ಚಿತ್ರ ಸುದ್ದಿ: ವಿಶ್ವಕಪ್ ಗೆದ್ದ ಭಾರತ, ದೆಹಲಿ ಓಟ

ಲೂಧಿಯಾನ, ಡಿ.16: ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಮಣಿಸಿದ ಭಾರತ ಸತತ ನಾಲ್ಕನೇ ಬಾರಿಗೆ ಕಬಡ್ಡಿ ವಿಶ್ವಕಪನ್ನು ಎತ್ತಿ ಹಿಡಿದು ಸಂಭ್ರಮಪಟ್ಟಿದೆ.

ಗುರು ನಾನಕ್ ಕ್ರೀಡಾಂಗಣದಲ್ಲಿ ಶನಿವಾರ ಮಧ್ಯರಾತ್ರಿ ತನಕ ನಡೆದ 4ನೇ ಅವೃತ್ತಿಯ ಪುರುಷರ ಕಬಡ್ಡಿ ಅಂತಿಮ ಹಣಾಹಣಿಯಲ್ಲಿ ಹಾಲಿ ಚಾಂಪಿಯನ್ ಭಾರತ ತಂಡ ಪಾಕಿಸ್ತಾನವನ್ನು 48-39 ಅಂತರದಿಂದ ಮಣಿಸಿ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಂಡಿತು.

ಭಾರತ ವಿಜೇತ ಟ್ರೋಫಿ ಹಾಗೂ 2 ಕೋಟಿ ರೂ. ಬಹುಮಾನವನ್ನು ಗೆದ್ದುಕೊಂಡಿದೆ. ರನ್ನರ್-ಅಪ್ ಪಾಕಿಸ್ತಾನಕ್ಕೆ ಟ್ರೋಫಿ ಹಾಗೂ 1 ಕೋಟಿ ರೂ.ವನ್ನು ತನ್ನದಾಗಿಸಿಕೊಂಡಿತು.

ಫೈನಲ್ ಪಂದ್ಯವನ್ನು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿ ಶಹಬಾಝ್ ಶರೀಫ್, ಪಂಜಾಬ್ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್, ಉಪ ಮುಖ್ಯಮಂತ್ರಿ ಸುಖ್ಬೀರ್ ಸಿಂಗ್ ಬಾದಲ್ ಹಾಗೂ ಇತರ ಗಣ್ಯರು ವೀಕ್ಷಿಸಿದರು. ಶರೀಫ್, ಬಾದಲ್ ಹಾಗೂ ಸುಖ್ಬೀರ್ ಸಿಂಗ್ ಪ್ರಶಸ್ತಿ ವಿಜೇತ ಭಾರತದ ಪುರುಷ ಹಾಗೂ ಮಹಿಳಾ ತಂಡಗಳಿಗೆ ಬಹುಮಾನವನ್ನು ವಿತರಿಸಿದರು. ಇತ್ತೀಚೆಗೆ ಭಾರತದ ವನಿತೆಯರ ತಂಡ ಫೈನಲ್ ನಲ್ಲಿ ನ್ಯೂಜಿಲೆಂಡನ್ನು ಮಣಿಸಿ ವಿಶ್ವಕಪ್ ಅನ್ನು ಗೆದ್ದ ನಂತರ ಭಾರತದ ಪುರುಷರ ತಂಡ ಕೂಡ ವಿಶ್ವಕಪಪ್ ಅನ್ನು ಜಯಿಸಿದೆ.

ಉಳಿದಂತೆ ದೆಹಲಿ, ಗುರ್ ಗಾಂವ್ ನಲ್ಲಿ ಕೊರೆಯುವ ಚಳಿ, ದೆಹಲಿಯಲ್ಲಿ ನಡೆದ ಹಾಫ್ ಮ್ಯಾರಥಾನ್ ಓಟದಲ್ಲಿ ಕನ್ನಡದ ಕಂಪು, ದಕ್ಷಿಣ ಆಫ್ರಿಕಾದಲ್ಲಿ ನೆಲ್ಸನ್ ಮಂಡೇಲಾ ಅವರಿಗೆ ನಮನ ಸಲ್ಲಿಸಿದ ಕಾಡು ಜನ, ಹಕಿಗಾಗಿ LGBT ಗಳ ಪ್ರತಿಭಟನೆ ಮುಂತಾದ ಚಿತ್ರಗಳಿವೆ...

ಲೂಧಿಯಾನ

ಲೂಧಿಯಾನ

ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಮಣಿಸಿದ ಭಾರತ ಸತತ ನಾಲ್ಕನೇ ಬಾರಿಗೆ ಕಬಡ್ಡಿ ವಿಶ್ವಕಪನ್ನು ಎತ್ತಿ ಹಿಡಿದು ಸಂಭ್ರಮಪಟ್ಟಿದೆ.

ಹಾಫ್ ಮ್ಯಾರಥಾನ್ ಓಟದಲ್ಲಿ ಕನ್ನಡದ ಕಂಪು

ಹಾಫ್ ಮ್ಯಾರಥಾನ್ ಓಟದಲ್ಲಿ ಕನ್ನಡದ ಕಂಪು

ದೆಹಲಿಯಲ್ಲಿ ನಡೆದ ಹಾಫ್ ಮ್ಯಾರಥಾನ್ ಓಟದಲ್ಲಿ ಕನ್ನಡದ ಕಂಪು, ಯಕ್ಷಗಾನ ವೈಭವವನ್ನು ಸಾರಿದ ದೆಹಲಿ ಕರ್ನಾಟಕ ಸಂಘದ ಪರವಾಗಿ ಪ್ರಕಾಶ್ ಶೆಟ್ಟಿ ಹಾಗೂ ತಂಡ

ಬಿಜೆಪಿ ನಾಯಕರ ಓಟ

ಬಿಜೆಪಿ ನಾಯಕರ ಓಟ

ಒಂದೆಡೆ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಕರೆ ನೀಡಿದ್ದ ಏಕತಾ ಓಟ(ಚಿತ್ರಗಳು ಇಲ್ಲಿವೆ) ಇನ್ನೊಂದೆಡೆ ದೆಹಲಿಯಲ್ಲಿ ರಾಜನಾಥ್ ಸಿಂಗ್ ಸೇರಿದಂತೆ ಬಿಜೆಪಿ ನಾಯಕರ ಓಟ

ದೆಹಲಿಯಲ್ಲಿ ಇಂದು

ದೆಹಲಿಯಲ್ಲಿ ಇಂದು

ದೆಹಲಿಯಲ್ಲಿ ಇಂದು ಕೊರೆಯುವ ಚಳಿ ನಡುವೆ ಕಚೇರಿಗೆ ತೆರಳಲು ಬಸ್ ಗಾಗಿ ಕಾದಿರುವ ಸಾರ್ವಜನಿಕರು

ಮಂಡೇಲಾಗೆ ವಿದಾಯ

ಮಂಡೇಲಾಗೆ ವಿದಾಯ

ದಕ್ಷಿಣ ಆಫ್ರಿಕಾದ ಧೀಮಂತ ನಾಯಕ, ಭಾರತರತ್ನ ನೆಲ್ಸನ್ ಮಂಡೇಲಾ ಅವರ ಅಂತಿಮ ಸಂಸ್ಕಾರಕ್ಕೆ ಬಂದಿದ್ದ ಜೂಲು ಯೋಧರು ಅಗಲಿದ ನಾಯಕನಿಗೆ ನಮನ ಸಲ್ಲಿಸಿದರು.

ಮುಂಬೈನಲ್

ಮುಂಬೈನಲ್

ಮುಂಬೈನಲ್ಲಿ ಸುಪ್ರೀಂಕೋರ್ಟ್ ತೀರ್ಪಿನ ವಿರುದ್ಧ ಪ್ರತಿಭಟನೆ ನಡೆಸಿದ LGBT ಸಂಘಟನೆಗಳ ಜತೆ ಕೈ ಜೋಡಿಸಿದ ನಟಿ ಸೇಲಿನಾ ಜೇಟ್ಲಿ

ಚೆನ್ನೈನಲ್ಲಿ

ಚೆನ್ನೈನಲ್ಲಿ

ಚೆನ್ನೈನಲ್ಲಿ ನಡೆದ ಮೋಟರ್ ಸೈಕಲ್ ರೇಸ್ ನ ದೃಶ್ಯ

ಊಟಿಯಲ್ಲಿ

ಊಟಿಯಲ್ಲಿ

ತಮಿಳುನಾಡಿನ ಊಟಿಯಲ್ಲಿ ತೋಡಾ ಸಮುದಾಯದವರು ಅಪ್ಪುಕೊಡು ಮುಂಡ್ ನಲ್ಲಿ ಹಬ್ಬದ ಆಚರಣೆ ಸಂದರ್ಭದಲ್ಲಿ ಕಾಣಿಸಿದ್ದು ಹೀಗೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+