ಕೇರಳದ ವಯನಾಡಿನಲ್ಲಿ ಭೀಕರ ಅಪಘಾತ: ಜೀಪ್ ಕಮರಿಗೆ ಬಿದ್ದು 9 ಮಂದಿ ಸಾವು

ಕೇರಳದ ವಯನಾಡು ಜಿಲ್ಲೆಯ ಮನಂತವಾಡಿಯಲ್ಲಿ ಶುಕ್ರವಾರ ಜೀಪ್ 25 ಮೀಟರ್ ಆಳದ ಕಮರಿಗೆ ಉರುಳಿ ಬಿದ್ದ ಪರಿಣಾಮ ಒಂಬತ್ತು ಮಂದಿ ಸಾವನ್ನಪ್ಪಿದ್ದು, ಚಾಲಕ ಸೇರಿದಂತೆ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ವಾಹನವು ತೋಟದಿಂದ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದಾಗ ತಲಪ್ಪುಳದ ಕಣ್ಣೋತ್ಮಾಲಾ ಬಳಿ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಮೃತಪಟ್ಟವರೆಲ್ಲರೂ ವಯನಾಡು ಜಿಲ್ಲೆಯವರು ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.

tragic-incident-in-wayanad

ಗಾಯಗೊಂಡವರಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆ. ಅಪಘಾತದ ಸಮಯದಲ್ಲಿ ಚಾಲಕ ಸೇರಿದಂತೆ ಒಟ್ಟು 13 ಜನರು ಜೀಪ್‌ನಲ್ಲಿ ಇದ್ದರು ಎಂದು ವರದಿಯಾಗಿದೆ. ಪ್ರಯಾಣಿಕರಲ್ಲಿ ಹೆಚ್ಚಿನವರು ಮಹಿಳೆಯರು ಎಂದು ಮೂಲಗಳು ತಿಳಿಸಿವೆ.

ತೋಟದ ಕೆಲಸಕ್ಕೆ ಹೋದವರ ಸಾವು

ಗಾಯಾಳುಗಳು ವಯನಾಡ್ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಾವಿಂಜಲ್ ಪಂಚಾಯತ್ ಅಧ್ಯಕ್ಷೆ ಎಲ್ಸಿ ಜಾಯ್ ಮತ್ತು ಜಿಲ್ಲಾ ವೈದ್ಯಾಧಿಕಾರಿ 9 ಮಂದಿ ಸಾವನ್ನಪ್ಪಿರುವುದನ್ನು ಖಚಿತಪಡಿಸಿದ್ದಾರೆ.

ತೋಟದ ಕಾರ್ಮಿಕರು ಕಂಬಮಾಳದ ತೋಟದಲ್ಲಿ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದರು ಎಂದು ಮನೋರಮಾ ನ್ಯೂಸ್ ವರದಿ ಮಾಡಿದೆ. ದೀಪು ಟೀ ಟ್ರೇಡಿಂಗ್ ಕಂಪನಿಗೆ ಸೇರಿದ ಜೀಪ್ ಕನ್ನಮಾಳದ ಹೇರ್‌ಪಿನ್ ರಸ್ತೆಯ ಮೋರಿಗೆ ಡಿಕ್ಕಿ ಹೊಡೆದು ನಿಯಂತ್ರಣ ತಪ್ಪಿ ಬಂಡೆಗಳಿಂದ ತುಂಬಿದ ಕಮರಿಗೆ ಬಿದ್ದಿದೆ.

ಮಾರಣಾಂತಿಕ ತಿರುವುಗಳನ್ನು ಹೊಂದಿದ್ದು, ಈ ರಸ್ತೆಯಲ್ಲಿ ಅಪಘಾತ ಪ್ರಮಾಣ ಹೆಚ್ಚಾಗಿದೆ. ಅಪಘಾತದಲ್ಲಿ ಜೀಪು ಸಂಪೂರ್ಣ ಜಖಂಗೊಂಡಿದೆ. ಅರಣ್ಯ ಸಚಿವ ಎ ಕೆ ಶಸೀಂದ್ರನ್ ಅವರು ಅಪಘಾತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸಂತಾಪ ವ್ಯಕ್ತಪಡಿಸಿದ ರಾಹುಲ್ ಗಾಂಧಿ

ವಯನಾಡ್ ಸಂಸದ ರಾಹುಲ್ ಗಾಂಧಿ ಭೀಕರ ಅಪಘಾತಕ್ಕೆ ಸಂಬಂಧಪಟ್ಟಂತೆ ಟ್ವೀಟ್ ಮಾಡಿದ್ದು ಸಂತಾಪ ವ್ಯಕ್ತಪಡಿಸಿದ್ದಾರೆ. "ವಯನಾಡಿನ ಮಾನಂತವಾಡಿಯಲ್ಲಿ ಹಲವಾರು ಟೀ ತೋಟದ ಕಾರ್ಮಿಕರ ಜೀವವನ್ನು ತೆಗೆದುಕೊಂಡ ಭೀಕರ ಜೀಪ್ ಅಪಘಾತದಿಂದ ತೀವ್ರ ದುಃಖವಾಗಿದೆ. ಜಿಲ್ಲಾ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ, ಶೀಘ್ರದಲ್ಲೆ ಘಟನೆಗೆ ಸ್ಪಂದಿಸಲಿದ್ದಾರೆ. ನನ್ನ ಆಲೋಚನೆಗಳು ದುಃಖಿತ ಕುಟುಂಬಗಳೊಂದಿಗೆ ಇವೆ. ಗಾಯಗೊಂಡವರು ಶೀಘ್ರ ಗುಣಮುಖರಾಗಲಿ" ಎಂದು ಅವರು ಹಾರೈಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+