Year Ender 2025: ಈ ವರ್ಷ ಹೆಚ್ಚು ಹುಡುಕಾಡಿದ ಟಾಪ್ 10 AI ಟೂಲ್‌ಗಳ ಪಟ್ಟಿ: ಗೂಗಲ್
Top 10 AI Tool Serch in 2025: ಭಾರತ ಮಾತ್ರವಲ್ಲದೇ ವಿಶ್ವಾದಾದ್ಯಂತ ಕೃತಕ ಬುದ್ಧಿಮತ್ತೆ (AI) ದೈನಂದಿನ ಜೀವನದ ಭಾಗವೇ ಆಗಿಬಿಟ್ಟಿದೆ. ಅದರ ಮೇಲೆಯೇ ಭವಿಷ್ಯ ನಿರ್ಧಾರವಾಗುವಷ್ಠರ ಮಟ್ಟಿಗೆ ಭೀರಿದೆ. ವಿದ್ಯಾರ್ಥಿಗಳಿಂದ ಹಿಡಿದು ಎಲ್ಲ ವೃತ್ತಿಪರರವರೆಗೂ ಅದು ತಲುಪುತ್ತಿದೆ. 2025ರಲ್ಲಿ ಬಳಕೆದಾರರ ಜೀವನದಲ್ಲಿ AI ವಹಿಸಿದ ಪಾತ್ರವನ್ನು ವಿಶ್ಲೇಷಣೆ ಮಾಡಲಾಗಿದೆ. ಭಾರತದಲ್ಲಿ ಈ ವರ್ಷ ಏನೆಲ್ಲ AI ಹುಡುಕಾಟ ಮಾಡಿದ್ದಾರೆ, ಹಚ್ಚು ಶೋಧಿಸಿ ಅಗ್ರಹ ಎಐ ಪಟ್ಟಿಯನ್ನು Google ಬಿಡುಗಡೆ ಮಾಡಿದೆ.
ಪ್ರಸಕ್ತ ವರ್ಷ AI ತಂತ್ರಜ್ಞಾನಕ್ಕೂ ಮಾನವನ ಜೀವನಕ್ಕೂ ಸಂಯೋಜಿಸಲ್ಪಟ್ಟಿದೆ. ಲಕ್ಷಾಂತರ ಜನರು ಉತ್ಪಾದಕತೆ, ಸೃಜನಶೀಲತೆ ಮತ್ತು ಕಲಿಕೆಗೆ ಪೂರಕವಾಗಿ ಎಐ ನಿಂತಿದೆ. ಅಲ್ಲದೇ ಲಕ್ಷಾಂತರ ಜನರ ಉದ್ಯೋಗ ಕಸಿದ ಕೀರ್ತಿ ಸಹ ಅದಕ್ಕಿದೆ. ಭಾರತವು AI ಅನ್ನು ಕೇವಲ ತಾಂತ್ರಿಕ ಸಾಧನವಾಗಿ ಮಾತ್ರವಲ್ಲದೆ ಸಾಂಸ್ಕೃತಿಕ ವಿದ್ಯಮಾನವಾಗಿಯೂ ಸ್ವೀಕರಿಸಿದೆ. ಜನರಿಗೆ ಇವತ್ತಿಗೂ ಚಾಟ್‌ಬಾಟ್‌ಗಳಿಂದ ಆರ್ಟ್ ಜನರೇಟ್ ವರೆಗೂ ಎಲ್ಲವನ್ನು ಅನ್ವೇಷಿಸಿದ್ದಾರೆ. ನಿರಂತರವಾಗಿ AI ಬಗೆಗಿನ ಶೋಧನೆ, ನಿತ್ಯ ಹುಟುಕಾಟ ಹೆಚ್ಚಾಗುತ್ತಲೇ ಸಾಗಿದೆ. ಇದು ತಂತ್ರಜ್ಞಾನ ಬಳಕೆ, ಪ್ರೋತ್ಸಾಹವನ್ನು ಉತ್ತೇಜಿಸಿದೆ. ಈ ನಟ್ಟಿನಲ್ಲಿ ಗೂಗಲ್ 2025 ರಲ್ಲಿ ಹುಡುಕಾಡಲ್ಪಟ್ಟ ಟ್ರೆಂಡಿಂಗ್ ಎಐ ಮಾಹಿತಿ ಪ್ರಕಟಿಸಿದೆ.
ಅಗ್ರಸ್ಥಾನದಲ್ಲಿ ಟ್ರೆಂಡಿಂಗ್ ಗೂಗಲ್ ಜೆಮಿನೈ ಎಐ
ಬಳಕೆದಾರರು ಹೆಚ್ಚಾಗಿ ಹುಡುಕಿದ ಎಐ ಟೂಲ್‌ಗಳಲ್ಲಿ Google Gemini AI ಅಗ್ರಸ್ಥಾನದಲ್ಲಿದೆ. ಈ ವರ್ಷ ಎಐ ಟೂಲ್‌ಗಳ ಬಳಕೆಯಲ್ಲಿ ನಕ್ಷತ್ರದಂತೆ ಮಿಂಚಿದ ಪ್ರಮುಖ ಎಐ ಟೂಲ್‌ಗಳಲ್ಲಿ ಜಿಮಿನೈ ಮೊದಲಿದೆ. ಪ್ರಶ್ನೆಗಳಿಂದ ಹಿಡಿದು Google Workspace ಮತ್ತು Android ನ AI ಮೋಡ್‌ನಂತಹ ಉತ್ಪಾದಕತೆ ಸೇರಿ ಅನೇಕ ವಿಷಯಗಳನ್ನು ಇದರಲ್ಲಿ ಶೋಧಿಸಲಾಗಿದೆ. ಇದರ ಬಹುಭಾಷಾ ಸಾಮರ್ಥ್ಯವನ್ನು ಬಳಕೆದಾರರು ಮೆಚ್ಚಿಕೊಂಡಿದ್ದಾರೆ.
ಹಲವು ಭಾಷೆಗಳಲ್ಲಿ ನಿಖರ ಮಾಹಿತಿ ಕ್ರೂಢೀಕರಿಸಿ ನೀಡಿದ್ದು ಬಳಕೆದಾರರಿಗೆ ಇಷ್ಟವಾಗಿದೆ. ದಾಖಲೆಗಳ ಸಾರಾಂಶ, ಇಮೇಲ್ ಡ್ರಾಫ್ಟಿಂಗ್ ಮತ್ತು ಪ್ರವಾಸ ಯೋಜನೆ ಹೀಗೆ ಅನೇಕ ವೈಶಿಷ್ಟ್ಯಗಳಿಂದ ಅದು ಜನರಿಗೆ ಹತ್ತಿರವಾಯಿತು. ದೈನಂದಿನ ಬಳಕೆಗೆ ಗೂಗಲ್ ಜೆಮಿನೈ ಹತ್ತಿರವಾಯಿತು.
AI ಫೋಟೋ ಜನರೇಟ್
ಬಳಕೆದಾರರು ಜೆಮಿನಿ AI ಫೋಟೋ ಅನ್ನು ಹೆಚ್ಚಿನ ಪ್ರಮಾಣದಲ್ಲಿ ಹುಡುಕಾಡಿದ್ದಾರೆ, ಬಳಕೆ ಸಹ ಮಾಡಿದ್ದಾರೆ. ಸರಳ ಪ್ರಾಂಪ್ಟ್ ಮೂಲಕ ಆಜ್ಞಾಪಿಸಿ ಫೋಟೋಗಳನ್ನು ತಮ್ಮಿಷ್ಟದಂತೆ ಬದಲಾಯಿಸಿಕೊಳ್ಳಲು ಅವಕಾಶ ನೀಡಿತ್ತು. ಫೋಟೋಗಳ ಮರುಸೃಷ್ಟಿಯು ಸಾಕಷ್ಟು ವೈರಲ್ ಆಯಿತು. ಅದೆಷ್ಟೋ ಜನರ ಸಹಿ ನೆನಪಿನ ರೀತಿಯಲ್ಲಿ ಉಳಿದಿವೆ. ರೆಟ್ರೋ ಸ್ಟೈಲ್, ಹಳೆ ಜಮಾನದ ಫೋಟೋ, ಸಾಂಪ್ರದಾಯಿಕ ಉಡುಗೆ, ಬ್ಲಾಕ್ ಆಂಟ್ ವೈಟ್ ಹೀಗೆ ವಿವಿಧ ಮಾದರಿಯಲ್ಲಿ ಫೋಟೋ ಜನರೇಟ್ ಮಾಡಿ ಆನಂದಿಸಿದರು. ಜನ ಕ್ರಿಯೇಟಿವ್ ಆಗಿ ಈ ಪರಿಕರ ಬಳಸಿದರೆ, ಸಂಪಾದಿಸಿದರು.

ಪಟ್ಟಿಯಲ್ಲಿ ಸ್ಥಾನ ಪಡೆದ ಗ್ರೋಕ್ AI, ಪರ್ಪ್ಲೆಕ್ಸಿಟಿ ಮತ್ತು ಡೀಪ್‌ಸೀಕ್
ಗೂಗಲ್ ಜೆಮಿನೈ ಜೊತೆಗೆ ಹುಡುಕಾಡಲ್ಪಟ್ಟ ಇತರ ಎಐ ಟೂಲ್‌ಗಳು ಅಥವಾ ಹೆಚ್ಚು ಬಳಕೆಯಾದ ಎಐ ಗಳೆಂದರೆ ಅದು ಎಕ್ಸ್ ನ ಗ್ರೋಕ್ ಎಐ, ಪರ್ಪ್ಲೆಕ್ಸಿಟಿ ಹಾಗೂ ಡೀಪ್ ಸೀಕ್ ಎಐಗಳು. ಇವುಗಳನ್ನು ಜನರು ಸಾಕಷ್ಟು ಹುಡುಕಾಡಿದ್ದಾರೆ. ದೇಶದಲ್ಲಿ ಈ ಎಐಗಳ ಮೇಲೂ ಬಳಕೆದಾರರು ಸಾಕಷ್ಟು ಆಸಕ್ತಿ ಹೊಂದಿದ್ದಾರೆ. ಚೀನಾ ಮೂಲದ AI ಸ್ಟಾರ್ಟ್ಅಪ್ ಆದ DeepSeek ಪ್ರಶಂಸಿಸಲ್ಪಟ್ಟಿದೆ. ಎಐ ಟೂಲ್‌ಗಳ ಪೈಕಿ ಇದು ಸಹ ಜಾಗತಿಕ ಸ್ಪರ್ಧಿಯಾಗಿದೆ.
ಇನ್ನೂ ಪರ್ಪ್ಲೆಕ್ಸಿಟಿ AI ನೈಜ-ಸಮಯದ, ವಿಶ್ವಾಸಾರ್ಹ ಮಾಹಿತಿಯೊಂದಿಗೆ ಇಷ್ಟವಾಗುತ್ತಿದೆ. ಬಳಕೆದಾರರು ವಿಶ್ವಾಸಾರ್ಹತೆ ಮೂಡಿಸುವಲ್ಲಿ ಯಶಸ್ವಿಯಾಗಿದೆ. ಇದರ ಬಳಕೆ, ಇದರೊಂದಿಗಿನ ಹುಡುಕಾಟವು ಈ ವರ್ಷ ಅಪಾರ ಏರಿಕೆ ಕಂಡಿದೆ. ಬಳಕೆದಾರರ ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ.
ಟ್ರೆಂಡಿಗ್ ಆಯ್ತು ಘಿಬ್ಲಿ ಎಐ ಆರ್ಟ್
AI ನಿಂದ ಘಿಬ್ಲಿ ಫೋಟೋಗಳನ್ನು ರಚಿಸಲಾಯಿತು. ಇನ್‌ಸ್ಟಾಗ್ರಾಮ್ ಬಳಕೆದಾರರನ್ನು ಆಕರ್ಷಿಸಿತು. ಒಂದು ಹೊಸ ಬಗೆಯ ಟ್ರೆಂಡಿಂಗ್ ಹುಟ್ಟು ಹಾಕಿದ ಎಐ ಟೂಲ್ ಆಗಿದೆ. ಹೆಚ್ಚು ವೇಗವಾಗಿ ಪ್ರವರ್ಧಿಸಲ್ಪಟ್ಟ ಎಐ ಪರಿಕರವಾಗಿ ಹೊರ ಹೊರಮ್ಮಿತು. ತಂತ್ರಜ್ಞಾನದೊಂದಿಗೆ ಬಳಕೆದಾರರು ಫೋಟೋ ಸಂಪಾದಿಸಿ, ಹೊಸದಾಗಿ ವಿವಿಧ ಮಾದರಿಯಲ್ಲಿ ಜನರೇಟ್ ಮಾಡಿದರು. Google AI ಸ್ಟುಡಿಯೋದಲ್ಲಿ ಆಸಕ್ತಿ ಬೆಳೆದಂತೆ ಡೆವಲಪರ್‌ಗಳು ಸಹ AI ಗೆ ಕೊಡುಗೆ ನೀಡಿದರು.
2025ರ Googleನ AI ಹುಡುಕಾಟ ಟಾಪ್ 10 ಪಟ್ಟಿ
* ಗೂಗಲ್ ಜೆಮಿನಿ
* ಜೆಮಿನಿ AI ಫೋಟೋ
* ಗ್ರೋಕ್ ಎಐ
* ಡೀಪ್‌ಸೀಕ್
* ಪರ್ಪ್ಲೆಕ್ಸಿಟಿ
* ಗೂಗಲ್ AI ಸ್ಟುಡಿಯೋ
* ಫ್ಲೋ
* ಘಿಬ್ಲಿ ಸ್ಟೈಲ್ ಇಮೇಜ್ ಜನರೇಟರ್
* ChatGPT
* ChatGPT ಘಿಬ್ಲಿ ಆರ್ಟ್
-
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ












Click it and Unblock the Notifications