ಅತಿ ಹೆಚ್ಚು ಚಳಿ ಇರುವ ದೇಶದ 10 ಪ್ರದೇಶಗಳು
ಬೆಂಗಳೂರು, ನವೆಂಬರ್ 23: ಮಳೆಗಾಲ ಮುಗಿದು ಚಳಿಗಾಲ ಆರಂಭವಾಗಿದೆ. ಮೊದಲು ಜಮ್ಮು ಕಾಶ್ಮೀರದಲ್ಲಿ ಹಿಮಪಾತ ಆರಂಭವಾಗಿತ್ತು. ಇದೀಗ ಒಂದೊಂದೇ ರಾಜ್ಯದಲ್ಲಿ ಚಳಿ ಆವರಿಸಿಕೊಳ್ಳಲು ಆರಂಭವಾಗಿದೆ.
ಗರಿಷ್ಠ ತಾಪಮಾನ ಉಷ್ಣಾಂಶ ದಿನದಿಂದ ದಿನಕ್ಕೆ ಹೋದಂತೆ ಕಡಿಮೆಯಾಗುತ್ತಿದೆ. ತಂಪಾದ ವಾತಾವರಣ ನಿರ್ಮಾಣವಾಗುತ್ತಿದೆ.
ಮಧ್ಯಪ್ರದೇಶದ ಗ್ವಾಲಿಯರ್ ಅತ್ಯಂತ ಚಳಿ ಇರುವ ಪ್ರದೇಶವಾಗಿದೆ. ರಾತ್ರಿ ಹೊತ್ತು 13.4 ಡಿಗ್ರಿ ಸೆಲ್ಸಿಯಸ್ ನಷ್ಟು ತಾಪಮಾನವಿರಲಿದೆ.ಇನ್ನು ತಮಿಳುನಾಡಿನಲ್ಲಿ ಮಳೆ ಆರಂಭವಾಗಿದೆ ಎಂದು ಸ್ಕೈಮೆಟ್ ವರದಿ ಮಾಡಿದೆ.

ಕರ್ನಾಟಕದ ಕೆಲವು ಪ್ರದೇಶಗಳಲ್ಲೂ ಮೋಡಕವಿದ ವಾತೌರಣ ಮುಂದುವರೆದಿದ್ದು, ಸಂಜೆಯವರೆಗೆ ಉರಿ ಬಿಸಿಲು ಆರು ಗಂಟೆಯ ಬಳಿಕ ವಾತಾವರಣ ತಂಪಾಗಿ ರಾತ್ರಿ ಚಳಿ ಆರಂಭವಾಗಿದೆ.
ಹಾಗಾದರೆ ಎಲ್ಲೆಲ್ಲಿ ಎಷ್ಟು ಚಳಿ ಇದೆ ಎನ್ನುವುದನ್ನು ನೋಡೋಣ
1)ಗ್ವಾಲಿಯರ್-ಮಧ್ಯಪ್ರದೇಶ-13.4 ಡಿಗ್ರಿ ಸೆಲ್ಸಿಯಸ್ ತಾಪಮಾನ
2)ಅಂಬಿಕಾಪುರ-ಛತ್ತೀಸ್‌ಗಢ-13.6 ಡಿಗ್ರಿ ಸೆಲ್ಸಿಯಸ್
3)ಬರೇಲಿ-ಉತ್ತರ ಪ್ರದೇಶ-13.6 ಡಿಗ್ರಿ ಸೆಲ್ಸಿಯಸ್
4)ರಾಂಚಿ-ಜಾರ್ಖಂಡ್-14.0 ಡಿಗ್ರಿ ಸೆಲ್ಸಿಯಸ್
5)ಪಟಿಯಾಲಾ-ಪಂಜಾಬ್-14.0 ಡಿಗ್ರಿ ಸೆಲ್ಸಿಯಸ್
6)ಸತ್ನಾ-ಮಧ್ಯಪ್ರದೇಶ-14.0 ಡಿಗ್ರಿ ಸೆಲ್ಸಿಯಸ್
7)ಅಮೃತಸರ-ಪಂಜಾಬ್-14.2 ಡಿಗ್ರಿ ಸೆಲ್ಸಿಯಸ್
8)ಹಿಸಾರ್-ಹರ್ಯಾಣ-14.2 ಡಿಗ್ರಿ ಸೆಲ್ಸಿಯಸ್
9) ಲಕ್ನೋ-ಉತ್ತರಪ್ರದೇಶ-14.4 ಡಿಗ್ರಿ ಸೆಲ್ಸಿಯಸ್
10)ಅಂಬಾಲ-ಹರ್ಯಾಣ-14.8 ಡಿಗ್ರಿ ಸೆಲ್ಸಿಯಸ್ ತಾಪಮಾನವಿದೆ.












Click it and Unblock the Notifications