Haryana Assembly Election 2024: ಒಟ್ಟು 1,031 ಸ್ಪರ್ಧೆ, ಕೈ-ಕಮಲಕ್ಕೆ ಬಂಡಾಯದ ಬಿಸಿ
ನವದೆಹಲಿ, ಸೆಪ್ಟಂಬರ್ 17: ಹರಿಯಾಣದಲ್ಲಿ ವಿಧಾನಸಭೆ ಚುನಾವಣೆ ಅಖಾಡ ರಂಗೇರಿದೆ. ರಾಜಕೀಯ ಪಕ್ಷಗಳು ಅಧಿಕಾರ ಹಿಡಿಯಲು ಹವಣಿಸುತ್ತಿವೆ. ಈ ನಿಟ್ಟಿನಲ್ಲಿ ನಾಮಪತ್ರ ಹಿಂಪಡೆಯುವ ಕೊನೆಯ ದಿನವಾದ ಸೋಮವಾರ ಸೆ.16ರಂದು ಒಂದಷ್ಟು ಹೈಡ್ರಾಮ ನಡೆಯಿತು. ಕೊನೆಗೆ ರಾಜ್ಯದ ಒಟ್ಟು 90 ಕ್ಷೇತ್ರಗಳಿಂದ 1,031 ಅಂತಿಮವಾಗಿ ಕಣದಲ್ಲಿ ಉಳಿದರು.
ಹೌದು, ಸೋಮವಾರ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ತಮ್ಮ ನಾಯಕ ಬಂಡಾಯ ಶಮನ ಮಾಡಲು ಹರಸಾಹಸ ಪಟ್ಟರು. ಕೆಲವರು ಹಿರಿಯ ಮುಖಂಡರ ಮಾತು ಕೇಳಿ ನಾಮಪತ್ರ ಹಿಂಪಡೆದಿದ್ದು ಕಂಡು ಬಂತು. ಟಿಕೆಟ್ ಆಕಾಂಕ್ಷಿಗಳ ಬಂಡಾಯವೆದ್ದ ಪರಿಣಾಮ ಒಟ್ಟು 90 ವಿಧಾನಸಭಾ ಕ್ಷೇತ್ರಗಳಿಂದ 1,559 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು.

ಅದರಲ್ಲಿ ಪರಿಶೀಲನೆ ನಂತರ ತಪ್ಪುಗಳು, ಇನ್ನಿತರ ಕಾರಣಕ್ಕಾಗಿ 1,221 ನಾಮಪತ್ರಗಳಿಗೆ ಮಾನತ್ಯ ದೊರೆಯಿತು. ಇದರಲ್ಲಲಿ ಒಟ್ಟು 190 ಮಂದಿ ಅಭ್ಯರ್ಥಿಗಳು ತಮ್ಮ ನಾಮಪತ್ರ ಹಿಂಪಡೆದಿದ್ದಾರೆ. ಹೀಗಾಗಿ ಅಖಾಡದಲ್ಲಿ 1,031 ಅಭ್ಯರ್ಥಿಗಳು ಸ್ಪರ್ಧೆ ಖಚಿತವಾಗಿದೆ. ಈ ಸ್ಪರ್ಧಾಳುಗಳ ಪ್ರಮಾಣ ಕಳೆದ ವರ್ಷಕ್ಕಿಂತ (38 ಅಭ್ಯರ್ಥಿಗಳ) ಕಡಿಮೆ ಎಂದು ರಾಜ್ಯ ಚುನಾವಣೆ ಆಯೋಗದ ಮೂಲಗಳು ತಿಳಿಸಿವೆ.
ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಬಂಡಾಯದ ಬಿಸಿ
ಇನ್ನೂ ಎಲ್ಲ ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಆಗುತ್ತಿದ್ದಂತೆ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಎರಡು ಸಹ ಬಂಡಾಯ ಬಿಸಿ ಎದುರಿಸಿವೆ. ಟಿಕೆಟ್ ಸಿಗದ ಪಕ್ಷದ ಅಭ್ಯರ್ಥಿಗಳು ಪಕ್ಷೇತರ ನಿಂತು ತಲೆ ನೋವು ತಂದೊಡ್ಡಿದರು. ಅವರನ್ನು ಮನವೊಲಿಸುವಲ್ಲಿ ಪಕ್ಷದ ನಾಯಕರು ನಾಮಪತ್ರ ಹಿಂಪಡೆಯುವ ಕೊನೆ ದಿನ ಹರಸಾಹಪಟ್ಟರು.
ಒಟ್ಟು ಕಾಂಗ್ರೆಸ್‌ನ ಅವಿರತ ಶ್ರಮದಿಂದ 72 ಸ್ಥಾನಗಳಲ್ಲಿ ಪಕ್ಷೇತರ ಅಭ್ಯರ್ಥಿಗಳ ನಾಮಪತ್ರ ಹಿಂಪಡೆಯುವಂತೆ ಮಾಡುವಲ್ಲಿ ಯಶಸ್ವಿಯಾಗಿದೆ. ಇತ್ತ ಬಿಜೆಪಿಯ ಇತರ ಸ್ಥಾನದ ಭರವಸೆಯಿಂದಾಗಿ ಎಂಟು ಅಭ್ಯರ್ಥಿಗಳು ನಾಮಪತ್ರ ವಾಪಾಸ್ ಪಡೆದಿದ್ದಾರೆ.

ಬಿಜೆಪಿ, ಕಾಂಗ್ರೆಸ್ ಬಂಡಾಯ ನಾಯಕರೆಷ್ಟು?
ಸದ್ಯ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಆಡಳಿತ ಪಕ್ಷ ಬಿಜೆಪಿಯ 19 ನಾಯಕರು ಬಂಡಾಯವೆದ್ದು, ಪಕ್ಷದ ವಿರುದ್ಧವೇ ಕಣಕ್ಕಿಳಿದರು. ಇತ್ತ ಕಾಂಗ್ರೆಸ್‌ನ 29 ಬಂಡಾಯ ನಾಯಕರು ಒಟ್ಟು 20 ಸ್ಥಾನಗಳಲ್ಲಿ ಸ್ಪರ್ಧಿಸಿರುವುದು ಖಚಿತವಾಗಿದೆ. ಇದಕ್ಕೆ ಆಯಾ ಪಕ್ಷದೊಳಗಿನ ಆಂತರಿಕ ಕಾರಣಗಳು ಎಂದು ವಿಶ್ಲೇಷಿಸಲಾಗಿದೆ. ಬಿಜೆಪಿಯಲ್ಲಿ ಹೊಸದಾಗಿ ಪಕ್ಷ ಸೇರಿದವರಿಗೆ ಮಣೆ ಹಾಕಲಾಗಿದೆ. ಬಿಜೆಪಿಯಲ್ಲಿ ಬಂಡಾಯ ಎದ್ದವರ ಪೈಕಿ ಭಾರತ ಶ್ರೀಮಂತ ಮಹಿಳೆ ಸಾವಿತ್ರ ಜಿಂದಾಲ್ ಸಹ ಒಬ್ಬರು.
ಅಕ್ಟೋಬರ್ 08ರ ಬೆಳಗ್ಗೆ ಮತ ಎಣಿಕೆ ಆರಂಭ
ಇನ್ನೂ ಸೋಮವಾರ ಮಹೇಂದ್ರ ಸಿಂಗ್ ನಾಮಪತ್ರವನ್ನು ಹಿಂಪಡೆದರು. ಮುಂದಿನ ಅಕ್ಟೋಬರ್ ತಿಂಗಳ 5ರಂದು ಹರಿಯಾಣ ವಿಧಾನಸಭೆ ಚುನಾವಣೆಗೆ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಬಳಿಕ ಅಕ್ಟೋಬರ್ 08ರಂದು ಬೆಳಗ್ಗೆಯಿಂದಲೇ ಮತ ಎಣಿಕೆ ನಡೆಯಲಿದೆ. ಅಂದು ಸಂಜೆಯೇ ಹರಿಯಾಣ ರಾಜಕೀಯ ಭವಿಷ್ಯ ನಿರ್ಧಾರವಾಗಲಿದೆ. ಸದ್ಯ ಎಲ್ಲ ರಾಜಕೀಯ ಪಕ್ಷಗಳು ಭರ್ಜರಿ ಪ್ರಚಾರ ಕಾರ್ಯದಲ್ಲಿ ತೊಡಗಿವೆ.












Click it and Unblock the Notifications