ಚಿದಂಬರಂ ಸೆರೆವಾಸದಲ್ಲಿರುವ ಜೈಲು, ದ. ಏಷ್ಯಾದಲ್ಲೇ ನಂಬರ್ ಒನ್: ಟಾಪ್ 5 ಜೈಲುಗಳು
ದೇಶದ ಮಾಜಿ ಗೃಹಸಚಿವರೊಬ್ಬರು ಬಂಧನಕ್ಕೊಳಗಾಗಿರುವುದು ಇತಿಹಾಸದಲ್ಲಿ ಇದೇ ಮೊದಲು. ಐಎನ್ಎಕ್ಸ್ ಮೀಡಿಯಾ ಹಗರಣದಲ್ಲಿ ಕೆಲವು ದಿನಗಳ ಹಿಂದೆ ಮಾಜಿ ಗೃಹ ಮತ್ತು ಹಣಕಾಸು ಸಚಿವರಾಗಿರುವ ಪಿ.ಚಿದಂಬರಂ ಬಂಧನಕ್ಕೊಳಗಾಗಿದ್ದರು.
ಕೆಲವು ವರ್ಷಗಳ ಹಿಂದೆ, ಮಾನವಹಕ್ಕು ಸಂಸ್ಥೆಯೊಂದು, ವಿಶ್ವದ ವಿವಿಧ ದೇಶಗಳಲ್ಲಿನ ಜೈಲು, ಅಲ್ಲಿನ ಖೈದಿಗಳು ಮತ್ತು ಜೈಲಿನ ವ್ಯವಸ್ಥೆಗಳ ಬಗ್ಗೆ ವರದಿಯೊಂದನ್ನು ಸಿದ್ದಪಡಿಸಿ, ಆಯಾಯ ದೇಶಗಳ ಸಂಬಂಧ ಪಟ್ಟ ಸಚಿವಾಲಯಕ್ಕೆ ನೀಡಿತ್ತು.
ಜೈಲು ಪಾಲಾದ ಕೂಡಲೇ ವಿಧಾನಸೌಧದ ಡಿಕೆಶಿ ಕೊಠಡಿ ಯಾರಿಗೂ ಬೇಡವಾಯಿತೇ?
ಈ ವರದಿಯ ಪ್ರಕಾರ, ಏಷ್ಯಾದಲ್ಲಿ ಅತಿಹೆಚ್ಚು ಖೈದಿಗಳು ಇರುವ ದೇಶವೆಂದರೆ ಅದು ಚೀನಾ, ಭಾರತ, ಥೈಲ್ಯಾಂಡ್ ಮತ್ತು ಹಾಂಕಾಂಗ್. ಭಾರತ ಮತ್ತು ಚೀನಾ, ಅತಿಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ದೇಶಗಳಾಗಿರುವುದರಿಂದ, ಖೈದಿಗಳ ಸಂಖ್ಯೆಯೂ ಇಲ್ಲಿ ಜಾಸ್ತಿ.
ಪಿ ಚಿದಂಬರಂ ಬಂಧನಕ್ಕೆ ಅಡ್ಡಿಯಿಲ್ಲ, ಸುಪ್ರೀಂಕೋರ್ಟ್ ಮಹತ್ವದ ಆದೇಶ
ಭಾರತದಲ್ಲಿ, 1997ರಲ್ಲಿ ವಿಶೇಷ ತನಿಖಾ ಆಯೋಗ ರಚನೆಯಾಗಿ, ವಿವಿಧ ಜೈಲುಗಳಲ್ಲಿನ ನೈರ್ಮಲ್ಯದ ಸಮಸ್ಯೆ, ವೈದ್ಯಕೀಯ ಸಿಬ್ಬಂದಿಗಳ ಕೊರತೆ, ಮುಂತಾದ ವಿಚಾರಗಳ ಸವಿಸ್ತಾರ ವರದಿಯನ್ನು ಕೇಂದ್ರ ಗೃಹ ಸಚಿವಾಲಯಕ್ಕೆ ಸಲ್ಲಿಸಿತ್ತು. ಭಾರತದ ಟಾಪ್ ಐದು ಜೈಲುಗಳು ಯಾವುವು? ಇಲ್ಲಿದೆ ಪಟ್ಟಿ, ಮುಂದೆ ಓದಿ..

ತಿಹಾರ್ ಜೈಲ್, ದೆಹಲಿ
ಟಾಪ್ ಒನ್
ತಿಹಾರ್ ಜೈಲ್, ತಿಹಾರ್ ಆಶ್ರಮ, ತಿಹಾರ್ ಪ್ರಿಸನ್ ಕಾಂಪ್ಲೆಕ್ಸ್. ನವದೆಹಲಿ
ಪಶ್ಚಿಮ ದೆಹಲಿಯ ಜಾನಕಿಪುರಿಯಿಂದ ಸುಮಾರು ಮೂರು ಕಿ.ಮೀ ದೂರದಲ್ಲಿರುವ ಈ ಜೈಲು, 1984ರವರೆಗೆ ಪಂಜಾಬ್ ರಾಜ್ಯದಡಿಯಲ್ಲಿತ್ತು. ಇದಾದ ನಂತರ, ದೆಹಲಿ ಕೇಂದ್ರಾಡಳಿತಕ್ಕೆ ಬಂತು. ಇದು ದಕ್ಷಿಣ ಏಷ್ಯಾದಲ್ಲಿನ ಅತಿದೊಡ್ಡ ಜೈಲು.
ತಿಹಾರ್ ಅಂತರ್ಜಾಲದಲ್ಲಿರುವ ಮಾಹಿತಿಯ ಪ್ರಕಾರ, 5,200 ಖೈದಿಗಳಿಗೆ ಬೇಕಾಗುವ ವ್ಯವಸ್ಥೆಯಿರುವ ಈ ಜೈಲಿನಲ್ಲಿ, 2012ರ ಮಾಹಿತಿಯ ಪ್ರಕಾರ 10,533 ಖೈದಿಗಳಿದ್ದಾರೆ. ಸಂಜಯ್ ಗಾಂಧಿ, ಲಾಲೂ ಪ್ರಸಾದ್ ಯಾದವ್, ಚೋಟಾ ರಾಜನ್, ಸುರೇಶ್ ಕಲ್ಮಾಡಿ, ಅಮರ್ ಸಿಂಗ್, ಚಿದಂಬರಂ ಮುಂತಾದವರು ಇಲ್ಲಿ ಜೈಲು ಶಿಕ್ಷೆ ಅನುಭವಿಸಿದ್ದಾರೆ/ಅನುಭವಿಸುತ್ತಿದ್ದಾರೆ.

ಯರ್ವಾಡ ಕೇಂದ್ರ ಕಾರಾಗೃಹ, ಮಹಾರಾಷ್ಟ್ರ
ಟಾಪ್ ಟು
ಯರ್ವಾಡ ಸೆಂಟ್ರಲ್ ಜೈಲ್, ಪುಣೆ, ಮಹಾರಾಷ್ಟ್ರ
512 ಎಕರೆ ವಿಸ್ತೀರ್ಣದಲ್ಲಿರುವ ಈ ಜೈಲಿನಲ್ಲಿ, 2017ರ ಮಾಹಿತಿಯಂತೆ, ಐದು ಸಾವಿರಕ್ಕೂ ಹೆಚ್ಚು ಖೈದಿಗಳಿದ್ದಾರೆ, 1871ರಲ್ಲಿ ಬ್ರಿಟಿಷರು ಈ ಜೈಲನ್ನು ನಿರ್ಮಿಸಿದ್ದರು.
ಮಹಾತ್ಮ ಗಾಂಧಿ, ನೇತಾಜಿ ಸುಭಾಶ್ ಚಂದ್ರ ಭೋಶ್, ಬಾಲಗಂಗಾಧರ ತಿಲಕ್, ಜವಾಹರಲಾಲ್ ನೆಹರು, ಅಣ್ಣಾ ಹಜಾರೆ, ಸಂಜಯ್ ದತ್ ಮುಂತಾದವರು ಇಲ್ಲಿ ಜೈಲು ಶಿಕ್ಷೆ ಅನುಭವಿಸಿದ್ದಾರೆ.

ಪುಝಲ್ ಕೇಂದ್ರ ಕಾರಾಗೃಹ, ತಮಿಳುನಾಡು
ಟಾಪ್ ತ್ರೀ
ಪುಝಲ್ ಕೇಂದ್ರ ಕಾರಾಗೃಹ, ಚೆನ್ನೈ, ತಮಿಳುನಾಡು
ಚೆನ್ನೈ ನಗರದಿಂದ 23 ಕಿ.ಮೀ ದೂರದಲ್ಲಿರುವ ಈ ಜೈಲು, 2006ರಲ್ಲಿ ಆರಂಭವಾಗಿತ್ತು. ತಮಿಳುನಾಡು ಪೊಲೀಸ್ ಹೌಸಿಂಗ್ ಕಾರ್ಪೋರೇಷನ್ ಇದನ್ನು ನಿರ್ಮಿಸಿತ್ತು. ಕರುಣಾನಿಧಿ, ಸಿಎಂ ಆಗಿದ್ದ ವೇಳೆ, ಈ ಜೈಲು ಕಾರ್ಯಾರಂಭ ಮಾಡಿತ್ತು. 1,250ಕ್ಕೂ ಹೆಚ್ಚಿನ ಖೈದಿಗಳು ಇಲ್ಲಿ ಬಂಧಿಯಾಗಿದ್ದಾರೆ.

ರಾಜಮಂಡ್ರಿ ಕೇಂದ್ರ ಕಾರಾಗೃಹ, ಆಂಧ್ರಪ್ರದೇಶ
ಟಾಪ್ ಫೋರ್
ರಾಜಮಂಡ್ರಿ ಕೇಂದ್ರ ಕಾರಾಗೃಹ, ಆಂಧ್ರಪ್ರದೇಶ
ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, 1602ರಲ್ಲಿ ಪೋರ್ಚುಗೀಸರು ಈ ಜೈಲನ್ನು ನಿರ್ಮಿಸಿದ್ದರು. 196 ಎಕರೆ ವಿಸ್ತೀರ್ಣದಲ್ಲಿ ಈ ಜೈಲು ಆವರಿಸಿಕೊಂಡಿದೆ. 240ಕ್ಕೂ ಹೆಚ್ಚು ಖೈದಿಗಳು, ಇಲ್ಲಿಂದಲೇ ಪದವೀಧರರಾಗಿದ್ದರು.

ನೈನಿ ಕೇಂದ್ರ ಕಾರಾಗೃಹ, ಉತ್ತರಪ್ರದೇಶ
ಟಾಪ್ ಫೈವ್
ನೈನಿ ಕೇಂದ್ರ ಕಾರಾಗೃಹ, ಅಲಹಾಬಾದ್, ಉತ್ತರಪ್ರದೇಶ
ಬ್ರಿಟಿಷರ ಕಾಲದಲ್ಲಿ 1930ರಲ್ಲಿ ಈ ಜೈಲು ನಿರ್ಮಾಣಗೊಂಡಿತ್ತು. ದೇಶದ ಸ್ವಾತಂತ್ರ್ಯ ಹೋರಾಟದ ವೇಳೆ, ಮೋತಿಲಾಲ್ ನೆಹರು, ಜವಾಹರ್ ಲಾಲ್ ನೆಹರು, ಜಿ.ಬಿ.ಪಂತ್, ರಫಿ ಅಹಮದ್ ಕಿದ್ವಾಯಿ ಮುಂತಾದವರು ಇಲ್ಲಿ ಜೈಲು ಶಿಕ್ಷೆ ಅನುಭವಿಸಿದ್ದರು.