ಆಂಧ್ರದಲ್ಲಿ ರೈಲು ದುರಂತ : ನಾಲ್ವರು ಸಾವು, 40 ಮಂದಿಗೆ ಗಾಯ
ಆಂಧ್ರಪ್ರದೇಶದ ವಿಜಯನಗರ ಜಿಲ್ಲೆಯಲ್ಲಿ ಭಾನುವಾರ ರೈಲು ಹಳಿ ತಪ್ಪಿದ ಪರಿಣಾಮ ಎರಡು ರೈಲುಗಳ ನಡುವೆ ಡಿಕ್ಕಿ ಸಂಭವಿಸಿ ನಾಲ್ವರು ಪ್ರಯಾಣಿಕರು ಮೃತಪಟ್ಟು 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಆಂಧ್ರದ ವಿಜಯನಗರ ಜಿಲ್ಲೆಯ ಕೋತವಲಸ ಮಂಡಲದ ಅಲಮಂಡ-ಕಂಠಕಪಲ್ಲಿ ಎಂಬಲ್ಲಿ ರೈಲು ಅಪಘಾತ ಸಂಭವಿಸಿದೆ. ವಿಶಾಖಪಟ್ಟಣಂ-ರಾಯಗಡ ಪ್ಯಾಸೆಂಜರ್ ರೈಲು ಹಳಿತಪ್ಪಿದೆ. ರಾಯಗಡ ಪ್ಯಾಸೆಂಜರ್ ರೈಲು ಓವರ್ ಹೆಡ್ ಕೇಬಲ್ ಕಟ್ ಆದ ಕಾರಣ ಹಳಿಗಳ ಮೇಲೆ ಸಿಲುಕಿಕೊಂಡಿತ್ತು, ಅದೇ ಸಮಯಕ್ಕೆ ಬಂದ ಪಲಾಸ ಎಕ್ಸ್‌ಪ್ರೆಸ್ ರಾಯಗಡ ರೈಲಿಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ರಾಯಗಢ ಪ್ಯಾಸೆಂಜರ್ ರೈಲಿನ ಮೂರು ಬೋಗಿಗಳು ಹಳಿತಪ್ಪಿದ್ದು ಮಾತ್ರವಲ್ಲದೇ ಭಾರಿ ಹಾನಿ ಸಂಭವಿಸಿದೆ. ಈ ಅವಘಡದಲ್ಲಿ ಕನಿಷ್ಠ ಮೂವರು ಸಾವನ್ನಪ್ಪಿದ್ದು, ಹಲವು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಮಾಹಿತಿ ಪಡೆದ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಆಗಮಿಸಿ ಪರಿಹಾರ ಕ್ರಮ ಕೈಗೊಂಡಿದ್ದಾರೆ. ಆದರೆ ಘಟನಾ ಸ್ಥಳದಲ್ಲಿ ವಿದ್ಯುತ್ ಇಲ್ಲದ ಕಾರಣ ರಕ್ಷಣಾ ಕಾರ್ಯದಲ್ಲಿ ತೀವ್ರ ವ್ಯತ್ಯಯ ಉಂಟಾಗಿದೆ. ಮತ್ತೊಂದೆಡೆ. ಬೋಗಿಗಳಲ್ಲಿ ಪ್ರಯಾಣಿಕರ ಸಂಖ್ಯೆ ಜಾಸ್ತಿ ಇರುವುದರಿಂದ. ಹಲವರು ಗಂಭೀರವಾಗಿ ಗಾಯಗೊಂಡಿರುವ ಆತಂಕ ಇದೆ.
ಎಲ್ಲಾ ಗಾಯಾಳುಗಳನ್ನು ಆದಷ್ಟು ಬೇಗ ಆಸ್ಪತ್ರೆಗಳಿಗೆ ಸ್ಥಳಾಂತರಿಸಲು ಪ್ರಯತ್ನಿಸಲಾಗುತ್ತಿದೆ. ಗಾಯಾಳುಗಳನ್ನು ವಿಜಯನಗರದ ಸರ್ಕಾರಿ ಆಸ್ಪತ್ರೆ ಮತ್ತು ವಿಶಾಖಪಟ್ಟಣಂ ಕೆಜಿಎಚ್‌ಗೆ ರವಾನಿಸಲಾಗಿದೆ. ಮೊಬೈಲ್ ಫೋನ್‌ಗಳ ಬೆಳಕಿನಲ್ಲಿ ಪರಿಹಾರ ಕಾರ್ಯಗಳು ನಡೆಯುತ್ತಿವೆ.
ಸಹಾಯವಾಣಿ ಸಂಖ್ಯೆ.
08912746330
08912744619
8106053051
8106053052,
8500041670
8500041671












Click it and Unblock the Notifications