ಚಿತ್ರಸುದ್ದಿ :ಪದ್ಮಭೂಷಣ ಕಲಾವಿದೆಗೆ ಅಳ್ವಾಸ್ ಪ್ರಶಸ್ತಿ

ಬೆಂಗಳೂರು, ಡಿ.21: ಮೂಡುಬಿದಿರೆಯ ವಿದ್ಯಾಗಿರಿ ಆವರಣದಲ್ಲಿ ನಡೆದಿರುವ ಆಳ್ವಾಸ್ ವಿರಾಸತ್ ವೇದಿಕೆಯಲ್ಲಿ ಛತ್ತೀಸ್ ಗಡದ ಜನಪ್ರಿಯ ಪಾಂಡ್ವಾನಿ ಸಂಗೀತ ಕಲಾವಿದೆ ಪದ್ಮಶ್ರೀ, ಪದ್ಮಭೂಷಣ ಡಾ.ತೀಜನ್ ಬಾಯಿ ಅವರಿಗೆ 'ಆಳ್ವಾಸ್ ವಿಶ್ವ ವಿರಾಸತ್- 2013' ಪ್ರಶಸ್ತಿ ನೀಡಿ ಗೌರವಿಸಲಾಗಿದೆ. 1 ಲಕ್ಷ ರೂ. ನಗದು, ಸ್ಮರಣಿಕೆ, ಫಲ ಪುಷ್ಪಗಳನ್ನು ನೀಡಿ ಆತ್ಮೀಯವಾಗಿ ಸನ್ಮಾನಿಸಲಾಗಿದೆ.

ಸಮಾರಂಭದಲ್ಲಿ ಮಾತನಾಡಿದ ತೀಜನ್ ಬಾಯಿ, ಅನಕ್ಷರಸ್ಥೆ, ಹಳ್ಳಿಯವಳಾದ ನನಗೆ ಆಳ್ವಾಸ್ ವಿರಾಸತ್ ‌ನಲ್ಲಿ ಗೌರವ ನೀಡಿರುವುದರಿಂದ ಮನ ತುಂಬಿ ಬಂದಿದೆ ಎಂದರು. ಮಹಾಭಾರತ ಕಥಾನಕವನ್ನು ಉಲ್ಲೇಖಿಸುತ್ತಾ ಹಿಂದೆ ಮಹಾಭಾರತದಲ್ಲಿ ದ್ರೌಪದಿ ವಸ್ತ್ರ ಹರಣ ನಡೆದ ಸಂದರ್ಭ ಶ್ರೀಕೃಷ್ಣ ಆಕೆಯ ರಕ್ಷಣೆಗೆ ಬಂದಿದ್ದನಾ ದರೂ, ಕಲಿಯುಗದಲ್ಲಿ ದಿನನಿತ್ಯ ದ್ರೌಪದಿಯರ ಶೀಲ ಹರಣ ನಡೆಯುತ್ತಿದ್ದರೂ ಯಾವ ಶ್ರೀಕೃಷ್ಣನೂ ನೆರವಿಗೆ ಬರುವುದಿಲ್ಲ. ಇದು ನಮ್ಮ ಹೆಣ್ಮಕ್ಕಳ ದುರ್ದೆಸೆ ಎಂದು ವಿಷಾದಿಸಿದರು.

ನನಗೆ ಇಂಗ್ಲಿಷ್ ಬರುವುದಿಲ್ಲ, ಕನ್ನಡ ಗೊತ್ತಿಲ್ಲ. ಹಾಗಿದ್ದರೂ ನಾನು ಹೇಳುವ ಪಾಂಡ್ವಾನಿ ಹಾಡು ಅರ್ಥವಾದರೆ ಅರ್ಥ ಮಾಡಿಕೊಳ್ಳಿ, ಅರ್ಥವಾಗದಿದ್ದರೂ ಅರ್ಥಮಾಡಿಕೊಳ್ಳಿ ಎಂದು ವಿನಯಪೂರ್ವಕವಾಗಿ ಹೇಳುತ್ತಾ, ತಮ್ಮ ಕಂಚಿನ ಕಂಠದ ಮೂಲಕ 'ದ್ರೌಪದಿ ಶೀಲಹರಣ' ಬಗ್ಗೆ ಪಾಂಡ್ವಾನಿ ಕಥಾ ಮಾಲಿಕೆಯ ಸಣ್ಣ ತುಣುಕೊಂದನ್ನು ಹಿಂದಿಯಲ್ಲಿ ಪ್ರಸ್ತುತ ಪಡಿಸಿದರು.

ಉಳಿದಂತೆ ಋಷಿಕೇಶದಲ್ಲಿ ಶಿವಸೇನಾ ಮುಖ್ಯಸ್ಥರ ಕುಟುಂಬ, ವಾರಣಾಸಿಯಲ್ಲಿ ಮೋದಿ ಭಕ್ತ, ಪರೇಡ್ ನಲ್ಲಿ ಸುಶೀಲ್ ಕುಮಾರ್ ಶಿಂಧೆ, ಮುಂಬೈಗೆ ಬಂದ ಕ್ಯಾಪ್ಟನ್ ಜೇಮ್ಸ್, ದೇವಯಾನಿಗೆ ಕಟಂಕವಾಗಿರುವ ಮನೆಗೆಲಸದಾಕೆ ಸಂಗೀತಾ ಮುಂತಾದ ಚಿತ್ರಗಳಿವೆ...

ಪಾಂಡ್ವಾನಿ ಕಲಾವಿದೆಗೆ ಅಳ್ವಾಸ್ ಪ್ರಶಸ್ತಿ

ಪಾಂಡ್ವಾನಿ ಕಲಾವಿದೆಗೆ ಅಳ್ವಾಸ್ ಪ್ರಶಸ್ತಿ

ಮೂಡುಬಿದಿರೆಯ ವಿದ್ಯಾಗಿರಿ ಆವರಣದಲ್ಲಿ ನಡೆದಿರುವ ಆಳ್ವಾಸ್ ವಿರಾಸತ್ ವೇದಿಕೆಯಲ್ಲಿ ಛತ್ತೀಸ್ ಗಡದ ಜನಪ್ರಿಯ ಪಾಂಡ್ವಾನಿ ಸಂಗೀತ ಕಲಾವಿದೆ ಪದ್ಮಶ್ರೀ, ಪದ್ಮಭೂಷಣ ಡಾ.ತೀಜನ್ ಬಾಯಿ ಅವರಿಗೆ 'ಆಳ್ವಾಸ್ ವಿಶ್ವ ವಿರಾಸತ್- 2013' ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಋಷಿಕೇಶದಲ್ಲಿ

ಋಷಿಕೇಶದಲ್ಲಿ

ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಖ್ರೆ ಹಾಗೂ ಅವರ ಕುಟುಂಬ ಉತ್ತರಾಖಂಡ್ ನ ಋಷಿಕೇಶದ ಪಾರಮಾರ್ಥ ನಿಕೇತನದಲ್ಲಿ ಗಂಗಾ ಆರತಿ ಪೂಜೆಯಲ್ಲಿ ನಿರತರಾಗಿದ್ದಾರೆ.

ವಾರಣಾಸಿಯಲ್ಲಿ

ವಾರಣಾಸಿಯಲ್ಲಿ

ವಾರಣಾಸಿಯಲ್ಲಿ ಶುಕ್ರವಾರ ನಡೆದ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಚುನಾವಣಾ ಪ್ರಚಾರ ಸಮಾರಂಭದಲ್ಲಿ ಕಂಡು ಬಂದ ಅಭಿಮಾನಿ

ಸಂಗೀತಾ ರಿಚರ್ಡ್

ಸಂಗೀತಾ ರಿಚರ್ಡ್

ನವದೆಹಲಿ: ಅಮೆರಿಕಕ್ಕೆ ಭಾರತೀಯ ಉಪರಾಯಭಾರಿ ದೇವಯಾನಿ ಅವರ ಮನೆಗೆಲಸ ಮಾಡಿಕೊಂಡಿದ್ದ ಸಂಗೀತಾ ರಿಚರ್ಡ್ ಹಾಗೂ ಆಕೆ ಪತಿ ಫಿಲಿಫ್ ರಿಚರ್ಡ್

ಗೃಹ ಸಚಿವರ ಸೆಲ್ಯೂಟ್

ಗೃಹ ಸಚಿವರ ಸೆಲ್ಯೂಟ್

ನವದೆಹಲಿ: ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಅವರು ಸಶಸ್ತ್ರ ಸೀಮಾ ಬಲ್ ಪಡೆಯ ಚಿನ್ನದ ಹಬ್ಬದ ಸಂದರ್ಭದಲ್ಲಿ ನಡೆದ ಪರೇಡ್ ನಲ್ಲಿ

ಕ್ಯಾಪ್ಟನ್ ಜೇಮ್ಸ್ ವಾಪಸ್

ಕ್ಯಾಪ್ಟನ್ ಜೇಮ್ಸ್ ವಾಪಸ್

ಟೋಗೋ ಜೈಲಿನಿಂದ ಮುಕ್ತರಾಗಿ ಮುಂಬೈಗೆ ಮರಳಿದ ಕ್ಯಾಪ್ಟನ್ ಸುನಿಲ್ ಜೇಮ್ಸ್ ತಮ್ಮ ತಾಯಿ ಹಾಗೂ ಪತ್ನಿ ಅದಿತಿ ಜತೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+