ಖಿನ್ನತೆ, ಕೊಲೆ, ಆತ್ಮಹತ್ಯೆ: ಡಾಕ್ಟರ್ ಕುಟುಂಬದ ನಾಲ್ವರು ಸದಸ್ಯರ ಸಾವು- ಬೆಚ್ಚಿಬಿದ್ದ ಮಹಾನಗರ
ಅಭಿವೃದ್ಧಿ ವೇಗವಾಗಿ ಸಾಗುತ್ತಿರುವಂತೆ ಸಮಸ್ಯೆಗಳು ಕೂಡ ಹೆಚ್ಚಾಗುತ್ತಿವೆ. ನೋಡೋಕೆ ಆರೋಗ್ಯವಂತೆ ಕಾಣುವ ವ್ಯಕ್ತಿ ಕೂಡ ಮಾನಸಿಕವಾಗಿ ಜಠಿಲ ಸಮಸ್ಯೆಗಳನ್ನು ಹೊಂದಿರಬಹುದು. ಖಿನ್ನತೆಗೆ ಒಳಗಾಗಬಹುದು.
ಖಿನ್ನತೆ, ಮಾನಸಿಕ ಒತ್ತಡ ಮನುಷ್ಯನಲ್ಲಿ ಆತ್ಮಹತ್ಯೆಯ ಆಲೋಚನೆಗಳನ್ನು ತರುತ್ತವೆ. ಈಗ ಇಂತಹದ್ದೇ ಘಟನೆಯೊಂದು ಮಹಾನಗರದಲ್ಲಿ ನಡೆದುಹೋಗಿದೆ. ಅದೂ ಕೂಡ ಡಾಕ್ಟರ್ ಒಬ್ಬರ ಮನೆಯಲ್ಲಿ ಎನ್ನುವುದು ಮತ್ತಷ್ಟು ಆತಂಕ ಹೆಚ್ಚಿಸುವ ಅಂಶವಾಗಿದೆ.

ರೈಲ್ವೆಸ್‌ನಲ್ಲಿ ಕೆಲಸ ಮಾಡುತ್ತಿದ್ದ ವೈದ್ಯರೊಬ್ಬರ ತಮ್ಮ ಪತ್ನಿ ಮತ್ತು ಇಬ್ಬರು ಕೊಲೆ ಮಾಡಿದ್ದಲ್ಲದೆ, ತಾವೂ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಘಟನೆಯನ್ನು ನೋಡಿ ಇಡೀ ನಗರ ಆಘಾತಗೊಂಡಿದೆ. ಕೌಟುಂಬಿಕ ಸಮಸ್ಯೆ, ಖಿನ್ನತೆಯೇ ಘಟನೆಗೆ ಕಾರಣ ಎಂದು ಹೇಳಲಾಗಿದೆ.
ರಾಯ್‌ಬರೇಲಿಯಲ್ಲಿ ನಡೆದ ಘಟನೆ
ರೈಲ್ವೇಸ್‌ನಲ್ಲಿ ಕೆಲಸ ಮಾಡುತ್ತಿದ್ದ ವೈದ್ಯರೊಬ್ಬರು ತಮ್ಮ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಕೊಲೆ ಮಾಡಿ ನಂತರ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಯ್ ಬರೇಲಿಯ ರೈಲ್ವೇಸ್ ಕಾಲೋನಿಯಲ್ಲಿ ನಡೆದಿದೆ. ರೈಲ್ವೇಯಲ್ಲಿ ವೈದ್ಯಕೀಯ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ನೇತ್ರ ತಜ್ಞ ಡಾ.ಅರುಣ್ ಕುಮಾರ್ ಅವರನ್ನು ರಾಯ್ ಬರೇಲಿಯಲ್ಲಿರುವ ಮಾಡರ್ನ್ ರೈಲ್ ಕೋಚ್ ಫ್ಯಾಕ್ಟರಿಯಲ್ಲಿ ಕೆಲಸಕ್ಕೆ ನಿಯೋಜಿಸಲಾಗಿತ್ತು. ಅವರು ಖಿನ್ನತೆಯಿಂದ ಬಳಲುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಮಿರ್ಜಾಪುರದ ನಿವಾಸಿಯಾಗಿರುವ ಡಾ. ಅರುಣ್ ಕುಮಾರ್ ತಮ್ಮ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ರಾಯ್ ಬರೇಲಿಯ ರೈಲ್ವೇ ಕ್ವಾರ್ಟರ್ಸ್‌ನಲ್ಲಿ ವಾಸವಾಗಿದ್ದರು. ಭಾನುವಾರ ಕೊನೆಯದಾಗಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು, ಇನ್ನೆರಡು ದಿನಗಳು ಅವರ ಬಗ್ಗೆ ಯಾವುದೇ ಸುಳಿವು ಸಿಗದೇ ಇದ್ದಾಗ ವೈದ್ಯರ ಸಹೋದ್ಯೋಗಿಗಳು ಅವರ ಮನೆಗೆ ಹೋಗಿದ್ದಾರೆ. ಬೆಲ್ ಮಾಡಿದ್ದಲ್ಲದೆ ಬಾಗಿಲು ಬಡಿದರೂ ಯಾವುದೇ ಪ್ರತಿಕ್ರಿಯೆ ಬಾರದೆ ಇದ್ದಾಗ, ಅವರು ಬಾಗಿಲು ಒಡೆದು ನೋಡಿದ್ದಾರೆ, ಒಳಗೆ ವೈದ್ಯ, ಅವರ ಪತ್ನಿ ಅರ್ಚನಾ, ಮಗಳು ಆದಿವಾ (12) ಮತ್ತು ಮಗ ಆರವ್ (4) ಶವಗಳನ್ನು ಕಂಡು ಶಾಕ್ ಆಗಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ ಆಘಾತಕಾರಿ ಮಾಹಿತಿ
ಅಪರಾಧ ನಡೆದ ಸ್ಥಳದಲ್ಲಿ ಸುತ್ತಿಗೆ, ರಕ್ತದ ಕಲೆಗಳು ಮತ್ತು ಡ್ರಗ್ ಇಂಜೆಕ್ಷನ್‌ಗಳು ಪತ್ತೆಯಾಗಿವೆ. ಪೊಲೀಸರ ಪ್ರಕಾರ, ವೈದ್ಯ ಅರುಣ್ ಕುಮಾರ್ ತಮ್ಮ ಹೆಂಡತಿ ಮತ್ತು ಮಕ್ಕಳಿಗೆ ಪ್ರಜ್ಞೆ ತಪ್ಪಿಸಲು ಇಂಜೆಕ್ಷನ್ ನೀಡಿದ್ದಾರೆ. ನಂತರ ಅವರ ತಲೆಗೆ ಹೊಡೆದು ಕೊಲೆ ಮಾಡಿದ್ದಾರೆ.
ನಂತರ ತಮ್ಮ ಕೈ ಕೊಯ್ದುಕೊಳ್ಳಲು ಅರುಣ್ ಪ್ರಯತ್ನಿಸಿದ್ದು, ಅದು ಫಲಕಾರಿಯಾಗದಿದ್ದಾಗ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ. ಮರಣೋತ್ತರ ಪರೀಕ್ಷೆ ಬಳಿಕ ಹೆಚ್ಚಿನ ವಿಚಾರ ತಿಳಿಯುವುದಾಗಿ ರಾಯ್ ಬರೇಲಿ ಎಸ್ಪಿ ಅಲೋಕ್ ಪ್ರಿಯದರ್ಶಿ ಹೇಳಿದ್ದಾರೆ.
ಈ ಘಟನೆ ನಗರವನ್ನು ಬೆಚ್ಚಿ ಬೀಳಿಸಿದೆ. ಕೌಟುಂಬಿಕ ಸಮಸ್ಯೆ ಇದಕ್ಕೆ ಕಾರಣ ಇರಬಹುದು ಎಂದು ನೆರೆ ಹೊರೆಯವರು ಶಂಕಿಸಿದ್ದಾರೆ.
ಘಟನೆಯ ನಂತರ ಲಕ್ನೋ ವಿಭಾಗದ ಐಜಿ ತರುಣ್ ಗೌಬಾ ಸ್ಥಳಕ್ಕೆ ಧಾವಿಸಿದ್ದಾರೆ. ಕೆಲವು ನೆರೆಹೊರೆಯವರು ಮತ್ತು ಸಹೋದ್ಯೋಗಿಗಳಿಂದ ಡಾ. ಅರುಣ್ ಕುಮಾರ್ ದಾಳಿಗೆ ಒಳಗಾಗಿದ್ದರು ಎಂಬ ಮಾಹಿತಿ ಸಿಕ್ಕಿದೆ. "ಅವರು ಆಗಾಗ್ಗೆ ಜನರ ಜೊತೆ ಕೋಪದಿಂದ ನಡೆದುಕೊಳ್ಳುತ್ತಿದ್ದರು ಮಾಡಿಕೊಳ್ಳುತ್ತಾರೆ ಎಂದು ನಾವು ಕೇಳಿದ್ದೇವೆ. ನಾವು ಎಲ್ಲಾ ರೀತಿಯಿಂದ ಪರಿಶೀಲಿಸುತ್ತಿದ್ದೇವೆ" ಎಂದು ಹೇಳಿದರು
(ಆತ್ಮಹತ್ಯೆ ಎಲ್ಲಾ ಸಮಸ್ಯೆಗಳಿಗೆ ಪರಿಹಾರವಲ್ಲ. ನಿಮಗೆ ಬೆಂಬಲ ಬೇಕಾದರೆ ಅಥವಾ ಯಾರೊಂದಿಗಾದರೂ ನಿಮ್ಮ ಸಮಸ್ಯೆಗಳನ್ನು ಹಂಚಿಕೊಳ್ಳಬೇಕಿದ್ದರೇ ದಯವಿಟ್ಟು ನಿಮ್ಮ ಹತ್ತಿರದ ಮಾನಸಿಕ ಆರೋಗ್ಯ ತಜ್ಞರನ್ನು ಸಂಪರ್ಕಿಸಿ. ಸಹಾಯವಾಣಿಗಳು: ಆಸ್ರ: 022 2754 6669; ಸ್ನೇಹ ಇಂಡಿಯಾ ಫೌಂಡೇಶನ್: +914424640050 ಮತ್ತು ಸಂಜೀವಿನಿ: 011-24311918, ರೋಶ್ನಿ ಫೌಂಡೇಶನ್: ಸಂಪರ್ಕ: 040-66202001, 040-66202000, ಒಂದು ಜೀವನ: ಸಂಪರ್ಕ ಸಂಖ್ಯೆ: 78930 78930, SEVA: ಸಂಪರ್ಕ ಸಂಖ್ಯೆ: 09441778290 )












Click it and Unblock the Notifications