ಎಬಿಪಿ ಸಮೀಕ್ಷೆ: ಬಂಗಾಳದಲ್ಲಿ ದೀದಿ ದರ್ಬಾರ್ ಮುಂದೆ ಬಿಜೆಪಿ ಧೂಳೀಪಟ
ನವದೆಹಲಿ, ಮೇ 24: ಪಶ್ಚಿಮ ಬಂಗಾಳದಲ್ಲಿ ಸದ್ಯದ ಸ್ಥಿತಿಗತಿ ಹೇಗಿದೆ ಎಂಬುದನ್ನು 'ಎಬಿಪಿ ನ್ಯೂಸ್ - ಸಿಎಸ್ ಡಿಸ್ ಸಮೀಕ್ಷೆ' ತೆರೆದಿಟ್ಟಿದೆ. ಇಲ್ಲಿ ಈ ಕ್ಷಣಕ್ಕೆ ವಿಧಾನಸಭಾ ಚುನಾವಣೆ ನಡೆದರೆ ಮತ್ತೆ ಜನರು ಒಲವು ಟಿಂಎಸಿ ಪರವಾಗಿದೆ ಎಂದು ಸಮೀಕ್ಷೆ ಹೇಳಿದೆ.
2014ರ ಲೋಕಸಭೆ ಚುನಾವಣೆ ವೇಳೆ ಪಶ್ಚಿಮ ಬಂಗಾಳದಲ್ಲಿ ಶೇಕಡಾ 39 ಮತಗಳನ್ನು ಬುಟ್ಟಿಗೆ ಹಾಕಿಕೊಂಡು ಮುಖ್ಯಮಂತ್ರಿ ದೀದಿಯ ಪಕ್ಷ 40ಕ್ಕೆ 34 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಎಡಪಕ್ಷಗಳು ಶೇ. 30, ಕಾಂಗ್ರೆಸ್ ಶೇ. 10, ಬಿಜೆಪಿ ಶೇ. 17 ಮತ್ತು ಇತರರು ಶೇಕಡಾ 4 ಮತಗಳನ್ನು ಪಡೆದುಕೊಂಡಿದ್ದರು.

ಇಲ್ಲಿ ಈ ಕ್ಷಣಕ್ಕೆ ಚುನಾವಣೆ ನಡೆದರೆ ದೀದಿಯ ಪಕ್ಷ ಶೇಕಡಾ 44 ಮತಗಳನ್ನು ಪಡೆದುಕೊಳ್ಳಲಿದೆ ಎಂದು ಸಮೀಕ್ಷೆ ಹೇಳಿದೆ. ಇದು ಕಳೆದ ಬಾರಿಗಿಂತ ಭಾರೀ ಅಧಿಕವಾಗಿದೆ. ಇನ್ನು ಸಮೀಕ್ಷೆಯ ಪ್ರಕಾರ ಎನ್ ಡಿಎ ಮೈತ್ರಿಕೂಟ ಶೇಕಡಾ 24, ಯುಪಿಎ ಶೇಕಡಾ 11, ಎಡಪಕ್ಷಗಳು ಶೇಕಡಾ 17 ಮತಗಳನ್ನು ಪಡೆದುಕೊಳ್ಳಲಿವೆ.
ಈ ಕ್ಷಣೆ ಚುನಾವಣೆ ನಡೆದರೆ ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟ ತನ್ನ ಮತಗಳಿಕೆಯನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಿಸಿಕೊಳ್ಳಲಿದೆಯಾದರೂ ಸರಳ ಜೀವಿ ದೀದಿ ನಾಗಾಲೋಟಕ್ಕೆ ತಡೆಯೊಡ್ಡುವುದು ಅಸಾಧ್ಯ ಎಂಬುದನ್ನು ಈ ಅಂಕಿ ಅಂಶಗಳು ಹೇಳುತ್ತಿವೆ.












Click it and Unblock the Notifications