Best Month to Visit Tirupati: ಜನಸಂದಣಿ ತಪ್ಪಿಸಲು ತಿರುಪತಿಗೆ ಯಾವ ತಿಂಗಳು ಭೇಟಿ ನೀಡಿದರೆ ಸೂಕ್ತ?
ವಿಶ್ವವಿಖ್ಯಾತ ಏಳು ಬೆಟ್ಟಗಳ ಒಡೆಯ ತಿಮ್ಮಪ್ಪನ ದರ್ಶನ ಪಡೆಯಲು ವಿವಿಧ ಜಿಲ್ಲೆಗಳು ಮತ್ತು ರಾಜ್ಯಗಳಿಂದ ಮಾತ್ರವಲ್ಲದೆ ವಿದೇಶದಿಂದಲೂ ಹೆಚ್ಚಿನ ಸಂಖ್ಯೆಯ ಭಕ್ತರು ಪ್ರತಿದಿನ ತಿರುಪತಿ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ತಿರುಪತಿ ಎಂದಾಕ್ಷಣ ಮೊದಲು ನೆನಪಾಗುವುದು ಜನಸಂದಣಿ. ಹಾಗಾದರೆ ತಿರುಪತಿಗೆ ಭೇಟಿ ನೀಡಲು ಯಾವ ತಿಂಗಳು ಸೂಕ್ತವಾಗಿದೆ.
ತಿರುಪತಿ ತಿಮ್ಮಪ್ಪನ ದೇವಸ್ಥಾನ ಯಾವುದೇ ಸಮಯ ಆದರೂ ಭಕ್ತರಿಂದ ತುಂಬಿ ತುಳುಕುತ್ತಿರುತ್ತದೆ. ವಿಶೇಷವಲ್ಲದ ವಾರಾಂತ್ಯವಿದ್ದರೂ ತಿರುಪತಿ ಜನರಿಗೆ ನೆಚ್ಚಿನ ತಾಣವಾಗಿದೆ. ಪ್ರತಿ ಶನಿವಾರ ಮತ್ತು ಭಾನುವಾರ ಬಹುತೇಕರಿಗೆ ರಜೆ ಇರುವುದರಿಂದ ಮತ್ತು ಬ್ಯಾಂಕ್ ಉದ್ಯೋಗಿಗಳಿಗೆ ಎಲ್ಲಾ ಭಾನುವಾರ ಮತ್ತು ಕೆಲವು ಶನಿವಾರಗಳು ರಜೆ ಇರುವುದರಿಂದ ಅವರು ತಮ್ಮ ಕುಟುಂಬದೊಂದಿಗೆ ತಿರುಪತಿಗೆ ತೆರಳುವುದು ಹೆಚ್ಚು.

ತಿರುಪತಿಯಲ್ಲಿ ಜನಸಂದಣಿ ಹೆಚ್ಚಾದಂತೆ ತಿರುಪತಿ ತಿಮ್ಮಪ್ಪನನ್ನು ನೋಡಲು ಸೆಕೆಂಡುಗಳಿಗಿಂತಲೂ ಬಹಳ ಕಡಿಮೆ ಸಮಯ ಸಿಗುತ್ತದೆ. ಗಂಟೆಗಟ್ಟಲೆ ಕಾದ ಭಕ್ತರಿಗೆ ಐದು ಸೆಕೆಂಡ್‌ಗಳ ಕಾಲ ದೇವರನ್ನು ನೋಡುವ ಭಾಗ್ಯ ಸಿಗುವುದಿಲ್ಲ. ಕೆಲವೊಮ್ಮೆ ದೇವರು ಕಣ್ಣಿಗೆ ಕಂಡರೆ ದೊಡ್ಡ ವಿಚಾರ ಎನ್ನುವಷ್ಟು ನೂಕುನುಗ್ಗಲು ಇರುತ್ತದೆ.
ಗಂಟೆಗಟ್ಟಲೆ ಕಾದು ದಿಢೀರನೆ ಅರ್ಧ ಸೆಕೆಂಡ್ ಕೂಡ ನೋಡಲು ಬಿಡದೆ ತಳ್ಳಿ ಬಿಡುತ್ತಾರೆ ಹಿಂದಿರುವ ಭಕ್ತರು. ಹೀಗಾಗಿ ತಿರುಪತಿಗೆ ಪ್ರತಿನಿತ್ಯ ಸಾವಿರಾರು ಜನ ಬರುವುದರಿಂದ ದೇವರ ದರ್ಶನ ಸುಲಭದ ಮಾತಲ್ಲ. ಅಲ್ಲದೆ ಹಬ್ಬ ಹರಿದಿನಗಳು, ವಾರಾಂತ್ಯ ಹಾಗೂ ರಜಾ ದಿನಗಳಲ್ಲಿ ಈ ಸಂಖ್ಯೆ ಲಕ್ಷಕ್ಕೂ ಹೆಚ್ಚಾಗಿರುತ್ತದೆ.
ತಿರುಪತಿಗೆ ಹೋಗಬೇಕಾದರೆ ತಿಂಗಳುಗಟ್ಟಲೆ ಕಾದು ಆನ್‌ಲೈನ್‌ನಲ್ಲಿ ಟಿಕೆಟ್ ಕಾಯ್ದಿರಿಸಬೇಕಾದರೂ ಜನಸಂದಣಿಯಲ್ಲಿ ಸಿಲುಕಿಕೊಳ್ಳುವುದು ಅನಿವಾರ್ಯವಾಗಿರುತ್ತದೆ. ಆದರೆ ಕೆಲ ತಿಂಗಳುಗಳಲ್ಲಿ ಹೋದರೆ ಮಾತ್ರ ಜನಸಂದಣಿಯಲ್ಲಿ ಸಿಲುಕಿಕೊಳ್ಳದೆ ಸುಲಭವಾಗಿ ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಬಹುದು. ಹಾಗಾದರೆ ಆ ತಿಂಗಳು ಯಾವುದು?

ಯಾವ ತಿಂಗಳು ತಿರುಪತಿಗೆ ಭೇಟಿ ನೀಡಬೇಕು?
ತಿರುಪತಿಯಲ್ಲಿ ಸ್ವಾಮಿಯ ದರ್ಶನಕ್ಕೆ ಫೆಬ್ರವರಿ ಮತ್ತು ನವೆಂಬರ್ ತಿಂಗಳುಗಳು ಸೂಕ್ತ. ಈ ತಿಂಗಳುಗಳಲ್ಲಿ ಸೌಮ್ಯ ವಾತಾವರಣವಿರುತ್ತದೆ. ಇದು ಭಕ್ತರಿಗೆ ಉತ್ತಮ ಅನುಭವವನ್ನು ನೀಡುವುದು ಮಾತ್ರವಲ್ಲದೆ ಯಾವುದೇ ಜನಸಂದಣಿ ಇಲ್ಲದೆ ದರ್ಶನ ಪಡೆಯಬಹುದು. ಬೇಸಿಗೆ ರಜೆಯಲ್ಲಿ ಕಿಕ್ಕಿರಿದು ಭಕ್ತರು ಸ್ವಾಮಿಯ ದರ್ಶನಕ್ಕೆ ಬರುತ್ತಾರೆ. ಈ ವೇಳೆ ದರ್ಶನಕ್ಕೆ ಒಂದೂವರೆ ದಿನ ಬೇಕು. ಉಳಿದಂತೆ ಹಬ್ಬ ಹರಿದಿನ, ಶಾಲೆ ಕಾಲೇಜುಗಳಿಗೆ ರಜೆ, ವಿಶೇಷ ಪೂಜೆ ಇಂತೆಲ್ಲದಕ್ಕೆ ತಿರುಪತಿಯಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿರುತ್ತದೆ.
ಹೀಗಾಗಿ ಫೆಬ್ರವರಿ ಮತ್ತು ನವೆಂಬರ್ ತಿಂಗಳುಗಳಲ್ಲಿ ತಿರುಪತಿಗೆ ಹೋದರೆ ತ್ವರಿತವಾಗಿ ಸ್ವಾಮಿಯ ದರ್ಶನ ಪಡೆಯಬಹುದು ಎನ್ನುತ್ತಾರೆ. ಅಲ್ಲದೆ ಆಂಧ್ರದಲ್ಲಿ ವಿನಾಯಕ ಚತುರ್ಥಿ ದಿನ ಆಂಧ್ರ, ತೆಲಂಗಾಣ ರಾಜ್ಯಗಳ ಜನರು ತಿರುಪತಿಗೆ ಬರುವುದಿಲ್ಲ. ಹಾಗಾಗಿ ಗಣೇಶ ಚತುರ್ಥಿಯ ಸಮಯದಲ್ಲೂ ಜನಸಂದಣಿ ಕಡಿಮೆ ಇರುತ್ತದೆ.

ಅದೇ ರೀತಿ ಪೊಂಗಲ್ ಮತ್ತು ದೀಪಾವಳಿಯಂತಹ ಹಬ್ಬಗಳ ಸಂದರ್ಭದಲ್ಲಿ ತಿರುಪತಿಯಲ್ಲಿ ಜನಸಂದಣಿ ಕಡಿಮೆ ಇರುತ್ತದೆ. ಆದ್ದರಿಂದ ಇಂತಹ ದಿನಗಳಲ್ಲಿ ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಬಹುದು. ಇದರಿಂದ ಸಮಯ ವ್ಯರ್ಥವಾಗುವುದನ್ನು ತಪ್ಪಿಸಬಹುದು. ನೀವೇನಾದರೂ ತಿರುಪತಿಗೆ ಭೇಟಿ ನೀಡಬೇಕು ಅಂದುಕೊಂಡಿದ್ದರೆ ಇದೇ ತಿಂಗಳು ಭೇಟಿ ನೀಡಿ.
ತಿರುಪತಿಗೆ ಭೇಟಿ ನೀಡಿದ ಚಂದ್ರಬಾಬು ನಾಯ್ಡು
ಆಂಧ್ರಪ್ರದೇಶ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ ತಿರುಪತಿಗೆ ಕುಟುಂಬ ಸಮೇತರಾಗಿ ದೇಗುಲಕ್ಕೆ ಭೇಟಿ ನೀಡಿದ ಚಂದ್ರಬಾಬು ನಾಯ್ಡು ಅವರು ಸುದ್ದಿಗಾರರೊಂದಿಗೆ ಮಾತನಾಡಿ, 'ಶ್ರೀ ವೆಂಕಟೇಶ್ವರಸ್ವಾಮಿಯ ಆಶೀರ್ವಾದದಿಂದ ಸಂತೋಷವಾಗಿದೆ. ಈ ಪವಿತ್ರ ಜಾಗದಲ್ಲಿ ಸಾಕಷ್ಟು ಅನಾಚಾರಗಳು ನಡೆದಿವೆ. ಅವುಗಳೆಲ್ಲವೂ ನಾವು ಬಡ ಸಹಿತ ಕಿತ್ತೊಗೆಯುತ್ತೇವೆ. ತಿರುಮಲ ದೇವಸ್ಥಾನ ಹಿಂದೂಗಳಿಗೆ ಸೇರಿದ್ದು. ಇಲ್ಲಿ 'ಓಂ ನಮೋ ವೆಂಕಟೇಶಾಯ' ಘೋಷಣೆ ಮಾತ್ರ ಕೇಳಿಬರಬೇಕು. ಈ ಹಿಂದಿನ ಸರ್ಕಾರ ಈ ಪವಿತ್ರ ಜಾಗವನ್ನು ಅಪವಿತ್ರಗೊಳಿಸುವ ಕಾರ್ಯ ಮಾಡಿತ್ತು. ಅದು ಸರಿಯಲ್ಲ. ನಾವು ಈಗ ಅದನ್ನು ಸರಿಪಡಿಸುತ್ತೇವೆ. ಬೆಳಗಿನ ಜಾವ ಇಲ್ಲಿ ಸುಪ್ರಭಾತ, ನಮೋ ವೆಂಟೇಶಾಯ ನಮ: ಘೋಷಣೆಗಳು ಮಾತ್ರ ಕೇಳಬೇಕು' ಎಂದು ಹೇಳಿದರು.












Click it and Unblock the Notifications