ಚಿತ್ರಗಳಲ್ಲಿ ನೈರೋಬಿ ಉಗ್ರರ ಕಾಳಗ, ಇತರ ಸುದ್ದಿಗಳು
ನವದೆಹಲಿ, ಸೆ.22 : ಶನಿವಾರ ರಾತ್ರಿ ನೈರೋಬಿಯ ಮಾಲ್ ಗೆ ನುಗ್ಗಿ ಮನಬಂದಂತೆ ಗುಂಡು ಹಾರಿಸಿ, ಜನರನ್ನು ಒತ್ತಯಾಳಾಗಿ ಇಟ್ಟುಕೊಂಡಿರುವ ಉಗ್ರರನ್ನು ಹಿಡಿಯುವ ಕಾರ್ಯಾಚರಣೆ ಭಾನುವಾರವೂ ಮುಂದುವರೆದಿದೆ. ಘಟನೆಯಿಂದಾಗಿ ಇದುವರೆಗೂ 43 ಮಂದಿ ಸಾವನ್ನಪ್ಪಿದ್ದಾರೆ.
ಕೀನ್ಯಾ ಭದ್ರತಾ ಪಡೆ ಯೋಧರು ಮಾಲ್‌ನಲ್ಲಿ ಅವಿತುಕುಳಿತ್ತಿದ್ದ ಉಗ್ರರನ್ನು ಹಿಡಿಯುವ ಕಾರ್ಯಾಚರಣೆ ಮುಂದುವರೆಸಿದ್ದಾರೆ. ಉಗ್ರರು ತಮ್ಮ ಬಳಿ ಸುಮಾರು 20 ಮಂದಿಯನ್ನು ಒತ್ತೆಯಾಳಾಗಿ ಇಟ್ಟುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಸೋಮಾಲಿಯಾದ ಇಸ್ಲಾಮಿಕ್ ಉಗ್ರಗಾಮಿ ಸಂಘಟನೆ ಅಲ್-ಶಬಾಬ್ ಈ ದಾಳಿಯ ಹೊಣೆ ಹೊತ್ತುಕೊಂಡಿದೆ. ಚಿತ್ರಗಳಲ್ಲಿ ಉಗ್ರರನ್ನು ಸೆದೆ ಬಡಿಯುವ ಕಾರ್ಯಾಚರಣೆ ನಡೆಸುತ್ತಿರುವ ಯೋಧರನ್ನು ಕಾಣಬಹುದು.
ಗಡ್ಡಧಾರಿ ಸಂಜುಬಾಬಾ : ಬಾಲಿವುಡ್ ನಟ ಸಂಜಯ್ ದತ್ ಪುಣೆಯ ಯಡವಾಡ ಜೈಲಿನಲ್ಲಿ ಹೇಗಿದ್ದಾರೆ? ಎಂಬುದಕ್ಕೆ ಉತ್ತರ ಸಿಕ್ಕಿದೆ. ಮೊದಲ ಬಾರಿಗೆ ಸಂಜುಬಾಬಾ ಫೋಟೋಗಳು ಮಾಧ್ಯಮಗಳಿಗೆ ಲಭ್ಯವಾಗಿದ್ದು, ಗಡ್ಡ ಬಿಟ್ಟ ಸಂಜುಬಾಬಾ ಗುರುತು ಹಿಡಿಯುವುದೇ ಕಷ್ಟವಾಗಿದೆ. ಇನ್ನಷ್ಟು ಸುದ್ದಿಗಳು ಚಿತ್ರಗಳಲ್ಲಿ

ಎಲ್ಲಿದ್ದಾರೆ ಕಾಣೋಲ್ಲ
ನೈರೋಬಿಯ ಮಾಲ್‌ವೊಳಗಿರುವ ಉಗ್ರಗಾಮಿಗಳನ್ನು ಕೊಲ್ಲಲ್ಲು ಹೊರಗೆ ಕೀನ್ಯಾ ಭದ್ರತಾ ಪಡೆ ಯೋಧರು ಕಾದು ಕುಳಿತಿರುವ ಪರಿ ಇದು.

ಸಿಕ್ಕಿದರೆ ಹಾರಲಿದೆ ಗುಂಡು
ಕೀನ್ಯಾ ಭದ್ರತಾ ಪಡೆ ಯೋಧನೊಬ್ಬ ಮಾಲ್ ಮುಖಮಾಡಿ ಬಂದೂಕು ಹಿಡಿದು ಸಿದ್ದನಾಗಿರುವುದು ಹೀಗೆ ಉಗ್ರರು ಕಣ್ಣಿಗೆ ಬಿದ್ದರೆ, ಬಂದೂಕಿನಿಂದ ಗುಂಡು ಹಾರುತ್ತದೆ.

ನಿಧಾನ ಬನ್ನಿ ಶಬ್ದ ಮಾಡಬೇಡಿ
ಕೀನ್ಯಾ ಭದ್ರತಾ ಪಡೆ ಯೋಧರು ಉಗ್ರರನ್ನು ಹಿಡಿಯುವ ಕಾರ್ಯಾಚರಣೆ ನಡೆಸುತ್ತಿರುವುದು ಹೀಗೆ. ಮಾಲ್ ಅನ್ನು ಯೋಧರು ಸಂಪೂರ್ಣವಾಗಿ ಸುತ್ತುವರೆದಿದ್ದಾರೆ.

ಮುನ್ನಾಭಾಯಿ ಅಲ್ಲ ಗಡ್ಡಭಾಯಿ
ಪುಣೆಯ ಯರವಾಡ ಜೈಲಿನಲ್ಲಿರುವ ನಟ ಸಂಜಯ್ ದತ್ ಚಿತ್ರಗಳು ಮೊದಲ ಬಾರಿಗೆ ಮಾಧ್ಯಮಗಳಿಗೆ ಲಭ್ಯವಾಗಿವೆ. ಜೈಲಿನಲ್ಲಿ ಸೆ.26ರಂದು ನಡೆಯಲಿರುವ ಕಾರ್ಯಕ್ರದಲ್ಲಿ ಸಂಜಯ್ ದತ್ ಇತರ ಕೈದಿಗಳೊಂದಿಗೆ ನಾಟಕ ಮಾಡಲಿದ್ದಾರೆ. ಫೂಲ್ ಗಡ್ಡಬಿಟ್ಟಿರುವ ದತ್ ಮುನ್ನಭಾಯಿ ಹೋಗಿ ಗಡ್ಡಭಾಯಿ ಯಾಗಿದ್ದಾರೆ.

ಯಾರು ಹೆಚ್ಚು ನೀವೇ ಹೇಳಿ
ಚಿಕ್ಕಮಗಳೂರಿನಲ್ಲಿ ಸಾಂಸ್ಕೃತಿಕ ವೈಭವ ಕಾರ್ಯಕ್ರಮದಲ್ಲಿ ಪ್ರದರ್ಶಿಸಿದ ಯಕ್ಷಗಾನ ನೋಡುಗರಿಗೆ ರೋಮಾಂಚನ ಉಂಟು ಮಾಡಿತು.

ಎಲ್ಲಾ ಸರಿಯಾಗಿದೆ
ನವದೆಹಲಿಯಲ್ಲಿ ಮುಖ್ಯಮಂತ್ರಿ ಶೀಲಾದೀಕ್ಷಿತ್ ಭಾನುವಾರ ಹಣ್ಣು ಮತ್ತು ತರಕಾರಿ ಮಳಿಗೆ ಉದ್ಘಾಟಿಸಲು ಬಂದಾಗ ಅವುಗಳ ಪರಿಶೀಲನೆ ನಡೆಸಿದ್ದು ಹೀಗೆ.

ಚೆನ್ನಾಗಿದೆ ಅಲ್ವಾ?
ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಪೊಲೀಸ್ -ಪಬ್ಲಿಕ್ ಮೇಳದಲ್ಲಿ ವಿವಿಧ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ಆದಿಶಕ್ತಿಗೆ ನಮಿಸಿರೋ
ಕೋಯಮತ್ತೂರಿನಲ್ಲಿ ಆದಿಪುರ ಸಮಾವೇಶದಲ್ಲಿ ಭಾಗವಹಿಸಿದ್ದ ಆದಿಶಕ್ತಿ ದೇವಿಯ ಭಕ್ತರು ತಲೆ ಮೇಲೆ ಕುಂಭ ಹೊತ್ತು ಹೆಜ್ಜೆ ಹಾಕಿದ್ದು ಹೀಗೆ.












Click it and Unblock the Notifications