Tirupati Tirumala: ತಿರುಮಲ ಭಕ್ತರಿಗೆ ಪ್ರಮುಖ ಸೂಚನೆ... ತಿರುಮಲ ಎಕ್ಸ್‌ಪ್ರೆಸ್ ರೈಲು ಈ 6 ದಿನ ರದ್ದು
ತಿರುಮಲ ಶ್ರೀವಾರಿ ದರ್ಶನಕ್ಕೆ ತೆರಳುವವರಿಗೆ ಒಂದು ಪ್ರಮುಖ ಸೂಚನೆಯನ್ನು ಟಿಟಿಡಿ ನೀಡಿದೆ. ತಿರುಮಲ ಎಕ್ಸ್‌ಪ್ರೆಸ್ ರೈಲನ್ನು ಭಾರತೀಯ ರೈಲ್ವೇ ರದ್ದುಗೊಳಿಸಿದೆ. ಆರು ದಿನಗಳ ಕಾಲ ತಿರುಮಲ ಎಕ್ಸ್‌ಪ್ರೆಸ್ ರೈಲನ್ನು ರದ್ದುಗೊಳಿಸಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ವಿಜಯವಾಡ ವಿಭಾಗದ ಮೂರನೇ ಸಾಲಿನ ಕಾಮಗಾರಿ ನಡೆಯುತ್ತಿರುವ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ. ಇದೇ ವೇಳೆ ಇತರ ಕೆಲವು ರೈಲುಗಳ ಮಾರ್ಗವನ್ನು ಬದಲಿಸಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ತಿರುವು ಪಡೆದ ರೈಲುಗಳು ವಿಜಯವಾಡ ರೈಲು ನಿಲ್ದಾಣದಲ್ಲಿ ನಿಲ್ಲುವುದಿಲ್ಲ ಎಂದು ತಿಳಿದುಬಂದಿದೆ. ತಿರುಮಲ ಎಕ್ಸ್‌ಪ್ರೆಸ್ ಪ್ರತಿದಿನ ವಿಶಾಖಪಟ್ಟಣದಿಂದ ಹೊರಡುತ್ತದೆ ಮತ್ತು ತಿರುಪತಿ ಮೂಲಕ ಕಡಪಕ್ಕೆ ಹೋಗುತ್ತದೆ.

ರೈಲು ಸಂಖ್ಯೆ 17488 ನೊಂದಿಗೆ ಚಾಲನೆಯಲ್ಲಿರುವ ತಿರುಮಲ ಎಕ್ಸ್‌ಪ್ರೆಸ್ ರೈಲು ಸೇವೆಯು ವಿಶಾಖಪಟ್ಟಣದಿಂದ ಪ್ರತಿದಿನ ಮಧ್ಯಾಹ್ನ 2 ಗಂಟೆಗೆ ಹೊರಡುತ್ತದೆ. ದುವ್ವಾಡ, ಅನಕಾಪಲ್ಲಿ, ಎಲಮಂಚಿಲಿ, ನರಸೀಪಟ್ಟಣ, ತುಣಿ, ಅಣ್ಣಾವರಂ, ಪಿಠಾಪುರ, ಸಾಮರ್ಲಕೋಟ, ಅನಪರ್ತಿ, ದ್ವಾರಂಪುಡಿ, ರಾಜಮಂಡ್ರಿ, ನಿಡದವೋಲು, ತಾಡೆಪಲ್ಲಿ ಗುಡೆಂ, ಭೀಮಡೋಳು, ಏಲೂರು, ನೂಜಿವೀಡು, ವಿಜಯವಾಡ ಜಂಕ್ಷನ್, ತೆನಾಲಿ, ನಿಡುಬೋರ್ಲು, ಚಿರಲಪ್ಪಾಟ್ಲು ಗುಡೂರು, ವೆಂಕಟಗಿರಿ, ಶ್ರೀಕಾಳಹಸ್ತಿ, ತಿರುಪತಿ, ರೇಣಿಗುಂಟಾ, ಕೋಡೂರು, ರಾಜಂಪೇಟೆ, ನಂದಲೂರು ಮಾರ್ಗವಾಗಿ ಮರುದಿನ ಬೆಳಗ್ಗೆ 7:30ಕ್ಕೆ ಕಡಪ ತಲುಪುತ್ತದೆ. ಮೂರನೇ ಮಾರ್ಗದ ಕಾಮಗಾರಿ ನಡೆಯುತ್ತಿರುವುದರಿಂದ ಈ ರೈಲನ್ನು ಆಗಸ್ಟ್ 5ರಿಂದ ಆಗಸ್ಟ್ 10ರವರೆಗೆ ಆರು ದಿನಗಳ ಕಾಲ ರದ್ದುಗೊಳಿಸಲಾಗಿದೆ.
ಕಡಪದಿಂದ ವಿಶಾಖಪಟ್ಟಣಕ್ಕೆ ಹೋಗುವ ರೈಲು ಸಂಖ್ಯೆ 17487 ಅನ್ನು ಸಹ ಆಗಸ್ಟ್ 6 ರಿಂದ ಆಗಸ್ಟ್ 11 ರವರೆಗೆ ರದ್ದುಗೊಳಿಸಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಈ ವಿಷಯವನ್ನು ಪ್ರಯಾಣಿಕರು ಗಮನಿಸುವಂತೆ ಸೂಚಿಸಲಾಗಿದೆ. ಅಲ್ಲದೆ, ಈ ಮಾರ್ಗದಲ್ಲಿ ಈ ದಿನಗಳಲ್ಲಿ ಈಗಾಗಲೇ ಕಾಯ್ದಿರಿಸಿದ ಪ್ರಯಾಣಿಕರು ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದು ಕೋರಲಾಗಿದೆ.
ತಿರುಮಲ ಎಕ್ಸ್‌ಪ್ರೆಸ್ ರೈಲನ್ನು ರದ್ದುಗೊಳಿಸುವುದರೊಂದಿಗೆ ಇನ್ನೂ ಏಳು ರೈಲುಗಳ ಮಾರ್ಗವನ್ನು ಬದಲಾಯಿಸಲಾಗಿದೆ. ವೈಜಾಗ್-ಹೈದರಾಬಾದ್ ನಡುವೆ ಓಡುವ ಗೋದಾವರಿ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ಮತ್ತು ವೈಜಾಗ್-ದೆಹಲಿ ನಡುವೆ ಓಡುವ ಎಕ್ಸ್‌ಪ್ರೆಸ್ ಸೇವೆಗಳು ತಾಡೆಪಲ್ಲಿಗುಡೆಂ, ಏಲೂರು ಮತ್ತು ವಿಜಯವಾಡ ರೈಲು ನಿಲ್ದಾಣಗಳಲ್ಲಿ ಲಭ್ಯವಿರುವುದಿಲ್ಲ.

ಹಾಗೆಯೇ ಲೋಕಮಾನ್ಯ ತಿಲಕ್ ಎಕ್ಸ್‌ಪ್ರೆಸ್, ವೈಜಾಗ್-ಹಜರತ್ ನಿಜಾಮುದ್ದೀನ್ ನಡುವೆ ಸಂಚರಿಸುವ ಸ್ವರ್ಣ ಜಯಂತಿ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್, ವೈಜಾಗ್-ಸಿಕಂದರಾಬಾದ್ ಗರೀಬ್ರತ್ ಎಕ್ಸ್‌ಪ್ರೆಸ್, ವಿಶಾಖಪಟ್ಟಣ-ಗಾಂಧಿಧಾಮ್ ಮತ್ತು ವಿಶಾಖಪಟ್ಟಣ-ಸಾಯಿನಗರ ನಡುವೆ ಸಂಚರಿಸುವ ವಿಕ್ಸಿ ಸೂಪರ್ ಫಾಸ್ಟ್ ರೈಲುಗಳು ವಿಜಯವಾಡಂಗ್ ರೈಲು ನಿಲ್ದಾಣಗಳಲ್ಲಿ ನಿಲ್ಲುವುದಿಲ್ಲ. ಪ್ರಯಾಣೀಕರು ಮುಂಚಿತವಾಗಿ ಪ್ರಯಾಣದ ಟಿಕೆಟ್ ಕಾಯ್ದಿರಿಸಿದ್ದರೆ ಅದನ್ನು ಮರು ಬುಕ್ ಮಾಡಿಕೊಳ್ಳಬೇಕು ಎಂದು ರೈಲ್ವೆ ಅಧಿಕರಾಇಗಳು ಸೂಚಿಸಿದ್ದಾರೆ.
ಮುಂದಿನ 1 ತಿಂಗಳ ಕಾಲ ತೆಪ್ಪಕುಲಂ ದೇವಸ್ಥಾನ ಬಂದ್.!
ವಿಶ್ವವಿಖ್ಯಾತ ತಿರುಪತಿ ದೇವಸ್ಥಾನಕ್ಕೆ ಪ್ರತಿದಿನ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಾರೆ. ನಿನ್ನೆಯಷ್ಟೇ 65,874 ಮಂದಿ ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಉಚಿತ ದರ್ಶನಕ್ಕೆ ಭಕ್ತರು 12 ಗಂಟೆಗಳ ಕಾಲ ಕಾದು ಸ್ವಾಮಿಯ ದರ್ಶನ ಪಡೆಯಬೇಕಾಗುತ್ತದೆ. ಅಕ್ಟೋಬರ್ 4ರಿಂದ ಆರಂಭವಾಗಿ 9 ದಿನಗಳ ಕಾಲ ವಾರ್ಷಿಕ ಬ್ರಹ್ಮೋತ್ಸವ ಮಹೋತ್ಸವ ನಡೆಯಲಿದೆ.
ಈ ಉತ್ಸವದ ಕೊನೆಯ ದಿನದಂದು ಅಲ್ಲಿನ ತೆಪ್ಪಕುಲಂನಲ್ಲಿ ಚಕ್ರತಾಳ್ವಾರ್ ತೀರ್ಥವಾರಿ ನಡೆಯಲಿದೆ. ಸಾಮಾನ್ಯವಾಗಿ ಈ ತೀರ್ಥವಾರಿಯ ನಂತರ ಭಕ್ತರು ಹೊಂಡದಲ್ಲಿ ಸ್ನಾನ ಮಾಡುತ್ತಾರೆ. ಈ ಹಿನ್ನೆಲೆಯಲ್ಲಿ ಆ.1ರಿಂದ 31ರವರೆಗೆ ಕೆರೆ ಸ್ವಚ್ಛತೆ, ಕೆರೆಯಲ್ಲಿನ ಮಣ್ಣು ತೆಗೆಯುವುದು, ಪೈಪುಗಳಿಗೆ ಬಣ್ಣ ಬಳಿಯುವುದು ಸೇರಿದಂತೆ ನಿರ್ವಹಣಾ ಕಾಮಗಾರಿಗಳು ನಡೆಯಲಿವೆ. ಈ ಕಾರಣದಿಂದಾಗಿ ತೆಪ್ಪಕುಲಂ ದೇವಸ್ಥಾನವನ್ನು ಒಂದು ತಿಂಗಳ ಕಾಲ ಮುಚ್ಚಲಾಗುವುದು ಎಂದು ದೇವಸ್ಥಾನ ಟ್ರಸ್ಟ್ ಘೋಷಿಸಿದೆ.












Click it and Unblock the Notifications