Tirupati Tirumala: ತಿಮ್ಮಪ್ಪನ ದರ್ಶನಕ್ಕೆ ಇನ್ಮುಂದೆ ಹೆಚ್ಚು ಸಮಯ ಬೇಕಿಲ್ಲ...
ಏಳು ಬೆಟ್ಟಗಳ ಒಡೆಯ ಶ್ರೀವಾರಿಯ ದರ್ಶನಕ್ಕಾಗಿ ನಿತ್ಯ ಸಾವಿರಾರು ಭಕ್ತರು ತಿರುಪತಿಗೆ ಭೇಟಿ ನಿಡುತ್ತಾರೆ. ವಿವಿಐಪಿಗಳು, ವಿಐಪಿಗಳು, ರಾಜಕಾರಣಿಗಳು, ಅಧಿಕಾರಿಗಳು ಮತ್ತು ಸಾಮಾನ್ಯ ಭಕ್ತರು ವಿವಿಧ ಮಾರ್ಗಗಳ ಮೂಲಕ ತಿಮ್ಮಪ್ಪನ ದರ್ಶನ ಪಡೆಯುತ್ತಾರೆ. ತಿಮ್ಮಪ್ಪನ ದರ್ಶನಕ್ಕಾಗಿ ಗಂಟೆಗಟ್ಟಲೆ ಭಕ್ತರು ಕಾಯಬೇಕಾದ ಸ್ಥಿತಿ ಇದೆ. ಆದರೆ ಕೆಲ ಮಾರ್ಗಸೂಚಿಗಳನ್ನು ಅನುಸರಿಸುವುದರಿಂದ ಭಕ್ತರು ಹೆಚ್ಚು ಕಾಲ ಕಾಯುವಿಕೆಯನ್ನು ತಪ್ಪಿಸಬಹುದು.
ಹೌದು... ತಿರುಮಲಕ್ಕೆ ಬರುವ ಭಕ್ತರಲ್ಲಿ ಶೇ.5ರಿಂದ 10ರಷ್ಟು ಮಾತ್ರ ಶಿಫಾರಸ್ಸು ಪತ್ರದ ಮೇರೆಗೆ ಶ್ರೀವಾರಿಯ ದರ್ಶನ ಪಡೆಯುತ್ತಾರೆ. ಇನ್ನು ಕೆಲವರು ಸರತಿ ಸಾಲಿನಲ್ಲಿ ನಿಂತು ತಿಮ್ಮಪ್ಪನ ದರ್ಶನ ಪಡೆಯುತ್ತಾರೆ. ಆದರೆ ಸ್ವಾಮಿಯ ದರ್ಶನ ಪಡೆಯಲು ಭಕ್ತರು ಗಂಟೆಗಟ್ಟಲೆ ಕಾಯಬೇಕಾಗಿಲ್ಲ.

ಯಾಕೆಂದರೆ ತಿರುಪತಿ ದೇವಸ್ಥಾನವು ಸಾಮಾನ್ಯ ಭಕ್ತರಿಗೆ ವಿಐಪಿ ದರ್ಶನಕ್ಕಾಗಿ ಟೈಮ್ ಸ್ಲಾಟ್ ಟೋಕನ್ಗಳನ್ನು ನೀಡುತ್ತಿದೆ. ದಿನಕ್ಕೆ 25 ಸಾವಿರಕ್ಕೂ ಹೆಚ್ಚು ಜನರಿಗೆ ಟೈಮ್ ಸ್ಲಾಟ್ ಟಿಕೆಟ್ ನೀಡಲಾಗುತ್ತದೆ. ಈ ಟೋಕನ್ ಪಡೆದ ಭಕ್ತರು ನಿಗದಿತ ಸಮಯದ ಪ್ರಕಾರ ಸರತಿ ಸಾಲಿನಲ್ಲಿ ಬಂದರೆ 3 ಗಂಟೆಯೊಳಗೆ ಶ್ರೀವಾರಿಯ ದರ್ಶನ ಪಡೆಯಬಹುದು.
ಈ ವ್ಯವಸ್ಥೆಯನ್ನು ತಿರುಪತಿ ದೇವಸ್ಥಾನ ಮಾಡಿದೆ. ಆದರೆ ಸ್ವಾಮಿಯ ದರ್ಶನ ಪಡೆಯುವ ಕಾತುರದಿಂದ ಭಕ್ತರು ನಿಗದಿತ ಸಮಯಕ್ಕಿಂತ ಮೊದಲೇ ಸರತಿ ಸಾಲಿನಲ್ಲಿ ಬಂದು ಕಾಯುತ್ತಾರೆ.
ತಿರುಮಲದಲ್ಲಿ ಭಕ್ತರ ಮಾಹಿತಿಗಾಗಿ ಈಗಾಗಲೇ ತಮಿಳು, ತೆಲುಗು, ಕನ್ನಡ, ಹಿಂದಿ ಮತ್ತು ಇಂಗ್ಲಿಷ್ ಸೇರಿದಂತೆ ಐದು ಭಾಷೆಗಳಲ್ಲಿ ಈ ಬಗ್ಗೆ ಪ್ರಕಟಣೆಗಳನ್ನು ಹೊರಡಿಸಲಾಗಿದೆ. ತಿರುಪತಿ ರೈಲು ನಿಲ್ದಾಣ, ಬಸ್ ನಿಲ್ದಾಣ, ಶ್ರೀನಿವಾಸಂ, ವಿಷ್ಣು ನಿವಾಸ, ಅಲಿಬಿರಿ ಬೂದೇವಿ ಕಾಂಪ್ಲೆಕ್ಸ್‌ನಲ್ಲಿ ಇಂದಿನಿಂದ ಭಕ್ತರಿಗೆ ಈ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ದೇವಸ್ತಾನಂ ತಿಳಿಸಿದೆ. ಆದ್ದರಿಂದ ಭಕ್ತರು ಸರತಿ ಸಾಲಿನಲ್ಲಿ ಕಾಯದೆ ತಿರುಪತಿಯ ಸ್ಥಳೀಯ ದೇವಾಲಯಗಳಿಗೆ ಭೇಟಿ ನೀಡಬಹುದು ಅಥವಾ ತಿರುಮಲದಲ್ಲಿನ ಆಧ್ಯಾತ್ಮಿಕ ತಾಣಗಳಿಗೆ ಭೇಟಿ ನೀಡಿ ಈ ಬಗ್ಗೆ ಮಾಹಿತಿ ಪಡೆಯಬಹುದು.

ಹೀಗಾಗಿ ಭಕ್ತರು ತಿರುಮಲದಲ್ಲಿ ಅನಾವಶ್ಯಕವಾಗಿ ಕಾಯುವ ಅಗತ್ಯವಿಲ್ಲ. ಎಸ್‌ಇಡಿ ಟಿಕೆಟ್‌ಗಳು ಮತ್ತು ಎಸ್‌ಎಸ್‌ಡಿ ಟೋಕನ್‌ಗಳಲ್ಲಿ ನಿಗದಿಪಡಿಸಿದ ಸಮಯವನ್ನು ಅನುಸರಿಸಲು ಭಕ್ತರನ್ನು ತಿರುಪತಿ ದೇವಸ್ಥಾನಂ ಅಧಿಕಾರಿಗಳು ವಿನಂತಿಸಿದ್ದಾರೆ. ಅನೇಕ ಭಕ್ತರು ತಮ್ಮ ಎಸ್‌ಎಸ್‌ಡಿ ಟೋಕನ್‌ಗಳು ಮತ್ತು ಎಸ್‌ಇಡಿ ಟಿಕೆಟ್‌ಗಳಲ್ಲಿ ನಿಗದಿತ ಸಮಯಕ್ಕಿಂತ ಮುಂಚೆಯೇ ದರ್ಶನಕ್ಕೆ ಆಗಮಿಸುವುದರಿಂದ ಹಲವಾರು ಗಂಟೆಗಳ ಕಾಲ ಕಾಯಬೇಕಾಗುತ್ತದೆ.
ಕಳೆದ ಕೆಲವು ದಿನಗಳಿಂದ, ಟೋಕನ್‌ಗಳು ಅಥವಾ ಟಿಕೆಟ್‌ಗಳಲ್ಲಿ ಸೂಚಿಸಿದಂತೆ, ದೇವಸ್ಥಾನವು ಭಕ್ತರಿಗೆ ಅವರ ನಿಗದಿತ ಸಮಯದಲ್ಲಿ ಮಾತ್ರ ದರ್ಶನ ಸರತಿ ಸಾಲಿನಲ್ಲಿ ಪ್ರವೇಶಿಸಲು ಅವಕಾಶ ನೀಡುತ್ತಿದೆ. ಆದರೆ ಇನ್ನೂ ಹೆಚ್ಚಿನ ಸಂಖ್ಯೆಯ ಭಕ್ತರು ತಿರುಮಲಕ್ಕೆ ಬೇಗನೆ ಬರುತ್ತಾರೆ. ಬಂದು ಹೊರಗೆ ಕಾಯುತ್ತಾರೆ. ಆದ್ದರಿಂದ ಡಯಲ್ ಯುವರ್ ಇಒ ಯೋಜನೆಯ ಮೂಲಕ, ಭಕ್ತರು ಸಮಯಪಾಲನೆ ಮತ್ತು ದೀರ್ಘ ಕಾಯುವಿಕೆಯನ್ನು ತಪ್ಪಿಸುವಂತೆ ವಿನಂತಿಸಲಾಗಿದೆ.
ಒಟ್ಟಿನಲ್ಲಿ ಟೋಕನ್‌ಗಳಲ್ಲಿ ನೀಡಲಾದ ಸಮಯಕ್ಕೆ ಸರಿಯಾಗಿ ದೇವಸ್ಥಾನಕ್ಕೆ ಹೋಗುವುದರಿಂದ ಭಕ್ತರು ಹೆಚ್ಚಿನ ಸಮಯಯವನ್ನು ಉಳಿಸಬಹುದು ಎಂದು ಟಿಟಿಡಿ ತಿಳಿಸಿದೆ.












Click it and Unblock the Notifications