ಚಿತ್ರಸುದ್ದಿ: ರಂಜಾನ್ ಗಾಗಿ ಬಣ್ಣ ಬಣ್ಣದ ತಿನಿಸು
ಬೆಂಗಳೂರು, ಜೂ.30: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಇತ್ತೀಚಿನ ರೌಂಡ್ ಆಪ್ ಅನ್ನು ಚಿತ್ರಗಳ ಮೂಲಕ ಹೇಳುವ ಪ್ರಯತ್ನ ಇದಾಗಿದೆ. ಇಲ್ಲಿ ಅಕ್ಷರಕ್ಕಿಂತ ಆಕರ್ಷಕ ಚಿತ್ರಕ್ಕೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ. ಚುಟುಕು ಮಾಹಿತಿಯೊಂದಿಗೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.
ಇಸ್ಲಾಮಿನ ಚಂದ್ರಮಾನ ಕ್ಯಾಲೆಂಡರ್ ಪ್ರಕಾರ ರಮದಾನ್(ರಂಜಾನ್) ಒಂಭತ್ತನೇ ತಿಂಗಳು. ಹಾಗೂ ಬಹು ಪವಿತ್ರವಾದ ಮಾಸ ಕೂಡಾ. ಇಮಾಮರ ಕಣ್ಣಿಗೆ ಚಂದ್ರ ದರ್ಶನವಾದ ನಂತರ ಮಾಸಾಚಾರಣೆಗೆ ಸಿದ್ಧತೆ ಆರಂಭಗೊಂಡಿದೆ.
ಮಸೀದಿಯಲ್ಲಿ ಮುಂಜಾನೆ ಸೆಹ್ರಿ ಸೇವಿಸಿ ನಂತರ ಒಂದು ತಿಂಗಳ ಕಾಲ ರೋಜಾ ಇರುವ ಸಂಕಲ್ಪ ಕೈಗೊಳ್ಳಲಾಗುತ್ತದೆ. ಮುಂಜಾನೆಯಿಂದ ಮುಸ್ಸಂಜೆವರೆಗೂ ರೋಜಾ ಜಾರಿಯಲ್ಲಿರುತ್ತದೆ.[ರಂಜಾನ್ ಉಪವಾಸ ವ್ರತ ಆರಂಭ]
ಬೆಂಗಳೂರಿನಲ್ಲಿ ಸೋಮವಾರದಿಂದ ರಂಜಾನ್ ಉಪವಾಸ ಆರಂಭಗೊಂಡಿದೆ. ದೇಶದ ವಿವಿಧೆಡೆ ಬಣ್ಣ ಬಣ್ಣದ ಸಿಹಿ ತಿನಿಸು ಖರೀದಿ ಚಿತ್ರಗಳು, ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಪ್ರವಾಸ, ಶ್ರೀಲಂಕಾದಲ್ಲಿ ಭಾರತೀಯ ಮೀನುಗಾರರು, ಅಮರನಾಥ್ ಯಾತ್ರೆ, ಕಪ್ ಜತೆ ಸೈನಾ ನೆಹ್ವಾಲ್ ಮುಂತಾದ ಚಿತ್ರಗಳು ಇಲ್ಲಿವೆ

ರಂಜಾನ್ ಗಾಗಿ ಬಣ್ಣ ಬಣ್ಣದ ತಿನಿಸು
ನಾಗ್ಪುರ್: ಬಣ್ಣ ಬಣ್ಣದ ಶ್ಯಾವಿಗೆ ಸಿಹಿಯನ್ನು ಖರೀದಿಸಲು ಮುಸ್ಲಿಂ ಬಾಂಧವರು ಹಾತೊರೆಯುತ್ತಿದ್ದಾರೆ. ಮೊಮಿನ್ ಪುರದ ಓರ್ವ ವರ್ತಕನ ಚಿತ್ರ : ಪಿಟಿಐ

ಶ್ರೀನಗರದಲ್ಲಿ ರಂಜಾನ್ ಆಚರಣೆ
ಶ್ರೀನಗರದ ಮಾರುಕಟ್ಟೆಯಲ್ಲಿ ಒಣ ಖರ್ಜೂರ ಮಾರಾಟ ಜೋರಾಗಿ ನಡೆದಿದೆ.

ಆಸ್ಟ್ರೇಲಿಯನ್ ಸೂಪರ್ ಸರಣಿ ಗೆದ್ದ ಸೈನಾ
ಸಿಡ್ನಿ: ಆಸ್ಟ್ರೇಲಿಯನ್ ಸೂಪರ್ ಸರಣಿ ಗೆದ್ದ ಬಹರತದ ಬಾಡ್ಮಿಂಟನ್ ಸೈನಾ ನೆಹ್ವಾಲ್ ಅವರು 750,000 ಯುಎಸ್ ಡಾಲರ್ ನಗದು ಹಾಗೂ ಕಪ್ ಪಡೆದುಕೊಂಡಿದ್ದಾರೆ.[ವರದಿ ಇಲ್ಲಿ ಓದಿ]

ಕಾಶ್ಮೀರದಲ್ಲಿ ಅಮರನಾಥ್ ಯಾತ್ರೆ
ಬಾಲ್ಟಲ್ ಮೂಲಕ ಗುಹಾಂತರ ದೇಗುಲದಲ್ಲಿರುವ ಹಿಮರೂಪಿ ಅಮರನಾಥನನ್ನು ಕಾಣಲು ತೆರಳುತ್ತಿರುವ ಭಕ್ತಾದಿಗಳನ್ನು ಪಲ್ಲಕ್ಕಿಗಳಲ್ಲಿ ಹೊತ್ತೊಯ್ಯಲಾಗುತ್ತಿದೆ. PTI Photo by S Irfan

ಲೆಹ್ ನಲ್ಲಿ ನಟಿ ದೀಪ್ತಿ ನವಲ್
ಸಿಂಧು ನದಿ ತಟದಲ್ಲಿ ಮೀನುಗಾರಿಕೆ ನಡೆಸಿರುವ ಹಿಂದಿ ನಟಿ ದೀಪ್ತಿ ನವಲ್ ಅವರು ಲೆಹ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕಾಗಿ ಬಂದಿದ್ದಾರೆ.PTI Photo by Vijay Verma

ಬೀಜಿಂಗ್ ನಲ್ಲಿ ಉಪರಾಷ್ಟ್ರಪತಿ ಅನ್ಸಾರಿ
ಬೀಜಿಂಗ್ ನಲ್ಲಿ ಭಾರತದ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಅವರ ಜತೆ ಲಿ ಯೂಚಾವೋ ಅವರು ಸೇನೆಯಿಂದ ಗೌರವರಕ್ಷೆ ಪಡೆದುಕೊಳ್ಳುತ್ತಿರುವ ದೃಶ್ಯ. PTI Photo by Shirish Shete

ಭಾರತೀಯ ಮೀನುಗಾರರಿಗೆ ರಿಲೀಫ್
ಭಾರತೀಯ ಮೀನುಗಾರರಿಗೆ ರಿಲೀಫ್ ಸಿಕ್ಕಿದ್ದು ಭಾರತದ ಕೋಸ್ಟ್ ಗಾರ್ಡ್ ಗಳು ಶ್ರೀಲಂಕಾದಿಂದ ತಮಿಳುನಾಡು ಮೂಲದ ಮೀನುಗಾರರನ್ನು ವಾಪಸ್ ಕರೆಸಿಕೊಂಡಿದ್ದಾರೆ.

ಚೆನ್ನೈನ ಕಟ್ಟಡ ಕುಸಿತ ದುರಂತ
ಚೆನ್ನೈನ ಕಟ್ಟಡ ಕುಸಿತ ದುರಂತದಲ್ಲಿ ಗಾಯಗೊಂಡವರನ್ನು ವಿಚಾರಿಸುತ್ತಿರುವ ಮುಖ್ಯಮಂತ್ರಿ ಜಯಲಲಿತಾ

ದೀದಿ ತಲೆಗೆ ಇಸ್ಕಾನ್ ಶ್ರೀರಕ್ಷೆ
ಜಗನ್ನಾಥ ಯಾತ್ರೆ ಅಂಗವಾಗಿ ಇಸ್ಕಾನ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಸಿಕ್ಕಿದ ಆಶೀರ್ವಾದ.

ಅರ್ಮಾನ್ ಹಾಗೂ ದೀಕ್ಷಾ ಸೇಠ್ ಜೋಡಿ
ಮುಂಬೈ: ಅರ್ಮಾನ್ ಹಾಗೂ ದೀಕ್ಷಾ ಸೇಠ್ ಜೋಡಿ ಲೇಕರ್ ಹಮ್ ದೀವಾನ ದಿಲ್ ಚಿತ್ರ ಪ್ರಚಾರದ ಸಂದರ್ಭದಲ್ಲಿ ಕಂಡು ಬಂದಿದ್ದು ಹೀಗೆ












Click it and Unblock the Notifications