ಗಗನಕ್ಕೆ ಏರುತ್ತಿದೆ ಟೊಮೆಟೋ ಬೆಲೆ: ಕೇಂದ್ರದ ಈ ಪ್ಲ್ಯಾನ್ ವರ್ಕ್ ಆಗುತ್ತಾ?

ನವದೆಹಲಿ, ಜುಲೈ. 12: ದೇಶದಲ್ಲಿ ಟೊಮೆಟೊ ದರಗಳು ಪ್ರತಿದಿನ ಗಗನಕ್ಕೆ ಏರುತ್ತಲೇ ಇದೆ. ವಾರಗಳಿಂದ 100 ರೂಪಾಯಿಗಳ ಗಡಿ ದಾಟುತ್ತಿದ್ದು, ಸದ್ಯಕ್ಕೆ 200 ರೂಪಾಯಿಗಳ ವರೆಗೂ ಬಂದು ನಿಂತಿದೆ. ಹೀಗಾಗಿಯೇ ಕೇಂದ್ರ ಸರ್ಕಾರ ದೇಶದ ಅಡುಗೆಮನೆಗಳ ಮುಖ್ಯ ಉತ್ಪನ್ನವಾದ ಟೊಮೆಟೋ ಬೆಲೆಯನ್ನು ಪರಿಶೀಲಿಸಲು ಕ್ರಮಗಳನ್ನು ಪ್ರಕಟಿಸಿದೆ.

ಗ್ರಾಹಕ ವ್ಯವಹಾರಗಳ ಇಲಾಖೆಯು ಆಂಧ್ರಪ್ರದೇಶ, ಕರ್ನಾಟಕ ಮತ್ತು ಮಹಾರಾಷ್ಟ್ರದಿಂದ ಟೊಮೆಟೊಗಳನ್ನು ಖರೀದಿಸಿ ಮತ್ತು ಟೊಮೆಟೊ ದರದಲ್ಲಿ ಅತಿ ಹೆ್ಚಚು ದರವನ್ನು ದಾಖಲಿಸಿರುವ ಪ್ರದೇಶಗಳಲ್ಲಿ ವಿತರಿಸಲು ರಾಷ್ಟ್ರೀಯ ಕೃಷಿ ಸಹಕಾರಿ ಮಾರಾಟ ಒಕ್ಕೂಟ ಮತ್ತು ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟಕ್ಕೆ ಸೂಚಿಸಿದೆ. ಈ ಹೊಸ ಸ್ಟಾಕ್‌ಗಳು ಶುಕ್ರವಾರದ ವೇಳೆಗೆ ದೆಹಲಿ -ಎನ್‌ಸಿಆರ್‌ನಲ್ಲಿ ಗ್ರಾಹಕರಿಗೆ ರಿಯಾಯಿತಿ ದರದಲ್ಲಿ ಲಭ್ಯವಿರುತ್ತವೆ ಎಂದು ಸರ್ಕಾರದ ಹೇಳಿಕೆ ತಿಳಿಸಿದೆ.

tomato rates in the country

ಕಳೆದ ಒಂದು ತಿಂಗಳಿನಿಂದ ಚಿಲ್ಲರೆ ಬೆಲೆಯಲ್ಲಿನ ಸಂಪೂರ್ಣ ಏರಿಕೆಯ ಆಧಾರದ ಮೇಲೆ ಈ ತಾಜಾ ಸ್ಟಾಕ್‌ಗಳನ್ನು ಬಿಡುಗಡೆ ಮಾಡುವ ಕೇಂದ್ರಗಳನ್ನು ಗುರುತಿಸಲಾಗಿದೆ ಎಂದು ಸರ್ಕಾರ ಹೇಳಿದೆ. ಈ ಪ್ರಕ್ರಿಯೆಯಲ್ಲಿ ಬಳಕೆಯ ಪ್ರಮಾಣವನ್ನು ಸಹ ಪರಿಗಣಿಸಲಾಗಿದೆ.

ಟೊಮೆಟೊವನ್ನು ಭಾರತದ ಪ್ರತಿಯೊಂದು ರಾಜ್ಯದಲ್ಲಿಯೂ ಉತ್ಪಾದಿಸಲಾಗುತ್ತದೆ. ಆದರೆ ದಕ್ಷಿಣ ಮತ್ತು ಪಶ್ಚಿಮ ಪ್ರದೇಶಗಳು ದೇಶದ ಒಟ್ಟು ಉತ್ಪಾದನೆಯ ಸುಮಾರು 60 ಪ್ರತಿಶತವನ್ನು ಹೊಂದಿವೆ. ಅವರ ಹೆಚ್ಚುವರಿ ಉತ್ಪನ್ನವನ್ನು ನಂತರ ಭಾರತದ ಇತರ ಭಾಗಗಳಿಗೆ ನಿರಂತರ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಬಳಸಲಾಗುತ್ತದೆ.

"ಟೊಮೆಟೋ ಉತ್ಪಾದನಾ ಋತುಗಳು ಪ್ರದೇಶಗಳಾದ್ಯಂತ ವಿಭಿನ್ನವಾಗಿವೆ. ಗರಿಷ್ಠ ಕೊಯ್ಲು ಅವಧಿಯು ಡಿಸೆಂಬರ್‌ನಿಂದ ಫೆಬ್ರವರಿವರೆಗೆ ನಡೆಯುತ್ತದೆ. ಜುಲೈ - ಆಗಸ್ಟ್ ಮತ್ತು ಅಕ್ಟೋಬರ್ - ನವೆಂಬರ್ ಅವಧಿಗಳು ಸಾಮಾನ್ಯವಾಗಿ ಟೊಮ್ಯಾಟೊ ಉತ್ಪಾದನೆಯ ತಿಂಗಳುಗಳು" ಎಂದು ಸರ್ಕಾರದ ಹೇಳಿಕೆ ತಿಳಿಸಿದೆ.

tomato rates in the country

ಈ ಅವಧಿಯಲ್ಲಿನ ಬೆಲೆ ಏರಿಕೆಯನ್ನು ವಿವರಿಸುತ್ತಾ, "ಜುಲೈ ಮಾನ್ಸೂನ್ ಋತುವಿನೊಂದಿಗೆ ಸೇರಿಕೊಳ್ಳುತ್ತದೆ. ವಿತರಣೆಗೆ ಸಂಬಂಧಿಸಿದ ಮತ್ತಷ್ಟು ಸವಾಲುಗಳನ್ನು ಮತ್ತು ಹೆಚ್ಚಿದ ಸಾರಿಗೆ ನಷ್ಟಗಳು ಬೆಲೆ ಏರಿಕೆಗೆ ಕಾರಣವಾಗಿದೆ. ನಾಟಿ ಮಾಡುವ ಮತ್ತು ಕೊಯ್ಲು ಮಾಡುವ ಋತುಗಳ ಚಕ್ರ ಮತ್ತು ಪ್ರದೇಶಗಳಾದ್ಯಂತ ವ್ಯತ್ಯಾಸವು ಪ್ರಾಥಮಿಕವಾಗಿ ಟೊಮೆಟೊದಲ್ಲಿ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ. ಸಾಮಾನ್ಯ ಬೆಲೆಯ ಋತುಮಾನದ ಹೊರತಾಗಿ, ತಾತ್ಕಾಲಿಕ ಪೂರೈಕೆ ಸರಪಳಿ ಅಡಚಣೆ ಮತ್ತು ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಿಂದಾಗಿ ಬೆಳೆ ಹಾನಿ ಇತ್ಯಾದಿಗಳು ಬೆಲೆಗಳಲ್ಲಿ ಹಠಾತ್ ಏರಿಕೆಗೆ ಕಾರಣವಾಗುತ್ತವೆ" ಎಂದಿದೆ.

ಪ್ರಸ್ತುತ ಗುಜರಾತ್, ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶದಿಂದ ಟೊಮೆಟೊ ಪೂರೈಕೆಯಾಗುತ್ತಿದೆ ಎಂದು ಸರ್ಕಾರ ಹೇಳಿದೆ. ದೆಹಲಿ ಮತ್ತು ಹತ್ತಿರದ ನಗರಗಳು ಹಿಮಾಚಲ ಪ್ರದೇಶದಿಂದ ಮತ್ತು ಕರ್ನಾಟಕದಿಂದ ದಾಸ್ತಾನುಗಳನ್ನು ಸ್ವೀಕರಿಸುತ್ತಿವೆ. ಮಹಾರಾಷ್ಟ್ರದಿಂದ ಶೀಘ್ರದಲ್ಲೇ ಹೊಸ ಬೆಳೆ ಬರುವ ನಿರೀಕ್ಷೆಯಿದೆ ಮತ್ತು ಮಧ್ಯಪ್ರದೇಶದ ಆಗಮನವೂ ಪ್ರಾರಂಭವಾಗುವ ನಿರೀಕ್ಷೆಯಿದೆ. ಮುಂದಿನ ದಿನಗಳಲ್ಲಿ ಬೆಲೆಗಳು ಇಳಿಕೆಯಾಗುವ ನಿರೀಕ್ಷೆಯಿದೆ ಎಂದು ಸರ್ಕಾರ ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+