Get Updates
Get notified of breaking news, exclusive insights, and must-see stories!

ಚಿತ್ರಗಳಲ್ಲಿ: ಫಿಕ್ಕಿ ಸಭೆಯಲ್ಲಿ ಕಮಲ್ ಜತೆ ಸಂಸದೆ ರಮ್ಯಾ

ಬೆಂಗಳೂರು, ಅ.30: ನಗರದಲ್ಲಿ 'ಮಾಧ್ಯಮ ಮತ್ತು ಮನರಂಜನೆ' ವಿಷಯ ಕುರಿತ ಎರಡು ದಿನಗಳ ಮಾಧ್ಯಮ ಕಮ್ಮಟ ನಡೆಯಿತು. ಖ್ಯಾತ ನಟ ಹಾಗೂ ಫಿಕ್ಕಿಯ ಮಾಧ್ಯಮ ಮತ್ತು ಮನರಂಜನೆ ವ್ಯಾಪಾರ ಕಮ್ಮಟದ ಮುಖ್ಯಸ್ಥ ಡಾ.ಕಮಲ್ ಹಾಸನ್ ಅವರು ಕಾರ್ಯಕ್ರಮದ ಆಕರ್ಷಣೆಯಾಗಿದ್ದರು.

ಮಂಡ್ಯ ಕ್ಷೇತ್ರ ಸಂಸದೆ ರಮ್ಯಾ ಅವರು ಹಾಗೂ ಹೀಗೂ ಬಿಡುವು ಮಾಡಿಕೊಂಡು ಕಮಲ್ ಹಾಸನ್ ಅವರ ಜತೆ ನಿಂತು ಒಂದು ಫೋಟೊ ಪ್ಲೀಸ್ ಎಂದು ಸ್ಮೈಲ್ ಮಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕನ್ನಡ ಚಲನಚಿತ್ರ ಹಾಗೂ ಮಾಧ್ಯಮ ರಂಗದ ಅನೇಕ ಗಣ್ಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

'ದೇಶದ ಶೇ.60ರಿಂದ 70ರಷ್ಟು ಸಿನಿಮಾಗಳು ತಯಾರು ಆಗುತ್ತಿವೆ. ದಕ್ಷಿಣ ಭಾರತದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಹುಭಾಷಾ ಸಿನಿಮಾಗಳು ನಿರ್ಮಾಣಗೊಳ್ಳುತ್ತಿವೆ. ಈ ಹಿನ್ನೆಲೆಯಲ್ಲಿ ಸಿನಿಮಾ ಉದ್ಯಮದಲ್ಲಿ ಕೌಶಲ್ಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುವ ಅಗತ್ಯವಿದೆಎಂದು ಕಮಲ್ ಹಾಸನ್ ತಮ್ಮ ಭಾಷಣದಲ್ಲಿ ಹೇಳಿದರು.

'ನಮ್ಮಲ್ಲಿ ಚಿತ್ರಕಥೆ ಬರವಣಿಗೆ ಬಗ್ಗೆ ಪ್ರತ್ಯೇಕ ತರಬೇತಿ ಶಾಲೆಗಳನ್ನು ಸ್ಥಾಪಿಸಬೇಕು. ಅಲ್ಲದೆ, ಸಿನಿಮಾ ರಂಗದಲ್ಲಿ ದುಡಿಯಲು ಮುಂದಾಗುವ ತಂತ್ರಜ್ಞರಿಗೂ ವೃತ್ತಿಪರ ತರಬೇತಿ ನೀಡುವ ಕೋರ್ಸ್‌ ಪ್ರಾರಂಭಿಸಬೇಕು. ಖಾಸಗಿ ಮತ್ತು ಸರ್ಕಾರದ ಸಹಭಾಗಿತ್ವದಲ್ಲಿ ಉತ್ತಮ ಚಲನಚಿತ್ರ ನಿರ್ಮಿಸುವುದಕ್ಕೆ ಮುಂದಾಗಬೇಕು' ಎಂದರು

ಉಳಿದಂತೆ, ರಣಜಿ ಕೊನೆ ಇನ್ನಿಂಗ್ಸ್ ಆಡಿದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್, ಚೊಚ್ಚಲ ದ್ವಿಶತಕ ಸಿಡಿಸಿದ ಸಂಜು ಸ್ಯಾಮ್ಸನ್, ಮುಸ್ಲಿಂ ಮಹಿಳೆ ಕೈ ಸೇರಿದ ಕಮಲ, ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ನರೇಂದ್ರ ಮೋದಿ ಅವರ ಮುಖಾಮುಖಿ, ಮುಂದುವರೆದ ಪ್ರಿಯಾಂಕಾ ಗಾಂಧಿ ರಾಯ್ ಬರೇಲಿ ಯಾತ್ರೆ ಇನ್ನಷ್ಟು ಚಿತ್ರಗಳು ಇಲ್ಲಿವೆ ತಪ್ಪದೇ ನೋಡಿ.

ಕಮಲ್ ಜತೆ ಸಂಸದೆ ರಮ್ಯಾ

ಕಮಲ್ ಜತೆ ಸಂಸದೆ ರಮ್ಯಾ

ಬೆಂಗಳೂರಿನಲ್ಲಿ ನಡೆದ ಮಾಧ್ಯಮ ಮತ್ತು ಮನರಂಜನೆ' ವಿಷಯ ಕುರಿತ ಎರಡು ದಿನಗಳ ಕಮ್ಮಟದಲ್ಲಿ ಕಮಲ್ ಜತೆ ಸಂಸದೆ ರಮ್ಯಾ ಹಾಗೂ ಚಿತ್ರರಂಗದ ಇನ್ನಿತರ ಗಣ್ಯರು

ಫಿಕ್ಕಿ ಸಭೆಯಲ್ಲಿ ಕಮಲ್

ಫಿಕ್ಕಿ ಸಭೆಯಲ್ಲಿ ಕಮಲ್

ಬೆಂಗಳೂರಿನಲ್ಲಿ ನಡೆದ ಫಿಕ್ಕಿ ಸಭೆಯಲ್ಲಿ ಕಮಲ್ ಜತೆ ಮುಖ್ಯಮಂತ್ರ್ರಿ ಸಿದ್ದರಾಮಯ್ಯ, ಸಚಿವ ಅಂಬರೀಷ್, ಸಂಸದೆ ರಮ್ಯಾ

ರಣಜಿ ಕೊನೆ ಇನ್ನಿಂಗ್ಸ್

ರಣಜಿ ಕೊನೆ ಇನ್ನಿಂಗ್ಸ್

ಹರ್ಯಾಣ ವಿರುದ್ಧ ರಣಜಿ ಕೊನೆ ಇನ್ನಿಂಗ್ಸ್ ಆಡಿದ ಮಾಸ್ಟರ್ ಬ್ಲಾಸ್ಟರ್ ಮುಂಬೈ ಆಟಗಾರ ಸಚಿನ್ ತೆಂಡೂಲ್ಕರ್ ಅವರಿಗೆ ಇತರೆ ಆಟಗಾರು, ಅಭಿಮಾನಿಗಳಿಂದ ಅಭಿನಂದನೆ

ಅಹಮದಾಬಾದಿನಲ್ಲಿ ಮಿಲನ

ಅಹಮದಾಬಾದಿನಲ್ಲಿ ಮಿಲನ

ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಗುಜರಾತ್ ರಾಜ್ಯಪಾಲೆ ಕಮಲಾ ಬೆನಿವಾಲ್, ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಇನ್ನಿತರ ಗಣ್ಯರ ಜತೆ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಮ್ಯೂಸಿಯಂನಲ್ಲಿ

ಕಾಶ್ಮೀರದಲ್ಲಿ

ಕಾಶ್ಮೀರದಲ್ಲಿ

ಕಾಶ್ಮೀರದಲ್ಲಿ ಹೂ ಕೀಳುತ್ತಿರುವ ಯುವತಿಯರು

ಗುರ್ ಗಾಂವ್ ನಲ್ಲಿ

ಗುರ್ ಗಾಂವ್ ನಲ್ಲಿ

ಸಿಆರ್ ಪಿಎಫ್ ನ ಮಹಿಳಾ ಯೋಧರು 74ನೇ ವಾರ್ಷಿಕೋತ್ಸವ ಸಂದರ್ಭದಲ್ಲಿ ಮಂಗಳವಾರ ನಡೆಸಿದ ಕವಾಯತು

ಪಾಟ್ನದಲ್ಲಿ

ಪಾಟ್ನದಲ್ಲಿ

ಪಾಟ್ನದ ಮಹಿಳಾ ಕಾಲೇಜಿನ ವಾರ್ಷಿಕೋತ್ಸವದ ದೃಶ್ಯ

ಮುಂಬೈನಲ್ಲಿ

ಮುಂಬೈನಲ್ಲಿ

ಬಾಲಿವುಡ್ ನಲ್ಲಿ ಚಿತ್ರಾಂಗದಾ ಸಿಂಗ್ ಅವರು ಫೆಮಿನಾ ಕವರ್ ಪುಟ ಅಲಂಕರಿಸಿದ್ದಾರೆ. PTI Photo by Mitesh Bhuvad

ರಾಯ್ ಬರೇಲಿ

ರಾಯ್ ಬರೇಲಿ

ರಾಯ್ ಬರೇಲಿಯಲ್ಲಿ ಪ್ರಿಯಾಂಕಾ ಗಾಂಧಿ ಸಂಚಾರ ಮುಂದುವರೆದಿದೆ

ಸೂರತ್ ನಲ್ಲಿ

ಸೂರತ್ ನಲ್ಲಿ

ಬಿಜೆಪಿ ಮಹಿಳಾ ಮೋರ್ಚಾದ ಮುಸ್ಲಿಂ ಕಾರ್ಯಕರ್ತರು ಕೈ ಮೇಲೆ ಕಮಲ ಚಿತ್ರಗಳನ್ನು ಮೂಡಿಸಿಕೊಂಡು ಪ್ರದರ್ಶಿಸಿದರು

ಮುಂಬೈನಲ್ಲಿ

ಮುಂಬೈನಲ್ಲಿ

ಪಾಕಿಸ್ತಾನದ ಕವಯತ್ರಿ ಫಾತಿಮಾ ಭುಟ್ಟೋ ಹಾಗೂ ಅಂಕಣಕಾರ್ತಿ ಶೋಭಾ ಡೇ ಅವರು 'The Shadow of the Crescent Moon' ಕೃತಿ ಯ ಜತೆ PTI Photo by Mitesh Bhuvad

ಸಚಿನ್ ಗೆ ವಿದಾಯ

ಸಚಿನ್ ಗೆ ವಿದಾಯ

ರಣಜಿ ಕ್ರಿಕೆಟ್ ಸಚಿನ್ ಅವರಿಗೆ ಹರ್ಯಾಣ ಕ್ರಿಕೆಟರ್ ಗಳಿಂದ ಸೆಲ್ಯೂಟ್

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+