TN Election Prediction: ತಮಿಳುನಾಡಲ್ಲಿ ಟಿವಿಕೆ 3ನೇ ಪ್ರಮುಖ ಪಕ್ಷ, ಯಾರಿಗೆ ಗಲುವು, ಯಾರಿಗೆ ಸೋಲು?

ಚೆನ್ನೈ: ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆ 2026 ಕಣ ರಂಗೇರಿದೆ. ಸ್ಥಳೀಯ ನಾಯಕರು ಮಾತ್ರವಲ್ಲದೆ ಕರ್ನಾಟಕ, ಇತರ ರಾಜ್ಯಗಳ ಸಿಎಂ, ಡಿಸಿಎಂ ಹಾಗೂ ಇತರ ನಾಯಕರು ಭರ್ಜರಿ ಪ್ರಚಾರ ನಡೆಸಿದ್ದಾರೆ. ಸದರಿ ಚುನಾವಣೆಗೆ ಸಂಬಂಧಿಸಿದಂತೆ ಚುನಾವಣೆ ಪೂರ್ವ 'ನಕ್ಕೀರನ್ ಮೆಗಾ ಸಮೀಕ್ಷೆ' ಪ್ರಕಟವಾಗಿದೆ. ಇದರಲ್ಲಿ ದ್ರಾವಿಡ ಮುನ್ನೇತ್ರ ಕಳಗಂ (DMK) ಪಕ್ಷವು ಸಾಕಷ್ಟು ಪ್ರತಿರೋಧದ ನಡುವೆ ಮುನ್ನಡೆ ಸಾಧಿಸಲಿದೆ ಎಂದು ತಿಳಿಸಲಾಗಿದೆ.

ಹೌದು, 2026ರ ತಮಿಳುನಾಡು ವಿಧಾನಸಭಾ ಚುನಾವಣೆ ಸಮೀಪಿಸುತ್ತಿದೆ. ಮತದಾನಕ್ಕೆ ಮೂರು ದಿನಗಳು ಬಾಕಿ ಇರುವಾಗಲೇ ಈ ಸಮೀಕ್ಷೆ ಹೊರ ಬಿದ್ದಿದೆ. ಸಮೀಕ್ಷೆಯು ಹೊಸ ರಾಜಕೀಯ ಚಿತ್ರಣ ನೀಡಿದೆ. ದ್ರಾವಿಡ ಮುನ್ನೇತ್ರ ಕಳಗಂ (DMK) ನೇತೃತ್ವದ ಮೈತ್ರಿಕೂಟಕ್ಕೆ ಸ್ಪಷ್ಟ ಮುನ್ನಡೆ ಪಡೆಯಲಿದೆಯಾದರೂ ಸ್ಥಳೀಯ ಪಕ್ಷಗಳಿಂದ ತೀವ್ರ ಪೈಪೋಟಿ ಎದುರಿಸಲಿದೆ.

TN Nakkheeran Survey 2026

ಸ್ಪಷ್ಟ ಗೆಲುವು ಯಾರಿಗೆ? ವಿಜಯ್ ಪಕ್ಷಕ್ಕೆ ಎಷ್ಟು ಸೀಟು?

ತಮಿಳುನಾಡಿನಲ್ಲಿ 234 ಸೀಟುಗಳಿದ್ದು ಸ್ಪಷ್ಟ ಗೆಲುವಿಗೆ 118 ಮ್ಯಾಜಿಕ್ ನಂಬರ್ ಆಗಿದೆ. ಸಮೀಕ್ಷೆ ಪ್ರಕಾರ ಡಿಎಂಕೆ ಮೈತ್ರಿಕೂಟಕ್ಕೆ ಶೇಕಡಾ 45.50ರಷ್ಟು, ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (AIADMK) ಮೈತ್ರಿಕೂಟಕ್ಕೆ ಶೇಕಡಾ 38 ಮತ ಹಂಚಿಕೆ ಆಗುವ ನಿರೀಕ್ಷೆಗಳಿವೆ. ನಟ ವಿಜಯ ಥಳಪತಿ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಪಕ್ಷವು ಮೊದಲ ಬಾರಿಗೆ ಶೇಕಡಾ 9.50 ಸೀಟು ಬಾಚಿಕೊಳ್ಳಲಿದೆ. ನಾಮ್ ತಮಿಳರ್ ಕಚ್ಚಿ (NTK) ಶೇಕಡಾ 4.80 ಮತ ಪಡೆಯುವ ನಿರೀಕ್ಷೆಯಿದೆ. ಇತರ ಪಕ್ಷಗಳು ಶೇಕಡಾ 2.20 ಮತಗಳನ್ನು ಗಳಿಸಲಿವೆ.

ಡಿಎಂಕೆ ಮೈತ್ರಿಕೂಟ ಕಾವೇರಿ ಡೆಲ್ಟಾ ಮತ್ತು ನಗರ ಪ್ರದೇಶಗಳಲ್ಲಿ ತನ್ನ ಪ್ರಾಬಲ್ಯ ಗಟ್ಟಿಗೊಳಿಸಿದೆ. ತಿರುವಾರೂರ್, ಮನ್ನಾರ್ಗುಡಿ, ತಿರುತ್ತೂರೈಪೂಂಡಿಯಂತಹ ಡೆಲ್ಟಾ ಕ್ಷೇತ್ರಗಳಲ್ಲಿ ಶೇಕಡಾ 50ರ ಮೇಲೆ ಮತ ಹಂಚಿಕೆಯೊಂದಿಗೆ ಭಾರಿ ಗೆಲುವು ನಿರೀಕ್ಷಿಸಲಾಗಿದೆ. ಪಾಲಯಂಕೋಟೈ (ಶೇ.50), ವಿರುದುನಗರ (ಶೇ.46) ಕ್ಷೇತ್ರಗಳಲ್ಲೂ ಡಿಎಂಕೆ ಮೈತ್ರಿಕೂಟವು ನಿರ್ಣಾಯಕ ಮುನ್ನಡೆ ಸಾಧಿಸಲಿದೆ ಎಂದು ಸಮೀಕ್ಷೆಯಲ್ಲಿ ವಿವರಿಸಲಾಗಿದೆ.

ಡಿಎಂಕೆ ವರವಾಗಲಿವೆ ಸರ್ಕಾರದ ಯೋಜನೆಗಳು

ಚೆನ್ನೈ ಉಪನಗರಗಳಾದ ಪಲ್ಲಾವರಂ, ಚೆಂಗಲ್‌ಪಟ್ಟು (ತಲಾ ಶೇ.49) ಮತ್ತು ತಾಂಬರಂ (ಶೇ.48) ಕ್ಷೇತ್ರಗಳಲ್ಲೂ ಆಡಳಿತ ಪಕ್ಷ ಕಮಾಲ್ ಮಾಡಲಿದೆ. ಸರ್ಕಾರದ ಕಲ್ಯಾಣ ಯೋಜನೆಗಳು ಹಾಗೂ ಮೂಲಸೌಕರ್ಯ ಅಭಿವೃದ್ಧಿಯಿಂದ ಈ ನಗರಗಳ ಜನರು ಡಿಎಂಕೆಗೆ ಮತ ಹಾಕುವ ವಿಶ್ವಾಸವಿದೆ.

ಇತ್ತ ವಿಪಕ್ಷ ಎಐಎಡಿಎಂ ಮೈತ್ರಿಕೂಟ ಸಂಪೂರ್ಣ ಕಡಿಮೆ ಸೀಟುಗಳಿಗೆ ಸೀಮಿತವಾಗಿ ಹೆಚ್ಚಿನ ಪೈಪೋಟಿ ಮೂಲಕ ಹೆಚ್ಚಿನ ಸ್ಥಾನ ಬಾಚಿಕೊಳ್ಳಲಿದೆ. ಪಶ್ಚಿಮ ಮತ್ತು ದಕ್ಷಿಣದ ಕೆಲವು ಕೃಷಿ ಹಾಗೂ ಅರೆ-ನಗರ ಪ್ರದೇಶಗಳಲ್ಲಿ ಗೆದ್ದು ಬೀಗಲಿದೆ. ಉಡುಮಲಪೇಟೆ (ಶೇ.43), ಮದತ್ತಕುಲಂ (ಶೇ.46), ತಿರುಪ್ಪೂರ್ ನಾರ್ತ್ ಹಾಗೂ ಪಲ್ಲಡಂ (ಎರಡೂ ಶೇ.45) ಕ್ಷೇತ್ರಗಳಲ್ಲಿ ಪಕ್ಷ ಪ್ರಮುಖ ಸ್ಥಾನದಲ್ಲಿದೆ ಎಂಬುದು ಸಮೀಕ್ಷೆಯಲ್ಲಿ ಬಹಿರಂಗಗೊಂಡಿದೆ. ನಂಗುನೇರಿ (ಶೇ.44) ಮತ್ತು ಮಧುರೈ ಪಶ್ಚಿಮ (ಶೇ.43) ಕ್ಷೇತ್ರಗಳಲ್ಲೂ ವಿಪಕ್ಷ ಹೆಚ್ಚಿನ ಮತಗಳನ್ನು ಪಡೆಯಲಿದೆ.

ತೀವ್ರ ಪೈಪೋಟಿಯ ಕ್ಷೇತ್ರಗಳು ಯಾವುವು?

ಚುನಾವಣಾ ಭೂಪಟದಲ್ಲಿ ಹಲವು ತೀವ್ರ ಪೈಪೋಟಿ ಕ್ಷೇತ್ರಗಳಿವೆ. ಕಾರೈಕುಡಿ, ಕನ್ಯಾಕುಮಾರಿ, ತಿರುಪ್ಪರಂಕುಂದ್ರಂ ಮತ್ತು ನನ್ನಿಲಂನಲ್ಲಿ ಪ್ರಮುಖ ಮೈತ್ರಿಕೂಟಗಳು ಸಮಾನ ಮತ ಗಳಿಸಿ, ಕುತ್ತು-ಕುತ್ತು ಪೈಪೋಟಿ ನಡೆಸುತ್ತಿವೆ. ಭುವನಗಿರಿ ಮತ್ತು ಚಿದಂಬರಂ ಕ್ಷೇತ್ರಗಳಲ್ಲಿಯೂ ಸಮೀಕ್ಷೆಯು ಸಮಬಲದ ಹೋರಾಟ ದಾಖಲಾಗಲಿದೆ.

ರಾಜ್ಯ ಪ್ರಮುಖ ಪಕ್ಷವಾಗುವತ್ತ ಟಿವಿಕೆ

ಇನ್ನೂ ಸಣ್ಣ ಪಕ್ಷಗಳನ್ನು ಈ ಚುನಾವಣೆಯಲ್ಲಿ ನಿರ್ಲಕ್ಷ್ಯ ಮಾಡುವಂತಿಲ್ಲ. ದೊಡ್ಡ ದೊಡ್ಡ ಪಕ್ಷಗಳಿಗೆ ಕಾಲಿ ಬಳ್ಳಿ ಸಿಲುಕಿದಂತೆ ಕೆಲವು ಕ್ಷೇತ್ರಗಳನ್ನು ಬಾಚಿಕೊಳ್ಳಲಿವೆ. ಮುಖ್ಯವಾಗಿ ಹೊಸ ಪಕ್ಷದೊಂದಿಗೆ ರಾಜಕೀಯ ರಂಗ ಪ್ರವೇಶ ಮಾಡಿರುವ ನಟ ವಿಜಯ್ ಥಳಪತಿ ನೇತೃತ್ವದ ಟಿವಿಕೆ ಮೂರನೇ ಶಕ್ತಿಯಾಗಿ ಹೊರ ಹೊಮ್ಮುವ ಲಕ್ಷಣಗಳು ದಟ್ಟವಾಗಿವೆ. ವಿವಿಧ ಕ್ಷೇತ್ರಗಳಲ್ಲಿ ಶೇಕಡಾ 8 ರಿಂದ 13ರಷ್ಟು ಮತಗಳನ್ನು ಗಳಿಸಲಿದೆ. ಆಡಳಿತ ಪಕ್ಷ, ವಿಪಕ್ಷ ಸ್ಥಾನಗಳ ನಂತರದ ಸ್ಥಾನ ಟಿವಿಕೆಗೆ ಬಂದರೂ ಅಚ್ಚರಿ ಇಲ್ಲ ಎಂದು ಸಮೀಕ್ಷೆ ತಿಳಿಸಿದೆ.

ಟಿವಿಕೆ ಗೆಲ್ಲುವ ಪಕ್ಷಗಳು ಯಾವುವು?

ಟಿವಿಕೆ ಕಾರೈಕುಡಿ (ಶೇ.14), ಶೋಲಿಂಗನಲ್ಲೂರು (ಶೇ.13) ಮತ್ತು ರಾಣಿಪೇಟೆ (ಶೇ.13)ಯಲ್ಲಿ ಪ್ರಬಲ ಪ್ರದರ್ಶನ ನೀಡಿದೆ. ನಗರ ಯುವಕರು ಹಾಗೂ ಅನಿಶ್ಚಿತ ಮತದಾರರನ್ನು ಆಕರ್ಷಿಸುವ ಸಾಮರ್ಥ್ಯವನ್ನು ಇದು ಹೊಂದಿದೆ. ಒಟ್ಟಾರೆ, ಸಮೀಕ್ಷೆಯು DMK ಮೈತ್ರಿಕೂಟ ಗೆಲ್ಲಲಿದೆ ಎಂದರೆ, ಸ್ತಳೀಯ ಪಕ್ಷಗಳು ಸಾಕಷ್ಟು ಪೈಪೋಟಿ ಒಡ್ಡುವ ಜೊತೆಗೆ ಒಂದಷ್ಟು ಕ್ಷೇತ್ರಗಳನ್ನು ತಮ್ಮದಾಗಿಸಿಕೊಳ್ಳಲಿವೆ. ಕೆಲವು ನಾಯಕರು ಮನೆಗೆ ತೆರಳಿದರು, ಹೊಸಬರ ರಾಜಕೀಯ ಆಟ ಶುರುವಾಗಲಿದೆ ತಮಿಳುನಾಡು ಜನ ಸಾಕ್ಷಿಯಾಗಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+