ಚಿತ್ರಸುದ್ದಿ: ಅರೆ! ರಾಹುಲ್ ತಲೆಗೂ ಸುಂದರ ಟೋಪಿ
ಬೆಂಗಳೂರು, ಫೆ.25: ಇತ್ತೀಚೆಗಷ್ಟೆ ಈಶಾನ್ಯ ರಾಜ್ಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ತಲೆ ಮೇಲೆ ಸುಂದರವಾದ ಟೋಪಿ ರಾರಾಜಿಸಿತ್ತು. ಮಂಗಳವಾರ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ತಲೆಯ ಮೇಲೂ ಸುಂದರ ಟೋಪಿ ಕಾಣಿಸಿಕೊಂಡಿದೆ.
ನಾಯಕರು ಜಗತ್ತನ್ನು ಬದಲಾಯಿಸುವುದಿಲ್ಲ. ಜನತೆ ಮಾತ್ರ ಬದಲಾಯಿಸಬಲ್ಲರು. ಅಧಿಕಾರ ಇರಲಿ ಇಲ್ಲದಿರಲಿ ಜನತೆಗಾಗಿ ದುಡಿಯಬೇಕು. ಬೇರೆ ಪಕ್ಷದವರು 60 ವರ್ಷದಿಂದ ಈ ಭಾಗಕ್ಕೆ ನಾವು ಏನೂ ಮಾಡಿಲ್ಲ ಎನ್ನುತ್ತಾರೆ. 60 ತಿಂಗಳಿನಲ್ಲಿ ಪರಿಸ್ಥಿತಿ ಸುಧಾರಿಸುವುದಾಗಿ ಹೇಳುತ್ತಾರೆ. ಎಲ್ಲವೂ ಜನತೆ ಕೈಯಲ್ಲಿದೆ ಎಂದು ರಾಹುಲ್ ತಮ್ಮ ಭಾಷಣದಲ್ಲಿ ಹೇಳಿದರು. ರಾಹುಲ್ ಅವರಿಗೆ ಸಾಂಪ್ರದಾಯಿಕ ಜಾಪಿ ತೊಡಿಸಿ ಸನ್ಮಾನಿಸಲಾಯಿತು.[ಮೋದಿ : ಒಬ್ಬ ವ್ಯಕ್ತಿ, ಒಂದೇ ಮಾತು, ವಿಭಿನ್ನ ಅವತಾರ]
ಉಳಿದಂತೆ, ಚಾಂದಿಪುರದಲ್ಲಿ ಆಕಾಶ್ ಕ್ಷಿಪಣಿ ಮತ್ತೊಮ್ಮೆ ಯಶಸ್ವಿಯಾಗಿ ಪರೀಕ್ಷೆ ನಡೆಸಲಾಗಿದೆ. ಢಾಕಾದಲ್ಲಿ ಏಷ್ಯಾ ಕಪ್ ಆರಂಭ, ರಾಯ್ ಬರೇಲಿಯಲ್ಲಿ ಸೋನಿಯಾ ಗಾಂಧಿ, ಅಮೃತಸರದಲ್ಲಿ ಬಿಎಸ್ ಎಫ್ ಅಧಿಕಾರಿಗಳ ಕೈಗೆ ಸಿಕ್ಕ ಹೆರಾಯಿನ್, ಕಾಶ್ಮೀರದಲ್ಲಿ ನವ ಯೋಧರ ತಯಾರಿ ಮುಂತಾದ ಚಿತ್ರಗಳಿವೆ ತಪ್ಪದೇ ನೋಡಿ...

ಅರೆ! ರಾಹುಲ್ ತಲೆಗೂ ಸುಂದರ ಟೋಪಿ
ಗುವಾಹಟಿ: ರಾಹುಲ್ ಅವರಿಗೆ 'ಮಹಾ ಸಮಾವೇಶ'ದಲ್ಲಿ ಸಾಂಪ್ರದಾಯಿಕ ಅಸ್ಸಾಮಿ ಜಾಪಿ ಟೋಪಿ ತೊಡಿಸಿ ಸನ್ಮಾನಿಸಲಾಯಿತು.

ಗುವಾಹಟಿ 'ಮಹಾ ಸಮಾವೇಶ'ದಲ್ಲಿ ರಾಹುಲ್
ಗುವಾಹಟಿ 'ಮಹಾ ಸಮಾವೇಶ'ದಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ

ಚಾಂದಿಪುರ: ಅಕಾಶ್ ಕ್ಷಿಪಣಿ ಯಶಸ್ವಿ ಪರೀಕ್ಷೆ
ಚಾಂದಿಪುರ: ಅಕಾಶ್ ಕ್ಷಿಪಣಿ ಯಶಸ್ವಿ ಪರೀಕ್ಷೆ ನಡೆಸಲಾಗಿದೆ. ಭೂಮಿಯಿಂದ ಗಗನಕ್ಕೆ ಚಿಮ್ಮಬಲ್ಲ 30 ಕಿ.ಮೀ ದೂರದ ತನಕ ಸಾಗುವ ಸಾಮರ್ಥ್ಯವುಳ್ಳ ಆಕಾಶ್ ಭಾರತೀಯ ಸೇನೆಯ ಪ್ರಮುಖ ಅಸ್ತ್ರ

ಬಿಎಸ್ ಎಫ್ ಅಧಿಕಾರಿಗಳ ಕೈಗೆ ಸಿಕ್ಕ ಹೆರಾಯಿನ್
ಅಮೃತಸರದಲ್ಲಿ ಬಿಎಸ್ ಎಫ್ ಅಧಿಕಾರಿಗಳು ಹಾಗೂ ಯೋಧರು ಭಾರತ-ಪಾಕಿಸ್ತಾನ ಗಡಿ ಭಾಗದಲ್ಲಿ ಅಂತಾರಾಷ್ಟ್ರೀಯ ಕಳ್ಳರಿಂದ ಇತ್ತೀಚೆಗೆ ವಶಪಡಿಸಿಕೊಂಡ ಸುಮಾರು 50 ಕೋಟಿ ರು ಮೌಲ್ಯದ ಹೆರಾಯಿನ್ ಪದರ್ಶಿಸುತ್ತಿದ್ದಾರೆ. PTI Photo by Deepak Sharma

ರಾಯ್ ಬರೇಲಿಯಲ್ಲಿ ಸೋನಿಯಾ ಗಾಂಧಿ
ಸ್ವಕ್ಷೇತ್ರ ರಾಯ್ ಬರೇಲಿಗೆ ಆಗಮಿಸಿದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಸ್ವಾಗತ ಸಿಕ್ಕಿದ್ದು ಹೀಗೆ. ಸೋನಿಯಾ ಅವರು ಎರಡು ದಿನಗಳ ಕಾಲ ಪ್ರವಾಸ ಮಾಡುತ್ತಿದ್ದಾರೆ.

ಮಂಗಳೂರಿನಲ್ಲಿ ಮೋದಿ ರಥ
ಬಿಜೆಪಿ ನಾಯಕ ನಳೀನ್ ಕುಮಾರ್ ಕಟೀಲ್ ಅವರು ಬಿಜೆಪಿಯ ಮನೆ ಮನೆ ಅಭಿಯಾನಕ್ಕಾಗಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಹೆಸರಿನಲ್ಲಿ ಮೋದಿ ರಥ ನಿರ್ಮಿಸಿದ್ದನ್ನು ಟ್ವೀಟ್ ಮಾಡಿದರು.

ಜಮ್ಮು ಮತ್ತು ಕಾಶ್ಮೀರದ ಯುವ ಯೋಧರು
ಜಮ್ಮು ಮತ್ತು ಕಾಶ್ಮೀರದ ಸಶಸ್ತ್ರ ಪಡೆ(JKAP)ಗೆ ಆಯ್ಕೆಯಾಗಿರುವ ಯುವ ಯೋಧರು ಪರೇಡ್ ನಡೆಸುತ್ತಿದ್ದಾರೆ. ಬಾರಮುಲ್ಲಾ ಜಿಲ್ಲೆಯ ಶೀರಿ ತರಬೇತಿ ಕೇಂದ್ರದಲ್ಲಿ ಸೆರೆ ಸಿಕ್ಕ ಚಿತ್ರ (ಚಿತ್ರ: ಐಎಎನ್ಎಸ್)

ಏಷ್ಯಾ ಕಪ್ ಕ್ರಿಕೆಟ್ ಗಾಗಿ ಹೋರಾಟ
ಬಾಂಗ್ಲಾದೇಶದ ಢಾಕಾದಲ್ಲಿ ಆರಂಭಗೊಂಡಿರುವ ಏಷ್ಯಾ ಕಪ್ 2014 ಟೂರ್ನಿಯ ಕಪ್ ನೊಂದಿಗೆ ಎಡದಿಂದ: ಬಾಂಗ್ಲಾದ ಮುಶಾಫಿಕರ್ ರಹೀಂ, ಪಾಕಿಸ್ತಾನದ ಮಿಸ್ಬಾ ಉಲ್ ಹಕ್, ಭಾರತದ ವಿರಾಟ್ ಕೊಹ್ಲಿ, ಅಫ್ಘಾನಿಸ್ತಾನದ ನಾಯಕ ಮಹಮ್ಮದ್ ನಬಿ ಹಾಗೂ ಶ್ರೀಲಂಕಾದ ಏಂಜೆಲೋ ಮ್ಯಾಥ್ಯೂಸ್.












Click it and Unblock the Notifications