ಚಿತ್ರಗಳಲ್ಲಿ: ನರೇಂದ್ರ ಹತ್ಯೆ ಪ್ರಕರಣ ಏನಾಯ್ತು?
ಬೆಂಗಳೂರು, ಸೆ.21: ಮುಂಬೈನ ಸಾಮಾಜಿಕ ಕಾರ್ಯಕರ್ತ ನರೇಂದ್ರ ದಭೋಲ್ಕರ್ ಹತ್ಯೆ ಪ್ರಕರಣ ಹಳ್ಳ ಹಿಡಿಯುವಂತೆ ಸರ್ಕಾರ ನೋಡಿಕೊಳ್ಳುತ್ತಿದೆ. ಒಂದು ಕಡೆ ಮಾಟ ಮಂತ್ರ ನಿಯಂತ್ರಣ ಮುಂದಾಗುವ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಇನ್ನೊಂದು ಕಡೆ ಪ್ರಕರಣವನ್ನು ರಾಜಕೀಯಗೊಳಿಸುತ್ತಿದೆ ಎಂದು ದಭೋಲ್ಕರ್ ನ್ಯಾಯ ಕೇಳುತ್ತಾ ನಟಿ ಸೋನಾಲಿ ಕುಲಕರ್ಣಿ ಸೇರಿದಂತೆ ರಾಷ್ಟ್ರ ಸೇವಾ ದಳದ ಹಲವಾರು ಅಭಿಮಾನಿಗಳು ಬೀದಿಗಿಳಿದು ಹೋರಾಟ ನಡೆಸಿದ್ದಾರೆ.
ಎರಡು ದಿನಗಳ ಹಿಂದೆ ರಾಜ್ ಠಾಕ್ರೆ ಅವರು ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದು ಇದೇ ರೀತಿ ಮಾತುಗಳನ್ನಾಡಿದ್ದರು. ಎಂಎನ್ ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಮಾತನಾಡಿ ಸ್ವಲ್ಪ ಒತ್ತಡ ಹೇರಿದ ಕೂಡಲೇ ಪ್ರಕರಣವನ್ನು ಸಿಬಿಐ ಕೈಗೆ ಒಪ್ಪಿಸುವುದು ರಾಜ್ಯ ಸರ್ಕಾರಕ್ಕೆ ಮಾಮೂಲಾಗಿದೆ. ಆದರೆ, ಸಿಬಿಐ ತನಿಖೆ ಆರಂಭಿಸಿದರೂ ಯಾರೊಬ್ಬರನ್ನು ಬಂಧಿಸಿಲ್ಲ ಏಕೆ ಎಂದು ಪ್ರಶ್ನಿಸಿದ್ದಾರೆ.
ಉಳಿದಂತೆ ಮುಜಾಫರ್ ನಗರದ ಕೋಮುಗಲಭೆ ಸಂಬಂಧ ಆರೋಪಿಗಳ ಬಂಧನ ಜಾರಿಯಲ್ಲಿದೆ. ದ್ವೇಷಪೂರಿತ ಭಾಷಣ ಮಾಡಿ ಜನರನ್ನು ಉದ್ರಿಕ್ತಗೊಳಿಸಿದ ಆರೋಪದ ಮೇಲೆ ಬಿಜೆಪಿ ಶಾಸಕ ಸುರೇಶ್ ರಾಣಾರನ್ನು ಶುಕ್ರವಾರ ಉತ್ತರಪ್ರದೇಶ ಪೊಲೀಸರು ಬಂಧಿಸಿದ್ದಾರೆ. ಇನ್ನಷ್ಟು ಚಿತ್ರಗಳನ್ನು ಮುಂದೆ ನೋಡಿ

ಮುಂಬೈನಲ್ಲಿ
ದಭೋಲ್ಕರ್ ಹತ್ಯೆ ನ್ಯಾಯ ಕೇಳುತ್ತಾ ನಟಿ ಸೋನಾಲಿ ಕುಲಕರ್ಣಿ ಸೇರಿದಂತೆ ರಾಷ್ಟ್ರ ಸೇವಾ ದಳದ ಹಲವಾರು ಅಭಿಮಾನಿಗಳು ಬೀದಿಗಿಳಿದು ಹೋರಾಟ ನಡೆಸಿದ್ದಾರೆ.

ಬೆಂಗಳೂರಿನಲ್ಲಿ
ಕ್ರಿಕೆಟರ್ ಯುವರಾಜ್ ಸಿಂಗ್ ಅವರು ಕ್ಯಾನ್ಸರ್ ಜಯಸಿದ ನಂತರ ಕ್ಯಾನ್ಸರ್ ಪರ ಜಾಗೃತಿ ಮೂಡಿಸುತ್ತಿದ್ದಾರೆ. ಇಂಡಿಯನ್ ಕ್ಯಾನ್ಸರ್ ಸೊಸೈಟಿ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಯುವರಾಜ್ ಸಿಂಗ್. PTI Photo by Shailendra Bhojak

UIDAI ಚೇರ್ಮನ್
ಬೆಂಗಳೂರು: UIDAI ಚೇರ್ಮನ್ ನಂದನ್ ನಿಲೇಕಣಿ ಅವರು ಕನ್ನಡ ಸೇರಿದಂತೆ ವಿವಿಧ ಭಾಷೆಗಳಲ್ಲಿ ಆಧಾರ್ ವೆಬ್ ಸೈಟ್ ಅನಾವರಣಗೊಳಿಸಿದರು. ವಿವರ ಇಲ್ಲಿದೆ

ಚಿಕ್ಕಮಗಳೂರಿನಲ್ಲಿ
ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಅವರು ಚಿಕ್ಕಮಗಳೂರು ಜಿಲ್ಲೆ ಜೆಡಿಎಸ್ ಕಾರ್ಯಕರ್ತರೊಡನೆ ಶುಕ್ರವಾರ ಸಮಾಲೋಚನೆ ನಡೆಸಿದರು.

ಲಖ್ನೋದಲ್ಲಿ
ಉಳಿದಂತೆ ಮುಜಾಫರ್ ನಗರದ ಕೋಮುಗಲಭೆ ಸಂಬಂಧ ಆರೋಪಿಗಳ ಬಂಧನ ಜಾರಿಯಲ್ಲಿದೆ. ದ್ವೇಷಪೂರಿತ ಭಾಷಣ ಮಾಡಿ ಜನರನ್ನು ಉದ್ರಿಕ್ತಗೊಳಿಸಿದ ಆರೋಪದ ಮೇಲೆ ಬಿಜೆಪಿ ಶಾಸಕ ಸುರೇಶ್ ರಾಣಾರನ್ನು ಶುಕ್ರವಾರ ಉತ್ತರಪ್ರದೇಶ ಪೊಲೀಸರು ಬಂಧಿಸಿದ್ದಾರೆ.

ಶ್ರೀನಗರದಲ್ಲಿ
ಶ್ರೀನಗರ: ಶೊಪಿಯಾನ್ ಹತ್ಯೆ ವಿರುದ್ಧ ನಡೆದಿರುವ ಪ್ರತಿಭಟನೆ ಜೋರಾಗಿದೆ. ಬೆಂಕಿ ಹೊತ್ತಿಕೊಂಡಿರುವ ಟೈರುಗಳನ್ನು ಉರುಳಿಸುತ್ತಿರುವ ಪೊಲೀಸರು ರಸ್ತೆ ತಡೆಗಳನ್ನು ತೆರವುಗೊಳಿಸುತ್ತಿದ್ದಾರೆ.

ಬೆಂಗಳೂರು
ಬೆಂಗಳೂರು: ಬೇಲೇಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ಬಂಧಿತನಾಗಿರುವ ಬಿಎಸ್ಸಾರ್ ಕಾಂಗ್ರೆಸ್ ಶಾಸಕ ಸುರೇಶ್ ಬಾಬು(ಮಧ್ಯ) ಸಿಬಿಐ ಕಚೇರಿ ಬಳಿಯಲ್ಲಿ

ಪಶ್ಚಿಮ ಬಂಗಾಳ
ಬಿರ್ಬಮ್ : ಪಿತೃ ಪಕ್ಷದ ಅಂಗವಾಗಿ ಕೊಪೈ ನದಿ ತೀರದಲ್ಲಿ ಅರ್ಘ್ಯ ಪ್ರದಾನ ಮಾಡಲಾಗಿದೆ.












Click it and Unblock the Notifications