ಮೊಬೈಲ್ ಅಲುಗಾಡಿಸಿ, ಕಾಮಾಂಧರನ್ನು ಹಿಡಿದು ಕೊಡಿ
ಬೆಂಗಳೂರು, ಮಾ. 10: ಮಹಿಳೆಯರು ಇನ್ನು ಮುಂದೆ ದೌರ್ಜನ್ಯಕ್ಕೆ ಹೆದರಬೇಕಾಗಿಲ್ಲ. ಕೈಯಲ್ಲಿರುವ ಸ್ಮಾರ್ಟ್ ಫೋನ್ ನ್ನು ಸೆಕೆಂಡ್ ಕಾಲ ಅಲುಗಾಡಿಸಿದರೆ ಸಾಕು. ಕ್ಷಣ ಮಾತ್ರದಲ್ಲಿ ಆರೋಪಿಗಳನ್ನು ಪೊಲೀಸರ ವಶಕ್ಕೆ ಹಿಡಿದು ಕೊಡಬಹುದು.
ಮಹಿಳೆಯರ ಸುರಕ್ಷತೆ ಮತ್ತು ರಕ್ಷಣೆಗಾಗಿ ಸಿನರ್ಜಿಯಾ ಫೌಂಡೇಶನ್ ಸಂಸ್ಥೆ 'ಎಸ್-ಗಾರ್ಡ್' ಎಂಬ ವಿನೂತನ ಆಪ್ ಅಭಿವೃದ್ಧಿ ಪಡಿಸಿದ್ದು, ಸದ್ಯದಲ್ಲೇ ಜನರ ಬಳಕೆಗೆ ಮುಕ್ತಮಾಡಲಿದೆ.[WhatsApp ಮೂಲಕ ಶೀಘ್ರ ಧ್ವನಿ ಕರೆಯೂ ಸಾಧ್ಯ]

ಆಫ್ರಿಕಾ, ದಕ್ಷಿಣ ಏಷ್ಯಾ, ಆಸ್ಟ್ರೇಲಿಯಾ ಸೇರಿದಂತೆ ಹಲವೆಡೆ ಮಹಿಳೆಯರ ಸುರಕ್ಷತೆಗಾಗಿ ಹಲವಾರು ಅಪ್ಲಿಕೇಶನ್ ಬಳಸುತ್ತಿದ್ದು ಯಶಸ್ವಿಯಾಗಿವೆ. ಹಲವು ತಿಂಗಳ ಕಾಲ ಅಧ್ಯಯನ ನಡೆಸಿ, ಅದೇ ಮಾದರಿಯಲ್ಲಿ ಆಪ್ ಅಭಿವೃದ್ಧಿಪಡಿಸಲಾಗಿದೆ. ವೋಲ್ವೊ ಕಂಪನಿ ಈಗಾಗಲೇ ತನ್ನ ಉದ್ಯೋಗಿಗಳ ಸುರಕ್ಷತೆಗಾಗಿ ಆಪ್ ಪಡೆಯಲು ಮುಂದೆ ಬಂದಿದೆ ಎಂದು ಕಂಪನಿ ಪ್ರಕಟಣೆ ತಿಳಿಸಿದೆ.
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ವಿಶೇಷ ವಿಡಿಯೋ ನೋಡಿ:
ಈ ಬಗ್ಗೆ ಮಾಹಿತಿ ನೀಡಿದ ಸಂಸ್ಥೆ ಅಧ್ಯಕ್ಷ ಟಾಬಿಸೈಮನ್, ಆಪ್ ಬಗ್ಗೆ ಮಾಹಿತಿ ನೀಡಿದ್ದು, ಎಸ್-ಗಾರ್ಡ್ ಆಪ್ ಪಡೆಯುವಂತೆ ಅಪಾರ್ಟ್‌ಮೆಂಟ್‌ನ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ, ಶಿಕ್ಷಣ ಸಂಸ್ಥೆಗಳು, ಐಟಿ-ಬಿಟಿ ಕಂಪನಿಗಳೊಂದಿಗೆ ಸಮಾಲೋಚನೆ ನಡೆಸಲಾಗುವುದು. ಈ ಆಪ್ ಕೇವಲ ಮಹಿಳೆಯರಿಗಷ್ಟೇ ಅಲ್ಲ, ಹಿರಿಯ ನಾಗರಿಕರು ಮತ್ತು ಅಂಗವಿಕಲರಿಗೂ ನೆರವಾಗಲಿದೆ ಎಂದು ಹೇಳಿದ್ದಾರೆ. [ಬಿಎಂಟಿಸಿ ಮಾಹಿತಿಯನ್ನು ಮೊಬೈಲ್ ನಲ್ಲಿ ಪಡೆಯಿರಿ]
ಆಪ್ ಕಾರ್ಯನಿರ್ವಹಣೆ ಹೇಗೆ?
ಮಹಿಳೆಯರು, ಹಿರಿಯನಾಗರಿಕರು ಮನೆಯಿಂದ ಹೊರ ಹೋಗುವ ಸಂದರ್ಭದಲ್ಲಿ ಆಪ್ ಅನ್ನು ಚಾಲನೆಯಲ್ಲಿ ಇಟ್ಟುಕೊಂಡಿರಬೇಕು. ಅಪಾಯ ಎದುರಾದಾಗ 3-4 ಸೆಕೆಂಡ್ ಕಾಲ ಮೊಬೈಲ್ ಅನ್ನು ಅಲುಗಾಡಿಸಿದರೆ ಸಾಕು, ಪೊಲೀಸ್ ನಿಯಂತ್ರಣ ಕೊಠಡಿಗೆ ಸಂದೇಶ ರವಾನೆಯಾಗುತ್ತದೆ. ಲಾಗ್ ಇನ್ ಆದಾಗ ದಾಖಲು ಮಾಡಿದ ಕುಟುಂಬ ಸದಸ್ಯರು, ಸ್ನೇಹಿತರ ಮೊಬೈಲ್ ಸಂಖ್ಯೆಗೆ ಎಚ್ಚರಿಕೆಯ ಸಂದೇಶ ರವಾನೆಯಾಗುತ್ತದೆ.
ಮೊಬೈಲ್ ಅನ್ನು ಅಲುಗಾಡಿಸಿದಾಗ ಸ್ವಯಂ ಚಾಲಿತವಾಗಿ ವಿಡಿಯೊ ರೆಕಾರ್ಡ್ ಚಾಲನೆಗೊಳ್ಳುತ್ತದೆ. ಘಟನಾ ಸ್ಥಳದ ಆಡಿಯೊ ಮತ್ತು ವಿಡಿಯೊ ದೃಶ್ಯಾವಳಿಯು ನಿಯಂತ್ರಣ ಕೊಠಡಿ ಹಾಗೂ ಕುಟುಂಬ ಸದಸ್ಯರಿಗೆ ತಲುಪುತ್ತದೆ. ಬಳಕೆದಾರರು ಎಲ್ಲಿದ್ದಾರೆಂಬುದು ಜಿಪಿಎಸ್ ಮೂಲಕ ಗೊತ್ತಾಗುವುದರಿಂದ ಆರೋಪಿಗಳ ಪತ್ತೆಗೆ ಸಾಧ್ಯವಾಗುತ್ತದೆ.












Click it and Unblock the Notifications