ಯುವಕರು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಅವಕಾಶ ನೀಡಿತು, ಉಗ್ರವಾದದತ್ತ ಅವರು ಸಾಗುವುದನ್ನು ಕಡಿಮೆಮಾಡಿತು.

ಸುಧಾರಿಸಿದ ಕಾನೂನು ಸುವ್ಯವಸ್ಥೆ ಮತ್ತು ಪ್ರವಾಸಿಗರ ಸಂಖ್ಯೆ ಏರಿಕೆ
ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ಆದ ಮಹತ್ತರ ಪರಿವರ್ತನೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸುಧಾರಿಸಿದ್ದು ಪ್ರಮುಖವಾಗಿದೆ. ಉಗ್ರವಾದ, ಭಯೋತ್ಪಾದಕ ದಾಳಿಗಳ ಹಾವಳಿಗೆ ಸಿಲುಕಿದ್ದ ಪ್ರದೇಶ ಹಿಂಸಾಚಾರದಲ್ಲಿ ಗಣನೀಯ ಇಳಿಕೆಯನ್ನು ದಾಖಲಿಸಿತು. ಇದನ್ನು ಸಾಧ್ಯವಾಗಿಸಿದ್ದು, ಸರ್ಕಾರ ರಾಷ್ಟ್ರೀಯ ಭದ್ರತೆ ವಿಚಾರದಲ್ಲಿ ತೆಗೆದುಕೊಂಡ ನಿಲುವು ಮತ್ತು ಸೇನಾ ಪಡೆಗೆ ನೀಡಿದ ಸಹಕಾರ.
ಹೆಚ್ಚೆಚ್ಚು ಭದ್ರತಾ ಪಡೆಗಳ ನಿಯೋಜನೆ ಮತ್ತು ಗುಪ್ತಚರ ವ್ಯವಸ್ಥೆ ಬಲಪಡಿಸಿದ್ದು, ಉಗ್ರರ ಸಂಪರ್ಕ ಜಾಲದ ಮೇಲೆ ಪ್ರಭಾವ ಬೀರಿತು. ಇದು ಪ್ರತ್ಯೇಕತಾವಾದಿ ಚಟುವಟಿಕೆ ಬಿಟ್ಟು ಸ್ಥಿರ ಮತ್ತು ಸುರಕ್ಷಿತ ವಾತಾವರಣ ನಿರ್ಮಾಣ ಮಾಡಿತು. ಭದ್ರತಾ ಪಡೆಗಳ ಹೆಚ್ಚು ನಿಯೋಜನೆ ಸ್ಥಳೀಯರಲ್ಲಿ ಶಾಂತಿಯನ್ನು ಮಾತ್ರ ತರಲಿಲ್ಲ, ಕಣಿವೆ ಪ್ರದೇಶಕ್ಕೆ ಆಗಮಿಸುವ ಪ್ರವಾಸಿಗರಲ್ಲಿ ಭರವಸೆಯನ್ನು ಮೂಡಿಸಿತು.
ಕಣಿವೆಯ ಆರ್ಥಿಕತೆಗೆ ಪ್ರವಾಸೋದ್ಯಮದ ಕೊಡುಗೆಯೇ ಅಪಾರವಾಗಿದೆ. ಇದು ಅಭೂತಪೂರ್ವವಾಗಿ ಪರಿವರ್ತನೆ ಆಯಿತು, ಕಣಿವೆಯ ಪ್ರಕೃತಿ ಸೌಂದರ್ಯ ಸವಿಯಲು ಬರುವವರ ಸಂಖ್ಯೆ ಏರಿಕೆಗೂ ಕಾರಣವಾಯಿತು. ಪ್ರವಾಸಿಗರ ಸಂಖ್ಯೆ ಹೆಚ್ಚಳದಿಂದ ಮೂಲ ಸೌಕರ್ಯ, ಸಾರಿಗೆ, ಕರಕುಶಲತೆಗೆ ಒತ್ತು ನೀಡಿತು, ಸ್ಥಳೀಯ ಆರ್ಥಿಕತೆಗೆ ನೆರವಾಯಿತು.

ಪ್ರಜಾಪ್ರಭುತ್ವದ ಮೌಲ್ಯ ಎತ್ತಿ ಹಿಡಿದ ಸ್ಥಳೀಯ ಸಂಸ್ಥೆ ಚುನಾವಣೆಗಳು
ಪ್ರಜಾಪ್ರಭುತ್ವದ ಮೌಲ್ಯಗಳ ಬಗ್ಗೆ ಜನರು ಹೇಗೆ ಬದ್ಧತೆ ಹೊಂದಿದ್ದಾರೆ? ಎಂಬುದಕ್ಕೆ ಜಮ್ಮು ಮತ್ತು ಕಾಶ್ಮೀರದಲ್ಲಿ ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆ ಸಾಕ್ಷಿಯಾಯಿತು. ಹಲವಾರು ವರ್ಷಗಳ ರಾಜಕೀಯ ಅಸ್ಥಿರತೆ ಬಳಿಕ ನಡೆದ ಚುನಾವಣೆಯಲ್ಲಿ ಅತಿ ಹೆಚ್ಚು ಮತದಾನವಾಯಿತು, ಪ್ರಜಾಪ್ರಭುತ್ವದ ಬಗ್ಗೆ ಜನರ ಪ್ರೀತಿಯನ್ನು ಸಾರಿತು. ಯಶಸ್ವಿಯಾಗಿ ಚುನಾವಣೆಗಳನ್ನು ನಡೆಸಿದ್ದು ಸಹ ಬಿಜೆಪಿ ಸರ್ಕಾರದ ಬಹುಮುಖ್ಯವಾದ ಸಾಧನೆಯಾಗಿದೆ.
ಈ ಮೂಲಕ ಜನರು ತಮ್ಮ ಧ್ವನಿಯನ್ನು ದಾಖಲಿಸಿದರು ಮತ್ತು ಅತಿ ಹೆಚ್ಚಿನ ಮತದಾನ ಪ್ರಮಾಣ ಪ್ರಜಾಪ್ರಭುತ್ವದ ಪ್ರಕ್ರಿಯೆಯಲ್ಲಿ ಜನರು ಪಾಲ್ಗೊಳ್ಳಲು ಉತ್ಸುಕರಾಗಿದ್ದಾರೆ ಎಂಬುದನ್ನು ತೋರಿಸಿತು. ಸ್ಥಳೀಯ ನಾಯಕರು ಸ್ಥಳೀಯ ಸಮಸ್ಯೆಗಳ ಬಗ್ಗೆ ಚರ್ಚಿಸಲು ಅವಕಾಶ ನೀಡಿತು, ತಮ್ಮ ಸಮುದಾಯದ ಅಭಿವೃದ್ಧಿಗೆ ಕೊಡುಗೆಯನ್ನು ನೀಡಲು ವೇದಿಕೆ ಕಲ್ಪಿಸಿತು. ಬಹುಕಾಲದ ಅಸ್ಥಿರತೆ ಬಳಿಕ ಅಧಿಕಾರ ವಿಕೇಂದ್ರೀಕರಣ ಕಣಿವೆಯಲ್ಲಿ ಮಹತ್ತರ ಪಾತ್ರವಹಿಸಿತು.
ಅಂತಿಮ ಷರಾ
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಆಡಳಿತದಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಕೆಲವೇ ದಿನಗಳಲ್ಲಿ ಎಲ್ಲವೂ ಬದಲಾಗಲಿಲ್ಲ. ಅಭಿವೃದ್ಧಿ ಯೋಜನೆಗಳು, ಭದ್ರತೆ ಹಚ್ಚಳ, ಪ್ರಜಾಪ್ರಭುತ್ವ ಮೌಲ್ಯಗಳ ಸಹಕಾರದಿಂದ 'ಭೂ ಲೋಕದ ಸ್ವರ್ಗ' ಎಂಬ ಹೆಸರನ್ನು ಉಳಿಸುಕೊಳ್ಳುವತ್ತ ಜಮ್ಮು ಕಾಶ್ಮೀರ ಸಾಗಿತು. ಭವಿಷ್ಯದಲ್ಲಿಯೂ ಅಭಿವೃದ್ಧಿ, ಶಾಂತಿಯ ಜೊತೆ ಮುಂದೆ ಹೆಜ್ಜೆ ಹಾಕಲು ಇವುಗಳು ಸಹಕಾರಿಯಾಗಿವೆ.












Click it and Unblock the Notifications