ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂದು ಮೊದಲ ಹಂತದ ಗುಜರಾತ್ ವಿಧಾನಸಭಾ ಚುನಾವಣೆ 2022, ಕಣದಲ್ಲಿರುವ ಪ್ರಮುಖರು

|
Google Oneindia Kannada News

ಅಹಮದಾಬಾದ್‌, ಡಿಸೆಂಬರ್‌ 1: ಇಂದು (ಡಿಸೆಂಬರ್ 1) ಗುರುವಾರ ಬಹು ನಿರೀಕ್ಷಿತ ಗುಜರಾತ್‌ ವಿಧಾನಸಭೆಗೆ ಮೊದಲ ಹಂತದ ಚುನಾವಣೆ ನಡೆಯಲಿದೆ. ಈಗಾಗಲೇ ಮೂರು ದಶಕಗಳಿಂದ ಗುಜರಾತ್‌ನಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ತನ್ನ ಗೆಲುವಿನ ನಾಗಾಲೋಟವನ್ನು ಮುಂದುವರೆಸಲು ಸಜ್ಜಾಗಿರುವಾಗಲೇ ಕಾಂಗ್ರೆಸ್ ಹಾಗೂ ಆಮ್ ಆದ್ಮಿ ಪಕ್ಷಗಳು ಕೂಡ ಅಧಿಕಾರ ಹಿಡಿಯಲು ಪೈಪೋಟಿ ನಡೆಸಿವೆ.

ಗುರುವಾರ ಮೊದಲನೇ ಹಂತದ ಚುನಾವಣೆ ಸೌರಾಷ್ಟ್ರ ಕಚ್ ಮತ್ತು ರಾಜ್ಯದ ದಕ್ಷಿಣ ಭಾಗಗಳ 19 ಜಿಲ್ಲೆಗಳ 89 ಸ್ಥಾನಗಳಿಗೆ 788 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಗುರುವಾರ ಬೆಳಗ್ಗೆ 8ರಿಂದ ಸಂಜೆ 5ರವರೆಗೆ 14,382 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ. ಮೊದಲ ಹಂತದಲ್ಲಿ ಚುನಾವಣೆ ನಡೆಯಲಿರುವ 89 ಸ್ಥಾನಗಳ ಪೈಕಿ 2017ರ ಚುನಾವಣೆಯಲ್ಲಿ ಬಿಜೆಪಿ 48, ಕಾಂಗ್ರೆಸ್ 40, ಒಂದು ಸ್ಥಾನವನ್ನು ಸ್ವತಂತ್ರ ಅಭ್ಯರ್ಥಿ ಗೆದ್ದುಕೊಂಡಿದ್ದರು.

ಬಿಜೆಪಿ, ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷ (ಎಎಪಿ) ಹೊರತುಪಡಿಸಿ, ಬಹುಜನ ಸಮಾಜ ಪಕ್ಷ (ಬಿಎಸ್‌ಪಿ), ಸಮಾಜವಾದಿ ಪಕ್ಷ (ಎಸ್‌ಪಿ), ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ಮಾರ್ಕ್‌ಸಿಸ್ಟ್ (ಸಿಪಿಐ-ಎಂ) ಮತ್ತು ಭಾರತೀಯ ಬುಡಕಟ್ಟು ಪಕ್ಷ ಸೇರಿದಂತೆ 36 ಇತರ ರಾಜಕೀಯ ಸಂಘಟನೆಗಳು ( ಬಿಟಿಪಿ) ಮೊದಲ ಹಂತದಲ್ಲಿ ಚುನಾವಣೆ ನಡೆಯಲಿರುವ ವಿವಿಧ ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ.

ಗುಜರಾತ್‌ನಲ್ಲಿ 750 ಕೋಟಿ ನಗದು, ಚಿನ್ನ, ಡ್ರಗ್ಸ್ ವಶ: ಚುನಾವಣಾ ಆಯೋಗಗುಜರಾತ್‌ನಲ್ಲಿ 750 ಕೋಟಿ ನಗದು, ಚಿನ್ನ, ಡ್ರಗ್ಸ್ ವಶ: ಚುನಾವಣಾ ಆಯೋಗ

ಎಲ್ಲಾ 89 ಸ್ಥಾನಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಸ್ಪರ್ಧಿಸುತ್ತಿವೆ. ಗುಜರಾತ್‌ನಲ್ಲಿ ಹೊಸ ಚುನಾವಣೆ ಎದುರಿಸುತ್ತಿರುವ ಎಎಪಿ ಕೂಡ 88 ವಿಧಾನಸಭಾ ಕ್ಷೇತ್ರಗಳಲ್ಲೂ ಸ್ಪರ್ಧಿಸಿದರೂ ಸೂರತ್ ಪೂರ್ವ ಕ್ಷೇತ್ರದ ಅಭ್ಯರ್ಥಿ ತಮ್ಮ ಉಮೇದುವಾರಿಕೆಯನ್ನು ಹಿಂಪಡೆದಿದ್ದು, ಮೊದಲ ಹಂತದಲ್ಲಿ ಸ್ಪರ್ಧಿಸಲು ಪಕ್ಷವು ಒಂದು ಕಡಿಮೆ ಸ್ಥಾನವನ್ನು ಬಿಟ್ಟುಕೊಟ್ಟಿದೆ.

ರಾಜ್ಯವು ಸಾಂಪ್ರದಾಯಿಕವಾಗಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ದ್ವಿಮುಖ ಸ್ಪರ್ಧೆಗೆ ಸಾಕ್ಷಿಯಾಗಿದೆ. ಆದರೆ ಈ ಬಾರಿ ಎಎಪಿ ಪ್ರವೇಶದಿಂದಾಗಿ ತ್ರಿಕೋನ ಕದನಕ್ಕೆ ತಿರುಗಿದೆ. ಬಿಜೆಪಿ ಅಭಿವೃದ್ಧಿ ಯೋಜನೆ ಮತ್ತು ಬ್ರಾಂಡ್ ಮೋದಿಯ ಮತ ಬ್ಯಾಂಕ್ ಅನ್ನು ಮುಂದುವರೆಸುತ್ತಿದೆ. ಆದರೆ ಎಎಪಿ ತನ್ನ ಪಂಜಾಬ್ ಕಾರ್ಯಕ್ಷಮತೆಯ ಆಶಯದೊಂದಿಗೆ ಹಲವಾರು ಉಚಿತ ಕೊಡುಗೆಗಳನ್ನು ಘೋಷಿಸಿದೆ.

Gujarat Assembly Elections 2022: ಚುನಾವಣೆಗೂ ಮುನ್ನ ₹290 ಕೋಟಿ ಮೌಲ್ಯದ ನಗದು, ಡ್ರಗ್ಸ್ ಮತ್ತು ಮದ್ಯ ವಶGujarat Assembly Elections 2022: ಚುನಾವಣೆಗೂ ಮುನ್ನ ₹290 ಕೋಟಿ ಮೌಲ್ಯದ ನಗದು, ಡ್ರಗ್ಸ್ ಮತ್ತು ಮದ್ಯ ವಶ

ಭಾರತ್‌ ಜೋಡೋ ಯಾತ್ರೆ ಲಾಭ ಪಡೆಯಲು ಯತ್ನ

ಭಾರತ್‌ ಜೋಡೋ ಯಾತ್ರೆ ಲಾಭ ಪಡೆಯಲು ಯತ್ನ

ಮತ್ತೊಂದೆಡೆ, ಕಾಂಗ್ರೆಸ್ ತನ್ನ ರಾಜ್ಯ ಘಟಕಗಳಲ್ಲಿನ ಆಂತರಿಕ ಕಲಹದಿಂದ ನರಳುತ್ತಿರುವ ಸಂದರ್ಭದಲ್ಲಿ ಗುಜರಾತ್‌ ರಾಜ್ಯ ರಾಜಕೀಯದಲ್ಲಿ ಅಸ್ತಿತ್ವ ಉಳಿಸಿಕೊಳ್ಳಲು ಹೋರಾಡುತ್ತಿದೆ. ಗ್ರ್ಯಾಂಡ್ ಓಲ್ಡ್ ಪಾರ್ಟಿಯು ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯ ಲಾಭವನ್ನು ಪಡೆಯಲು ಆಶಿಸುತ್ತಿದೆ. ಇದು 2024ರ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಕಾರ್ಯಕ್ಷಮತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂದು ನಂಬಿದೆ.

ಬಿಜೆಪಿಯಿಂದ 9, ಕಾಂಗ್ರೆಸ್‌ನಿಂದ 6 ಮಹಿಳೆಯರ ಸ್ಪರ್ಧೆ

ಬಿಜೆಪಿಯಿಂದ 9, ಕಾಂಗ್ರೆಸ್‌ನಿಂದ 6 ಮಹಿಳೆಯರ ಸ್ಪರ್ಧೆ

ಆದಾಗ್ಯೂ, ಚುನಾವಣಾ ಸಮೀಕ್ಷೆಗಳು ಬಿಜೆಪಿಗೆ ಸ್ಪಷ್ಟ ಬಹುಮತದ ಭವಿಷ್ಯ ನುಡಿದಿವೆ. ಅವುಗಳಲ್ಲಿ ಕೆಲವು ಆಡಳಿತ ಪಕ್ಷವು 99 ಸ್ಥಾನಗಳನ್ನು ಗಳಿಸಿದಾಗ ಅದರ ಕಾರ್ಯಕ್ಷಮತೆಯನ್ನು ಉತ್ತಮಗೊಳಿಸುತ್ತದೆ ಎಂದು ಭವಿಷ್ಯ ಹೇಳಿದೆ. ಮೊದಲ ಹಂತದ ಚುನಾವಣೆಯಲ್ಲಿ 339 ಸ್ವತಂತ್ರ ಅಭ್ಯರ್ಥಿಗಳೂ ಕಣದಲ್ಲಿದ್ದಾರೆ. ಒಟ್ಟು 788 ಅಭ್ಯರ್ಥಿಗಳ ಪೈಕಿ 70 ಮಹಿಳೆಯರು ಬಿಜೆಪಿಯಿಂದ ಒಂಬತ್ತು, ಕಾಂಗ್ರೆಸ್‌ನಿಂದ ಆರು ಮತ್ತು ಎಎಪಿಯಿಂದ ಐವರು ಸ್ಪರ್ಧಿಸಿದ್ದಾರೆ.

ಕಟರ್ಗಾಮ್‌ನಿಂದ ಎಎಪಿ ಅಧ್ಯಕ್ಷ ಗೋಪಾಲ್‌ ಸ್ಪರ್ಧೆ

ಕಟರ್ಗಾಮ್‌ನಿಂದ ಎಎಪಿ ಅಧ್ಯಕ್ಷ ಗೋಪಾಲ್‌ ಸ್ಪರ್ಧೆ

ಮೊದಲ ಹಂತದ ಮತದಾನದಲ್ಲಿ ಭವಿಷ್ಯ ನಿರ್ಧಾರವಾಗಲಿರುವ ಪ್ರಮುಖ ಅಭ್ಯರ್ಥಿಗಳೆಂದರೆ ಸೌರಾಷ್ಟ್ರದ ದೇವಭೂಮಿ ದ್ವಾರಕಾ ಜಿಲ್ಲೆಯ ಖಂಭಾಲಿಯಾ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಎಎಪಿಯ ಮುಖ್ಯಮಂತ್ರಿ ಅಭ್ಯರ್ಥಿ ಇಸುದನ್ ಗಧ್ವಿ ಅವರದ್ದಾಗಿದೆ. ಎಎಪಿ ರಾಜ್ಯ ಘಟಕದ ಅಧ್ಯಕ್ಷ ಗೋಪಾಲ್ ಇಟಾಲಿಯಾ ಸೂರತ್‌ನ ಕಟರ್ಗಾಮ್‌ನಿಂದ ಸ್ಪರ್ಧಿಸಿದ್ದಾರೆ. ಮೊದಲ ಹಂತದ ಇತರ ಪ್ರಮುಖ ಅಭ್ಯರ್ಥಿಗಳಲ್ಲಿ ಜಾಮ್‌ನಗರ (ಉತ್ತರ)ದಿಂದ ಸ್ಪರ್ಧಿಸಿರುವ ಕ್ರಿಕೆಟಿಗ ರವೀಂದ್ರ ಜಡೇಜಾ ಅವರ ಪತ್ನಿ ರಿವಾಬಾ ಜಡೇಜಾ ಮತ್ತು ಸೂರತ್‌ನ ವಿವಿಧ ಸ್ಥಾನಗಳಿಂದ ಬಿಜೆಪಿ ಶಾಸಕರಾದ ಹರ್ಷ ಸಂಘವಿ ಮತ್ತು ಪೂರ್ಣೇಶ್ ಮೋದಿ ಮತ್ತು ಭಾವನಗರದಿಂದ (ಗ್ರಾಮೀಣ) ಐದು ಬಾರಿ ಶಾಸಕರಾಗಿರುವ ಪರ್ಷೋತ್ತಮ್ ಸೋಲಂಕಿ ಇದ್ದಾರೆ.

ಬುಡಕಟ್ಟು ನಾಯಕ ಛೋಟು ವಾಸವ ಕಣಕ್ಕೆ

ಬುಡಕಟ್ಟು ನಾಯಕ ಛೋಟು ವಾಸವ ಕಣಕ್ಕೆ

ಹಾಲಿ ಕಾಂಗ್ರೆಸ್ ಶಾಸಕರಾದ ಲಲಿತ್ ಕಗತಾರ, ಲಲಿತ್ ವಸೋಯಾ, ರುತ್ವಿಕ್ ಮಕ್ವಾನಾ ಮತ್ತು ಮೊಹಮ್ಮದ್ ಜಾವೇದ್ ಪಿರ್ಜಾದಾ ಅವರು ಸೌರಾಷ್ಟ್ರ ಪ್ರದೇಶದ ಸ್ಥಾನಗಳಿಂದ ಮೊದಲ ಹಂತದಲ್ಲಿ ಕಣದಲ್ಲಿದ್ದಾರೆ. ಏಳು ಬಾರಿ ಶಾಸಕ ಮತ್ತು ಹಿರಿಯ ಬುಡಕಟ್ಟು ನಾಯಕ ಛೋಟು ವಾಸವ ಅವರು ಭರೂಚ್‌ನ ಜಗಡಿಯಾದಿಂದ ಸ್ಪರ್ಧಿಸುತ್ತಿದ್ದಾರೆ. 54 ಸ್ಥಾನಗಳೊಂದಿಗೆ ಸೌರಾಷ್ಟ್ರ-ಕಚ್ ಪ್ರದೇಶವು ತನ್ನ ಕಾರ್ಯಕ್ಷಮತೆಯನ್ನು ಉತ್ತಮಗೊಳಿಸಲು ಬಯಸುತ್ತಿರುವ ಕಾಂಗ್ರೆಸ್‌ಗೆ ನಿರ್ಣಾಯಕವಾಗಿದೆ.

English summary
The first phase of the much awaited Gujarat Assembly elections 2022 will be held today (December 1, Thursday). While the BJP, which has been ruling Gujarat for three decades, is all set to continue its winning streak, the Congress and the Aam Aadmi Party are also vying for power.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X